ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 DECEMBER 2020
ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದೆ. ಸರ್ಕಾರದ ಜೊತೆಗೆ ನೌಕರರ ಸಂಘ ನಡೆಸಿದ ಸಭೆಯಲ್ಲಿ ಮುಷ್ಕರ ಹಿಂಪಡೆಯುವುದಾಗಿ ನೌಕರರು ತಿಳಿಸಿದ್ದಾರೆ. ಅದರಂತೆ ಶಿವಮೊಗ್ಗ ಬಸ್ ನಿಲ್ದಾಣದಿಂದಲೂ ಬಸ್ ಸಂಚಾರ ಆರಂಭವಾಗುತ್ತಿದೆ.
ಇದನ್ನೂ ಓದಿ | ಶಿವಮೊಗ್ಗ – ಭದ್ರಾವತಿ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಜೀಪ್‌ನಲ್ಲಿ ಎಸ್ಕಾರ್ಟ್, ಏನಿದು ಎಸ್ಕಾರ್ಟ್? ಕಾರಣವೇನು?
ನಿಲ್ದಾಣಕ್ಕೆ ಬಂದ ಬಸ್ಸುಗಳು
ಮುಷ್ಕರ ಹಿಂಪಡೆಯುತ್ತಿದ್ದಂತೆ ನೌಕರರು ಕೆಲಸಕ್ಕೆ ಮರಳುತ್ತಿದ್ದಾರೆ. ಬೆಳಗ್ಗೆಯಿಂದ ಖಾಲಿ ಇದ್ದ ನಿಲ್ದಾಣಕ್ಕೆ ಬಸ್ಸುಗಳು ಬರಲು ಆರಂಭವಾಗಿದೆ. ಈ ನಡುವೆ ಅನಿಶ್ಚಿತತೆಯಿಂದಾಗಿ ಗೊಂದಲಕ್ಕೀಡಾಗಿದ್ದ ಪ್ರಯಾಣಿಕರು ಈಗ ಬಸ್ ನಿಲ್ದಾಣದ ಕಡೆ ಬರಲು ಆರಂಭಿಸಿದ್ದಾರೆ.
ಇದನ್ನೂ ಓದಿ | ಸರ್ಕಾರಿ ಬಸ್ ಬಂದ್, ಶಿವಮೊಗ್ಗದಿಂದ ವಿವಿಧೆಡೆಗೆ ಖಾಸಗಿ ಬಸ್ ಸಂಚಾರ ಶುರು, ಎಲ್ಲಿಗೆಲ್ಲ ತೆರಳುತ್ತಿವೆ ಬಸ್ಸುಗಳು?
ಪ್ರಯಾಣಿಕರ ಅನುಕೂಲಕ್ಕೆ ಸೇವೆ
ಶಿವಮೊಗ್ಗ ಬಸ್ ನಿಲ್ದಾಣದಿಂದ ಮೊದಲಿಗೆ ಒಂದೆರಡು ಬಸ್ಸುಗಳು ಸಂಚಾರ ಆರಂಭಿಸಿದವು. ತಿರುವಣಮಲೈ, ಹೈದರಾಬಾದ್‍ಗೆ ಬಸ್ಸುಗಳು ಹೊರಟಿವೆ. ಅದರ ಬೆನ್ನಿಗೆ ಇನ್ನಷ್ಟು ಬಸ್ಸುಗಳನ್ನು ಬಿಡಲು ವಿಭಾಗದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಕಡೆಗೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಬಿಡಲು ನಿರ್ಧರಿಸಲಾಗಿದೆ.



ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಮಾರ್ಚ್ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

- ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

- ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

- ಮಾಜಿ ಮಿನಿಸ್ಟರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

About The Editor
ನಿತಿನ್ ಆರ್.ಕೈದೊಟ್ಲು
















