ಅಧಿಕಾರಿ ಮನೆಯ ಕಾಂಪೌಂಡ್‌ನಲ್ಲಿ ಶ್ರೀಗಂಧದ ಮರ ಕಟ್, ಗಾಡಿಯ ಚಕ್ರ ನಾಪತ್ತೆ

Sandalwood-tree-and-bike-wheel-theft-at-Shimoga-PWD-Quarters.

ಶಿವಮೊಗ್ಗ: ಅಧಿಕಾರಿಗಳ ವಸತಿಗೃಹದ ಬಳಿ ಮತ್ತೊಂದು ‍ಶ್ರೀಗಂಧದ (Sandalwood) ಮರ ತುಂಡು ಮಾಡಿ ಕಳ್ಳತನ ಮಾಡಲಾಗಿದೆ. ಬಸವನಗುಡಿಯಲ್ಲಿರುವ ವಸತಿ ಗೃಹಗಳ ಮನೆಯೊಂದರ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ರಾತ್ರೋರಾತ್ರಿ ತುಂಡು ಮಾಡಿ ಕಳ್ಳತನ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಚಾಲಕರಾಗಿರುವ ಲೋಕೇಶ್‌ ಎಂಬುವವರ ಮನೆ ಆವರಣದಲ್ಲಿದ್ದ ಶ್ರೀಗಂಧದ ಮರಕ್ಕೆ ನಡುರಾತ್ರಿ ಕೊಡಲಿ ಹಾಕಲಾಗಿದೆ. ಬೆಳಗಿನ ಜಾವ ಲೋಕೇಶ್‌ ಮನೆಯಿಂದ ಹೊರ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಮಹಿಳಾ ಅಧಿಕಾರಿ ಗಾಡಿ ಚಕ್ರ ಕಳ್ಳತನ ಇನ್ನು ಮನೆ ಮುಂದೆ ನಿಲ್ಲಿಸಿದ್ದ ಮಹಿಳಾ … Read more

ಶಿವಮೊಗ್ಗದಲ್ಲಿ ರಂಗೋಲೆ ಹಾಕುತ್ತಿದ್ದ ಮಹಿಳೆ ಚಿನ್ನದ ಸರ ಅಪಹರಣ, ಆಗಿದ್ದೇನು?

Crime-News-General-Image

ಶಿವಮೊಗ್ಗ: ಮನೆ ಮುಂದೆ ರಂಗೋಲೆ ಹಾಕುವಾಗ ಕಳ್ಳನೊಬ್ಬ ಮಹಿಳೆಯೊಬ್ಬರ ಚಿನ್ನದ ಸರ (Gold Chain) ಕಸಿದು ಪರಾರಿಯಾಗಿದ್ದಾನೆ. ಆಲ್ಕೊಳದ ಮಂಗಳ ಮಂದಿರ ಸಮೀಪದ ಮನೆಯೊಂದರ ಮುಂದೆ ಘಟನೆ ಸಂಭವಿಸಿದೆ. ಅನಸೂಯಮ್ಮ ಎಂಬುವವರು ಮನೆ ಮುಂದೆ ರಂಗೋಲೆ ಹಾಕುತ್ತಿದ್ದಾಗ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಮನೆ ಖಾಲಿ ಇದೆಯಾ ಎಂದು ವಿಚಾರಿಸಿದ್ದ. ನಂತರ ನೀರು ತರಿಸಿಕೊಂಡು ಕುಡಿದ ಆತ ಲೋಟ ಹಿಂತಿರುಗಿಸುವಂತೆ ಮಾಡಿ, ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕಸಿದಿದ್ದಾನೆ. ತಾಗು ತಂದಿದ್ದ ಬೈಕ್‌ ಹತ್ತಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. … Read more

ರಾತ್ರೋರಾತ್ರಿ ಲಾರಿ ಕದ್ದು ಎಸ್ಕೇಪ್‌ ಆಗಿದ್ದ ಆರೋಪಿ ಅರೆಸ್ಟ್‌

soraba-News-Update

ಸೊರಬ: ಪೆಟ್ರೋಲ್ ಬಂಕ್‌ವೊಂದರ ಮುಂಭಾಗ ನಿಲ್ಲಿಸಿದ್ದ ಲಾರಿ (Truck) ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನುಕೇರಿ ಬಡಾವಣೆ ನಿವಾಸಿ ಇಬ್ರಾಹಿಂ ಅಹಮ್ಮದ್ (26) ಬಂಧಿತ. ಸೊರಬ ಪಟ್ಟಣದ ಪೆಟ್ರೋಲ್‌ ಬಂಕ್‌ ಮುಂಭಾಗ ಸಾಗರ ಪಟ್ಟಣದ ಗಾಂಧಿನಗರ ನಿವಾಸಿ ಆರೀಫ್ ಆಹ್ಮದ್ ಎಂಬುವರಿಗೆ ಸೇರಿದ ಲಾರಿ ಕಳ್ಳತನವಾಗಿತ್ತು. ಇದರ ಸಿಸಿಟಿವಿ ವಿಡಿಯೋಗಳು ವೈರಲ್‌ ಆಗಿದ್ದವು. ಕಳ್ಳತನದ ಬಗ್ಗೆ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಪಟ್ಟಣದ ಇಬ್ರಾಹಿಂ ಅಹಮ್ಮದ್‌ನನ್ನು ಬಂಧಿಸಿ, ಸುಮಾರು ₹4.90 ಲಕ್ಷದ ಲಾರಿಯನ್ನು ವಶಕ್ಕೆ … Read more

ಪೊಲೀಸ್‌ ಕಂಡು ಎಸ್ಕೇಪ್‌ ಆಗಲು ಯತ್ನ, ಹಿಡಿದು ವಿಚಾರಿಸಿದಾಗ ಹೊರಬಿತ್ತು ಸಾಲು ಸಾಲು ಕೇಸ್‌ಗಳ ವಿಷಯ

Soraba-Police-nab-temple-theif

ಸೊರಬ: ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 7 ಕಡೆ ದೇವಸ್ಥಾನಗಳಲ್ಲಿನ ಕಳ್ಳತನ (Temple) ಪ್ರಕರಣ ಬಯಲಿಗೆ ಬಂದಿದೆ. ಈತನಿಂದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸವಳಂಗದ ಅಯ್ಯಪ್ಪ ನಗರದ ಸಂದೀಪ.ಕೆ (24) ಬಂಧಿತ. ಸೊರಬದ ಪುರಸಭೆ ವೃತ್ತದಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರನ್ನು ಕಂಡು ಸಂದೀಪ ಪರಾರಿಯಾಗಲು ಯತ್ನಿಸಿದ. ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸೊರಬ ಪೊಲೀಸ್‌ ಠಾಣೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ವಿವಿಧೆಡೆ … Read more

ಶಿವಮೊಗ್ಗದಲ್ಲಿ 3 ಕೆ.ಜಿ ಬೆಳ್ಳಿ ವಸ್ತು, ₹17 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

Police-Jeep-in-Shimoga-city

ಶಿವಮೊಗ್ಗ: ಮನೆಯೊಂದರ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ನಗರದ ದೂರವಾಣಿ ಬಡಾವಣೆಯ ಅಶ್ವಿನಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (Theft). ಅಶ್ವಿನಿ ಕುಟುಂಬದೊಂದಿಗೆ ತಮ್ಮ ತಾಯಿ ಮನೆಗೆ ತೆರಳಿದ್ದರು. ದೀಪಾವಳಿ ಹಬ್ಬದ ಬೆಳಗ್ಗೆ ಪಕ್ಕದ ಮನೆಯವರು ಅಶ್ವಿನಿ ಅವರಿಗೆ ಕರೆ ಮಾಡಿ ‘ಮನೆ ಬಾಗಿಲು ತೆಗೆದಿದ್ದು, ಮನೆಯಲ್ಲೇ ಇದ್ದೀರʼ ಎಂದು ವಿಚಾರಿಸಿದ್ದರು. ಕೂಡಲೆ ಊರಿನಿಂದ ಮರಳಿದ್ದು, ಪರಿಶೀಲಿಸಿದಾಗ ಚಿನ್ನಾಭರಣ, ಬೆಳ್ಳಿ ವಸ್ತುಗಳು ಕಳುವಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮನೆಯ … Read more

ಮೈಸೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಉದ್ಯಮಿ ಕುಟುಂಬಕ್ಕೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

ಶಿವಮೊಗ್ಗ: ಕುಟುಂಬದವರೆಲ್ಲ ಮೈಸೂರಿನ ಚರ್ಚ್‌ಗೆ ತೆರಳಿದ್ದ ಸಂದರ್ಭ ಶಿವಮೊಗ್ಗದ ಕೀರ್ತಿನಗರದಲ್ಲಿರುವ ಮನೆಯಲ್ಲಿ ಕಳ್ಳತನವಾಗಿದೆ. ಕೊಠಡಿಯ ವಾರ್ಡ್‌ರೋಬ್‌ನಲ್ಲಿದ್ದ ಚಿನ್ನಾಭರಣ, ವಾಚುಗಳು, ಕ್ಯಾಮರಾಗಳು ಕಳುವಾಗಿವೆ (Theft) ಎಂದು ಆರೋಪಿಸಲಾಗಿದೆ. ಕೀರ್ತಿನಗರದಲ್ಲಿರುವ ಉದ್ಯಮಿ ಜೇಮ್ಸ್‌ ಸ್ಟೀವನ್‌, ಕುಟುಂಬ ಸಹಿತ ಮೈಸೂರಿನ ಡೋರನಹಳ್ಳಿಯ ಚರ್ಚ್‌ಗೆ ತೆರಳಿದ್ದರು. ಅಲ್ಲಿಂದ ವಾಪಾಸಾದಾಗ ಮನೆಯ ಗೇಟ್‌ ಮತ್ತು ಬಾಗಿಲಿನ ಬೀಗ ಮುರಿದಿರುವುದು ಗೊತ್ತಾಗಿದೆ. ಒಳಗೆ ಪರಿಶೀಲಿಸಿದಾಗ ವಾರ್ಡ್‌ ರೋಬ್‌ನಲ್ಲಿದ್ದ ₹45,000 ಮೌಲ್ಯದ 870 ಗ್ರಾಂನ ಬೆಳ್ಳಿ ವಸ್ತುಗಳು, ₹33,000 ಮೌಲ್ಯದ 7 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್‌, … Read more

ಶಿವಮೊಗ್ಗ ಸಿಟಿಯಲ್ಲಿ ರಾತ್ರೋರಾತ್ರಿ ಶ್ರೀಗಂಧದ ಮರ ನಾಪತ್ತೆ, ಬೈಕುಗಳಲ್ಲಿದ್ದ ಪೆಟ್ರೋಲ್‌ ಕಳವು

Sandalwood-theft-at-basavanagudi-officers-quarters

ಶಿವಮೊಗ್ಗ: ಅಧಿಕಾರಿಗಳ ಮನೆ ಪಕ್ಕದಲ್ಲಿದ್ದ ಶ್ರೀಗಂಧದ (Sandalwood) ಮರ ಕಡಿದು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಇದೇ ವೇಳೆ ಬೈಕುಗಳಲ್ಲಿ ಪೆಟ್ರೋಲ್‌ ಕೂಡ ಕಳುವಾಗಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗ ನಗರದ ಬಸವನಗುಡಿಯ ಲೋಕೋಪಯೋಗಿ ಇಲಾಖೆ ವಸತಿ ಗೃಹದ ಕಾಂಪೌಂಡ್‌ನಲ್ಲಿದ್ದ ಎರಡು ಶ್ರೀಗಂಧದ ಮರಕ್ಕೆ ಕಳ್ಳರು ಕೊಡಲಿ ಹಾಕಿದ್ದಾರೆ. ಒಂದು ಮರವನ್ನು ಕದ್ದೊಯ್ದಿದ್ದು ಮತ್ತೊಂದು ಮರಕ್ಕೆ ಕೊಡಲಿ ಏಟು ಬಿದ್ದಿದೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಇದೆ. ಇದೆ ವೇಳೆ ವಸತಿ ಗೃಹದ ಬಳಿ ನಿಲ್ಲಿಸಿದ್ದ ಬೈಕುಗಳಲ್ಲಿ ಪೆಟ್ರೋಲ್‌ … Read more

21 Types of Expensive Branded Liquor Stolen from Shivamogga Wine Shop

Expensive-Branded-bottles-theft-from-liquor-shop-in-gopala.

Shivamogga: Expensive branded liquor bottles of 21 different varieties were stolen from a wine shop after the thieves forcibly opened the rolling shutter. The incident occurred at Channambika Wines in Gopala. On the night of October 4th, the shop owner had locked the door and left. The next morning, owner on a walk noticed the … Read more

ನಿದಿಗೆಯಲ್ಲಿ ಬೈಕ್‌ ಕದ್ದುಕೊಂಡು ಹೋಗುವಾಗಲೇ ಸಿಕ್ಕಿಬಿದ್ದ ಕಳ್ಳ ರಂಗ

NIDIGE-NEWS-1.jpg

ಶಿವಮೊಗ್ಗ: ಮನೆ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳವು ಮಾಡಿ ತಳ್ಳಿಕೊಂಡು ಹೋಗುತ್ತಿದ್ದಾಗ ಜನರು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗದ ನಿದಿಗೆ ಗ್ರಾಮದ ಶರತ್‌ ಎಂಬುವವರ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike) ಕಳ್ಳತನ ಮಾಡಿಕೊಂಡು ಹೋಗುವಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಶರತ್‌ ತಮ್ಮ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಬೈಕನ್ನ ವ್ಯಕ್ತಿಯೊಬ್ಬ ಹೊರಗೆ ಕೊಂಡೊಯ್ದು ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋಗುತ್ತಿದ್ದ. ಶರತ್‌ ಅವರ ತಂದೆ ಇದನ್ನು ಗಮನಿಸಿ ಜೋರಾಗಿ ಜನರನ್ನು ಕೂಗಿದ್ದಾರೆ. ಕಳ್ಳನನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೈಕ್‌ … Read more

ಶಿವಮೊಗ್ಗದ ಮದ್ಯದಂಗಡಿಯಲ್ಲಿ 21 ಬಗೆಯ ದುಬಾರಿ ಬೆಲೆಯ ಬ್ರ್ಯಾಂಡೆಡ್‌ ಮದ್ಯ ಕಳವು, ಯಾವೆಲ್ಲ ಬ್ರ್ಯಾಂಡ್‌ ಕಳುವಾಗಿವೆ?

Expensive-Branded-bottles-theft-from-liquor-shop-in-gopala.

ಶಿವಮೊಗ್ಗ: ಮದ್ಯದಂಗಡಿಯೊಂದರ ರೋಲಿಂಗ್‌ ಶಟರ್‌ ಮೀಟಿ ತೆಗೆದು 21 ಬಗೆಯ ದುಬಾರಿ ಬೆಲೆಯ (Expensive) ಬ್ರಾಂಡೆಂಡ್‌ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಲಾಗಿದೆ. ಗೋಪಾಳದ 100 ಅಡಿ ರಸ್ತೆಯಲ್ಲಿರುವ ಚನ್ನಾಂಬಿಕ ವೈನ್ಸ್‌ನಲ್ಲಿ ಘಟನೆ ಸಂಭವಿಸಿದೆ. ಅ.4ರ ರಾತ್ರಿ ಅಂಗಡಿ ಮಾಲೀಕ ಬಾಗಿಲು ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ವಾಕಿಂಗ್‌ ಬಂದಾಗ ರೋಲಿಂಗ್‌ ಶಟರ್‌ ಮೀಟಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ದುಬಾರಿ ಬೆಲೆಯ 21 ಬಗೆಯ ಮದ್ಯದ ಬಾಟಲಿಗಳು ಕಳ್ಳತನವಾಗಿರುವುದು ಗೊತ್ತಾಗಿದೆ. ಇನ್ನು, ಅಂಗಡಿಯಲ್ಲಿದ್ದ ಸಿಸಿಟಿವಿ ಡಿವಿಆರ್‌ ಕೂಡ ಕಳುವಾಗಿದೆ ಎಂದು … Read more