ಬಿಜೆಪಿ ಮೂರನೇ ಪಟ್ಟಿ ಪ್ರಕಟ, ಶಿವಮೊಗ್ಗ ಅಭ್ಯರ್ಥಿ ಕುರಿತ ಕುತೂಹಲ ಮತ್ತಷ್ಟು ಹೆಚ್ಚಳ

BJP-Office-Shimoga

SHIVAMOGGA LIVE NEWS | 17 APRIL 2023 SHIMOGA : ಬಿಜೆಪಿ ಅಭ್ಯರ್ಥಿಗಳ ಮೂರನೆ ಪಟ್ಟಿ (Third list) ಬಿಡುಗಡೆಯಾಗಿದೆ. ಹತ್ತು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಆದರೆ ಈ ಪಟ್ಟಿಯಲ್ಲಿ ಶಿವಮೊಗ್ಗ ಕ್ಷೇತ್ರದ ಹೆಸರು ಇಲ್ಲ. ಹಾಗಾಗಿ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಕುರಿತು ಕುತೂಹಲ ಇನ್ನೂ ಮುಂದುವರೆದಿದೆ. ಮೂರನೆ ಪಟ್ಟಿಯಲ್ಲಿ (Third list) ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟವಾಗಲಿದೆ ಎಂದು ಕಾರ್ಯಕರ್ತರು ನಿರೀಕ್ಷಿಸಿದ್ದರು. ಆದರೆ ಅಳೆದು ತೂಗಿ ಹತ್ತು ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟಿಸಿರುವ ಬಿಜೆಪಿ, … Read more

ಚುನಾವಣೆ ಹಿನ್ನೆಲೆ, ಜನ ಎಷ್ಟು ದುಡ್ಡು ಕೊಂಡೊಯ್ಯಬಹುದು, ಹಣ ಸೀಜ್ ಆದರೆ ಏನೆಲ್ಲ ದಾಖಲೆ ಒದಗಿಸಬೇಕು?

Shimoga-SP-Mithun-Kumar-IPS-and-DC-Dr.Selvamani-IAS

SHIVAMOGGA LIVE NEWS | 17 APRIL 2023 SHIMOGA : ಸಾರ್ವಜನಿಕರು 50 ಸಾವಿರ ರೂ.ಗಿಂತಲೂ ಹೆಚ್ಚಿನ ಹಣ ಹೊಂದಿದ್ದರೆ ಅದನ್ನು ಚುನಾವಣಾಧಿಕಾರಿಗಳು ವಶಕ್ಕೆ (Seized) ಪಡೆಯಲಿದ್ದಾರೆ. ಸಮರ್ಪಕ ದಾಖಲೆ ಒದಗಿಸಿದರೆ ಹಣ ಹಿಂತಿರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದರು. ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಹಣಕ್ಕೆ ಸೂಕ್ತ ದಾಖಲೆ ಒದಗಿಸಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ … Read more

ಚುನಾವಣೆಗೆ ಅಭ್ಯರ್ಥಿ ಎಷ್ಟು ಹಣ ಖರ್ಚು ಮಾಡಬಹುದು? ಸಂವಾದಲ್ಲಿ ಶಿವಮೊಗ್ಗ ಡಿಸಿ ಹೇಳಿದ್ದೇನು?

Shimoga-DC-Dr-selamani-IAS-in-Press-Trust

SHIVAMOGGA LIVE NEWS | 17 APRIL 2023 SHIMOGA : ಪ್ರತಿ ಅಭ್ಯರ್ಥಿಯ ಚುನಾವಣೆ ಖರ್ಚು (Election Expenditure) ವೆಚ್ಚದ ಮೇಲೆ ಚುನಾವಣಾ ಆಯೋಗ ಕಠಿಣ ನಿಗಾ ವಹಿಸಿದೆ. ನಾಮಪತ್ರ ಸಲ್ಲಿಕೆ ದಿನದಿಂದ ಚುನಾವಣೆ ಕಾರ್ಯ ಮುಗಿಯುವವರೆಗಿನ ಪ್ರತಿ ಹಂತದಲ್ಲಿನ ಖರ್ಚು ವೆಚ್ಚದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು. ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು, ಚುನಾವಣೆಗೆ ಪ್ರತಿ … Read more

ಶಿವಮೊಗ್ಗಕ್ಕೆ ಬರ್ತಿದ್ದಾರೆ ಮತ್ತಷ್ಟು ಯೋಧರು, ಚೆಕ್ ಪೋಸ್ಟ್‌ಗಳು ಇನ್ನಷ್ಟು ಟೈಟ್, ಸ್ಟ್ರಾಂಗ್ ರೂಂಗಳಿಗೆ ಹೈ ಸೆಕ್ಯೂರಿಟಿ

Shimoga-SP-Mithun-Kumar-IPS

SHIVAMOGGA LIVE NEWS | 17 APRIL 2023 SHIMOGA : ವಿಧಾನಸಭೆ ಚುನಾವಣೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಗೆ ಈಗಾಗಲೇ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯೋಧರು  ಆಗಮಿಸಿದ್ದಾರೆ. ಇವತ್ತು ರಾತ್ರಿ ಮತ್ತಷ್ಟು ಯೋಧರು ಜಿಲ್ಲೆಗೆ ಬರಲಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು. ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ಸಿಎಪಿಎಫ್‍ನಲ್ಲಿ (CAPF) ಗಡಿ ಭದ್ರತಾ ಪಡೆ, … Read more

ಆರದ ಆಕ್ರೋಶ, ಶಿವಮೊಗ್ಗದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಸಿಟ್ಟು ಹೊರ ಹಾಕಿದ ಕಾರ್ಯಕರ್ತರು

Protest-by-Sundresh-followers-in-Shimoga.

SHIVAMOGGA LIVE NEWS | 17 APRIL 2023 SHIMOGA : ಕಾಂಗ್ರೆಸ್‌ ಕಚೇರಿ ಮುಂದೆ ಇವತ್ತೂ ಪ್ರತಿಭಟನೆ (Protest) ನಡೆಯಿತು. ಟೈರ್‌ಗೆ ಬೆಂಕಿ ಹಚ್ಚಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಘೋಷಣೆಗಳನ್ನು ಕೂಗಿ ತಮ್ಮ ಸಿಟ್ಟು ಹೊರ ಹಾಕಿದರು. ಶಿವಮೊಗ್ಗ ನಗರ ಕ್ಷೇತ್ರಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಹೆಚ್‌.ಎಸ್.ಸುಂದರೇಶ್‌ ಅವರು ಟಿಕಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕಟ್‌ ಕೈ ತಪ್ಪಿದ್ದು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಕಚೇರಿ ಮುಂದೆ ಹಠಾತ್‌ ಜಮಾವಣೆಯಾದ ಬೆಂಬಲಿಗರು ಪ್ರತಿಭಟನೆ (Protest) ನಡೆಸಿದರು. ಟೈರ್‌ಗೆ … Read more

ಜೊತೆ ಜೊತೆಗೆ ಕಾಣಿಸಿಕೊಂಡ ಈಶ್ವರಪ್ಪ, ಸರ್ಜಿ, ಕುತೂಹಲ ಮೂಡಿಸಿದ ಬೆಳವಣಿಗೆ

KS-Eshwarappa-Dr-Dananjaya-Sarji-in-BJP

SHIVAMOGGA LIVE NEWS | 17 APRIL 2023 SHIMOGA : ಬಿಜೆಪಿ ಟಿಕೆಟ್‌ ವಿಚಾರವಾಗಿ ತೀವ್ರ ಕುತೂಹಲವಿದೆ (Curiosity). ದಿನಕ್ಕೊಂದು ಹೆಸರು ಚರ್ಚೆಯಾಗುತ್ತಿದೆ. ಈ ನಡುವೆ ಡಾ.ಧನಂಜಯ ಸರ್ಜಿ ಅವರು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರ್ಪಡೆ ವಿರುದ್ಧ ಈಶ್ವರಪ್ಪ ಅವರು ಬಹಿರಂಗ ಪತ್ರ ಬರೆದಿದ್ದಾರೆ. ಈ ಕುರಿತು ಈ‍ಶ್ವರಪ್ಪ  ಅವರು ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ಡಾ.ಧನಂಜಯ ಸರ್ಜಿ … Read more

ನೀರಿನ ಟ್ಯಾಂಕರ್ ಡಿಕ್ಕಿ, ಗೋಂವಿದಾಪುರದ ಯುವಕ ಸಾವು

ACCIDENT-NEWS-GENERAL-IMAGE.

SHIVAMOGGA LIVE NEWS | 17 APRIL 2023 SHIMOGA : ನೀರಿನ ಟ್ಯಾಂಕರ್ (Tanker) ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಟ್ಟಿದ್ದಾನೆ. ಗೋವಿಂದಾಪುರದ ಕಿಶನ್ (19) ಮೃತ ದುರ್ದೈವಿ. ಗಾರೆ ಕೆಲಸಕ್ಕೆ ಗೋವಿಂದಾಪುರದಿಂದ ಶಿವಮೊಗ್ಗಕ್ಕೆ ತೆರಳುವಾಗ ಘಟನೆ ಸಂಭವಿಸಿದೆ. ಲಕ್ಷ್ಮಣ್ ಎಂಬುವವರೊಂದಿಗೆ ಬೈಕಿನ ಹಿಂಬದಿಯಲ್ಲಿ ಕುಳಿತು ಕಿಶನ್ ಶಿವಮೊಗ್ಗಕ್ಕೆ ತೆರಳುತ್ತಿದ್ದ. ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದು, ಕಿಶನ್ ಮೈಮೇಲೆ ಹರಿದಿದೆ. ಇದರಿಂದ ಕಿಶನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಕ್ಷ್ಮಣ್ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನಡೆಯುತ್ತಿದೆ. … Read more

SHIMOGA JOBS | ಆರ್ಟ್ಸ್, ಕಾಮರ್ಸ್, ಸೈನ್ಸ್ ಸೇರಿ ಯಾವುದೇ ಪದವಿ ಪಡೆದವರಿಗೆ ಉದ್ಯೋಗ, ಏ.25ರಂದು ಸಂದರ್ಶನ

jobs news shivamogga live

SHIVAMOGGA LIVE NEWS | 17 APRIL 2023 SHIMOGA : ಟಾಟಾ ಕನ್ಸಲ್‍ಟೆನ್ಸಿ ಬಿಪಿಎಸ್‍ನಲ್ಲಿ ವಿವಿಧ ಪದವಿ ಪಡೆದವರಿಗೆ ಉದ್ಯೋಗವಕಾಶವಿದೆ (jobs). ಆಸಕ್ತು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಏಪ್ರಿಲ್ 25ರಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕೆಳಗಿರುವ ಫೋಟೊ ಗಮನಿಸಿ. ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ https://nextstep.tcs.com/campus/#/ ಇದನ್ನೂ ಓದಿ – ಮಾಜಿ ಸಚಿವ ಈಶ್ವರಪ್ಪಗೆ ಭದ್ರತೆ ಹೆಚ್ಚಳದ ಭರವಸೆ, ಮನೆಗೂ ಭದ್ರತೆ ವಿಸ್ತರಣೆ

ಬಸವನಗಂಗೂರು ರಸ್ತೆಯಲ್ಲಿ ಕೋಣಕ್ಕೆ ಬೈಕ್ ಡಿಕ್ಕಿ, ಮಹಿಳೆ ತಲೆಗೆ ಗಂಭೀರ ಗಾಯ

ACCIDENT-NEWS-GENERAL-IMAGE.

SHIVAMOGGA LIVE NEWS | 17 APRIL 2023 SHIMOGA : ರಸ್ತೆಯಲ್ಲಿ ಕೋಣ ಒಂದಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ (injured). ಮೋಜಪ್ಪನ ಹೊಸೂರಿನ ಕಾಶಿ ಬಾಯಿ ಎಂಬುವವರ ತಲೆಗೆ ಪೆಟ್ಟು ಬಿದ್ದಿದೆ. ಮಗ ವಿಜಯ್‍ ಜೊತೆಗೆ ಬಸವನಗಂಗೂರಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಹೊಸೂರಿನಿಂದ ಬಸವನಗಂಗೂರಿಗೆ ತೆರಳುವ ಮಾರ್ಗದಲ್ಲಿ ವಿಜಯ್ ಚಲಾಯಿಸುತ್ತಿದ್ದ ಎಲೆಕ್ಟ್ರಿಕ್ ಬೈಕ್‍ ಕೋಣಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿ ಕುಳಿತಿದ್ದ ಕಾಶಿ ಬಾಯಿ ಅವರು ಕೆಳಗೆ ಬಿದ್ದಿದ್ದು, ತಲೆಗೆ ಪೆಟ್ಟು (injured) … Read more

ಗಾಂಧಿ ಬಜಾರ್‌ನಲ್ಲಿ ಬಟ್ಟೆ ವಿಚಾರಕ್ಕೆ ಕಿರಿಕ್, ಕೈ ಕೈ ಮಿಲಾಯಿಸಿದ ಅಂಗಡಿ ಮಾಲೀಕ, ಗ್ರಾಹಕ, ಏನಿದು ಪ್ರಕರಣ?

200123 Police Jeep With Light jpg

SHIVAMOGGA LIVE NEWS | 17 APRIL 2023 SHIMOGA : ಮಕ್ಕಳ ಬಟ್ಟೆ ಸೈಸ್ ವ್ಯತ್ಯಾಸವಾಗಿದ್ದು ಬದಲು ಮಾಡಿಕೊಡುವಂತೆ ಬಂದ ಗ್ರಾಹಕ ಮತ್ತು ಅಂಗಡಿ (Shop) ಮಾಲೀಕನ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗಾಂಧಿ ಬಜಾರ್‍ನ ಬಟ್ಟೆ ಮಾರುಕಟ್ಟೆಯಲ್ಲಿ ಘಟನೆ ಸಂಭವಿಸಿದೆ. ಅಂಗಡಿಯೊಂದರಲ್ಲಿ (Shop) ಅಬ್ದುಲ್ ಖಾದರ್ ಅವರ ಮನೆಯ ಮಕ್ಕಳಿಗೆ ಬಟ್ಟೆ ಖರೀದಿಸಲಾಗಿತ್ತು. ಆದರೆ ಮನೆಗೆ ಕೊಂಡೊಯ್ದಾಗ ಸೈಸ್ ವ್ಯತ್ಯಸವಾಗಿತ್ತು. ಮರುದಿನ ಬಟ್ಟೆ ಬದಲಾಯಿಸಿಕೊಂಡು … Read more