ಮಾರಿ ಜಾತ್ರೆಗೆ ಹೋಗಿ ಬಂದಾಗ ಇದ್ದ ಬೈಕು ಬೆಳಗಾಗುವುದರಲ್ಲಿ ನಾಪತ್ತೆ

bike theft reference image

SHIVAMOGGA LIVE NEWS | 27 ಮಾರ್ಚ್ 2022 ರಾತ್ರಿ ಮಾರಿಕಾಂಬ ಜಾತ್ರೆಗೆ ಹೋಗಿ ಬಂದಾಗ ಇದ್ದ ಬೈಕು ಬೆಳಗಾಗುವುದರಲ್ಲಿ ಕಳ್ಳತನವಾಗಿದೆ ಎಂದು ಶಿವಮೊಗ್ಗದ ಫೋಟೊಗ್ರಾಫರ್ ಒಬ್ಬರು ದೂರು ನೀಡಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೇತನ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಆಲ್ಕೊಳ ಸಮೀಪದ ಆದಿ ಶಂಕರಚಾರ್ಯಾ ಲೇಔಟ್’ನಲ್ಲಿ ಘಟನೆ ಸಂಭವಿಸಿದೆ. ಚೇತನ್ ಅವರು ಮಾರ್ಚ್ 24ರಂದು ಕುಟಂಬ ಸಹಿತ ಕಾರಿನಲ್ಲಿ ಮಾರಿಜಾತ್ರೆಗೆ ತೆರಳಿ, ಪೂಜೆ ಮುಗಿಸಿ ರಾತ್ರಿ ಮರಳಿದ್ದರು. ಆಗ ತಮ್ಮ ಬೈಕು ಮನೆ … Read more

ಶಿವಮೊಗ್ಗ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಬೈಕಿನಲ್ಲಿ ಬಂದು ಮೊಬೈಲ್ ಕಸಿದು ಪರಾರಿಯಾದ ಕಳ್ಳರು

crime name image

SHIVAMOGGA LIVE NEWS | 25 ಮಾರ್ಚ್ 2022 ರೈಲ್ವೆ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಕಳ್ಳತನವಾಗಿದೆ. ಬೈಕಿನಲ್ಲಿ ಬಂದ ಇಬ್ಬರು ಆರೋಪಿಗಳು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಚೇತನ್ ನಾಯ್ಕ ಎಂಬುವವರಿಗೆ ಸೇರಿದ ಮೊಬೈಲ್ ಕಳ್ಳತನವಾಗಿದೆ. ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ತೆರಳಬೇಕಿತ್ತು. ಈ ಹಿನ್ನೆಲೆಯಲ್ಲಿ ಚೇತನ್ ನಾಯ್ಕ ಅವರು ಉಷಾ ನರ್ಸಿಂಗ್ ಹೋಮ್ ಕಡೆಯಿಂದ ಮೊಬೈಲ್ ಫೋನ್’ನಲ್ಲಿ ಮಾತನಾಡಿಕೊಂಡು ರೈಲ್ವೆ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದರು. ಹಿಂಬದಿಯಿಂದ ಬೈಕಿನಲ್ಲಿ ಬಂದ ಇಬ್ಬರು ಚೇತನ್ ನಾಯ್ಕ … Read more

ದೇವಸ್ಥಾನದ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್ ಇಲ್ಲ

Kote Police station building

SHIVAMOGGA LIVE NEWS | 25 ಮಾರ್ಚ್ 2022 ದೇವಸ್ಥಾನದ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಪಲ್ಸರ್ ಬೈಕ್ ಕಳ್ಳತನವಾಗಿದೆ. ಕೆಲಸ ಮುಗಿಸಿ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು ಎಂದು ಮಾಲೀಕ ದೂರು ನೀಡಿದ್ದಾರೆ. ಚಂದ್ರಶೇಖರ್ ಎಂಬುವವರಿಗೆ ಸೇರಿದ ಬೈಕ್ ಕಳುವಾಗಿದೆ. ಶಂಕರಮಠ ರಸ್ತೆಯ ನಿಮಿಷಾಂಬ ದೇವಿ ದೇವಸ್ಥಾನದ ಕಾಂಪೌಂಡ್ ಒಳಗೆ ಬೈಕ್ ನಿಲ್ಲಿಸಿದ್ದರು. ಕೆಲಸ ಮುಗಿಸಿ ಹಿಂತಿರುಗಿದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಚಂದ್ರಶೇಖರ್ ಅವರು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.   … Read more

ಶಿವಮೊಗ್ಗದಲ್ಲಿ ಮುಖ, ಕೈ, ಕಾಲು ತೊಳೆದು ಬರುವಷ್ಟರಲ್ಲಿ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | 25 ಮಾರ್ಚ್ 2022 ಇಪ್ಪತ್ತು ನಿಮಿಷದ ಅಂತರದಲ್ಲಿ ಬೈಕ್ ಕಳ್ಳತನವಾಗಿದೆ. ಶಿವಮೊಗ್ಗ ಬಾಲರಾಜ ಅರಸ್ ರಸ್ತೆಯ ಉಪ್ಪಾರರ ಹಾಸ್ಟೆಲ್ ಬಳಿ ಘಟನೆ ಸಂಭವಿಸಿದೆ. ಅಡುಗೆ ಕೆಲಸ ಮಾಡುತ್ತಿರುವ ಆರ್.ರಂಗನಾಥ್ ಅವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಹಾಡೋನಹಳ್ಳಿಯಲ್ಲಿ ಅಡುಗೆ ಕೆಲಸ ಇದ್ದಿದ್ದರಿಂದ ರಂಗನಾಥ್ ಅವರು ಉಪ್ಪಾರರ ಹಾಸ್ಟೆಲ್’ನಲ್ಲಿ ಕೆಲಸ ಮಾಡುವ ರಮೇಶ್ ಎಂಬುವವರ ಜೊತೆಗೆ ತೆರಳಿದ್ದರು. ಮಾರ್ಚ್ 23ರ ಸಂಜೆ ಉಪ್ಪಾರರ ಹಾಸ್ಟೆಲ್ ಬಳಿ ಬಂದು ರಂಗನಾಥ್ ಅವರು ಬೈಕ್ ನಿಲ್ಲಿಸಿದ್ದಾರೆ. ಹಾಸ್ಟೆಲ್ ಒಳಗೆ … Read more

ಯಾರೂ ಇಲ್ಲದಿದ್ದಾಗ ಸಿಮೆಂಟ್ ಶೀಟ್ ಒಡೆದು ಮನೆ ಒಳಗೆ ನುಗ್ಗಿದ ಕಳ್ಳರು, ಏನೇನೆಲ್ಲ ಕಳವಾಗಿದೆ?

theft case general image

SHIVAMOGGA LIVE NEWS | 24 ಮಾರ್ಚ್ 2022 ಯಾರೂ ಇಲ್ಲದ ವೇಳೆ ಸಿಮೆಂಟ್ ಶೀಟ್ ತೆಗೆದು ಮನೆಯೊಳಗೆ ಚಿನ್ನ, ಬೆಳ್ಳಿ ಆಭರಣ, ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಅಣ್ಣಾನಗರದ ದಾದಾಪೀರ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ದಾದಾಪೀರ್ ಅವರ ಕುಟುಂಬದವರು ಸಂಬಂಧಿಯ ಮನೆಗೆ ತೆರಳಿದ್ದಾಗ ಕಳ್ಳತನವಾಗಿದೆ. ವಿಚಾರ ಗೊತ್ತಾಗಿದ್ದು ಹೇಗೆ? ದಾದಾಪೀರ್ ಅವರ ಕುಟುಂಬದವರು ಸಂಬಂಧಿಯೊಬ್ಬರ ಮನೆಗೆ ತೆರಳಿದ್ದರು. ಪರೀಕ್ಷೆ ಇದ್ದ ಕಾರಣ ಮರುದಿನವೇ ದಾದಾಪೀರ್ ಅವರ ಮಗ ಮನೆಗೆ ಹಿಂತಿರುಗಿದ್ದಾನೆ. ಆಗ ಕಳ್ಳತನದ ವಿಚಾರ ಗೊತ್ತಾಗಿದೆ. … Read more

ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಲ್ಯಾಪ್ ಟಾಪ್ ಜೊತೆ ಬಂದ ವಿದ್ಯಾರ್ಥಿನಿಗೆ ಶಾಕ್

KSRTC-Bus-After-Curfew-In-Shimoga-city

SHIVAMOGGA LIVE NEWS | 24 ಮಾರ್ಚ್ 2022 ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳತನ ಪ್ರಕರಣ ಮುಂದುವರೆದಿವೆ. ವಿದ್ಯಾರ್ಥಿನಿಯೊಬ್ಬರಿಗೆ ಸೇರಿದ ಲ್ಯಾಪ್ ಟಾಪ್, ಹಣ ಕಳವಾಗಿದೆ. ಬಾಗಲಕೋಟೆ ಜಿಲ್ಲೆಯ ಸೌಮ್ಯ ಎಂಬುವವರಿಗೆ ಸೇರಿದ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ಕಳ್ಳತನ? ಸೌಮ್ಯ ಅವರು ಹುನಗುಂದದಿಂದ KSRTC ಬಸ್ಸಿನಲ್ಲಿ ಚಿಕ್ಕಮಗಳೂರಿಗೆ ತೆರಳುತ್ತಿದ್ದರು. ಬೆಳಗಿನ ಜಾವ 3.30ರ ಹೊತ್ತಿಗೆ ಬಸ್ಸು ಶಿವಮೊಗ್ಗ ನಿಲ್ದಾಣಕ್ಕೆ ಬಂದಿದೆ. ಆ ಸಂದರ್ಭ ಸೌಮ್ಯ … Read more

ಲ್ಯಾಪ್ ಟಾಪ್ ಇಟ್ಟುಕೊಂಡು ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಬಂದರೆ ಕಾದಿರುತ್ತೆ ಶಾಕ್

KSRTC-Bus-After-Curfew-In-Shimoga-city

SHIVAMOGGA LIVE NEWS | 20 ಮಾರ್ಚ್ 2022 ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳರ ಹಾವಳಿ ಮುಂದುವರೆದಿದೆ. ಬಸ್ಸಿನಲ್ಲಿ ಇರಿಸಿದ್ದ ಲ್ಯಾಪ್ ಟಾಪ್ ಬ್ಯಾಗ್ ಕಳ್ಳತನ ಮಾಡಲಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವಿದ್ಯಾರ್ಥಿ ಗಗನ ಎಂಬುವವರ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ಕಳ್ಳತನ? ಗಗನ ಅವರು ಶಿರಸಿಯಿಂದ ಚನ್ನರಾಯಪಟ್ಟಣ ತೆರಳುವ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಬಸ್ಸು ಶಿವಮೊಗ್ಗ ನಿಲ್ದಾಣಕ್ಕೆ ಬಂದಾಗ ಗಗನ ಅವರು … Read more

ಗ್ರಾಮ ಪಂಚಾಯಿತಿ ಕಚೇರಿ ಬೀಗ ಒಡೆದು ಕಳ್ಳತನ, ದಾಖಲೆಗಾಗಿ ನಡೆಯಿತಾ ಕೃತ್ಯ?

Talaguppa Graphics

SHIVAMOGGA LIVE NEWS | 19 ಮಾರ್ಚ್ 2022 ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲಿನ ಬೀಗಿ ಒಡೆದು ಕಳ್ಳತನ ಮಾಡಲಾಗಿದೆ. ಕಚೇರಿಯೊಳಗಿನ ಬೀರುವಿನ ಬೀಗ ಮುರಿದು ದಾಖಲೆಗಳನ್ನು ಚಲ್ಲಾಪಿಲ್ಲಿ ಮಾಡಲಾಗಿದೆ. ಸಾಗರ ತಾಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಬೀರುವಿನ ಬೀಗ ಒಡೆದು ದಾಖಲೆಗಳನ್ನು ಚಲ್ಲಾಪಿಲ್ಲಿ ಮಾಡಲಾಗಿದೆ. ಕಳ್ಳರು ಯಾವುದೋ ದಾಖಲೆಗಾಗಿ ಬಾಗಿಲಿನ ಬೀಗ ಒಡೆದಿರುವ ಶಂಕೆ ವ್ಯಕ್ತಿವಾಗಿದೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. … Read more

ಲಾರಿ ಕದ್ದವನು ಸಾಗರ ಪೊಲೀಸರ ಕೈಗೆ ಸಿಕ್ಕಿಬಿದ್ದ

Lorry-Theft-Near-Anandapura-in-Sagara

SHIVAMOGGA LIVE NEWS | 14 ಮಾರ್ಚ್ 2022 ಲಾರಿ ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕರಿಬಸಪ್ಪ ಅಲಿಯಾಸ್ ಕರಿಯ (32) ಎಂಬಾತ ಬಂಧಿತ. ಮಾರ್ಚ್ 3ರಂದು ಸಾಗರ ತಾಲೂಕಿನ ದಾಸಕೊಪ್ಪ ಗ್ರಾಮದಲ್ಲಿಲಾರಿ ಕದ್ದು ಪರಾರಿಯಾಗಿದ್ದ. ಲಾರಿ ಕಳ್ಳತನ ಸಂಬಂಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು, ಕರಿಬಸಪ್ಪನನ್ನು ಬಂಧಿಸಿದ್ದಾರೆ. 7.50 ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಸಾಗರ ಗ್ರಾಮಾಂತರ ಠಾಣೆ … Read more

ಸಾಗರದಲ್ಲಿ 21 ಕ್ವಿಂಟಾಲ್ ಅಡಕೆ ಕದ್ದವರ ಬಳಿ ಸಿಕ್ತು 23 ಕ್ವಿಂಟಾಲ್ ಅಡಕೆ

Sagara-Areca-Theft-Case-arrest-Sagara-Rural

SHIVAMOGGA LIVE NEWS | 10 ಮಾರ್ಚ್ 2022 ಮನೆ ಬಳಿ ಒಣಗಲು ಹಾಕಿದ್ದ ಅಡಕೆ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. 23 ಕ್ವಿಂಟಾಲ್ ಅಡಕೆಯನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳದ ಹಬೀಬ್ ಖಾನ್ ಅಲಿಯಾಸ್ ಅಪ್ಪು (24), ಮಹಮ್ಮದ್ ಮರ್ದನ್ (21), ರುಮಾನ್ (20) ಎಂಬುವವರನ್ನು ಬಂಧಿಸಲಾಗಿದೆ. ಫೈರೋಜ್ ಖಾನ್ (22) ಎಂಬಾತನನ್ನು ಮಾ.4ರಂದು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳುವಾಗಿದ್ದು 21 ಕ್ವಿಂಟಾಲ್, ಸಿಕ್ಕಿದ್ದು 23 ಕ್ವಿಂಟಾಲ್ ತಲವಾಟ ಗ್ರಾಮದಲ್ಲಿ ರೈತರೊಬ್ಬರು ಮಾರ್ಚ್ 2ರಂದು … Read more