ಶಿವಮೊಗ್ಗ ಲೈವ್.ಕಾಂ | SHIMOGA | 7 ಮೇ 2020
ಕೆಎಸ್ಆರ್ಟಿಸಿ ಬಸ್ಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿರುವವರಿಗೆ ಊಟ, ನೀರಿಗು ಸಮಸ್ಯೆ ಆಗುತ್ತಿದೆ. ಇನ್ನು ತಮ್ಮೂರಿಗೆ ತಲುಪುವುದಕ್ಕೆ ಹರಸಾಹಸಪಡುವಂತಾಗಿದೆ. ಇತ್ತ ಶಿವಮೊಗ್ಗಕ್ಕೆ ಬರುವವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಚೆಕ್ಪೋಸ್ಟ್ನಲ್ಲಿ ಕಾದು ಕಾದು ಹೈರಾಣು
ಬೆಂಗಳೂರಿನಿಂದ ಸರ್ಕಾರಿ ಬಸ್ಸುಗಳಲ್ಲಿ ಬರುವವರು ಜಿಲ್ಲೆಯ ಕಾರೇಹಳ್ಳಿ ಚೆಕ್ಪೋಸ್ಟ್ನಲ್ಲಿ ತಡೆದು ತಪಾಸಣೆ ನಡೆಸಲಾಗುತ್ತದೆ. ಬಸ್ಸಿನಲ್ಲಿ ಬರುವ ಪ್ರತಿ ಪ್ರಯಾಣಿಕರನ್ನು ಕೆಳಗಿಳಿಸಿ, ತಪಾಸಣೆ ನಡೆಸಲಾಗುತ್ತದೆ. ಆನಂತರವೆ ಬಸ್ಸನ್ನು ಜಿಲ್ಲೆಯೊಳಗೆ ಬರಲು ಬಿಡಲಾಗುತ್ತದೆ.
ಶಿವಮೊಗ್ಗದಲ್ಲಿ ಊಟವಿಲ್ಲ, ಉಳಿಯಲು ಜಾಗವಿಲ್ಲ
ಗಂಟೆಗಟ್ಟಲೆ ಕಾದು ಶಿವಮೊಗ್ಗಕ್ಕೆ ಬಂದರೂ ಇಲ್ಲಿಂದ ತಮ್ಮೂರಿಗೆ ತೆರಳುವುದಕ್ಕೆ ಬಸ್ಸು ಅಥವಾ ಬೇರೆ ವಾಹನಗಳು ಇರುವುದಿಲ್ಲ. ಇನ್ನು, ಊಟಕ್ಕೆ ಸಮಸ್ಯೆ, ನೀರು ಕೂಡ ಸಿಗುವುದಿಲ್ಲ. ಇದೇ ಕಾರಣಕ್ಕೆ ಬೆಂಗಳೂರಿನಿಂದ ಬಂದು ಬಸ್ ನಿಲ್ದಾಣದಲ್ಲಿ ಹೈರಾಣಾಗಿ ಕೂತಿರುವವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
ನೇರ ಮಗ್ಗಾನ್ ಆಸ್ಪತ್ರೆಗೆ ಬಸ್ಸು
ಬೆಂಗಳೂರಿನಿಂದ ಬರುವ ಬಸ್ಸುಗಳನ್ನು ನೇರವಾಗಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ವೈದ್ಯರು ತಪಾಸಣೆ ನಡೆಸಿದ ಬಳಿಕವೇ ಅವರನ್ನು ತಮ್ಮ ತಮ್ಮ ಊರಿಗೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ. ರಾತ್ರಿ ಶಿವಮೊಗ್ಗ ತಲುಪುವವರು ತಮ್ಮೂರಿಗೆ ತೆರಳುವುದು ಕಷ್ಟ. ಇದೇ ಕಾರಣಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೆಗ್ಗಾನ್ ಆಸ್ಪತ್ರೆಗೆ ತೆರಳಿ, ರಾತ್ರಿ ಅಗಮಿಸಿದವರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಅಲ್ಲದೆ ರಾತ್ರಿ ವೇಳೆ ಊರಿಗೆ ತೆರಳುವವರಿಗೆ ಬಸ್ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]