ಮುಷ್ಕರ ನಿಂತಿದೆ ಅಂತಾ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಕಾದಿತ್ತು ಶಾಕ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 DECEMBER 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಸಾರಿಗೆ ನೌಕರರ ಮುಷ್ಕರದ ವಿಚಾರದಲ್ಲಿ ಉಂಟಾದ ಗೊಂದಲದಿಂದ, ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಂಕಷ್ಟಕ್ಕೀಡಾದರು. ಚಳಿಯ ನಡುವೆ, ಬಸ್ಸಿಗಾಗಿ ಕಾದು ಕಾದು ಹೈರಾಣಾದರು.

ಇದನ್ನೂ ಓದಿಶಿವಮೊಗ್ಗ – ಭದ್ರಾವತಿ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಜೀಪ್‌ನಲ್ಲಿ ಎಸ್ಕಾರ್ಟ್, ಏನಿದು ಎಸ್ಕಾರ್ಟ್? ಕಾರಣವೇನು?

ಏನಿದು ಗೊಂದಲ?

ಸಾರಿಗೆ ಇಲಾಖೆ ನೌಕರರು ಸರ್ಕಾರದ ಜೊತೆಗೆ ಮಾತುಕತೆ ನಡೆಸಿದರು. ಸಭೆ ಬಳಿಕ ಮುಷ್ಕರ ಕೈ ಬಿಡುವುದಾಗಿ ತಿಳಿಸಿದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ, ಪ್ರಯಾಣಿಕರು ಬಸ್ ನಿಲ್ದಾಣದ ಕಡೆಗೆ ಬರಲು ಆರಂಭಿಸಿದರು. ಕೆಲವು ಬಸ್ಸುಗಳು ನಿಲ್ದಾಣಕ್ಕೆ ಆಗಮಿಸಿದವು. ಈ ವೇಳೆಗಾಗಲೆ ಹೇಳಿಕೆ ಬದಲಿಸಿದ ಸಾರಿಗೆ ಇಲಾಖೆ ನೌಕರರ ಸಂಘ ಪ್ರಮುಖರು, ಮುಷ್ಕರ ಮುಂದುವರೆಸುವುದಾಗಿ ಘೋಷಿಸಿದರು.

ಇದನ್ನೂ ಓದಿ | ನೌಕರರ ಮುಷ್ಕರ ಅಂತ್ಯ, ಶಿವಮೊಗ್ಗದಿಂದ ಹೊರಡಲು ಸಿದ್ಧವಾದವು ಸರ್ಕಾರಿ ಬಸ್ಸುಗಳು

ಬಸ್ ಸಿಗದೆ ಹೈರಾಣು

ಮುಷ್ಕರ ಮುಗಿದಿದೆ ಎಂದು ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಶಾಕ್ ಉಂಟಾಯಿತು. ಬೆರಳೆಣಿಕೆಯಷ್ಟು ಬಸ್‍ಗಳು ಮಾತ್ರ ಇದ್ದವು. ಶಿವಮೊಗ್ಗದಿಂದ ಹೈದರಾಬಾದ್, ತಿರುವಣ್ಣಾಮಲೈ, ಬೆಂಗಳೂರು, ಮೈಸೂರು, ರಾಯಚೂರಿಗೆ ಬಸ್‍ಗಳು ಸಂಚರಿಸಿದವು. ಯಾವ ಬಸ್ಸು ಎಷ್ಟು ಹೊತ್ತಿಗೆ ಹೊರಡಲಿದೆ ಎಂಬುದು ಗೊತ್ತಾಗದೆ ಪ್ರಯಾಣಿಕರು ಸಂಕಷ್ಟಕ್ಕೀಡಾದರು.

ಇದನ್ನೂ ಓದಿಸರ್ಕಾರಿ ಬಸ್ ಬಂದ್, ಶಿವಮೊಗ್ಗದಿಂದ ವಿವಿಧೆಡೆಗೆ ಖಾಸಗಿ ಬಸ್ ಸಂಚಾರ ಶುರು, ಎಲ್ಲಿಗೆಲ್ಲ ತೆರಳುತ್ತಿವೆ ಬಸ್ಸುಗಳು?

ಚಳಿ ನಡುವೆ ಕಾದು ಕೂತರು

ಒಂದೆಡೆ ತೀವ್ರ ಚಳಿ, ಮತ್ತೊಂದೆಡೆ ಬಸ್‍ಗಳ ಕುರಿತು ಅನಿಶ್ಚಿತತೆ. ಇದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ. ಹೆಚ್ಚು ಬಸ್‍ಗಳು ರಸ್ತೆಗಿಳಿಯುವ ನಿರೀಕ್ಷೆಯೊಂದಿಗೆ ಪ್ರಯಾಣಿಕರು ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ.

ವಿಡಿಯೋ ರಿಪೋರ್ಟ್ | ಕ್ಲಿಕ್ ಮಾಡಿ, ವಿಡಿಯೋ ನೋಡಿ

https://www.youtube.com/watch?v=kLGnKnksmEk&t=4s

129722226 1022058594940717 1962776210255359546 n.jpg? nc cat=107&ccb=2& nc sid=730e14& nc ohc=VrZsJOFIqiEAX Mfrl3& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment