ಶಿವಮೊಗ್ಗ ಲೈವ್.ಕಾಂ | BHADRAVATHI NEWS | 12 ಜೂನ್ 2020
ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದ ಗರ್ಭಿಣಿಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಭದ್ರಾವತಿಯ ಚನ್ನಗಿರಿ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗರ್ಭಿಣಿ ಬಂದಿದ್ದು ಹೇಗೆ?
ಬೆಂಗಳೂರಿನಲ್ಲಿರುವ ಗಂಡನ ಮನೆಯಿಂದ ಭದ್ರಾವತಿಯಲ್ಲಿರುವ ತವರು ಮನೆಗೆ ಮೂರು ದಿನದ ಹಿಂದೆ ಮಹಿಳೆ ಹಿಂತಿರುಗಿದ್ದರು. ಸಹೋದರ ಸಂಬಂಧಿಯೊಬ್ಬರ ಕಾರಿನಲ್ಲಿ ಅವರನ್ನು ಕರೆತರಲಾಗಿತ್ತು.
ಸೋಂಕು ಕಾಣಿಸಿಕೊಂಡಿದ್ದು ಹೇಗೆ?
ಆರೋಗ್ಯ ತಪಾಸಣೆಗಾಗಿ ಭದ್ರಾವತಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದಾಗ, ಕರೋನ ತಪಾಸಣೆ ಮಾಡಿಸಿಕೊಂಡು ಬರುವಂತೆ ವೈದ್ಯರು ಸೂಚಿಸಿದ್ದರು. ಹಾಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೋನ ತಪಾಸಣೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಕೂಡಲೇ ಆರೋಗ್ಯಾಧಿಕಾರಿಗಳು, ನಗರಸಭೆ ಅಧಿಕಾರಿಗಳು ಗರ್ಭಿಣಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತಂದೆ, ತಾಯಿ, ಸಂಬಂಧಿ ಕ್ವಾರಂಟೈನ್
ಮಹಿಳೆಯನ್ನು ಬೆಂಗಳೂರಿನಿಂದ ಕರೆತಂದ ಸಂಬಂಧಿ, ಮೂರು ದಿನ ತಂದೆ, ತಾಯಿಯೊಂದಿಗೆ ಮನೆಯಿದ್ದ ಕಾರಣ ಇವರನ್ನೆಲ್ಲ ಪ್ರಾಥಮಿಕ ಸಂಪರ್ಕ ಎಂದು ಗುರುತಿಸಲಾಗಿದೆ. ಎಲ್ಲರನ್ನು ಕ್ವಾರಂಟೈನ್‍ನಲ್ಲಿಇರಿಸಲಾಗಿದೆ. ನಿಯಮಿತವಾಗಿ ಇವರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.
ರಂಗಪ್ಪ ಸರ್ಕಲ್ ಪಕ್ಕದ ರಸ್ತೆ ಸೀಲ್ ಡೌನ್
ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಅವರ ಮನೆ ಇರುವ ಚನ್ನಗಿರಿ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಅವರ ಮನೆ ಇರುವ 100 ಮೀ. ಆಸುಪಾಸಿನಲ್ಲಿ ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]