ಎಂಪಿಎಂ, ವಿಐಎಸ್ಎಲ್ ಉಳಿಸುವಂತೆ ಜಮ್ಮು, ಕಾಶ್ಮೀರದಲ್ಲಿ ಭದ್ರಾವತಿ ಯುವಕನ ಪ್ರತಿಭಟನೆ, ಘೋಷಣೆ

Published On : ಜುಲೈ 5, 2019

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ ಲೈವ್.ಕಾಂ | 5 ಜುಲೈ 2019

ಎಂಪಿಎಂ ಸ್ಥಗಿತದ ಆದೇಶ, ವಿಐಎಸ್ಎಲ್ ಮಾರಾಟಕ್ಕೆ ಟೆಂಡರ್ ಕರೆದಿರುವುದಕ್ಕೆ ಭದ್ರಾವತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಭದ್ರಾವತಿಯ ಯುವಕನೊಬ್ಬ ಲಡಾಕ್’ನಲ್ಲಿ ಬ್ಯಾನರ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಿಂದ ಜಮ್ಮು ಕಾಶ್ಮೀರದ ಲಡಾಕ್’ವರೆಗೂ ಬೈಕ್ ರೈಡ್ ಮಾಡಿದ್ದ ಭದ್ರಾವತಿಯ ಜೀವನ್, ಎಂಪಿಎಂ, ವಿಐಎಸ್ಎಲ್ ಪುನಶ್ಚೇತನ ಮಾಡಬೇಕು ಎಂದು ಆಗ್ರಹಿಸಿ, ಬ್ಯಾನರ್ ಹಾಕಿ, ಕಾರ್ಖಾನೆ ಪರವಾಗಿ ಘೋಷಣೆ ಕೂಗಿದ್ದಾರೆ.

ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಜೀವನ್, ‘ನಮ್ಮ ತಂದೆ ಎಂಪಿಎಂ ಉದ್ಯೋಗಿಯಾಗಿ ನಿವೃತ್ತರಾಗಿದ್ದಾರೆ. ಎಂಪಿಎಂ ಆಸ್ಪತ್ರೆಯನ್ನು ಬಳಸಿದ್ದೇವೆ. ಆ ಕಾರ್ಖಾನೆಯಿಂದಾಗಿ ನಾವು ಇಷ್ಟು ಬೆಳೆದಿದ್ದೇವೆ. ಈಗ ಕಾರ್ಖಾನೆಗಳನ್ನು ಉಳಿಸಿಕೊಳ್ಳಬೇಕಿದೆ. ಹಾಗಾಗಿ ಬ್ಯಾನರ್ ಹಾಕಿ ಪ್ರತಿಭಟನೆ ನಡೆಸಿದೆವು’ ಎಂದರು.

ಜೀವನ್ ಸೇರಿ 15 ಯುವಕರು ಬೆಂಗಳೂರಿನಿಂದ ಲಡಾಕ್’ಗೆ ಬೈಕ್ ರೈಡ್ ತೆರಳಿದ್ದರು. ಈ ತಂಡದಲ್ಲಿ ಶಿವಮೊಗ್ಗದ ಪೂರ್ಣೇಶ್ ಎಂಬುವವರು ಇದ್ದರು. ವಾಹನಗಳು ತೆರಳುವ ಕಟ್ಟಕಡೆಯ ಕಣಿವೆ ಪ್ರದೇಶದಲ್ಲಿ ನಿಂತು ಕಾರ್ಖಾನೆಗಳನ್ನು ಉಳಿಸುವಂತೆ ಪ್ರತಿಭಟಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜುಲೈ 5, 2019

Leave a Comment