ಬಿಹಾರ ಫಲಿತಾಂಶ, ಶಿವಮೊಗ್ಗದಲ್ಲಿ ಯಡಿಯೂರಪ್ಪ, ರಾಘವೇಂದ್ರ ಫಸ್ಟ್‌ ರಿಯಾಕ್ಷನ್‌, ಏನಂದ್ರು?

BS-Yedyurappa-and-BY-Raghavendra-spoke-to-media-about-result - ಬಿಹಾರ ಚುನಾವಣೆ ಫಲಿತಾಂಶ

ಶಿವಮೊಗ್ಗ: ಬಿಹಾರ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ, ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಫಲಿತಾಂಶ ಮತ್ತು ಗೆಲುವಿನ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ಏನಂದ್ರು? ವಿನೋಬನಗರದ ತಮ್ಮ ಮನೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ‘ಬಿಹಾರದಲ್ಲಿ ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇತ್ತು. ಆದರೆ ಇಷ್ಟು ದೊಡ್ಡ ಮಟ್ಟಿಗೆ ಸ್ಥಾನಗಳನ್ನು ಗಳಿಸುತ್ತೇವೆ ಎಂದು ನಿರೀಕ್ಷಿಸಿರಲಿಲ್ಲ. ಎನ್‌ಡಿಎ … Read more

ಯಡಿಯೂರಪ್ಪ ಲಕ್ಕಿ ಕಾರಿನಲ್ಲಿ ವಿಜಯೇಂದ್ರ ರೌಂಡ್ಸ್‌, ಅಪ್ಪನ ಏಟು, ಅಪಘಾತದ ಬಗ್ಗೆ ಮಾತು, ಏನೆಲ್ಲ ನೆನಪಿಸಿಕೊಂಡರು?

BY-Vijayendra-in-ambassador-car.

ಶಿವಮೊಗ್ಗ: ‘ಅಂಬಾಸಿಡರ್‌ (ambassador) ಕಾರಿನ ವಿಚಾರವಾಗಿ ಯಡಿಯೂರಪ್ಪ ಅವರು ಜಗಳ ಮಾಡಿ ನನಗೆ ಎರಡು ತಟ್ಟಿದ್ದರು’  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರ ಲಕ್ಕಿ ಅಂಬಾಸಿಡರ್‌ ಕಾರಿನ ಕುರಿತು ಮೆಲುಕು ಹಾಕಿದರು. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಸಿಕೆಆರ್‌ 45 ನಂಬರ್‌ನ ಅಂಬಾಸಿಡರ್‌ ಕಾರಿನ ಜೊತೆಗೆ ಬಿಜೆಪಿಯ ಅನೇಕ ನಾಯಕರಿಗೆ ಭಾವನಾತ್ಮಕ ಸಂಬಂಧವಿದೆ. ಯಡಿಯೂರಪ್ಪ, ಅನಂತ ಕುಮಾರ್‌ ಸೇರಿ ಹಲವು ಪ್ರಮುಖರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗೆ ಲಕ್ಷಾಂತರ ಕಿ.ಮೀ ಪ್ರವಾಸ ಕೈಗೊಂಡಿದ್ದಾರೆ. … Read more

ಯಡಿಯೂರಪ್ಪ ಜನ್ಮದಿನ, ವಿಷ್‌ ಮಾಡಿದ್ರಾ ಈ‍ಶ್ವರಪ್ಪ? ಏನಂದ್ರು?

Former-Minister-KS-Eshwarappa

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನಕ್ಕೆ (Birthday) ಶುಭಕೋರಿದರಾ ಎಂಬ ಪ್ರಶ್ನೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತುಸು ಸಿಡಿಮಿಡಿಗೊಂಡರು. ಅಲ್ಲದೆ ಎಲ್ಲವನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದನ್ನು ಬಿಡಬೇಕು ಎಂದು ತಿಳಿಸಿದರು. ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಈಶ್ವರಪ್ಪ ಅವರಿಗೆ ಪತ್ರಕರ್ತರು, ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ವಿಷ್‌ ಮಾಡಿದ್ರಾ ಎಂದು ಪ್ರಶ್ನಿಸಿದರು. ಆಗ ಈಶ್ವರಪ್ಪ, ಇವತ್ತು ನಾನು ಈ ಸ್ಥಿತಿಯಲ್ಲಿ ಇರಲು ಯಡಿಯೂರಪ್ಪ ಕೂಡ ಕಾರಣ ಎಂದರು. ಈಶ್ವರಪ್ಪ ಏನೆಲ್ಲ ಹೇಳಿದರು? ಯಡಿಯೂರಪ್ಪ ನನ್ನ ಗುರು. … Read more

‘ಎರಡೇ ವಾರದಲ್ಲಿ ಈಶ್ವರಪ್ಪ ಮಾತು ಬದಲಿಸಿದ್ದೇಕೆ, ನಮ್ಮ ಕುಟುಂಬವನ್ನು ಪ್ರಶ್ನಿಸುತ್ತಿರುವುದೇಕೆ?ʼ

BY-Raghavendra-in-Bangalore-sammilana-shimoga-voters

SHIVAMOGGA LIVE NEWS | 15 APRIL 2024 BENGALURU : ರಾಘವೇಂದ್ರ ಅವರು ಐದು ಲಕ್ಷ ಲೀಡ್‌ನಲ್ಲಿ ಗೆಲ್ಲಬೇಕು ಎಂದು ಈ‍ಶ್ವರಪ್ಪ ಅವರು ಹೇಳಿದ್ದರು. ಕೇಂದ್ರದಲ್ಲಿ ಸಚಿವರಾಗಬೇಕು ಎಂದು ಭಾಷಣ ಮಾಡಿದ್ದರು. ಆದರೆ ಎರಡೇ ವಾರದಲ್ಲಿ ನಮ್ಮ ಕುಟುಂಬ ಮತ್ತು ಹಿಂದುತ್ವದ ಕುರಿತು ಪ್ರಶ್ನೆ ಮಾಡಿದ್ದಾರೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.   ರಾಘವೇಂದ್ರ ಭಾಷಣದ 3 ಪ್ರಮುಖಾಂಶ ಬೆಂಗಳೂರಿನಲ್ಲಿ ಖಾಸಗಿ ಹೊಟೇಲ್‌ನಲ್ಲಿ ಶಿವಮೊಗ್ಗ ಕ್ಷೇತ್ರದ ಮತದಾರರ ಸಮ್ಮಿಲನ ಕಾರ್ಯಕ್ರಮದಲ್ಲಿ … Read more

ಕುಮಾರ್‌ ಬಂಗಾರಪ್ಪ ಮನೆಗೆ ರಾಘವೇಂದ್ರ ಭೇಟಿ, ಅರ್ಧ ಗಂಟೆ ಚರ್ಚೆ, ಬಿಜೆಪಿಗೆ ಕುಮಾರ್‌ ಯಾಕಷ್ಟು ಮುಖ್ಯ?

BY Raghavendra Meets Kumar Bangarappa at Kubaturu in Soraba

HIGHLITE ಅರ್ಧ ಗಂಟೆ ಚರ್ಚಿಸಿದ ಕುಮಾರ್‌ ಬಂಗಾರಪ್ಪ, ರಾಘವೇಂದ್ರ ಸೊರಬದ ಕುಬಟೂರಿನ ಮನೆಯಲ್ಲಿ ರಾಜಕೀಯ ಚರ್ಚೆ ಎಂಎಲ್‌ಎ ಬಳಿಕ ಪಕ್ಷದ ಚಟುವಟಿಕೆಯಿಂದ ದೂರಾಗಿದ್ದ ಕುಮಾರ್ SHIVAMOGGA LIVE NEWS | 5 APRIL 2024 SORABA : ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ನಿವಾಸಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಸೊರಬದಲ್ಲಿರುವ ಕುಮಾರ್‌ ಬಂಗಾರಪ್ಪ ಅವರ ನಿವಾಸಕ್ಕೆ ಸಂಸದ … Read more

BREAKING NEWS | ಸ್ವತಂತ್ರವಾಗಿ ಸ್ಪರ್ಧೆಯ ನಿರ್ಧಾರ ಪ್ರಕಟಿಸಿದ ಈಶ್ವರಪ್ಪ, ನಿರ್ಧಾರಕ್ಕೆ ಕಾರಣವೇನು?

-KS-Eshwarappa-Press-Meet

SHIVAMOGGA LIVE NEWS | 15 MARCH 2024 SHIMOGA : ಲೋಕಸಭೆ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಿರ್ಧಾರ ಪ್ರಕಟಿಸಿದ್ದಾರೆ. ಬಂಜಾರ ಸಮುದಾಯ ಭವನದಲ್ಲಿ ನಡೆದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮದು ಆತುರದ ನಿರ್ಧಾರವಲ್ಲ. ಇದು ಮೋದಿ ವಿರೋಧಿ ನಡೆಯಲ್ಲ. ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಗಬಾರದು. ಹಿಂದುತ್ವಕ್ಕೆ, ಕಾರ್ಯಕರ್ತರಿಗೆ ಅನ್ಯಾಯವಾಗಬಾರದು ಎಂದು ಈ ನಿರ್ಧಾರ ಎಂದು ಈಶ್ವರಪ್ಪ ತಿಳಿಸಿದರು. ಇದನ್ನೂ ಓದಿ – ಶಿವಮೊಗ್ಗ ಕಾಂಗ್ರೆಸ್‌ ಕಚೇರಿ ಮುಂಭಾಗ … Read more

ಶಿವಮೊಗ್ಗಕ್ಕೆ ಪ್ರಧಾನಿ, ಬೃಹತ್‌ ಪೆಂಡಾಲ್‌ ರೆಡಿ, ಮೋದಿ ಸಾಗುವ ರಸ್ತೆಗಳೆಲ್ಲ ಈಗ ಕ್ಲೀನ್‌ ಕ್ಲೀನ್‌

BY-Raghvendra-inspects-stage-for-PM-Modi-Programme

SHIVAMOGGA LIVE NEWS | 15 MARCH 2024 SHIMOGA : ಮಾ.18ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಭೇಟಿ ಹಿನ್ನೆಲೆ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ. ಅಲ್ಲಮಪ್ರಭು ಮೈದಾನದಲ್ಲಿ ಸಮಾವೇಶಕ್ಕೆ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಬೃಹತ್‌ ಪೆಂಡಾಲ್‌, 2 ಲಕ್ಷ ಜನ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್‌) ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು ಪೆಂಡಾಲ್‌ ಮತ್ತು ವೇದಿಕೆ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಅಂದು ಸುಮಾರು 2 ಲಕ್ಷ ಜನರು ಸಭೆಯಲ್ಲಿ ಭಾಗವಹಿಸುವ … Read more

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌, ಎಫ್‌ಐಆರ್‌ನಲ್ಲಿ ಏನಿದೆ? ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ ಏನು?

BS-Yedyurappa-and-BY-Raghavendra-in-Shimoga

SHIVAMOGGA LIVE NEWS | 15 MARCH 2024 BENGALURU : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಪಾದಿಸಿ ಆಕೆಯ ತಾಯಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆ ಅಡಿ ಕೇಸ್‌ ದಾಖಲಾಗಿದೆ. ಪ್ರಕರಣವೊಂದರ ಸಂಬಂಧ ನೆರವು ಕೇಳಿಕೊಂಡು ತಾಯಿ ಮತ್ತು ಮಗಳು ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಸದಾಶಿವನಗರದಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಏನೇನು ಉಲ್ಲೇಖಿಸಲಾಗಿದೆ? 17 ವರ್ಷದ … Read more

ಅಪ್ರಾಪ್ತೆ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕೇಸ್‌

Yedyurappa-Speaks-to-media-at-Shimoga-Helipad

SHIVAMOGGA LIVE NEWS | 14 MARCH 2024 BENGALURU : ನೆರವು ಕೇಳಿ ಬಂದ ಅಪ್ರಾಪ್ತೆ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಫೆ.2ರಂದು ಅಪ್ರಾಪ್ತೆಯು ತನ್ನ ತಾಯಿಯೊಂದಿಗೆ ಸಹಾಯ ಕೇಳಲು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಪೋಕ್ಸೋ ಕಾಯ್ದೆ ಮತ್ತು … Read more

ಸಂಸದ ರಾಘವೇಂದ್ರ ವಿರುದ್ಧ ಚುನಾವಣೆಗೆ ನಿಲ್ತಾರಾ ಈಶ್ವರಪ್ಪ? ನಾಳೆಯ ಸಭೆಯ ಉದ್ದೇಶವೇನು? ಪೋಸ್ಟರ್‌ ಕಥೆ ಏನು?

KS-Eshwarappa-Former-minister-angry.

SHIVAMOGGA LIVE NEWS | 14 MARCH 2024 SHIMOGA : ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಪುತ್ರ ಕಾಂತೇಶ್‌ಗೆ ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶಗೊಂಡಿದ್ದಾರೆ. ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಶಿವಮೊಗ್ಗ ಬಿಜೆಪಿಯಲ್ಲಿ ಮತ್ತೆ ಯಡಿಯೂರಪ್ಪ ವರ್ಸಸ್‌ ಈಶ್ವರಪ್ಪ ಬಣಗಳ ಮುಸುಕಿನ ಗುದ್ದಾಟ ಮುನ್ನಲೆಗೆ ಬಂದಿದೆ. ಈ ಬಾರಿಯ ಜಿದ್ದಾಜಿದ್ದಿ ನಿರ್ಣಾಯಕ ಎಂದು ವಿಶ್ಲೇಷಿಸಲಾಗುತ್ತಿದೆ. ಕೈ ತಪ್ಪಿದ ಟಿಕೆಟ್‌ನಿಂದ ಆಕ್ರೋಶ ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್‌ ಅವರು … Read more