ಭದ್ರಾ ನದಿಗೆ ವಿಶೇಷ ಪೂಜೆ, ಶಾಸಕರ ಕುಟುಂಬದಿಂದ ಜಲಾಶಯಕ್ಕೆ ಬಾಗಿನ ಅರ್ಪಣೆ

030821 Sangameshwara Bagina To Bhadra Dam 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 ಆಗಸ್ಟ್ 2021 ಭದ್ರಾ ಜಲಾಶಯದಲ್ಲಿ ಭದ್ರಾ ನದಿಗೆ ಭದ್ರಾವತಿ ಶಾಸಕ ಸಂಗಮೇಶ್ವರ್ ಅವರು ಕುಟುಂಬ ಸಹಿತ ಬಾಗಿನ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಜಲಾಶಯದ ಪ್ರವಾಸಿ ಮಂದಿರದ ಕಡೆಯಲ್ಲಿ ಬಾಗಿನ ಅರ್ಪಿಸಿದ ಶಾಸಕ ಸಂಗಮೇಶ್ವರ್ ಅವರ ಕುಟುಂಬವರು, ವಿಶೇಷ ಪೂಜೆ ಸಲ್ಲಿಸಿದರು. ಸಂಗಮೇಶ್ವರ್ ಅವರ ಸಹೋದರ ಮೋಹನ್, ಪುತ್ರರಾದ ಗಣೇಶ್, ಬಸವೇಶ್ ಸೇರಿದಂತೆ ಹಲವರು ಈ ಸಂದರ್ಭ ಇದ್ದರು. ಭದ್ರಾವತಿ ಮತ್ತು ಭದ್ರಾ ಜಲಾಶಯದ ಸುತ್ತಮುತ್ತಲ ಗ್ರಾಮಗಳ … Read more

ಸೇತುವೆ, ರಸ್ತೆ ಕುಸಿತ, ತೀರ್ಥಹಳ್ಳಿ, ಹೊಸನಗರದ ಹೆದ್ದಾರಿಗಳಲ್ಲಿ ಭಾರಿ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

200520 Shimoga DC KB Shivakumar 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ಹೊಸನಗರದ ನಗರ ಮತ್ತು ಚಿಕ್ಕಪೇಟೆ ನಡುವೆ ಇರುವ ಸೇತುವೆ ಕುಸಿದಿದೆ. ಇತ್ತ ತೀರ್ಥಹಳ್ಳಿಯ ಭಾರತೀಪುರ ತಿರುವಿನಲ್ಲಿ ರಸ್ತೆ ಕುಸಿತ ಉಂಟಾಗಿದೆ. ಆದ್ದರಿಂದ  ಈ ಮಾರ್ಗಗಳಲ್ಲಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಹೊಸನಗರದಿಂದ ನಗರ – ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 (ಸಿ) ರಲ್ಲಿ ಸೇತುವೆ ಕುಸಿದಿದೆ. ನಗರ – ಚಿಕ್ಕಪೇಟೆ ರಸ್ತೆಯಲ್ಲಿ ಈ … Read more

ತಾಳಗುಪ್ಪದಲ್ಲಿ ಮೂವರಿಗೆ ಕರೋನ ಸೋಂಕು, ಹೋಂ ಕ್ವಾರಂಟೈನ್

Talaguppa Graphics

ಶಿವಮೊಗ್ಗ ಲೈವ್.ಕಾಂ | TALAGUPPA NEWS | 3 ಆಗಸ್ಟ್ 2021 ತಾಳಗುಪ್ಪದಲ್ಲಿ ಮತ್ತೆ ಕರೋನ ಭೀತಿ ಎದುರಾಗಿದೆ. ಇಲ್ಲಿನ ಮೂವರಿಗೆ ಕರೋನ ಸೋಂಕು ತಗುಲಿದ್ದು, ಹೋಂ ಕ್ವಾರಂಟೈನ್ ಮಾಡಲಾಗಿದೆ. ರಂಗನಾಥ ಕಾಲೋನಿಯ ಮೂವರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಅವರನ್ನು ಹೋಂ ಕ್ವಾರಂಟ್ನಗೆ ಸೂಚಿಸಲಾಗಿದೆ. ಕಳೆದೊಂದು ತಿಂಗಳಿಂದ ತಾಳಗುಪ್ಪದಲ್ಲಿ ಸೋಂಕು ಕಣ್ಮರೆಯಾಗಿತ್ತು. ಹಾಗಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಮೂರನೆ ಅಲೆ ಕುರಿತ ಚರ್ಚೆ ನಡುವೆ ಸ್ಥಳೀಯರಿಗೆ ಸೋಂಕು ತಗುಲಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. (ಶಿವಮೊಗ್ಗ ಲೈವ್.ಕಾಂ … Read more

ಲಿಂಗನಮಕ್ಕಿ ಜಲಾಶಯದ ಒಂದು ಗೇಟ್ನಿಂದ ನೀರು ಹೊರಕ್ಕೆ, ಶರಾವತಿ ನದಿಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ

020821 Water Released From Linganamakki 1

ಶಿವಮೊಗ್ಗ ಲೈವ್.ಕಾಂ | SAGARA NEWS | 2 ಆಗಸ್ಟ್ 2021 ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ಇವತ್ತು ಶರಾವತಿಗೆ ನದಿಗೆ ಬಾಗಿನ ಅರ್ಪಿಸಿ, ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರು ಹೊರಗೆ ಬಿಡಲಾಯಿತು. ಇವತ್ತು ಬೆಳಗ್ಗೆ ಕೆಪಿಸಿ ಅಧಿಕಾರಿಗಳು ಶರಾವತಿ ನದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಾಗಿನ ಅರ್ಪಣೆ ಮಾಡಿದರು. ಕೆಪಿಸಿ ಅಧಿಕಾರಿಗಳು, ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೇಟ್ ನಿಂದ ನೀರು ಹೊರಗೆ ಲಿಂಗನಮಕ್ಕಿ ಜಲಾಶಯದ ಗೇಟ್ನಿಂದ ಇವತ್ತು ಸಾಂಪ್ರದಾಯಿಕವಾಗಿ ಕೆಲವು … Read more

ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಲಕ್ಷಾಂತರ ಮೌಲ್ಯದ ಶುಂಠಿ, ನಾಟ ಭಸ್ಮ

020821 Soraba Fire Incident Lakhs Of Rupees Loss 1

ಶಿವಮೊಗ್ಗ ಲೈವ್.ಕಾಂ | SORABA NEWS | 2 ಆಗಸ್ಟ್ 20210 ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಮನೆಯ ಪಕ್ಕದ ಗೋದಾಮಿನಲ್ಲಿ ಸಂಗ್ರಹಿಸಿಟ್ಟದ್ದ ಲಕ್ಷಾಂತರ ರೂ. ಮೌಲ್ಯದ ಒಣ ಶುಂಠಿ, ಭತ್ತ ಹಾಗೂ ನಾಟ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾದ ದುರ್ಘಟನೆ ತಾಲ್ಲೂಕಿನ ಆಗಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ವಾರಹಳ್ಳಿಯಲ್ಲಿ ನಡೆದಿದೆ. ದ್ವಾರಹಳ್ಳಿ ಗ್ರಾಮದ ವಕೀಲ ಶಿವಪ್ಪ ಅವರ ಮನೆಯ ಪಕ್ಕದಲ್ಲಿ ದಾಸ್ತಾನು ಇರಿಸಿದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಶಬ್ದ … Read more

ಮನೆಯಲ್ಲಿ ನೇಣು ಬಿಗಿದು ಪಿಯುಸಿ ವಿದ್ಯಾರ್ಥಿನಿ ಸಾವು

Suicide-Hanging-General

ಶಿವಮೊಗ್ಗ ಲೈವ್.ಕಾಂ | SORABA NEWS | 31 ಜುಲೈ 2021 ಹೊಟ್ಟೆನೋವು ತಾಳಲಾರದೆ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದೆ. ನಾಗರಾಜ ಮರಡಿ ಅವರ ಪುತ್ರಿ ಸುಚಿತ್ರಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ದ್ವಿತೀಯ ವರ್ಷದ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಸುಚಿತ್ರಾಗೆ, ಕೆಲ ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಳ್ಳುತಿತ್ತು. ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಆದರೆ ಹೊಟ್ಟೆನೋವು ಕಡಿಮೆಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಕುಟುಂಬದವರು ಹೊಲಕ್ಕೆ ಹೋದ ಸಂದರ್ಭ ಮನೆಯಲ್ಲಿಯೇ … Read more

ಬೈಕ್, ಕೆಎಸ್​​ಆರ್​​ಟಿಸಿ ಬಸ್ ಡಿಕ್ಕಿ, ಕೆರೆಗೆ ಬಸ್ ಪಲ್ಟಿ, ಹೇಗಾಯ್ತು ಘಟನೆ?

300721 Bike KSRTC Bus Accident near kaspadi cross 1

ಶಿವಮೊಗ್ಗ ಲೈವ್.ಕಾಂ |SAGARA NEWS | 30 ಜುಲೈ 2021 ಬೈಕ್‍, ಕೆಎಸ್‍ಆರ್‍ಟಿಸಿ ಬಸ್‍ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್ಸು ಕೆರೆಗೆ ಉರುಳಿದೆ. ಬೈಕ್‍ ಸವಾರರಿಬ್ಬರಿಗೂ ಗಂಭೀರ ಗಾಯವಾಗಿದೆ. ಬಸ್‍ನಲ್ಲಿದ್ದವರು ಅದೃಷ್ಟವಶಾತ್ ಬಚಾವಾಗಿದ್ದಾರೆ. ಸಾಗರದ ಉಳ್ಳೂರು ಕಾಸ್ಪಾಡಿ ಕ್ರಾಸ್‍ನಲ್ಲಿ ಇವತ್ತು ಬೆಳಗ್ಗೆ ಬಸ್ ಮತ್ತು ಬೈಕ್‍ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್, ಕೆರೆಗೆ ಉರುಳಿ ಬಿದ್ದಿದೆ. ಹೇಗಾಯ್ತು ಘಟನೆ? ಸಾಗರದಿಂದ ಶಿವಮೊಗ್ಗ ಮೂಲಕ ದಾವಣಗೆರೆಗೆ ತರಳಬೇಕಿದ್ದ ಕೆಎಸ್‍ಆರ್‍ಟಿಸಿ ಬಸ್‍, … Read more

ತುಂಗಾ ನದಿ ದಂಡೆ ಮೇಲೆ ಚಪ್ಪಲಿ ಬಿಟ್ಟು ಯುವಕ ನಾಪತ್ತೆ, ಎರಡು ದಿನದ ಬಳಿಕ ಶೋಧ ಕಾರ್ಯ ಅಂತ್ಯ

290721 Fire Department Operation at Tunga River Near Pillangere 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 29 ಜುಲೈ 2021 ತುಂಗಾ ನದಿಯಲ್ಲಿ ಯುವಕನಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ನಡೆಸುತ್ತಿದ್ದ ಶೋಧ ಕಾರ್ಯ ಅಂತ್ಯವಾಗಿದೆ. ಎರಡು ದಿನ ನಿರಂತರ ಶೋಧ ನಡೆಸಿದರೂ ಯುವಕನ ಸುಳಿವು ಸಿಕ್ಕಿಲ್ಲ. ಏನಿದು ಶೋಧ ಕಾರ್ಯ? ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ಬಳಿ ತುಂಗಾ ನದಿಯಲ್ಲಿ ಯುವಕನೊಬ್ಬ ಮುಳುಗಿದ್ದಾನೆ ಎಂದು ಹೇಳಲಾಗಿತ್ತು. ಈ ಸಂಬಂಧ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯುವಕನ ಶೋಧ ಕಾರ್ಯಾಚರಣೆ ನಡೆಸಿದರು. ಎರಡು ದಿನದ ಕಾರ್ಯಾಚರಣೆ ಬುಧವಾರಕ್ಕೆ ಅಂತ್ಯವಾಯಿತು. ಶೋಧಕ್ಕೆ … Read more

ಪರೀಕ್ಷೆ ಭಯ, ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

Suicide-Hanging-General

ಶಿವಮೊಗ್ಗ ಲೈವ್.ಕಾಂ |SORABA NEWS | 28 ಜುಲೈ 2021 ಪರೀಕ್ಷೆ ಭೀತಿಯಿಂದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿತಿನ್ ದಾಸ್ (20) ಮೃತ ವಿದ್ಯಾರ್ಥಿ. ಬೆಂಗಳೂರಿನ ಕಾಲೇಜಿನಲ್ಲಿ ನಿತಿನ್ ದಾಸ್ ಬಿಇ ಪದವಿ ಅಧ್ಯಯನ ಮಾಡುತ್ತಿದ್ದ. ಲಾಕ್ ಡೌನ್ ಹಿನ್ನೆಲೆ ಸೊರಬ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿರುವ ಮನೆಗೆ ಬಂದಿದ್ದ. ಆನ್‍ಲೈನ್ ಮೂಲಕ ನಿತಿನ್ ದಾಸ್ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದ. 2ನೇ ವರ್ಷದ ಬಿಇ ಪರೀಕ್ಷೆ ಬರೆಯಬೇಕಿತ್ತು. ಆದರೆ ಪರೀಕ್ಷೆ ಕುರಿತು … Read more

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಮೃತರಾದ ಇಬ್ಬರು ಸವಾರರ ಗುರುತು ಪತ್ತೆ

Thirthahalli Name Graphics

ಶಿವಮೊಗ್ಗ ಲೈವ್.ಕಾಂ |THIRTHAHALLI NEWS | 28 ಜುಲೈ 2021 ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಮೃತರಾದ ಸವಾರರ ಗುರುತು ಪತ್ತೆಯಾಗಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ತಾಲೂಕಿನ ಬೂದಿಗೆರೆಯ ಪ್ರಭು (22) ಮತ್ತು ರಮೇಶ್ (25) ಮೃತರು. ಇವರು ಬೆಜ್ಜವಳ್ಳಿ ಕಡೆಯಿಂದ ಆಯನೂರು ಕಡೆಗೆ ಬರುವ ರಸ್ತೆಯಲ್ಲಿ ಹೊರಬೈಲು ಬಳಿ ಬೈಕ್‍ನಲ್ಲಿ ಬರುವಾಗ ಅಪಘಾತವಾಗಿದೆ. ಹೇಗಾಯ್ತು ಅಪಘಾತ? ಪ್ರಭು ಬೈಕ್ ಚಲಾಯಿಸುತ್ತಿದ್ದ. ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಓಡಿಸಿದ್ದರಿಂದ … Read more