ಆಗುಂಬೆ ಸುತ್ತಮುತ್ತ ಸಂಜೆ 6 ಗಂಟೆ ನಂತರ ಓಡಾಡುವಾಗ ಎಚ್ಚರ, ಕಾರಣವೇನು?
ತೀರ್ಥಹಳ್ಳಿ: ಕಳೆದ ಕೆಲ ದಿನದಿಂದ ಆಗುಂಬೆ ಮತ್ತು ಬಿದರಗೋಡು ವ್ಯಾಪ್ತಿಯಲ್ಲಿ ಕಾಡಾನೆ (Elephant) ಸಂಚರಿಸುತ್ತಿದೆ. ಹಾಗಾಗಿ ಈ ಗ್ರಾಪಂಗಳ ವ್ಯಾಪ್ತಿಯಲ್ಲಿ ಸಂಜೆ ನಂತರ ಕಾಲ್ನಡಿಗೆಯಲ್ಲಿ ಸಂಚರಿಸಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ. ಬಿದರಗೋಡು ಗ್ರಾಮ ಪಂಚಾಯಿತಿಯ ಅಗಸರಕೋಣೆ, ಕಾರೇಕುಂಬಿ, ಜಡ್ಡು, ಮಳಲಿ, ತಲ್ಲೂರು, ಆಗುಂಬೆ ಗ್ರಾಪಂ ವ್ಯಾಪ್ತಿಯ ಉಳುಮಡಿ ಮತ್ತು ಸುತ್ತಲಿನ ಜಾಗದಲ್ಲಿ ಸಂಚರಿಸುತ್ತಿದೆ. ಸಂಜೆ 6 ಗಂಟೆ ನಂತರ ಮನೆಯಿಂದ ಹೊರಗೆ ಹೋಗದಿರುವುದು ಸೂಕ್ತ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಎಚ್ಚರವಹಿಸಬೇಕು ಎಂದು ಆಗುಂಬೆ ವಲಯ ಅರಣ್ಯಾಧಿಕಾರಿಗಳು … Read more