ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 10 MAY 2023
BHADRAVATHI : ಮೂಲ ಸೌಕರ್ಯಕ್ಕೆ ಆಗ್ರಹಿಸಿ ಕನಸಿನಕಟ್ಟೆ ಗ್ರಾಮಸ್ಥರು ಮತದಾನ ಬಹಿಷ್ಕಾರಿಸಿದ್ದಾರೆ (Boycott). ಗ್ರಾಮದಲ್ಲಿ ಸ್ಥಾಪಿಸಿರುವ ಬೂತ್‌ನಲ್ಲಿ ಬೆಳಗ್ಗೆಯಿಂದ ಇಬ್ಬರು ಮಾತ್ರ ಮತದಾನ ಮಾಡಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಭದ್ರಾವತಿ ತಾಲೂಕಿನ ಕನಸಿಕಟ್ಟೆ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲಾಗಿದೆ. ರಾಜಕೀಯ ನಾಯಕರು ಊರೊಳಗೆ ಪ್ರವೇಶಿಸಬಾರದು ಎಂದು ಬ್ಯಾನರ್ ಹಾಕಿದ್ದರು. ಹೀಗಿದ್ದೂ ಗ್ರಾಮಸ್ಥರ ಮನವೊಲಿಸಲು ಯಾರೊಬ್ಬರು ಬಂದಿಲ್ಲ.
ಎರಡು ಮತ ಮಾತ್ರ ಚಲಾವಣೆ
ಕನಸಿನಕಟ್ಟೆ ಗ್ರಾಮದ ಬೂತ್‌ನಲ್ಲಿ 1021 ಮತಗಳಿವೆ. ಬೆಳಗ್ಗೆಯಿಂದ ಎರಡು ಮತಗಳು ಮಾತ್ರ ಚಲಾವಣೆಯಾಗಿದೆ. ಮತಗಟ್ಟೆಯಿಂದ ನೂರು ಮೀಟರ್ ಹೊರಗೆ ಮತದಾನ ಬಹಿಷ್ಕಾರದ (Boycott) ಬ್ಯಾನರ್ ಕಟ್ಟಿದ್ದಾರೆ. ಮತದಾರರು ನೂರು ಮೀಟರ್ ಹೊರಗೆ ನಿಂತು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಜನರ ಆಕ್ರೋಶಕ್ಕೆ ಕಾರಣವೇನು?
ಕನಸಿನಕಟ್ಟೆಯಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವುದಿಲ್ಲ. ಇದರಿಂದ ಜನರು ಹೊರ ಜಗತ್ತಿನಿಂದ ದೂರಾಗಿದ್ದಾರೆ. ಇನ್ನು, ಊರಿಗೆ ಬಸ್ ಸೌಕರ್ಯವಿಲ್ಲ. ಊರಿನ ಮಕ್ಕಳು ಶಾಲೆ, ಕಾಲೇಜಿಗೆ ತೆರಳುವುದು ಕಷ್ಟವಾಗಿದೆ. ಊರಿನಲ್ಲಿ ಸ್ಮಶಾನವು ಇಲ್ಲ. ತಮ್ಮ ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ರಾಜಕಾರಣಿಗಳು ತಮ್ಮೂರಿಗೆ ಪ್ರವೇಶಿಸಬಾರದು ಎಂದು ಬ್ಯಾನರ್ ಕಟ್ಟಿದ್ದರು.
LATEST NEWS
- ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

- ಮಾರ್ಚ್ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

- ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು















