ಶಿವಮೊಗ್ಗ ಲೈವ್.ಕಾಂ | SHIMOGA | 21 ಏಪ್ರಿಲ್ 2020
ಶಿವಮೊಗ್ಗ ನಗರದಲ್ಲಿ ಭಾರಿ ಗಾಳಿ, ಮಳೆಗೆ ಹಲವು ಕಡೆಗೆ ಮರಗಳು ಧರೆಗುರುಳಿವೆ. ಕೆಲವು ಕಡೆಗೆ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಾಹನಗಳ ಮೇಲೆ ಬಿದ್ದ ತೆಂಗಿನ ಮರ
ವೀರಣ್ಣ ಲೇಔಟ್‍ನಲ್ಲಿ ಭಾರಿ ಗಾಳಿಗೆ ತೆಂಗಿನ ಮರ ತುಂಡಾಗಿ ಉರುಳಿದೆ. ಮನೆಯೊಂದರ ಶೀಟ್ ಮತ್ತು ನಾಲ್ಕು ಬೈಕ್‍ಗಳ ಮೇಲೆ ಮರ ಬಿದ್ದಿದೆ. ಬೈಕುಗಳು ಜಖಂ ಆಗಿವೆ. ವಿದ್ಯುತ್ ಕಂಬವೊಂದು ತುಂಡಾಗಿದ್ದು, ಕರೆಂಟ್ ಕಟ್ ಆಗಿದೆ.
ಮನೆಗಳಿಗೆ ನುಗ್ಗಿದ ಚರಂಡಿ ನೀರು
ಟ್ಯಾಂಕ್ ಮೊಹಲ್ಲದ ಐದನೇ ಕ್ರಾಸ್‍ನಲ್ಲಿ ತೆಂಗಿನ ಮರ ತುಂಡಾಗಿ ಮನೆಯೊಂದರ ಮೇಲೆ ಬಿದ್ದಿದೆ. ಆ ಮನೆಯಲ್ಲಿ ಯಾರು ಇರದ ಕಾರಣ ಹೆಚ್ಚಿನ ಅನಾಹುತವೇನಿಲ್ಲ. ಇನ್ನು, ಇಲ್ಲಿ ಭಾರಿ ಮಳೆಯಿಂದಾಗಿ ಚರಂಡಿ ತುಂಬಿ ಸುಮಾರು ನಾಲ್ಕು ಮನೆಗಳಿಗೆ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ.
ಪಾರ್ಕ್‍ನಲ್ಲಿ ಉರುಳಿದ ಮರ
ವಿನೋಬನಗರದ ದಾಮೋದರ ಕಾಲೋನಿಯ ಪಾರ್ಕ್‍ನಲ್ಲಿ ಮರವೊಂದು ಧರೆಗುರುಳಿದೆ. ಮರದ ಕೆಳಗೆ ಕಾರುಗಳನ್ನು ನಿಲ್ಲಿಸಲಾಗಿತ್ತು. ಆದರೆ ಯಾವುದೇ ವಾಹನಗಳ ಮೇಲೂ ಮರ ಬಿದ್ದಿಲ್ಲ.
ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು
ಮಿಳಘಟ್ಟದಲ್ಲೂ ಚರಂಡಿಗಳು ಭರ್ತಿಯಾಗಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ವಾಹನ ಮತ್ತು ಜನ ಸಂಚಾರ ಅಸ್ಥವ್ಯಸ್ಥೆಯಾಗಿದೆ.
ಆಲ್ಕೋಳದಲ್ಲಿ ಮನೆ ಮೇಲೆ ಬಿದ್ದ ಮರ
ಆಲ್ಕೊಳದ ನಂದಿನಿ ಬಡಾವಣೆಯ 6ನೇ ಕ್ರಾಸ್‍ನಲ್ಲಿ ರಸ್ತೆಗೆ ಹೊಂದಿಕೊಂಡಿದ್ದ ಮರ ಬಡುಮೇಲಾಗಿದೆ. ಮನೆಯೊಂದರ ಮೇಲೆ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಹಾನಿ ಆಗಿಲ್ಲ.
ಶರಾವತಿ ನಗರದಲ್ಲೂ ನುಗ್ಗಿದ ನೀರು
ಶರಾವತಿ ನಗರದಲ್ಲೂ ಚರಂಡಿ ತುಂಬಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಮಳೆ ನಿಲ್ಲುವತನಕ ಮನೆಯಿಂದ ನೀರು ಹೊರ ಹಾಕಲು ಮನೆಯವರು ಹರಸಾಹಸ ಪಟ್ಟರು.
ಜನರೇ ಚರಂಡಿ ಕ್ಲೀನ್ ಮಾಡಿದರು
ಭಾರಿ ನೀರು ಹರಿದಿದ್ದರಿಂದ ಚರಂಡಿಯ ತಡೆಗೋಡೆಯೆ ಕಿತ್ತು ಹೋಗಿದೆ. ಇದರಿಂದ ನೀರು ಸರಾಗವಾಗಿ ಹರಿಯಲು ಸಾದ್ಯವಾಗದೆ, ರಸ್ತೆಗೆ ಬಂದಿತ್ತು. ಅಕ್ಕಪಕ್ಕದ ಮನೆಗೂ ನೀರು ನುಗ್ಗುತ್ತಿತ್ತು. ಹಾಗಾಗಿ ಸ್ಥಳೀಯರಾದ ಸತೀಶ್ ಶೆಟ್ಟಿ, ಕೆ.ಜಿ.ವೆಂಕಟೇಶ್, ಮಲ್ಲಿಕಾರ್ಜುನ ಸೇರಿದಂತೆ ಹಲವರು ಚರಂಡಿಯನ್ನು ಸ್ವಚ್ಛ ಮಾಡಿ, ನೀರು ಹರಿಯಲು ಅನುವು ಮಾಡಿಕೊಟ್ಟರು.
ಶಿವಮೊಗ್ಗ ಗ್ಯಾಸ್ ಬಳಿ ತುಂಬಿದ ರಾಜಾ ಕಾಲುವೆ
ಲಕ್ಷ್ಮೀ ಟಾಕೀಸ್ ಬಳಿ ಶಿವಮೊಗ್ಗ ಗ್ಯಾಸ್ ಸಮೀಪದ ರಾಜಾ ಕಾಲುವೆ ತುಂಬಿ ಹರಿದಿದ್ದು, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ.
ಜೆಪಿ ನಗರದಲ್ಲಿ ರಸ್ತೆ ಜಲಾವೃತ
ಜೆಪಿ ನಗರದಲ್ಲೂ ಭಾರಿ ಮಳೆಗೆ ಚರಂಡಿಗಳು ತುಂಬಿದ್ದು, ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೆ ಮನೆಗಳಿಗು ನೀರು ನುಗ್ಗಿದ್ದು, ದಿನಸಿ ಸೇರಿದಂತೆ ಹಲವರು ವಸ್ತುಗಳು ಹಾನಿಗೀಡಾಗಿವೆ.
ದುರ್ಗಿಗುಡಿಯಲ್ಲಿ ತೆಂಗಿನ ಮರಕ್ಕೆ ಸಿಡಿಲು
ಇಲ್ಲಿನ ಸೀತಾರಾಮ ಕಲ್ಯಾಣ ಮಂದಿರದ ಆವರಣದಲ್ಲಿ ತೆಂಗಿನ ಮರಕ್ಕೆ ಸಿಡಲು ಬಿಡಿದಿದೆ. ಮರ ತುಂಡಾಗಿ ಮನೆಯೊಂದರ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭಿವಿಸಿಲ್ಲ.
ಅಣ್ಣಾನಗರದಲ್ಲಿ ಕಣ್ಣೀರು ಹಾಕಿದ ಮಹಿಳೆ
ಮಳೆಗೆ ಅಣ್ಣಾನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯಿಂದ ಜನರು ಹೊರಬಂದಿದ್ದಾರೆ. ಮಕ್ಕಳನ್ನ ಕಂಕುಳಲ್ಲಿ ಇರಿಸಿಕೊಂಡು ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ.
ಕಾರಿನ ಮೇಲೆ ಬಿದ್ದ ಕೊಂಬೆ
ವಿನೋಬನಗರದ ಗಾಳಿ, ಮಳೆಗೆ ಮರ ಧರೆಗುರುಳಿದೆ. 2ನೇ ಹಂತದ 2ನೇ ಅಡ್ಡರಸ್ತೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಕೊಂಬೆ ಬಿದ್ದಿದ್ದು, ಕಾರು ಜಖಂ ಆಗಿದೆ.
ಶಿವಮೊಗ್ಗ ನಗರದ ವಿವಿಧೆಡೆ ಹಲವು ಕಡೆ ಮನೆಯ ಛಾವಣಿ ಹಾರಿ ಹೋಗಿದೆ. ಮರಗಳು ಉರುಳಿ ಬಿದ್ದಿದ್ದು, ಆಸ್ತಿಪಾಸ್ತಿಗೆ ಹಾನಿಯಾಗಿದೆ.
ಗೋಪಾಲಗೌಡ ಬಡಾವಣೆ ರಸ್ತೆ ಜಲಾವೃತ
ಗೋಪಾಲಗೌಡ ಬಡಾವಣೆಯಲ್ಲಿ ಆಹಾರ ಇಲಾಖೆ ಕಚೇರಿಗೆ ಹೋಗುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಸ್ತೆ ಮೇಲೆ ನೀರು ನಿಂತಿದ್ದು, ಕಾರುಗಳು ಕೂಡಲ ಜಲಾವೃತವಾಗಿದೆ.
ಹಲವೆಡೆ ಕರೆಂಟ್ ಕಟ್
ನಗರದ ವಿವಿಧೆಡೆ ಮರ ಬಡುಮೇಲಾಗಿದ್ದು, ಕರೆಂಟ್ ಕಂಬಗಳು ತುಂಡಾಗಿ ಬಿದ್ದಿವೆ. ಇದರಿಂದ ಶಿವಮೊಗ್ಗ ನಗರದ ವಿವಿಧೆಡೆ ಕರೆಂಟ್ ಕಟ್ ಆಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]