ಭದ್ರಾವತಿಯ ವ್ಯಕ್ತಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹61,000 ದಂಡ, ಏನಿದು ಪ್ರಕರಣ?

Shimoga District Court

ಶಿವಮೊಗ್ಗ: 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 21 ವರ್ಷದ ಯುವಕನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹61,000 ದಂಡ ವಿಧಿಸಿ ಆದೇಶಿಸಿದೆ.  2023ರಲ್ಲಿ ಬಾಲಕಿಯ ಮೇಲೆ ದೌರ್ಜನ್ಯ ನಡೆದಿತ್ತು. ಈ ಬಗ್ಗೆ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.  ಇದನ್ನೂ ಓದಿ » ಶಿವಮೊಗ್ಗದ ರೈತನಿಗೆ ಲಕ್ಷ ಲಕ್ಷ ಮೋಸ, ಆಗಿದ್ದೇನು? ಪ್ರಕರಣದ ತನಿಖೆ ನಡೆಸಿದ್ದ ಭದ್ರಾವತಿ ನಗರ ವೃತ್ತದ … Read more

ತೀರ್ಥಹಳ್ಳಿಯ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ₹15,000 ದಂಡ, ಕಾರಣವೇನು?

Shivamogga-Court-Balaraja-Urs-Road

ಶಿವಮೊಗ್ಗ: ಕೆಲಸಕ್ಕೆ ಹೋಗಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಪೆಟ್ರೋಲ್ (Petrol) ಹಾಕಿ ಸುಟ್ಟು ಕೊಲ್ಲಲು ಪ್ರಯತ್ನಿಸಿದ್ದ ಅಪರಾಧಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ (Jail) ಹಾಗೂ ₹15,000 ದಂಡ ವಿಧಿಸಿದೆ. ದಂಡ (Fine) ಕಟ್ಟಲು ವಿಫಲವಾದಲ್ಲಿ ಎರಡು ವರ್ಷ ಸಾದಾ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ.  ತೀರ್ಥಹಳ್ಳಿ ತಾಲ್ಲೂಕಿನ ಮೂವಳ್ಳಿ ಗ್ರಾಮದ ಆಲ್ಬರ್ಟ್ (45) ಶಿಕ್ಷೆಗೊಳಗಾದ ವ್ಯಕ್ತಿ. ಈತ ತನ್ನ ಪತ್ನಿ ಸುಧಾ ಮೇಲೆ ಹಲ್ಲೆ ನಡೆಸಿ … Read more

ಶಿವಮೊಗ್ಗದ ರೈತನಿಗೆ ಲಕ್ಷ ಲಕ್ಷ ಮೋಸ, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದ ಅಡಿ ಮನೆ ಕಟ್ಟಲು ಸಾಲ (Housing Loan) ಕೊಡಿಸುವುದಾಗಿ ನಂಬಿಸಿ ರೈತರೊಬ್ಬರಿಗೆ ₹3,36,000 ವಂಚಿಸಲಾಗಿದೆ. ಮೋಸ ಆಗಿದ್ದು ಹೇಗೆ? ಅಕ್ಟೋಬರ್ 27ರಂದು ಶಿವಮೊಗ್ಗದ ರೈತರೊಬ್ಬರ (Farmer) ಮೊಬೈಲ್‌ಗೆ ಅಪರಿಚಿತ ನಂಬರ್‌ಗಳಿಂದ ವಾಟ್ಸ್‌ಆ್ಯಪ್ ಮೆಸೇಜು (Whatsapp) ಮತ್ತು ಕರೆಗಳು ಬಂದಿದ್ದವು. ವಂಚಕರ ಪೈಕಿ ಒಬ್ಬರು ತಮ್ಮನ್ನು ಪ್ರಿಯಾ ಕುಮಾರಿ ಎಂದು ಪರಿಚಯಿಸಿಕೊಂಡು, ಮನೆ ಕಟ್ಟಲು ₹20 ಲಕ್ಷ ಸಾಲ (Loan) ನೀಡುವುದಾಗಿ ಹೇಳಿದ್ದರು. ಸಾಲ ಮಂಜೂರಾಗುತ್ತದೆ ಎಂದು ನಂಬಿಸಿ, ವಂಚಕರು … Read more

ಭದ್ರಾವತಿ – ಶಿವಮೊಗ್ಗ ರಸ್ತೆಯಲ್ಲಿ ರಾತ್ರಿ ಕಾರು ಅಡ್ಡಗಟ್ಟಿ ದಾಳಿ, ಆಗಿದ್ದೇನು?

Shimoga-Bhadravathi-Road-Old-Photo.webp

ಶಿವಮೊಗ್ಗ: ಭದ್ರಾವತಿಯಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬರುತ್ತಿದ್ದ ಧನುಷ್ ಎಂ. ಜಾಧವ್ ಎಂಬುವರ ಕಾರನ್ನು ಮತ್ತೊಂದು ಕಾರು ಓವರ್‌ಟೇಕ್ (Overtake) ಮಾಡಿ ಅಡ್ಡಗಟ್ಟಿ, ಅದರಲ್ಲಿದ್ದ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ನವೆಂಬರ್ 25ರ ರಾತ್ರಿ ಘಟನೆ ನಡೆದಿದೆ. ಭದ್ರಾವತಿಯಲ್ಲಿ (Bhadravathi) ಸ್ನೇಹಿತನ ಮದುವೆ ಕಾರ್ಯಕ್ರಮ ಮುಗಿಸಿ ಧನುಷ್ ಜಾಧವ್ ಶಿವಮೊಗ್ಗಕ್ಕೆ ಬರುತ್ತಿದ್ದರು. ಬಿದಿರೆ ಜಯಲಕ್ಷ್ಮಿ ಫೂಯೆಲ್ಸ್ (Jayalaxmi Fuels) ಬಳಿ ಹೆದ್ದಾರಿಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಕಾರು ಓವರ್‌ಟೇಕ್ ಮಾಡಿ … Read more

ಇಂಟರ್‌ನೆಟ್‌ ಬಿಲ್‌ ಕಟ್ಟಲು ಮುಂದಾದ ನಿವೃತ್ತ ಉದ್ಯೋಗಿಯ ಬ್ಯಾಂಕ್‌ ಖಾತೆ ಖಾಲಿ, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ: ಜಿಯೋ ಏರ್‌ಫೈಬರ್ ಇಂಟರ್‌ನೆಟ್‌ ಕನೆಕ್ಷನ್ ಕಸ್ಟಮರ್ ಕೇರ್ ಸಿಬ್ಬಂದಿಯಂತೆ ನಟಿಸಿ ಆನ್‌ಲೈನ್ ವಂಚಕರು ನಿವೃತ್ತ ವ್ಯಕ್ತಿಯೊಬ್ಬರಿಗೆ ₹2,53,500 ವಂಚಿಸಿದ್ದಾರೆ. ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರ ಮನೆಯ ಟಿವಿ ಸಂಪರ್ಕವು ಇದ್ದಕ್ಕಿದ್ದಂತೆ ಕಡಿತಗೊಂಡಿತ್ತು. ಹಾಗಾಗಿ ವಾಟ್ಸ್ಆ್ಯಪ್‌ನಲ್ಲಿ ಇದ್ದ ಕಸ್ಟಮರ್ ಕೇರ್ ಸೇವೆಗೆ ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿಯು ಹಿಂದಿನ ರೀಚಾರ್ಜ್ ಬಿಲ್ ದಿನಾಂಕದ ವಿವರಣೆ ಕೇಳಿದ್ದಾರೆ. ತಾವು ಫೋನ್‌ಪೇ ಮೂಲಕ ಪಾವತಿಸಿರುವುದಾಗಿ ನಿವೃತ್ತ ಉದ್ಯೋಗಿ ತಿಳಿಸಿದಾಗ, ಆ ವ್ಯಕ್ತಿಯು ತಕ್ಷಣವೇ ಒಂದು APK ಆ್ಯಪ್ ಲಿಂಕ್ ವಾಟ್ಸ್ ಆ್ಯಪ್‌ಗೆ … Read more

ನೀರು ಕಾಯಿಸಿಲು ಇಟ್ಟಿದ್ದ ತಾಮ್ರದ ಹಂಡೆಯೇ ನಾಪತ್ತೆ

Tunga-Nagara-Police-Station-Shimoga

ಶಿವಮೊಗ್ಗ: ನೀರು ಕಾಯಿಸಲು ಮನೆಯ ಹಿಂಬದಿ ಇಟ್ಟಿದ್ದ ತಾಮ್ರದ ಹಂಡೆಯನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಹಾಯ್‌ಹೊಳೆ ಸಮೀಪದ ಭಾರತಿ ನಗರದ ನಿವಾಸಿ ಮೀನಾಕ್ಷಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಅಂದಾಜು 15 ಕೆಜಿ ತೂಕದ ತಾಮ್ರದ ಹಂಡೆಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ತಾಮ್ರದ ಹಂಡೆಯ ಅಂದಾಜು ಮೌಲ್ಯ ₹15,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯ ಹಿಂಭಾಗದ ತೆರೆದ ಜಾಗದಲ್ಲಿ ಮೀನಾಕ್ಷಿ ಅವರು ನೀರು ಕಾಯಿಸಲು ಹಂಡೆ ಇಟ್ಟಿದ್ದರು. ಕಳ್ಳತನವಾಗಿರುವ ಬಗ್ಗೆ ಗಮನಕ್ಕೆ ಬಂದ ನಂತರ ಕೂಡಲೆ ತುಂಗಾ ನಗರ … Read more

ಶಿವಮೊಗ್ಗದ ಮಹಿಳೆಯರೆ ಹುಷಾರ್‌, ದಾಖಲಾಯ್ತು ಮತ್ತೊಂದು ಕೇಸ್‌

Crime-News-General-Image

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಳೆದ ಕೆಲವು ದಿನದಿಂದ ಮತ್ತೆ ಚಿನ್ನದ ಸರ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯೊಬ್ಬರು ಶಾಪಿಂಗ್‌ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮರಳುತ್ತಿದ್ದಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅರ್ಧ ಭಾಗ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ಸಂಗೀತಾ ಎಂಬುವವರು ಗೋಪಾಳದಲ್ಲಿ ಶಾಪಿಂಗ್‌ ಮುಗಿಸಿ ತಮ್ಮ ದ್ವಿಚಕ್ರ ವಾಹನವನ್ನು ಚಲಾಯಿಸಿಕಂಡು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಮನೆಗೆ ಮರಳುತ್ತಿದ್ದರು. ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ಎದುರು ರಸ್ತೆಯಲ್ಲಿ ಮತ್ತೊಂದು ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ, ಸಂಗೀತಾ ಅವರ ಕೊರಳಿಗೆ ಕೈ … Read more

ತುಮಿಳುನಾಡಿನಿಂದ ಬಂದ ಲಾರಿ ಮೇಲೆ ಶಿವಮೊಗ್ಗ DySP ನೇತೃತ್ವದಲ್ಲಿ ದಾಳಿ, ಲಕ್ಷ ಲಕ್ಷದ ವಸ್ತುಗಳು ಸೀಜ್‌

Police-Van-in-Shimoga-City

ಶಿವಮೊಗ್ಗ: ಸಾರಿಗೆ ಅಧಿಕಾರಿಗಳಿಂದ ಪರವಾನಗಿ ಪಡೆಯದೆ, ಸುರಕ್ಷಿತ ಕ್ರಮ ಕೈಗೊಳ್ಳದೆ ಪಟಾಕಿ ಸಾಗಿಸುತ್ತಿದ್ದ ಲಾರಿಯನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ₹4,15,741 ಮೌಲ್ಯದ ಪಟಾಕಿ ಜಫ್ತಿ ಮಾಡಲಾಗಿದೆ. ತಮಿಳುನಾಡಿನ ಶಿವಾಕಾಶಿಯಿಂದ ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗೋಡೋನ್‌ಗಳಿಗೆ ಪಟಾಕಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಸಂಜೀವ್‌ ಕುಮಾರ್‌ ನೇತೃತ್ವದಲ್ಲಿ ವಿರೂಪಿನಕೊಪ್ಪ ಬಳಿ ದಾಳಿ ನಡೆಸಿದ ಪೊಲೀಸರು, ದಾಖಲೆಗಳ ಪರಿಶೀಲನೆ ನಡೆಸಿದರು. ಸ್ಪೋಟಕ ವಸ್ತುಗಳ ಸಾಗಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ಲಾರಿಯಲ್ಲಿ ಅಗ್ನಿ ನಿರೋಧಕ ವಸ್ತುಗಳು … Read more

ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಆಟೋ ನಾಪತ್ತೆ, ಆಗಿದ್ದೇನು?

Doddapete-Police-Station.

ಶಿವಮೊಗ್ಗ: ಮನೆ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾ ಕಳ್ಳತನವಾಗಿದೆ. ನಗರದ ಬಿ.ಬಿ.ರಸ್ತೆಯ ಅಂಚೆ ಕಚೇರಿ ಸಮೀಪ ಘಟನೆ ಸಂಭವಿಸಿದೆ. ನಾಗರಾಜ್‌ ಎಂಬುವವರು ಎಂದಿನಂತೆ ಬಾಡಿಗೆ ಮುಗಿಸಿ ಬಂದು ರಾತ್ರಿ 9 ಗಂಟೆ ಹೊತ್ತಿಗೆ ಮನೆ ಮುಂದೆ ಆಟೋ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಮನೆಯಿಂದ ಹೊರ ಬಂದಾಗ ಆಟೋ ರಿಕ್ಷಾ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಎಲ್ಲೆಡೆ ಹುಡುಕಿದ ನಾಗರಾಜ್‌ ಅವರು ಬಳಿಕ ದೂರು‌ ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಲಾರಿ ಚಕ್ರದಡಿ ಸಿಲುಕಿದ ಬೈಕ್‌, … Read more

ಗೋಪಾಳದಲ್ಲಿ ಕಾರ್ಮಿಕನ ಮರ್ಮಾಂಗಕ್ಕೆ ಗಂಭೀರ ಪೆಟ್ಟು, ಆಗಿದ್ದೇನು?

Shimoga-News-update

ಶಿವಮೊಗ್ಗ: ಗೋಪಾಳದ ಪ್ರೆಸ್‌ ಕಾಲೋನಿಯಲ್ಲಿ ಮರ ಕತ್ತರಿಸುವ ಕಾಮಗಾರಿ ವೇಳೆ ಅವಘಡ ಉಂಟಾಗಿ ಕಾರ್ಮಿಕನ ಮರ್ಮಾಂಗಕ್ಕೆ ಗಂಭೀರ ಗಾಯವಾಗಿದೆ. ಘಟನೆ ಸಂಬಂಧ ಮೇಸ್ತ್ರಿ ಮತ್ತು ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಮಿಕ ಹನುಮನಂತಪ್ಪ ಎಂಬುವವರು ಗಾಯಗೊಂಡಿದ್ದಾರೆ. ಗೋಪಾಳದಲ್ಲಿರುವ ಸುರೇಶ್ ಎಂಬುವವರ ಮನೆ ಬಳಿ ಮರದ ಬುಡವನ್ನು ಗ್ರಾನೈಟ್ ಕಟ್ ಮಾಡುವ ಮಿಷನ್‌ನಿಂದ ಕತ್ತರಿಸುವ ಕೆಲಸ ಮಾಡಿಸಲಾಯಿತು. ಮಿಷನ್ ನಿಯಂತ್ರಣ ತಪ್ಪಿ ಹಿಂದಕ್ಕೆ ಬಂದು ಹನುಮಂತಪ್ಪ ಅವರ ಮರ್ಮಾಂಗಕ್ಕೆ ಬಡಿದಿದೆ ಎಂದು ಆರೋಪಿಸಲಾಗಿದೆ. ಕೂಡಲೆ ಅವರನ್ನು ಮೆಗ್ಗಾನ್‌ … Read more