ದುರ್ಗಿಗುಡಿಯಲ್ಲಿ ಮೂರು ಅಂತಸ್ತಿನ ಕಟ್ಟಡದಿಂದ ಜಿಗಿದು ಯುವಕ ಸಾವು

Police-Jeep-at-Shimoga-General-Image

ಶಿವಮೊಗ್ಗ: ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡದಿಂದ (Building) ಜಿಗಿದು ಯುವಕ ಸಾವನ್ನಪ್ಪಿದ್ದಾರೆ. ದುರ್ಗುಗುಡಿಯ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಹಿಂಭಾಗದ ಬೀದಿಯಲ್ಲಿ ಘಟನೆ ಸಂಭವಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಅಮಿತ್‌ (27) ಮೃತ ಯುವಕ. ಅಮಿತ್‌ ಕಟ್ಟಡದಿಂದ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯರು ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ಗಾಯಗೊಂಡಿದ್ದ ಅವರು ಅಸುನೀಗಿದ್ದಾರೆ. ಶಿವಮೊಗ್ಗದ ಹೊಟೇಲ್‌ ಒಂದರಲ್ಲಿ ಅಮಿತ್‌ ಕೆಲಸ ಮಾಡುತ್ತಿದ್ದರು. ಭಾನುವಾರ ಮಧ್ಯಾಹ್ನದ ಬಳಿಕ ಹೊಟೇಲ್‌ ರಜೆ ಇತ್ತು. ಅಮಿತ್‌ ಕೆಲಸ … Read more

ಕೋರ್ಟ್‌ನಿಂದ ಜೈಲಿಗೆ ಬಂದ ಖೈದಿಯ ಮೊಣಕಾಲಿನ ಬಳಿ ಕಾರ್ಬನ್‌ ಪ್ಯಾಕೆಟ್‌, ಚೆಕ್‌ ಮಾಡಿದ ಸಿಬ್ಬಂದಿಗೆ ಶಾಕ್

Shimoga-Central-Jail-Front-General-Image

ಶಿವಮೊಗ್ಗ: ನ್ಯಾಯಾಲಯಕ್ಕೆ ಹಾಜರಾಗಿ ಜೈಲಿಗೆ ಹಿಂತಿರುಗಿದ ಖೈದಿಯ ಪರಿಶೀಲನೆ ನಡೆಸಿದಾಗಿ ಕೀ ಪ್ಯಾಡ್‌ ಮೊಬೈಲ್‌ (Mobile) ಪತ್ತೆಯಾಗಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಮುಜೀಬ್‌ನನ್ನು ಪ್ರಕರಣವೊಂದರ ವಿಚಾರಣೆಗೆ ಭದ್ರಾವತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜೈಲಿಗೆ ಬಂದ ಮುಜೀಬ್‌ನನ್ನು ಜೈಲಿನ ಪ್ರವೇಶದ್ವಾರದಲ್ಲಿ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ಪರಿಶೀಲಿಸಿದರು. ಆತನ ಬಲಗಾಲಿನ ಮೊಣಕಾಲಿನ ಬಳಿ ಕಾರ್ಬನ್‌ ಪೇಪರ್‌ನಿಂದ ಸುತ್ತಿರುವ ವಸ್ತು ಪತ್ತೆಯಾಗಿತ್ತು. ಕಾರ್ಬನ್‌ ಪೇಪರ್‌ ತೆಗೆದು ಪರಿಶೀಲಿಸಿದಾಗ ಕೆಂಪು ಬಣ್ಣದ ಕೀ ಪ್ಯಾಡ್‌ ಮೊಬೈಲ್‌ ಸಿಕ್ಕಿದೆ. ಘಟನೆ ಸಂಬಂಧ ಕೇಂದ್ರ ಕಾರಾಗೃಹದ … Read more

ಕೆಲಸ ಹುಡುಕುತ್ತಿರುವವರೆ ಹುಷಾರ್‌, ಮುಂದೆ ನಿಮಗು ಆಗಬಹುದು ಇಂಥಾ ಮೋಸ, ಏನದು?

Online-Fraud-In-Shimoga

ಶಿವಮೊಗ್ಗ: ಉದ್ಯೋಗ ಹುಡುಕುತ್ತಿದ್ದ ಶಿವಮೊಗ್ಗದ ಇಂಜಿನಿಯರ್‌ ಒಬ್ಬರಿಗೆ ₹3,00,000 ವಂಚಿಸಲಾಗಿದೆ (Job Fraud). ಶಿವಮೊಗ್ಗದ ಇಂಜಿನಿಯರ್‌ ಒಬ್ಬರು ಕೆಲಸಕ್ಕಾಗಿ ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಚ್‌ ಮಾಡುತ್ತಿದ್ದರು. ಈ ವೇಳೆ ವೆಬ್‌ಸೈಟ್‌ ಒಂದಲ್ಲಿ ದೊರೆತ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಉದ್ಯೋಗ ಹುಡುಕಿಕೊಡಲು ಪ್ರೋಸೆಸಿಂಗ್‌ ಫೀಸ್‌ ಕಟ್ಟಬೇಕು ಎಂದು ತಿಳಿಸಿ ವಾಟ್ಸಪ್‌ ಗ್ರೂಪ್‌ ಒಂದಕ್ಕೆ ಜಾಯಿನ್‌ ಮಾಡಿಕೊಂಡಿದ್ದರು. ಇನ್ನೇನು ಉದ್ಯೋಗ ಸಿಗಲಿದೆ ಎಂದು ನಂಬಿಸಿ ಹಂತ ಹಂತವಾಗಿ ಪ್ರೋಸೆಸಿಂಗ್‌ ಫೀಸ್‌ ನೆಪದಲ್ಲಿ ₹3,00,000 ಹಣ ಪಾವಿತಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಸ್ವಲ್ಪ … Read more

ಬಿಸ್ಕೇಟ್‌ ಪ್ಯಾಕೆಟ್‌ನಲ್ಲಿ ಗಾಂಜಾ, ಸಿಗರೇಟುಗಳು, ಶಿವಮೊಗ್ಗದಲ್ಲಿ ಸಿಕ್ಕಿಬಿದ್ದರು ಇಬ್ಬರು, ಆಗಿದ್ದೇನು?

Shimoga-Central-Jail-Prison

ಶಿವಮೊಗ್ಗ: ಬಿಸ್ಕೇಟ್‌ ಪ್ಯಾಕೆಟ್‌ನಲ್ಲಿ (Biscuit Packet) ಗೌಪ್ಯವಾಗಿ ಗಾಂಜಾ, ಸಿಗರೇಟ್‌ ಇರಿಸಿ ವಿಚಾರಣಾಧೀನ ಖೈದಿಗೆ ನೀಡಲು ಬಂದಿದ್ದ ಮೂವರನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ವಿಚಾರಣಾಧೀನ ಖೈದಿ ಮಹಮ್ಮದ್‌ ಗೌಸ್‌ ಅಲಿಯಾಸ್‌ ಜಂಗ್ಲಿ ಎಂಬಾತನನ್ನು ಮಾತನಾಡಿಸಲು ಭದ್ರಾವತಿ ನಿವಾಸಿಗಳಾದ ರಾಹಿಲ್‌ (19) ಮತ್ತು ತಸೀರುಲ್ಲಾ (19) ಎಂಬುವವರು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಮಹಮ್ಮದ್‌ ಗೌಸ್‌ಗೆ ನೀಡಲು ಮೂರು ಪ್ಯಾಕೆಟ್‌ ಬಿಸ್ಕೇಟ್ ತಂದಿದ್ದರು. ಜೈಲು ಭದ್ರತೆಗೆ ಕೆಎಸ್‌ಐಎಸ್‌ಎಫ್‌ ಪಡೆ ಸಿಬ್ಬಂದಿ ಬಿಸ್ಕೇಟ್‌ ಪ್ಯಾಕೆಟ್‌ … Read more

ಶಿವಮೊಗ್ಗದ ಉದ್ಯಮಿಯ ಖಾತೆಗೆ ಪ್ರತಿ ದಿನ ₹200 ಹಣ ಬಂತು, 60 ದಿನ ಆದ್ಮೇಲೆ ಕಾದಿತ್ತು ಆಘಾತ, ಆಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ: ಪ್ರತಿ ದಿನ ₹200 ಮೊತ್ತ ವರ್ಗಾವಣೆ ಮಾಡಿ ನಂಬಿಕೆ ಮೂಡಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹7.84 ಲಕ್ಷ ವಂಚಿಸಲಾಗಿದೆ (Investment). ಹೇಗಾಯ್ತು ವಂಚನೆ? ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ಪ್ರಕಟವಾದ ಜಾಹಿರಾತು ನಂಬಿ ಶಿವಮೊಗ್ಗದ ಉದ್ಯಮಿಯೊಬ್ಬರು ವಂಚನೆಗೊಳಗಾಗಿದ್ದಾರೆ. ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿದಾಗ ಉದ್ಯಮಿಯನ್ನು ಗ್ರೂಪ್‌ ಒಂದಕ್ಕೆ ಸೇರಿಸಿಕೊಳ್ಳಲಾಯಿತು. ಮೊದಲಿಗೆ ₹20,000 ಹೂಡಿಕೆ ಮಾಡುವಂತೆ ಸೂಚಿಸಲಾಯಿತು. ಅಂತೆಯೇ ಶಿವಮೊಗ್ಗದ ಉದ್ಯಮಿ ಹೂಡಿಕೆ ಮಾಡಿದ್ದರು. ಪ್ರತಿದಿನ ಬಂತು ₹200 ಹಣ ಹೂಡಿಕೆ ಮಾಡಿಸಿಕೊಂಡವರು … Read more

ನಡುರಾತ್ರಿ ಮೈಸೂರು ಬಸ್‌ ಹತ್ತಿ ಸೀಟಿನಲ್ಲಿ ಕುಳಿತು ಶಾಲು ಹೊದ್ದುಕೊಂಡ ನಂತರ ನರ್ಸ್‌ಗೆ ಕಾದಿತ್ತು ಶಾಕ್

ksrtc-bus-stand-shimoga-shivamogga

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಬಸ್‌ ಹತ್ತುವಾಗ ನರ್ಸ್‌ (Nurse) ಒಬ್ಬರ ಮಾಂಗಲ್ಯ ಸರ ಕಳವು ಮಾಡಲಾಗಿದೆ. ನಡುರಾತ್ರಿ ಗೀತಾ ಎಂಬುವವರು ಶಿವಮೊಗ್ಗದಿಂದ ಮೈಸೂರು ಬಸ್‌ ಹತ್ತಿದ್ದಾರೆ. ಸೀಟಿನಲ್ಲಿ ಕುಳಿತು ಚಳಿ ಇದ್ದರಿಂದ ಶಾಲ್‌ ಹೊದ್ದುಕೊಂಡಿದ್ದಾರೆ. ಆಗ ಕೊರಳಲಿದ್ದ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. ಬಸ್‌ ಹತ್ತುವಾಗ ಜನ ಸಂದಣಿ ಇತ್ತು. ಆ ಸಂದರ್ಭ ಮಾಂಗಲ್ಯ ಸರ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಳುವಾಗಿರುವುದು ₹2.24 ಲಕ್ಷದ … Read more

ಶಿವಮೊಗ್ಗದ 21 ವರ್ಷದ ಯುವಕನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ, ₹10,000 ದಂಡ

azgar-sentenced-for-7-years.

ಶಿವಮೊಗ್ಗ: 2021ರಲ್ಲಿ ನಡೆದ ಕೊಲೆ ಪ್ರಕರಣವೊಂದರ ಸಂಬಂಧ, ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಮುಖ ಆರೋಪಿಗೆ ಏಳು ವರ್ಷಗಳ (7 Years) ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ ವಿಧಿಸಿ ತೀರ್ಪು ನೀಡಿದೆ. 2021ರ ಆಗಸ್ಟ್‌ 9ರಂದು ಶಿವಮೊಗ್ಗದ ಬಾಪೂಜಿನಗರದ ನಿವಾಸಿ ರಾಹಿಲ್ (21) ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಟ್ಯಾಂಕ್‌ ಮೊಹಲ್ಲಾದ ಅಜ್ಗರ್ ಖಾನ್ (21) ಮತ್ತು ಅತೀಖ್ ಪಾಷಾ (36) ಎಂಬುವವರನ್ನು … Read more

ಶಿವಮೊಗ್ಗದಲ್ಲಿ ಅಕ್ಬರ್‌ ಕಾಲಿಗೆ ಗುಂಡೇಟು, ಜಿಲ್ಲಾ ರಕ್ಷಣಾಧಿಕಾರಿ ಫಸ್ಟ್‌ ರಿಯಾಕ್ಷನ್‌, ಏನಂದ್ರು ಎಸ್‌ಪಿ?

081025 Akbar Nabbed in Amjad case SP Mithun Kumar spoke to media at Mc Gann Hospital

ಶಿವಮೊಗ್ಗ: ಅಮ್ಜದ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಕ್ಬರ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ (Arrest). ಆತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌ ಬಂಧಿತ ಆರೋಪಿ ಅಕ್ಬರ್ ಮೇಲೆ ಈಗಾಗಲೇ ಕೊಲೆ ಯತ್ನ ಮತ್ತು ಸುಲಿಗೆಯಂತಹ ನಾಲ್ಕು ಗಂಭೀರ ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದೆ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಮ್ಜದ್ … Read more

ಶಿವಮೊಗ್ಗದಲ್ಲಿ ರೌಡಿಶೀಟರ್‌ ಕಾಲಿಗೆ ಗುಂಡು ಹಾರಿಸಿದ ಪೊಲೀಸ್‌, ಯಾರದು ರೌಡಿ ಶೀಟರ್‌? ಆಗಿದ್ದೇನು?

Rowdysheeter-incident-in-Shimoga-

ಶಿವಮೊಗ್ಗ: ನಗರದಲ್ಲಿ ಇತ್ತೀಚೆಗೆ ನಡೆದ ಅಮ್ಜದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೌಡಿಶೀಟರ್‌ (Rowdy Sheeter) ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ರೌಡಿಶೀಟರ್‌ ಅಕ್ಬರ್‌ (21) ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಶಿವಮೊಗ್ಗ ನಗರ ಹೊರವಲಯದ ಪುರಲೆ ಬಳಿ ನಡೆದಿದೆ. ನ್ಯೂಮಂಡ್ಲಿಯ ನಿವಾಸಿ ಅಕ್ಬರ್ ಮೇಲೆ ಈಗಾಗಲೇ ನಾಲ್ಕಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, … Read more

ಶಿವಮೊಗ್ಗದಲ್ಲಿ ಡಾಕ್ಟರ್‌ಗೆ ₹1.81 ಕೋಟಿ ಪಂಗನಾಮ, ಆಗಿದ್ದೇನು?

Shimoga-doctor-lost-1.81-crore-rupees.

ಶಿವಮೊಗ್ಗ: ಹೂಡಿಕೆ, ಅಧಿಕ ಲಾಭದ ಆಸೆ ತೋರಿಸಿ ಜನರನ್ನು ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ವಿದ್ಯಾವಂತರೆ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಶಿವಮೊಗ್ಗದ ವೈದ್ಯೆಯೊಬ್ಬರು (Doctor) ವಂಚಕರ ವ್ಯೂಹಕ್ಕೆ ಸಿಲುಕಿ ₹1.81 ಕೋಟಿ ಕಳೆದುಕೊಂಡಿದ್ದಾರೆ. ವಂಚಕರ ಬಲೆಗೆ ವೈದ್ಯೆ ವೈದ್ಯೆಯೊಬ್ಬರಿಗೆ (ಹೆಸರು ಗೌಪ್ಯ) ಪ್ರತಿಷ್ಠಿತ ಷೇರು ವ್ಯವಹಾರ ಸಂಸ್ಥೆಯ ಹೆಸರು ಹೇಳಿಕೊಂಡು ಅಪರಿಚಿತರು ಕರೆ ಮಾಡಿದ್ದರು. ಹಣ ಹೂಡಿಕೆ ಮಾಡಿ ಅಧಿಕ ಲಾಭಾಂಶ ಗಳಿಸಬಹುದು ಎಂದು ತಿಳಿಸಿದ್ದರು. ಅಲ್ಲದೆ ಪ್ರತಿಷ್ಠಿತ ಷೇರು ವ್ಯವಹಾರ ಸಂಸ್ಥೆಯ ವೆಬ್‌ಸೈಟ್‌ ಮೂಲಕ … Read more