ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಾಡಾನೆಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 21 SEPTEMBER 2024 : ಕಾಡಾನೆ (Wild Elephant) ದಾಳಿಗೆ ಸಿರಿಗೆರೆ ಭಾಗದಲ್ಲಿ ಬೆಳೆ ನಷ್ಟ ಉಂಟಾಗಿದೆ. ಕಳೆದ ರಾತ್ರಿ ಈ ಭಾಗದಲ್ಲಿ ತೋಟ, ಹೊಲಕ್ಕೆ ನುಗ್ಗಿರುವ ಕಾಡಾನೆಗಳು ಬೆಳೆ ಹಾನಿ ಮಾಡಿದೆ.

ಶಿವಮೊಗ್ಗ ತಾಲೂಕು ಸಿರಿಗೆರೆಯ ಆಂಧ್ರ ಕ್ಯಾಂಪ್‌ ಭಾಗದಲ್ಲಿ ಕಳೆದ ರಾತ್ರಿ ಹಲವರ ಜಮೀನಿಗೆ ಕಾಡಾನೆಗಳು ದಾಳಿ ನಡೆಸಿವೆ. ಜೋಳ, ಬಾಳೆ, ಅಡಿಕೆ, ತೆಂಗು ಬೆಳೆಗೆ ಹಾನಿಯಾಗಿದೆ. ಆನೆಗಳ ಉಪಟಳ ತಡೆಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿಗೆ ಮಾಡಿದ್ದಾರೆ.

ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸ್ಥಳೀಯರಾದ ರಾಜೇಶ್‌, ಕಳೆದ ವಾರವು ಆನೆಗಳು ಬಂದಿದ್ದವು. ರಾತ್ರಿ ವೇಳೆ ಜಮೀನು ಕಾಯಲು ಹೋಗಿದ್ದರಿಂದ ಕೂಗಿ ಆನೆಗಳನ್ನು ಓಡಿಸಿದ್ದೆವು. ಇವತ್ತು ಕಾಡಾನೆಗಳು ದಾಳಿ ನಡೆಸಿವೆ. ಬೆಳೆ ನಷ್ಟಕ್ಕೆ ಪರಿಹಾರ ಕೇಳಿದರೆ ನೀವು ಆನೆ ಓಡಾಡುವ ಜಾಗದಲ್ಲಿ ಜಮೀನು ಮಾಡುತ್ತಿದ್ದೀರ ಎಂದು ಅಧಿಕಾರಿಗಳು ಹಾರಿ ಉತ್ತರ ನೀಡುತ್ತಾರೆ. ಬೆಳೆ ನಷ್ಟದಿಂದಾಗಿ ನಮ್ಮ ಜೀವನಕ್ಕೆ ತೊಂದರೆಯಾಗುತ್ತಿದೆ. ಆನೆಗಳ ಹಾವಳಿಗೆ ಅರಣ್ಯ ಇಲಾಖೆ ತಡೆಯೊಡ್ಡಲಿ ಎಂದರು.  

wild-Elephant-attack-on-farm-at-sirigere-in-Shimoga

ತಮ್ಮಡಿಹಳ್ಳಿ ಭಾಗದಲ್ಲಿ ಕಾಣಿಸಿದ್ದ ಆನೆ

ತಾಲೂಕಿನ ಆಯನೂರು ಹೋಬಳಿಯ ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲುಮೆಜಡ್ಡು ವರದಳ್ಳಿ ಚೌಡಪ್ಪ ಎಂಬುವರ ಗದ್ದೆಗೆ ಬುಧವಾರ ಬೆಳಗಿನ ಜಾವ ನುಗ್ಗಿದ ಕಾಡಾನೆಗಳು ಬೆಳೆ ನಾಶಮಾಡಿವೆ. ಮೂರು ಆನೆಗಳು ಕೂಡಿ, ಯರೆಬೀಸು, ಕೆಸುವಿನ ಹೊಂಡ, ಅಡೇರಿ ಭಾಗದಲ್ಲಿ ಸಂಚರಿಸುತ್ತಿವೆ.

ಗದ್ದೆ, ತೋಟಗಳಿಗೆ ನುಗ್ಗಿ ನಿರಂತರವಾಗಿ ಫಸಲು ಹಾಳುಮಾಡುತ್ತಿವೆ. ಈ ಭಾಗದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದು, ಸಾಗುವಳಿ ಮಾಡಿದ ಭತ್ತದ ಗದ್ದೆಯನ್ನು ನಾಶಪಡಿಸುತ್ತಿವೆ. ಕೂಡಲೇ ಆನೆಗಳನ್ನು ಸ್ಥಳಾಂತರ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ » ಸಾ ಮಿಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಲೀಕನ ಮಗ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 26, 2024

ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

ಮಾಜಿ ಮಿನಿಸ್ಟರ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

ಮಾಜಿ ಮಿನಿಸ್ಟರ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

ವಕ್ತರರಾಗಿ ಜಿ.ಡಿ.ಮಂಜುನಾಥ್‌ ನೇಮಕ

ವಕ್ತರರಾಗಿ ಜಿ.ಡಿ.ಮಂಜುನಾಥ್‌ ನೇಮಕ

ಕಾರು ಚೇಸ್‌ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

ಕಾರು ಚೇಸ್‌ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

ಶಿವಮೊಗ್ಗದ ವಿವಿಧೆಡೆ ಎರಡು ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಎರಡು ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ಉಷ್ಣಾಂಶ; ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ಉಷ್ಣಾಂಶ; ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?

ಸಿಗಂದೂರು ಲಾಂಚ್‌ ವಿಚಾರ, ಸರ್ಕಾರ ನಿರ್ಧಾರ ಪ್ರಕಟಿಸುವಂತೆ ಆಗ್ರಹ, ಏನಂದ್ರು ಪ್ರಸನ್ನ ಕೆರೆಕೈ?

ಸಿಗಂದೂರು ಲಾಂಚ್‌ ವಿಚಾರ, ಸರ್ಕಾರ ನಿರ್ಧಾರ ಪ್ರಕಟಿಸುವಂತೆ ಆಗ್ರಹ, ಏನಂದ್ರು ಪ್ರಸನ್ನ ಕೆರೆಕೈ?

ಇವತ್ತು ಏಕಾದಶಿ; ಶುಭ, ಅಶುಭ ಸಮಯಗಳು ಯಾವಾಗಿದೆ? ಇಂದಿನ ಪಂಚಾಂಗ

ಇವತ್ತು ಏಕಾದಶಿ; ಶುಭ, ಅಶುಭ ಸಮಯಗಳು ಯಾವಾಗಿದೆ? ಇಂದಿನ ಪಂಚಾಂಗ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?‌ –  27 ಮಾರ್ಚ್‌ 2026

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?‌ –  27 ಮಾರ್ಚ್‌ 2026

Leave a Comment