ಶಿವಮೊಗ್ಗ ಖಾಸಗಿ ನಿಲ್ದಾಣದ ಬಳಿ ಕಂಡಕ್ಟರ್ ಬೈಕ್ ನಾಪತ್ತೆ

bike theft reference image

ಶಿವಮೊಗ್ಗದ ಲೈವ್.ಕಾಂ | SHIMOGA NEWS |  30 ಡಿಸೆಂಬರ್ 2021 ಪೊಲೀಸ್ ಠಾಣೆ ಸಮೀಪದಲ್ಲೇ ಬಸ್ ಕಂಡಕ್ಟರ್ ಒಬ್ಬರ ಬೈಕ್ ಕಳ್ಳತನವಾಗಿದೆ. ಟಿಕೆಟ್ ಬುಕಿಂಗ್ ಮಾಡಲು ಹೋಗಿದ್ದ ಕಂಡಕ್ಟರ್ ಮರಳಿ ಬರುವಷ್ಟರಲ್ಲಿ ಕಳ್ಳರು ಬೈಕ್ ಕದ್ದೊಯ್ದಿದ್ದಾರೆ. ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಹಿಂಭಾಗದ ಮೊಬೈಲ್ ಟವರ್ ಕೆಳಗೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ರಾಜಶೇಖರ್ ಎಂಬುವವರು ಬಸ್ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನ ಟಿಕೆಟ್ ಬುಕಿಂಗ್ ಮಾಡಲು ನಿಲ್ದಾಣಕ್ಕೆ ಬಂದಿದ್ದರು. ಮಧ್ಯಾಹ್ನ ಬೈಕ್ ನಿಲ್ಲಿಸಿದ್ದ … Read more

ಶಿವಮೊಗ್ಗದ ಗಾಂಧಿ ಬಜಾರ್’ನಲ್ಲಿ ಮುಂದುವರೆದ ಬೈಕ್ ಕಳ್ಳರ ಹಾವಳಿ

bike theft reference image

ಶಿವಮೊಗ್ಗದ ಲೈವ್.ಕಾಂ | SHIMOGA NEWS |  29 ಡಿಸೆಂಬರ್ 2021 ಪೂಜಾ ಸಾಮಗ್ರಿ ಖರೀದಿಗೆ ಬಂದಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಯೊಬ್ಬರ ಬೈಕ್ ಕಳ್ಳತನ ಮಾಡಲಾಗಿದೆ. ಗಾಂಧಿ ಬಜಾರ್’ನಲ್ಲಿ ಘಟನೆ ಸಂಭವಿಸಿದೆ. ಹಾಲ ಲಕ್ಕವಳ್ಳಿ ನಿವಾಸಿ ಅಯ್ಯಪ್ಪ ಮಾಲಾಧಾರಿ ವಿಜಯ್ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಬೈಕ್ ಕಳ್ಳತನವಾಗಿದೆ. ವಿಜಯ್ ಅವರು ಪೂಜಾ ಸಾಮಗ್ರಿ ಖರೀದಿಗೆ ಎಂದು ಗಾಂಧಿ ಬಜಾರ್’ಗೆ ಬಂದಿದ್ದು, ತಮ್ಮ ಬೈಕನ್ನು ಬಸವೇಶ್ವರ ದೇವಸ್ಥಾನದ ಬಳಿ ನಿಲ್ಲಿಸಿದ್ದರು. ಪೂಜೆ ಸಾಮಗ್ರಿ ಖರೀದಿಸಿ ಬೈಕ್ ನಿಲ್ಲಿಸಿದ್ದ ಜಾಗಕ್ಕೆ … Read more

ಶಿವಮೊಗ್ಗದಲ್ಲಿ ಮನೆಯ ಹಿಂಬಾಗಿಲು ಮೀಟಿದ ಕಳ್ಳರು, ದುಬಾರಿ ವಾಚ್, ನಗದು, ಬೆಳ್ಳಿ ವಸ್ತು ಕಳ್ಳತನ

theft case general image

ಶಿವಮೊಗ್ಗದ ಲೈವ್.ಕಾಂ | SHIMOGA NEWS |  28 ಡಿಸೆಂಬರ್ 2021 ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ಹಿಂಬಾಗಿಲನ್ನು ಮೀಟಿ ಕಳ್ಳತನ ಮಾಡಲಾಗಿದೆ. ನಗದು, ಬೆಳ್ಳಿ ವಸ್ತುಗಳು, ದುಬಾರಿ ವಾಚ್ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಿವಮೊಗ್ಗದ ಸವಾಯಿ ಪಾಳ್ಯದ ಜಂಬೂರು ಮೊಹಲ್ಲಾದ ಸರ್ವಾರ್ ಷರೀಫ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಸರ್ವಾರ್ ಷರೀಫ್ ಅವರ ಕುಟುಂಬದವರು ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭ ಮನೆಯ ಹಿಂಬಾಗಿಲನ್ನು ಮೀಟಿರುವ ಕಳ್ಳರು, ಒಳಗಿರುವ ಬೀರೂ ಬಾಗಿಲನ್ನು ಮೀಟಿ ಕಳ್ಳತನ ಮಾಡಿದ್ದಾರೆ. ಬೀರೂವಿನಲ್ಲಿದ್ದ … Read more

ಶಿವಮೊಗ್ಗದಲ್ಲಿ ಮತ್ತೆ ‘ಕೆಂಪು ಪೌಡರ್ ಗ್ಯಾಂಗ್’ ಪ್ರತ್ಯಕ್ಷ, ಮಹಿಳೆಗೆ ವಂಚನೆ

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS |  26 ಡಿಸೆಂಬರ್ 2021 ಚಿನ್ನಾಭರಣ ಹೊಳೆಯುವಂತೆ ಮಾಡುವುದಾಗಿ ನಂಬಿಸಿ, ವಂಚಿಸುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವೃದ್ಧೆಯೊಬ್ಬರಿಂದ ಒಂದು ಲಕ್ಷ ಮೌಲ್ಯದ ಚಿನ್ನದ ಸರವನ್ನು ಕದ್ದೊಯ್ಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಶಿವಮೊಗ್ಗ ತಾಲೂಕು ಹಾರನಹಳ್ಳಿ ಕೋಟೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸೀತಮ್ಮ (72) ಎಂಬುವವರ ಮಾಂಗಲ್ಯ ಸರವನ್ನು ಕಳವು ಮಾಡಲಾಗಿದೆ. ಕೆಂಪು ಪೌಡರ್ ಹಚ್ಚಿ ಯಾಮಾರಿಸಿದರು ಶನಿವಾರ ಮಧ್ಯಾಹ್ನ ಸೀತಮ್ಮ … Read more

ನೆಹರೂ ರಸ್ತೆಯಲ್ಲಿ ನಲ್ಲಿ ಕಳ್ಳರ ಹಾವಳಿ, ಅಂಗಡಿ ತೆಗೆಯುವ ಮೊದಲೆ 24X7 ನಲ್ಲಿಗಳು ಗಾಯಬ್, ವಿಡಿಯೋ ಸೆರೆ

241221 Nehru Road Tap Theft Case

ಶಿವಮೊಗ್ಗದ ಲೈವ್.ಕಾಂ | SHIMOGA NEWS |  24 ಡಿಸೆಂಬರ್ 2021 24 ಗಂಟೆ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆ ಯೋಜನೆಯ ನಲ್ಲಿಗಳ ಕಳ್ಳತನ ಪ್ರಕರಣಗಳು ಹಚ್ಚಾಗಿದೆ. ನೆಹರೂ ರಸ್ತೆಯಲ್ಲಿ ಅಂಗಡಿಗಳ ಮುಂದೆ ಅಳವಡಿಸಿದ್ದ ನಲ್ಲಿಗಳು ನಿತ್ಯ ಕಳವಾಗುತ್ತಿವೆ. ಬಹುತೇಕ ನಲ್ಲಿಗಳು ಕುಡುಕರ ಪಾಲಾಗುತ್ತಿವೆ. ಶಿವಮೊಗ್ಗದಲ್ಲಿ 24×7 ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಮನೆಗಳು, ಅಂಗಡಿಗಳಿಗೆ ಪ್ರತ್ಯೇಕ ನೀರಿನ ಪೈಪ್, ಮೀಟರ್ ಅಳವಡಿಸಲಾಗುತ್ತಿದೆ. ಶಿವಮೊಗ್ಗದ ನೆಹರೂ ರಸ್ತೆಯಲ್ಲೂ ನೀರಿನ ಪೈಪ್ ಅಳವಡಿಸಲಾಗಿದೆ. ಆದರೆ ರಾತ್ರಿ … Read more

ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಣ್ಮರೆ

bike theft reference image

ಶಿವಮೊಗ್ಗದ ಲೈವ್.ಕಾಂ |  SHIMOGA NEWS |  23 ಡಿಸೆಂಬರ್ 2021 ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ವಿನೋಬನಗರದ ಪಿ ಅಂಡ್ ಟಿ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ಕೃಷ್ಣ ಮೊಗೇರ್ ಎಂಬುವವರಿಗೆ ಸೇರಿದ ಬೈಕ್ ಕಳುವಾಗಿದೆ. ಪಿ ಅಂಡ್ ಟಿ ಕಾಲೋನಿಯಲ್ಲಿರುವ ಮನೆ ಮುಂದೆ ಮಧ್ಯಾಹ್ನ 12.30ರ ಹೊತ್ತಿಗೆ ಕೃಷ್ಣ ಮೊಗೇರ್ ಅವರು ಬೈಕ್ ತಂದು ನಿಲ್ಲಿಸಿದ್ದರು. ಸಂಜೆ ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಇದನ್ನೂ ಓದಿ | ಶಿವಮೊಗ್ಗದಲ್ಲಿ ರಾತ್ರಿ ಊಟ ಮುಗಿಸಿ ಬರುವಷ್ಟರಲ್ಲಿ … Read more

ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಆಟೋದಲ್ಲಿ ಬಂದು ಮಹಿಳೆಯ ಬಂಗಾರದ ಸರ ಕಳ್ಳತನ

crime name image

ಶಿವಮೊಗ್ಗದ ಲೈವ್.ಕಾಂ |  SHIMOGA NEWS |  22 ಡಿಸೆಂಬರ್ 2021 ಬೆಳಗಿನ ಜಾವ ಆಸ್ಪತ್ರೆಗೆ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಕಳ್ಳರು ಕೊರಳಿಗೆ ಕೈ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡ ಮಹಿಳೆ ಸರದ ಒಂದು ಭಾಗವನ್ನ ಹಿಡಿದುಕೊಂಡಿದ್ದಾರೆ. ಹಾಗಾಗಿ ಕಳ್ಳರು ಸರದ ಅರ್ಧ ಭಾಗ, ಮೂರು ಚಿನ್ನದ ಕಾಸನ್ನು ಕದ್ದೊಯ್ದಿದ್ದಾರೆ. ಹೊನ್ನವಿಲೆ ಗ್ರಾಮದ ಸುನೀತಾ (54) ಎಂಬುವವರ ಸರ ಕಳ್ಳತನ ಮಾಡಲಾಗಿದೆ. ಮೊಮ್ಮಗನೊಂದಿಗೆ ಬೆಳಗಿನ ಜಾವ 4 ಗಂಟೆಗೆ ದುರ್ಗಾ ಕ್ಲಿನಿಕ್’ಗೆ ನಡೆದು ಹೋಗುತ್ತಿದ್ದಾಗ, … Read more

ಶಿವಮೊಗ್ಗದಲ್ಲಿ ರಾತ್ರಿ ಊಟ ಮುಗಿಸಿ ಬರುವಷ್ಟರಲ್ಲಿ ಬೈಕ್ ನಾಪತ್ತೆ

bike theft reference image

ಶಿವಮೊಗ್ಗದ ಲೈವ್.ಕಾಂ |  SHIMOGA NEWS |  22 ಡಿಸೆಂಬರ್ 2021 ಶಿವಮೊಗ್ಗದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಬಿ.ಹೆಚ್.ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಹೊಟೇಲ್’ನಲ್ಲಿ ಊಟ ಮುಗಿಸಿ ಹಿಂತಿರುಗುವಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಹೂವಿನ ವ್ಯಾಪಾರ ಮಾಡುವ ಶಿವರಾಜು ಅವರು ತಮ್ಮ ಸ್ನೇಹಿತನ ಬೈಕ್ ಪಡೆದು ಚಲಾಯಿಸುತ್ತಿದ್ದರು. ಡಿ.5ರಂದು ರಾತ್ರಿ ಬಿ.ಹೆಚ್.ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ಬರುವಷ್ಟರಲ್ಲಿಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿ ಬಳಿಕ ಠಾಣೆಗೆ ಬಂದು ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರಾವತಿಯಲ್ಲಿ ಬೈಕ್ ಸವಾರರ ಬ್ಯಾಗ್’ನಲ್ಲಿ ಸಿಕ್ತು ರಾಶಿ ರಾಶಿ ಮೊಬೈಲ್

171221 Mobile Theft Case Arrest at Bhadravathi Old Town

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 ಡಿಸೆಂಬರ್ 2021 ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಬೈಕ್ ಸವಾರರನ್ನು ಹಿಡಿದು, ಕೈಯಲ್ಲಿದ್ದ ಬ್ಯಾಗ್ ತಪಾಸಣೆಗೆ ಒಳಪಡಿಸಿದಾಗ ರಾಶಿ ರಾಶಿ ಮೊಬೈಲ್ ಪತ್ತೆಯಾಗಿವೆ. ಕಳ್ಳರನ್ನು ಬಂಧಿಸಿದ ಪೊಲೀಸರು ಮೊಬೈಲ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಭದ್ರಾವತಿ ಹೊಸಮನೆ ಬಡಾವಣೆಯ ಸಿ.ಶ್ರೀನಿವಾಸ್ (26) ಮತ್ತು ದುರ್ಗಿನಗರದ ಅಜಾಮ್ ಅಲಿಯಾಸ್ ಬಾಬು (38) ಬಂಧಿತರು. ಬ್ಯಾಗ್’ನಲ್ಲಿತ್ತು ರಾಶಿ ರಾಶಿ ಮೊಬೈಲ್ ಮೊಬೈಲ್ ಕಳ್ಳರ ಕುರಿತು ಖಚಿತ ಮಾಹಿತಿ ಮೇರೆಗೆ, ಪೊಲೀಸರು ಭದ್ರಾವತಿಯ ಸೀಗೆಬಾಗಿ … Read more

ಶಿವಮೊಗ್ಗದಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಬರುವಷ್ಟರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ, ಬೆಳ್ಳಿ ವಸ್ತುಗಳು ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021 ಕಾರಿಗೆ ಪೆಟ್ರೋಲ್ ಭರ್ತಿ ಮಾಡಿಕೊಂಡು ಬರುವಷ್ಟರಲ್ಲಿ ಮನೆಯೊಂದರ ಇಂಟರ್ ಲಾಕ್ ಮುರಿದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಮೇಲಿನ ತುಂಗಾನಗರದ ವೆಂಕಟೇಶ್ ಅವರ ಮನೆಯಲ್ಲಿ ಘಟನೆ ಸಂಭವಿಸಿದೆ. ವೆಂಕಟೇಶ್ ಅವರು ಬೆಳಗ್ಗೆ 10 ಗಂಟೆ ಹೊತ್ತಿಗೆ ತಮ್ಮ ಮನೆಯ ಇಂಟರ್ ಲಾಕ್ ಹಾಕಿ, ಸಮೀಪದ ಪೆಟ್ರೋಲ್ ಬಂಕ್’ಗೆ ತೆರಳಿದ್ದರು. ತಮ್ಮ ಕಾರಿಗೆ ಪೆಟ್ರೋಲ್ ಭರ್ತಿ ಮಾಡಿಕೊಂಡು ಬರವಷ್ಟರಲ್ಲಿ ಕಳ್ಳರು ಮನೆ … Read more