ಹಣಗೆರೆಯಲ್ಲಿ ಪೂಜೆ ಮುಗಿಸಿ ಹೊರ ಬಂದ ಹಾವೇರಿಯ ಭಕ್ತರಿಗೆ ಶಾಕ್

Hanagere temple board

ಶಿವಮೊಗ್ಗದ ಲೈವ್.ಕಾಂ | THIRTAHALLI NEWS | 17 ಫೆಬ್ರವರಿ 2022 ಹಾವೇರಿಯ ಹಿರೇಕೆರೂರು ತಾಲೂಕಿನಿಂದ ತೀರ್ಥಹಳ್ಳಿಯ ಹಣಗೆರೆ ಕಟ್ಟೆ ದೇವಸ್ಥಾನಕ್ಕೆ ಬಂದಿದ್ದವರ ಬೈಕ್ ಕಳ್ಳತನವಾಗಿದೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹನುಮಗೌಡ ಪಾಟೀಲ್ ಎಂಬುವವರು ತಮ್ಮ ಊರಿನ ಒಬ್ಬರೊಂದಿಗೆ ಹಣಗೆರೆ ಕಟ್ಟೆ ದೇವಸ್ಥಾನಕ್ಕೆ ಆಗಮಿಸಿದ್ದರು. ತಮ್ಮ ಮಾವನ ಪ್ಯಾಷನ್ ಪ್ರೋ ಬೈಕ್ ಪಡೆದುಕೊಂಡು ಬಂದಿದ್ದ ಹನುಮಗೌಡ ಪಾಟೀಲ್ ಅವರು, ದೇವಸ್ಥಾನದ ಆವರಣದಲ್ಲಿ ನಿಲ್ಲಿಸಿದ್ದರು. ಬೆಳಗ್ಗೆ ದೇಗುಲದ ಒಳಗೆ ಹೋಗಿ ಪೂಜೆ ಮುಗಿಸಿ ಬರುವಷ್ಟರಲ್ಲಿ … Read more

ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಿ ಜಾತ್ರೆ ಮುಂದೂಡಿಕೆ, ಯಾವಾಗ ನಡೆಯಲಿದೆ ಜಾತ್ರೆ?

marikamba jathre

ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಜನವರಿ 2022 ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಮೇಲೆ ಕರೋನ ಕರಿಛಾಯೆ ಆವರಿಸಿದೆ. ಜಾತ್ರೆಯನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಅತ್ಯಂತ ಸರಳವಾಗಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯನ್ನು ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ. ಅತ್ಯಂತ ಸರಳವಾಗಿ ಜಾತ್ರೆ ನಡೆಯಲಿದೆ ಎಂದು … Read more

ಸಿಗಂದೂರು ದೇವಿಯ ಮೂಲ ಸ್ಥಳದಲ್ಲಿ ವಿಶೇಷ ಪೂಜೆ, ದೇಗುಲದಲ್ಲಿ ಹೋಮ, ಹವನ

140122 Sankranti In Sigandur Temple

ಶಿವಮೊಗ್ಗದ ಲೈವ್.ಕಾಂ | SAGARA NEWS | 15 ಜನವರಿ 2022 ಸಂಕ್ರಾಂತಿ ಹಬ್ಬದ ಅಂಗವಾಗಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ನೆರವೇರಿಸಲಾಯಿತು. ಚೌಡೇಶ್ವರಿ ದೇವಿಯ ಮೂಲ ಸ್ಥಳದಲ್ಲಿ ಶುಕ್ರವಾರ ಬೆಳಗ್ಗೆ ಪೂಜೆ ಸಲ್ಲಿಸಿ, ದೇವಸ್ಥಾನಕ್ಕೆ ದೀಪ ತರಲಾಯಿತು. ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಮೂಲ ಸ್ಥಳ ಸೀಗೆಕಣಿವೆಯಲ್ಲಿ ಸಂಕ್ರಾಂತಿ ಹಬ್ಬದಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಮೂಲ ಸ್ಥಳದಿಂದ ದೇವಸ್ಥಾನಕ್ಕೆ ಜ್ಯೋತಿ ಜಾತ್ರೆಗೆ ಧರ್ಮಸ್ಥಳದ ಕನ್ಯಾಡಿ ಮಠದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾಲನೆ … Read more

ಸಿಗಂದೂರು ದೇವಿ ಭಕ್ತರಿಗೆ ನಿರಾಸೆ, ಜಾತ್ರೆ ರದ್ದು, ದರ್ಶನಕ್ಕೂ ನಿರ್ಬಂಧ, ಯಾವಾಗಿತ್ತು ಗೊತ್ತಾ ಜಾತ್ರೆ?

Sigandur-Launch-General-Image

ಶಿವಮೊಗ್ಗದ ಲೈವ್.ಕಾಂ | SAGARA NEWS | 12 ಜನವರಿ 2022 ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಜಾತ್ರೆಗೆ ಕರೋನ ಕರಿನೆರಳು ಆವರಿಸಿದೆ. ಜಾತ್ರೆಯನ್ನು ರದ್ದುಗೊಳಿಸಲಾಗಿದ್ದು, ಮೊದಲ ದಿನ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜನವರಿ 14 ಮತ್ತು 15ರಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಜಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕರೋನ ಮತ್ತು ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಭಕ್ತರ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ. ಜಾತ್ರೆ ಇಲ್ಲ, ಪೂಜೆ ಮಾತ್ರ ಸಿಗಂದೂರು … Read more

ಕರೋನ ಹೆಚ್ಚಳ ಹಿನ್ನೆಲೆ, ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಕುರಿತು ಸಮಿತಿಯ ಮಹತ್ವದ ತೀರ್ಮಾನ

marikamba jathre

ಶಿವಮೊಗ್ಗದ ಲೈವ್.ಕಾಂ | SHIMOGA NEWS | 10 ಜನವರಿ 2022 ಶಿವಮೊಗ್ಗದ ಪುರಾಣ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ಕರೋನ ಭೀತಿ ಎದುರಾಗಿದೆ. ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜಾತ್ರೆಗಳನ್ನು ರದ್ದುಗೊಳಿಸಬೇಕು ಎಂದು ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇವತ್ತು ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನ ಸಮಿತಿಯ ಸಾಮಾನ್ಯ ಸಭೆ ನಡೆಸಲಾಯಿತು. ಜಾತ್ರೆ ಕುರಿತು ಮಹತ್ವದ ಚರ್ಚೆ ನೆಡಸಲಾಯಿತು. ರದ್ದಾಗಿಲ್ಲ, ಮುಂದೂಡುವುದು ಬೇಡ ಕರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಾತ್ರೆಯನ್ನು ರದ್ದುಗೊಳಿಸಬೇಕೋ, ಮುಂದೂಡಬೇಕೋ … Read more

ತುಂಗಾ ನದಿಯಲ್ಲಿ ಮೀನಿಗೆ ಹಾಕಿದ್ದ ಗಾಳಕ್ಕೆ ಸಿಕ್ಕಿಬಿತ್ತು ಮೊಸಳೆ ಮರಿ

090122 Baby Crocodile found in Tunga River Near Pillangere

ಶಿವಮೊಗ್ಗದ ಲೈವ್.ಕಾಂ | SHIMOGA NEWS | 9 ಜನವರಿ 2022 ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಮೊಸಳೆ ಮರಿ ಸಿಕ್ಕಿಬಿದ್ದಿದೆ. ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ರಶೀದ್ ಅವರಿಗೆ ಮೊಸಳೆ ಸಿಕ್ಕಿದೆ. ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಗಾಳ ಹಾಕಿ, ಮೀನು ಹಿಡಿಯುತ್ತಿದ್ದರು. ಗಾಳ ಎಳೆದಾಗ ಬಂತು ಮೊಸಳೆ ರಶೀದ್ ಅವರು ಮೀನಿಗಾಗಿ ತುಂಗಾ ನದಿಯಲ್ಲಿ ಹಾಕಿದ್ದ ಗಾಳ ಜಗ್ಗಿದಂತಾಗಿದೆ. … Read more

ವೀಕೆಂಡ್ ಕರ್ಫ್ಯೂ ಬೆನ್ನಿಗೆ ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿಯಿಂದ ಭಕ್ತರಿಗೆ ಮಹತ್ವದ ಸೂಚನೆ

Sigandur-Launch-General-Image

ಶಿವಮೊಗ್ಗದ ಲೈವ್.ಕಾಂ | SAGARA NEWS | 7 ಜನವರಿ 2022 ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿರುವ ಬೆನ್ನಿಗೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಮಹತ್ವದ ಸೂಚನೆ ನೀಡಿದೆ. ವೀಕೆಂಡ್ ಕರ್ಫ್ಯೂ ಸಂದರ್ಭ ದೇವಸ್ಥಾನವನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ತಿಳಿಸಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶನಿವಾರ ಮತ್ತು ಭಾನುವಾರದಂದು ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇನ್ನು, ಸೋಮವಾರದಿಂದ ಶುಕ್ರವಾರದವರೆಗೆ ಕೋವಿಡ್ … Read more

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಗೆ ಚಾಲನೆ, ರಾಮ ಕುಂಡದಲ್ಲಿ ಸಾವಿರಾರು ಭಕ್ತರಿಂದ ಪುಣ್ಯ ಸ್ನಾನ

020122 Rameshwara Temple Ellamavasye Jathre

ಶಿವಮೊಗ್ಗದ ಲೈವ್.ಕಾಂ | SHIMOGA NEWS |  2 ಜನವರಿ 2022 ಪುರಾಣ ಪ್ರಸಿದ್ಧ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಚಾಲನೆ ಸಿಕ್ಕಿದೆ. ತುಂಗಾ ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಕರೋನ ಹಿನ್ನೆಲೆಯಲ್ಲಿ ಮೂರು ದಿನ ಸರಳವಾಗಿ ಜಾತ್ರೆ ನಡೆಯಲಿದೆ. ರಾಮ ಕುಂಡದಲ್ಲಿ ಪುಣ್ಯ ಸ್ನಾನ ಜಾತ್ರೆಯ ಮೊದಲ ದಿನ ತುಂಗಾ ನದಿಯಲ್ಲಿರುವ ರಾಮ ಕುಂಡದಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಾವಿರಾರು ಜನರು ರಾಮ ಕುಂಡದಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಇದರಿಂದ … Read more

ಶರಾವತಿ ಹಿನ್ನೀರು, ಸಿಗಂದೂರು ಲಾಂಚ್ ಪ್ರವಾಸಿಗರಿಗಷ್ಟೇ ಸ್ವರ್ಗ, ಕಳೆದ ರಾತ್ರಿಯ ಘಟನೆ ತುಮರಿ ಜನರಲ್ಲಿ ಹೆಚ್ಚಿಸಿದೆ ಆತಂಕ

161221 Sigandur Launch Baby girl death

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021 ಘಟನೆ 1 : ಹೆರಿಗೆ ನೋವಿನಿಂದ ಬಳಲಿಕೆ ಸಂಜೆ 6 ಗಂಟೆಗೆ ಚದರವಳ್ಳಿ ಗ್ರಾಮದ ಚೈತ್ರಾ ಅವರಿಗೆ ಹೆರಿಗೆ ನೋವು ಶುರುವಾಯ್ತು. ಕುಟುಂಬದವರು 108 ಆಂಬುಲೆನ್ಸ್’ಗೆ ಕರೆ ಮಾಡಿದರು. ರಾತ್ರಿಯಾದರೂ ಆಂಬುಲೆನ್ಸ್ ಸುಳಿವಿಲ್ಲ. ಹೆರಿಗೆ ನೋವಿನಿಂದ ನರಳುತ್ತಿದ್ದ ಚೈತ್ರಾ ಅವರನ್ನು ಕಾರೊಂದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ರಾತ್ರಿ ಹೆರಿಗೆಯಾಯ್ತು. ಹೆಚ್ಚಿನ ಚಿಕಿತ್ಸೆಗೆ ನಡುರಾತ್ರಿ ಹೊತ್ತಿಗೆ ಸಾಗರದ ಆಸ್ಪತ್ರೆಗೆ ಕಳುಹಿಸಲಾಯಿತು. ಬೆಳಗಾಗುವುದರಲ್ಲಿ ಮಗು ಸಾವನ್ನಪ್ಪಿದೆ. … Read more

ಹಾವು ಕೊಂದ ಶಿವಮೊಗ್ಗ ಸ್ಮಾರ್ಟ್ ಸಿಟಿ ಎಂಜಿನಿಯರ್’ಗಳು ಸೇರಿ ಮೂವರ ವಿರುದ್ಧ ಕೇಸ್

091221 Case Against Smart City Engineers for killing Snake

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಡಿಸೆಂಬರ್ 2021 ರಸ್ತೆ ಅಗಲೀಕರಣ ವೇಳೆ ನಾಗರಹಾವೊಂದನ್ನು ಸಾಯಿಸಿದ ಆರೋಪದಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ಇಂಜಿನಿಯರ್’ಗಳ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಶಂಕರ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಸ್ಮಾರ್ಟ್ ಸಿಟಿ ಇಂಜಿನಿಯರ್’ಗಳು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಮಾರ್ಟ್ ಸಿಟಿ ಇಂಜಿನಿಯರ್’ಗಳಾದ ಕೆ.ವಿ.ವಿಜಯಕುಮಾರ್, ರಾಜಕುಮಾರ್ ಮತ್ತು ಸಿಬ್ಬಂದಿ ನಾಗಪ್ಪ ಎಂಬುವವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದೆ. ಏನಿದು ಪ್ರಕರಣ? ಕಳೆದ ಭಾನುವಾರ ಸಾಗರ … Read more