ಶಿವಮೊಗ್ಗದಲ್ಲಿ ಜೆಸಿಬಿಯಿಂದ ಎಟಿಎಂ ಮೆಷಿನ್ ಹೊತ್ತೊಯ್ಯಲು ಯತ್ನ, ಮಹಾರಾಷ್ಟ್ರ ಮಾದರಿ ದರೋಡೆಗೆ ಪ್ರಯತ್ನ

ATM-Theft-attempt-in-Shimoga-by-using-JCB

SHIVAMOGGA LIVE | 26 JULY 2023 SHIMOGA : ಜೆಸಿಬಿ ಬಳಸಿ ಎಟಿಎಂ ಮೆಷಿನ್ (ATM Machine) ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಘಟನೆಯಲ್ಲಿ ಎಟಿಎಂ ಮೆಷಿನ್ ಹಾನಿಗೀಡಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಇದೆ ಮಾದರಿ ಎಟಿಎಂ ದರೋಡೆ ನಡೆದಿತ್ತು. ನೂರಡಿ ರಸ್ತೆಯಲ್ಲೆ ಎಟಿಎಂಗೆ ಜೆಸಿಬಿ ಶಿವಮೊಗ್ಗದ ನೂರು ಅಡಿ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂ ದರೋಡೆಗೆ ಪ್ರಯತ್ನಿಸಲಾಗಿದೆ. ಶಿವಾಲಯ ಮುಂಭಾಗ ಇರುವ ಎಟಿಎಂಗೆ ತಡರಾತ್ರಿ ಕಳ್ಳನೊಬ್ಬ ಜೆಸಿಬಿ ನುಗ್ಗಿಸಿದ್ದಾನೆ. ಎಟಿಎಂ ಕೇಂದ್ರದ ರೋಲಿಂಗ್ ಶಟರ್ … Read more

ಶಿವಮೊಗ್ಗದಲ್ಲಿ ಬೆಳಗ್ಗೆ ಬಸ್‌ ಇಳಿಯುವ ಹೊತ್ತಿಗೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗೆ ಕಾದಿತ್ತು ಶಾಕ್

KSRTC-Bus-General-Image-Shimoga-Bangalore

SHIVAMOGGA LIVE | 20 JUNE 2023 SHIMOGA : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯ ಲ್ಯಾಪ್‌ಟಾಪ್‌ (Laptop Theft) ಕಳ್ಳತನವಾಗಿದೆ. ರಾತ್ರಿ ಬೆಂಗಳೂರಿನಿಂದ ಹೊರಟು ಬೆಳಗ್ಗೆ ಶಿವಮೊಗ್ಗ ತಲುಪಿದಾಗ ಲ್ಯಾಪ್‌ಟಾಪ್‌ ಇದ್ದ ಬ್ಯಾಗ್‌ ನಾಪತ್ತೆಯಾಗಿತ್ತು. ಆಲ್ಕೊಳದ ವಿನಯ್‌ ಎಂಬುವವರ ಲ್ಯಾಪ್‌ಟಾಪ್‌ ಕಳ್ಳತನವಾಗಿದೆ. ಜೂ.16ರ ರಾತ್ರಿ ವಿನಯ್‌ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೊರಟು ಬೆಳಗ್ಗೆ 6.30ಕ್ಕೆ ಶಿವಮೊಗ್ಗ ತಲುಪಿದ್ದರು. ಆಗ ಲಗೇಜ್‌ ಕ್ಯಾರಿಯರ್‌ನಲ್ಲಿ ಇಟ್ಟಿದ್ದ ಬ್ಯಾಗ್‌ ಕಾಣಿಸಲಿಲ್ಲ. ಬಸ್ಸಿನಲ್ಲೆಲ್ಲ ಹುಡುಕಾಡಿದರು ಸಿಗಲಿಲ್ಲ. ಬ್ಯಾಗಿನಲ್ಲಿ ತನ್ನ ಕಂಪನಿಗೆ … Read more

ಶಿವಮೊಗ್ಗದಲ್ಲಿ ಸೌದಿ ಅರೇಬಿಯಾದ ಕರೆನ್ಸಿ ನೋಟುಗಳು ಕಳ್ಳತನ, ಹೇಗಾಯ್ತು?

House-Theft-in-Shimoga.

SHIVAMOGGA LIVE | 8 JUNE 2023 SHIMOGA : ಯಾರೂ ಇಲ್ಲದ ವೇಳೆ ಮನೆ ಬಾಗಿಲಿನ ಇಂಟರ್‌ ಲಾಕ್‌ ಮುರಿದು ಒಂದು ಲಕ್ಷ ರೂ. ಮೌಲ್ಯದ ಸೌದಿ ಅರೇಬಿಯಾ ದೇಶದ ಕರೆನ್ಸಿ (Currency) ಕಳ್ಳತನ ಮಾಡಲಾಗಿದೆ. ಒಂದು ವರ್ಷದ ಬಳಿಕ ಮನೆಯವರು ಸೌದಿ ಅರೇಬಿಯಾ ದೇಶದಿಂದ ಶಿವಮೊಗ್ಗದ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಆರ್‌ಎಂಎಲ್‌ ನಗರದ ಸಲ್ಮಾ ಖಾನಂ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸಲ್ಮಾ ಖಾನಂ ಅವರ ಪತಿ ಸೌದಿ ಅರೇಬಿಯಾ ದೇಶದಲ್ಲಿ ಉದ್ಯೋಗದಲ್ಲಿದ್ದಾರೆ. … Read more

ಶಿವಮೊಗ್ಗದಲ್ಲಿ ಸಿಕ್ಕಿಬಿದ್ದರು ʼಆ ಮೂವರುʼ, ವಶವಾಯ್ತು ರಾಶಿ ರಾಶಿ ಮೊಬೈಲ್‌, ಏನಿದು ಕೇಸ್‌? ಯಾರು ಆ ಮೂವರು?

Mobile-Thieves-arrrested-by-tunga-nagara-police-station

SHIVAMOGGA LIVE | 2 JUNE 2023 SHIMOGA : ರಸ್ತೆಯಲ್ಲಿ ನಡೆದು ಹೋಗುವಾಗ ಬೈಕಿನಲ್ಲಿ ಬಂದು ಮೊಬೈಲ್‌ (Mobile Theft) ಕಸಿದು ಪರಾರಿಯಾದ ಪ್ರಕರಣ ಸಂಬಂಧ ಪೊಲೀಸರು ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ. ಅವರ ಬಳಿ 23 ಮೊಬೈಲ್ ಫೋನ್‌ಗಳು ಸಿಕ್ಕಿವೆ. ವಿವಿಧ ಠಾಣೆ ವ್ಯಾಪ್ತಿಯಲ್ಲಿ ಇವರು ಮೊಬೈಲ್‌ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಮೊಬೈಲ್‌ ಫೋನಿನಲ್ಲಿ ಮಾತನಾಡಿಕೊಂಡು ನಡೆದು ಹೋಗುತ್ತಿದ್ದರು. ಬೈಕಿನಲ್ಲಿ ಬಂದ ಮೂವರು ಯುವಕರು ಮೊಬೈಲ್‌ ಫೋನನ್ನು ಕಸಿದುಕೊಂಡು … Read more

ಶಿವಮೊಗ್ಗದಲ್ಲಿ ಮತ್ತೊಂದು ಕೇಸ್‌ ದಾಖಲು, ನಡೆದು ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್‌ ಕಸಿದು ಪರಾರಿಯಾದ ಕಳ್ಳರು

Doddapete-Police-Station.

SHIVAMOGGA LIVE | 1 JUNE 2023 SHIMOGA : ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲನ್ನು (Mobile Phone) ಕಳ್ಳರು ಕಸಿದುಕೊಂಡು ಪರಾರಿಯಾದ ಮತ್ತೊಂದು ಪ್ರಕರಣ ವರದಿಯಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಮಂಜುನಾಥ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ನಿವೃತ್ತ ಉದ್ಯೋಗಿ ಮಹಾಲಿಂಗ ಗೌಡ ಅವರು ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಎದುರು ಫೋನಿನಲ್ಲಿ ಮಾತನಾಡಿಕೊಂಡು ನಡೆದು ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಮೂವರು ಯುವಕರು ಮೊಬೈಲ್‌ (Mobile Phone)  ಕಸಿದುಕೊಂಡು ವೇಗವಾಗಿ ಪರಾರಿಯಾಗಿದ್ದಾರೆ … Read more

ಮನೆಯಲ್ಲಿ ಚಿನ್ನಾಭರಣ, ಹಣ ಕಳ್ಳತನ, ಪೊಲೀಸರ ಬಲೆಗೆ ಬಿದ್ದಳು ಸೊಸೆ, ಸ್ನೇಹಿತನು ಅರೆಸ್ಟ್‌

Daughter-In-Law-arrest-over-theft-case-in-Malalakoppa-in-Shimoga

SHIVAMOGGA LIVE | 31 MAY 2023 SHIMOGA : ಮನೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ, ನಗದು ಕಳ್ಳತನ ಪ್ರಕರಣನ್ನು ಭೇದಿಸಿರುವ ಪೊಲೀಸರು, ದೂರು ಕೊಟಿದ್ದ ಮಹಿಳೆಯ ಸೊಸೆ (Daughter In Law) ಮತ್ತು ಆಕೆಯ ಪರಿಚಯಸ್ಥನನ್ನು ಬಂಧಿಸಿದ್ದಾರೆ. ಅವರಿಂದ ಚಿನ್ನಾಭರಣ, ನಗದು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ತಾಲೂಕು ಮಳಲಕೊಪ್ಪದ ಹೇಮಾವತಿ (23) ಮತ್ತು ಆಕೆಯ ಪರಿಚಯಸ್ಥ ಸತೀಶ್‌ (22) ಎಂಬುವವರನ್ನು ಬಂಧಿಸಲಾಗಿದೆ. ಮಳಲಕೊಪ್ಪದ ರೇಣುಕಮ್ಮ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು ಎಂದು ತುಂಗಾ ನಗರ ಠಾಣೆಯಲ್ಲಿ ಪ್ರಕರಣ … Read more

ಸ್ನೇಹಿತನಿಗೆ ಕೊಟ್ಟಿದ್ದ RX 100 ಬೈಕ್‌ ನಾಪತ್ತೆ, ನಾಲ್ಕು ತಿಂಗಳ ಬಳಿಕ ದೂರು, ಏನಿದು ಕೇಸ್?

bike theft reference image

SHIVAMOGGA LIVE NEWS | 21 MAY 2023 SHIMOGA : ಯಮಹಾ ಆರ್‌.ಎಕ್ಸ್‌ 100 ಬೈಕ್‌ ಕಳ್ಳತನವಾಗಿದ್ದು (Bike Missing), ನಾಲ್ಕು ತಿಂಗಳು ತಡವಾಗಿ ಮಾಲೀಕ ದೂರು ನೀಡಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿನೋಬನಗರ ಮೇಧಾರ ಕೇರಿಯ ಶ್ರೀಕಾಂತ ಎಂಬಾತ ಆರ್‌.ಎಕ್ಸ್‌ 100 ಬೈಕ್‌ ಖರೀದಿಸಿದ್ದ. ಆತನ ಸ್ನೇಹಿತ ಪ್ರದೀಪ್‌ ಕೆಲಸದ ನಿಮಿತ್ತ ಎರಡು ದಿನ ಬೈಕ್‌ ಬೇಕು ಎಂದು ಪಡೆದುಕೊಂಡಿದ್ದ. ಜ.9ರಂದು ಪ್ರದೀಪ, ವೆಂಕಟೇಶನಗರದ ತನ್ನ ಮನೆ ಬಳಿ ರಾತ್ರಿ ಬೈಕ್‌ ನಿಲ್ಲಿಸಿದ್ದ. ಬೆಳಗಾಗುವುದರಲ್ಲಿ … Read more

ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಹೊರ ಬಂದ ಕಾಂಗ್ರೆಸ್‌ ಹಿರಿಯ ನಾಯಕಿಗೆ ಕಾದಿತ್ತು ಶಾಕ್‌

Crime-News-General-Image

SHIVAMOGGA LIVE NEWS | 19 MAY 2023 SHIMOGA : ಮನೆ ಒಳಗಡೆ ಇಟ್ಟಿದ್ದ ವ್ಯಾನಿಟಿ ಬ್ಯಾಗ್‌ (Vanity Bag), ಚಿನ್ನಾಭರಣ, ನಗದು ಕಳ್ಳತನವಾಗಿದೆ. ಪಾರಿವಾಳ ಮಾರಾಟಕ್ಕೆ ಬಂದವರೆ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಶಿವಮೊಗ್ಗದ ಕಾಂಗ್ರೆಸ್‌ ನಾಯಕಿಯೊಬ್ಬರು ದೂರು ನೀಡಿದ್ದಾರೆ. ಕಾಂಗ್ರೆಸ್‌ ನಾಯಕಿ ಫಾತೀಮಾ ಬೇಗಂ ಅವರ ಬುದ್ದಾ ನಗರದ ಮನೆಯಲ್ಲಿ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ. ಚುನಾವಣೆ ಹಿನ್ನೆಲೆ ಫಾತೀಮಾ ಬೇಗಂ ಅವರು ಪ್ರಚಾರ ಕಾರ್ಯದಲ್ಲಿ ತೊಡಿಗಿಸಿಕೊಂಡಿದ್ದರು. ಏ.29ರಂದು … Read more

ವಾಹನ ತಪಾಸಣೆ ವೇಳೆ ಇಬ್ಬರ ಮೇಲೆ ಅನುಮಾನ, ಹೆಚ್ಚಿನ ವಿಚಾರಣೆ ಬಳಿಕ ಹೊರ ಬಿತ್ತು ಸತ್ಯ

Two-arrested-by-Soraba-Police-for-bike-theft

SHIVAMOGGA LIVE NEWS | 18 MAY 2023 SORABA : ವಾಹನ ತಪಾಸಣೆ ವೇಳೆ ದಾಖಲೆ ಸರಿ ಇಲ್ಲದ ಎರಡು ಬೈಕುಗಳ ಸವಾರರನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದಾಗ ವಿವಿಧೆಡೆ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಇಬ್ಬರನ್ನು ಬಂಧಿಸಿದ್ದು (Arrest), ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಹಾವೇರಿ ಜಿಲ್ಲೆ ಸವಣೂರು ಗ್ರಾಮದ ಜುಂಜಪ್ಪ ಮತ್ತು ಹಲಗೂರು ಗ್ರಾಮದ ಗದಿಗೆಪ್ಪ ಬಂಧಿತರು. ಮೇ.15ರಂದು ಸೊರಬ ಠಾಣೆ ಪೊಲೀಸರು ಪಟ್ಟಣದ ಹೊಸಪೇಟೆ ಬಡಾವಣೆಯ … Read more

ಹೊಸಮನೆಯಲ್ಲಿರುವ ಮಗನ ಮನೆಯಲ್ಲಿ ರಾತ್ರಿ ಉಳಿದಿದ್ದ ತಂದೆ, ಬೆಳಗೆದ್ದು ಬಾಗಿಲು ತೆಗೆದಾಗ ಕಾದಿತ್ತು ಶಾಕ್

crime name image

SHIVAMOGGA LIVE NEWS | 17 MAY 2023 SHIMOGA : ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು (Bike Theft) ಕಳ್ಳರು ಹೊತ್ತೊಯ್ದಿದ್ದಾರೆ. ಬೆಳಗ್ಗೆ ಮನೆಯಿಂದ ಹೊರ ಬಂದಾಗ ಬೈಕ್‌ ಕಳ್ಳತನವಾಗಿರುವುದು ಮಾಲೀಕನಿಗೆ ಗೊತ್ತಾಗಿದೆ. ಶಿವಮೊಗ್ಗದ ಹೊಸ ಮನೆ ಬಡಾವಣೆಯ ನಾಲ್ಕನೆ ಅಡ್ಡರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿ ಸುಬ್ರಹ್ಮಣಿ ಅವರು ಹೊಸಮನೆ ಬಡಾವಣೆಯಲ್ಲಿರುವ ಮಗನ ಮನೆಗೆ ಬಂದಿದ್ದರು. ರಾತ್ರಿ ಮಗನ ಮನೆಯಲ್ಲಿಯೇ ಉಳಿದಿದ್ದರು. ತಮ್ಮ ಸ್ಪ್ಲೆಂಡರ್‌ ಪ್ಲಸ್‌ ಬೈಕನ್ನು (Bike Theft) … Read more