ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 JANUARY 2023
SHIMOGA | ಸೊರಬ ತಾಲೂಕಿನಲ್ಲಿ 14 ತಹಶೀಲ್ದಾರ್ ಗಳ ವರ್ಗಾವಣೆಯಾಗಿದ್ದರೆ ಸರ್ಕಾರಿ ಆದೇಶವನ್ನ ಬಹಿರಂಗಪಡಿಸಲಿ. ಸರ್ಕಾರಿ ಹುದ್ದೆಯಲ್ಲಿದ್ದು ಸುಖಾಸುಮ್ಮನೆ ಆರೋಪ ಮಾಡುತ್ತಿರುವ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮತ್ತು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಇದನ್ನು ಸಾಬೀತು ಮಾಡಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ ಸವಾಲು (challenge) ಹಾಕಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ ಅವರು, ವರ್ಗಾವಣೆ ಮಾಡುವುದು ಸರ್ಕಾರದ ಕೆಲಸ. ಒಂದು ವೇಳೆ ವರ್ಗಾವಣೆ ವಿಚಾರದಲ್ಲಿ ತಕರಾರು ಇದ್ದರೆ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಟಿ) ಅಥವಾ ಹೈಕೋರ್ಟ್ ಮೊರೆ ಹೋಗಲು ಅವಕಾಶವಿತ್ತು ಎಂದು ತಿಳಿಸಿದರು.
ಮೂವರು ತಹಶೀಲ್ದಾರ್ ಬಂದಿದ್ದರು
ಕಂದಾಯ ವಿಭಾಗದ ವಿಷಯಗಳಿಗೆ ಸೊರಬ ತಾಲೂಕು ಸೂಕ್ತ ಅಧ್ಯಯನ ಸ್ಥಳವಾಗಿದೆ. ಹಾಗಾಗಿ ಪ್ರೊಬೆಷನರಿ ತಹಶೀಲ್ದಾರ್ ಗಳನ್ನು ಸೊರಬ ಕ್ಷೇತ್ರಕ್ಕೆ ಕಳುಹಿಸಲಾಗುತ್ತಿದೆ. ಅವರ ಹುದ್ದೆ ಖಾಯಂ ಆಗುತ್ತಿದ್ದಂತೆ ಸರ್ಕಾರ ಬೇರೆಡೆ ವರ್ಗಾವಣೆ ಮಾಡುತ್ತಿತ್ತು. ಸೊರಬ ತಾಲೂಕಿಗೆ ಪುಟ್ಟರಾಜಗೌಡ, ಶಿವಾನಂದ ಪಿ.ರಾಣೆ, ಮೋಹನ್ ಭಸ್ಮೆ ಅವರ ಹೊರತು ಉಳಿದವರೆಲ್ಲ ಪ್ರೊಬೆಷನರಿ ಅವಧಿಗಾಗಿ ಬಂದಿದ್ದರು. ಇವರ ವರ್ಗಾವಣೆಯನ್ನು ಸರ್ಕಾರವೆ ಮಾಡಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಷ್ಟೆ ಸಮಸ್ಯೆ
ಸೊರಬ ತಾಲೂಕಿನಲ್ಲಿ ಕಂದಾಯ ಇಲಾಖೆ ಒಂದೆ ಇಲ್ಲ. ಹಲವು ಇಲಾಖೆಗಳಿವೆ. ಆ ಇಲಾಖೆಗಳಲ್ಲಿ ಸೊರಬ ತಾಲೂಕಿನಲ್ಲಿ ಬಹು ಸಮಯದಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿದ್ದಾರೆ. ಅವರಾರಿಗೂ ಇಲ್ಲದ ಸಮಸ್ಯೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾತ್ರವೇಕೆ ಎಂದು ಕುಮಾರ್ ಬಂಗಾರಪ್ಪ ಅವರು ಪ್ರಶ್ನಿಸಿದರು.
ಇದನ್ನೂ ಓದಿ – 4 ವರ್ಷದಲ್ಲಿ 14 ತಹಶೀಲ್ದಾರ್ ವರ್ಗಾವಣೆ, ಶಿವಮೊಗ್ಗದಲ್ಲಿ ನೌಕರರಿಂದ ಮೌನ ಹೋರಾಟ
NPS ಬಗ್ಗೆ ಮಾತನಾಡಲಿ
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಸಾಗರ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಪಕ್ಕದ ಕ್ಷೇತ್ರ ಎಂದು ಪ್ರಸ್ತಾಪ ಮಾಡಿ ಮಾತನಾಡಿದ್ದರು. ಸೊರಬದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ ಮಾಡುತ್ತಿದ್ದೇವೆ. ಒಮ್ಮೆಯು ಅಲ್ಲಿಗೆ ಬಂದು ಅವರು ಪರೀಶಿಲನೆ ನಡೆಸಿಲ್ಲ. ಅವರಿಗೆ ನೌಕರರ ಬಗ್ಗೆ ಅಷ್ಟು ಕಾಳಜಿ ಇದ್ದರೆ ಎನ್.ಪಿ.ಎಸ್ ಮತ್ತು ಓ.ಪಿ.ಎಸ್ ಕುರಿತು ಮಾತನಾಡಲಿ ಎಂದು ಸವಾಲು ಹಾಕಿದರು.