ಶಾಲೆಯ ಬೀಗ ತೆಗೆಯಲು ಬಂದ ಮುಖ್ಯ ಶಿಕ್ಷಕರಿಗೆ ಕಾದಿತ್ತು ಆಘಾತ, ಇದೇ ಮೊದಲಲ್ಲ ಇಂತಹ ಪ್ರಕರಣ
SHIVAMOGGA LIVE NEWS | 28 JUNE 2024 SHIMOGA : ನಗರದ ಸರ್ಕಾರಿ ಶಾಲೆಗೆ (School) ನುಗ್ಗಿರುವ ದುಷ್ಕರ್ಮಿಗಳು ಮಕ್ಕಳ ಉಪಯೋಗಕ್ಕೆ ಇಟ್ಟಿದ್ದ ದಿನಸಿ ವಸ್ತುಗಳನ್ನು ಹಾಳುಗೆಡವಿದ್ದಾರೆ. ಕಾಮಾಕ್ಷಿ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಮುಖ್ಯ ಶಿಕ್ಷಕರು ಬೆಳಗ್ಗೆ ಶಾಲೆಗೆ ಬಂದಾಗ ಅಡುಗೆ ಮನೆಯ ಬಾಗಿಲಿನ ಬೀಗ ಮುರಿದಿತ್ತು. ಅಡುಗೆ ಮನೆಯಲ್ಲಿ ಗ್ಯಾಸ್ ಆನ್ ಮಾಡಲಾಗಿತ್ತು. ಹಾಲಿನ ಪುಡಿ, ಸಕ್ಕರೆ, ರಾಗಿ ಮಾಲ್ಟ್ ಅನ್ನು ನೀರಿನಲ್ಲಿ ಮಿಕ್ಸ್ ಮಾಡಿ ಹಾಳು ಮಾಡಲಾಗಿತ್ತು. … Read more