ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿಗಳ ಪರೇಡ್‌, ಖಡಕ್‌ ವಾರ್ನಿಂಗ್‌

Rowdy-Parade-in-Shimoga-city-and-sagara.webp

SHIVAMOGGA LIVE NEWS | 14 SEPTEMBER 2023 SHIMOGA : ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರೌಡಿ ಪರೇಡ್ (Rowdy Parade) ಮಾಡಲಾಯಿತು. ಶಿವಮೊಗ್ಗ ನಗರದಲ್ಲಿ 144 ಜನ, ಭದ್ರಾವತಿಯಲ್ಲಿ 79 ಮತ್ತು ಸಾಗರದಲ್ಲಿ 40 ರೌಡಿಗಳು ಸೇರಿ ಒಟ್ಟು 263 ಜನ ರೌಡಿಗಳು ಹಾಜರಿದ್ದರು. ಪರೇಡ್‌ನಲ್ಲಿ ಹಾಜರಿದ್ದ ರೌಡಿಗಳ ಹಾಲಿ ವಿಳಾಸ, ಆದಾಯದ ಮೂಲ ಮತ್ತು ಜೀವನೋಪಾಯಕ್ಕಾಗಿ ಮಾಡುತ್ತಿರುವ ಕೆಲಸಗಳ ಕುರಿತು ಮಾಹಿತಿ ಪಡೆಯಲಾಯಿತು. ಅಲ್ಲದೆ … Read more

ವಾಹನಗಳಿಗೆ ದುಬಾರಿ ತೆರಿಗೆ, ಸಾಗರದಲ್ಲಿ ಆಕ್ರೋಶ, ಪ್ರತಿಭಟನಾಕಾರರ ಬೇಡಿಕೆ ಏನು?

Vehicle-owners-protest-in-sagara-over-tax-system.webp

SHIVAMOGGA LIVE NEWS | 11 SEPTEMBER 2023 SAGARA : ವಾಹನಗಳ ಮೇಲಿನ ಪೂರ್ಣಾವಧಿ ತೆರಿಗೆ (Vehicle Tax) ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಸಾಗರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಹಾ ಗಣಪತಿ ದೇವಸ್ಥಾನದಿಂದ ಪ್ರದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಹಲವು ಲಘು ವಾಹನಗಳು ಮೆರವಣಿಗೆಯಲ್ಲಿದ್ದವು. ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಶಿವಮೊಗ್ಗ ಜಿಲ್ಲೆಯಲ್ಲಿ 241 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ, ಖುದ್ದು … Read more

ಸಾಗರದಲ್ಲಿ ಎಂಎಲ್‌ಎ ನೇತೃತ್ವದಲ್ಲಿ ಭಾರತ್‌ ಜೋಡೋ

080923-Bharat-Jodo-in-Sagara-Beluru-Gopalakrishna-and-Kagodu-Thimmappa.webp

SHIVAMOGGA LIVE NEWS | 8 SEPTEMBER 2023 SAGARA : ಭಾರತ್ ಜೋಡೋ (BHARAT JODO) ಯಾತ್ರೆಯ ಮೂಲಕ ರಾಹುಲ್ ಗಾಂಧಿಯವರು ಇಡೀ ದೇಶವನ್ನು ಜೋಡಿಸುವ ಕೆಲಸವನ್ನು ಮಾಡಿದರು. ಈ ಯಾತ್ರೆಯಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಇದನ್ನೂ ಓದಿ – ಎಂ.ಶ್ರೀಕಾಂತ್‌ ಕಾಂಗ್ರೆಸ್‌ ಸೇರ್ಪಡೆಗೆ ಮುಹೂರ್ತ ಫಿಕ್ಸ್‌, ವೈರಲ್‌ ಆಯ್ತು ಫೋಟೋ, ಯಾವಾಗ ಸೇರ್ಪಡೆ? ಸಾಗರ್ ಹೋಟೆಲ್ ವೃತ್ತದಲ್ಲಿ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆ ಒಂದು ವರ್ಷ ಪೂರೈಸಿದ … Read more

ಬಾವಿ ತೆಗೆಯುವಾಗ ತಲೆ ಮೇಲೆ ಕಲ್ಲು ಬಿದ್ದು ಕಾರ್ಮಿಕ ಸ್ಥಳದಲ್ಲೇ ಸಾವು, ಹೇಗಾಯ್ತು ಘಟನೆ?

sagara graphics

SHIVAMOGGA LIVE NEWS | 8 SEPTEMBER 2023 SAGARA : ಬಾವಿ (Well) ತೆಗೆಯುವ ಕಾಮಗಾರಿ ವೇಳೆ ಕಾರ್ಮಿಕ ಮೃತಪಟ್ಟಿರುವ ಘಟನೆ ಸಾಗರದ ನೆಹರೂ ನಗರ ಬಡಾವಣೆಯಲ್ಲಿ ನಡೆದಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೈಕ್‌ ಓಡಿಸಿ ಸಿಕ್ಕಿಬಿದ್ದ ಮಗ, ಅಪ್ಪನಿಗೆ 25 ಸಾವಿರ ರೂ. ದಂಡ, ಏನಿದು ಕೇಸ್‌? ಮೋಹನ (55) ಮೃತ ಕಾರ್ಮಿಕ. ಮೂವರು ಕಾರ್ಮಿಕರು ನಿರ್ಮಾಣ ಹಂತದಲ್ಲಿದ್ದ ಬಾವಿಯಲ್ಲಿ ಇಳಿದು ಕೆಲಸ ಮಾಡುತ್ತಿದ್ದರು. ಬಾವಿಯ ಮೇಲ್ಬಾದಿಂದ ಕಲ್ಲು ಉರುಳಿ ಮೋಹನ್ ಅವರ ತಲೆ … Read more

ಕುಡಿಯಲು ನೀರು ಕೇಳಿ ಅಪ್ರಾಪ್ತೆ ಮನೆಯೊಳಗೆ ನುಗ್ಗಿ ದೌರ್ಜನ್ಯ, ಪೋಕ್ಸೋ ಕೇಸ್‌, ಯುವಕ ಎಸ್ಕೇಪ್‌

sagara graphics

SHIVAMOGGA LIVE NEWS | 7 SEPTEMBER 2023 SAGARA : ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆ ಗ್ರಾಮವೊಂದರ 24 ವರ್ಷದ ಯುವಕನ (Youth) ವಿರುದ್ಧ ಪೋಕ್ಸೋ ಕಾಯ್ದೆ (Pocso Act) ಅಡಿ ಪ್ರಕರಣ ದಾಖಲಾಗಿದೆ. ಯುವಕ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ಗ್ರಾಮಸ್ಥರು ಡಿವೈಎಸ್‌ಪಿ ಕಚೇರಿಗೆ ತೆರಳಿ ತಕ್ಷಣ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ – ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಯಾರು ಅರ್ಜಿ ಸಲ್ಲಿಸಬಹುದು? ಕುಡಿಯಲು … Read more

BREAKING NEWS | ಸಾಗರ – ಶಿವಮೊಗ್ಗ ಮಧ್ಯೆ ರೈಲ್ವೆ ಹಳಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್‌ ತಂತಿ

070923-Railway-Track-with-Electric-lane-in-Shimoga-Sagara-Route.webp

SHIVAMOGGA LIVE NEWS | 7 SEPTEMBER 2023 SAGARA : ಹಳಿ ಮೇಲೆ ವಿದ್ಯುತ್‌ ಕಂಬಿ ತುಂಡಾಗಿ ಬಿದ್ದಿದ್ದರಿಂದ ಕೆಲಕಾಲ ರೈಲು (Trains) ಸಂಚಾರ ವ್ಯತ್ಯಯವಾಗಿತ್ತು. ಕೂಡಲೆ ರೈಲ್ವೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತಾಂತ್ರಿಕ ಸಮಸ್ಯೆ ಪರಿಹರಿಸಿದ್ದಾರೆ. ಆನಂದಪುರ ಸಮೀಪ ರೈಲ್ವೆ ಹಳಿ ಮೇಲೆ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿತ್ತು. ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲು (Inter City) ಸಿಬ್ಬಂದಿ ಇದನ್ನು ಗಮನಿಸಿ ನಿಲ್ದಾಣಕ್ಕೆ ಮಾಹಿತಿ ನೀಡಿದ್ದರು. ಇದನ್ನೂ ಓದಿ – KSRTC ಬಸ್ಸಿನಲ್ಲಿ … Read more

ಲಾಂಚ್‌ ಸೇವೆ ಪುನಾರಂಭ, ನಿಟ್ಟುಸಿರು ಬಿಟ್ಟ ಸ್ಥಳೀಯರು, ಸಿಗಂದೂರು ಭಕ್ತರು

Muppane-Launch-in-Sagara-Sharavathi-River.

SHIVAMOGGA LIVE NEWS | 3 SEPTEMBER 2023 TUMARI : ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ಮುಪ್ಪಾನೆ ಲಾಂಚ್‌ (Muppane Launch) ಸೇವೆ ಪುನಾರಂಭವಾಗುತ್ತಿದೆ. ತುಮರಿ (Tumari) ಗ್ರಾಮ ಪಂಚಾಯಿತಿಯಿಂದ ಕಾರ್ಗಲ್‌ಗೆ ಸಂಪರ್ಕ ಕಲ್ಪಿಸುತ್ತಿತ್ತು. ಸೆ. 3ರಿಂದ ಎಂದಿನಂತೆ ಹಲ್ಲೆ – ಮುಪ್ಪಾನೆ ಲಾಂಚ್ ಕಾರ್ಯನಿರ್ವಹಿಸಲಿದೆ. ಇದನ್ನೂ ಓದಿ – ಸಿಗಂದೂರು, ಹಸಿರುಮಕ್ಕಿ ಲಾಂಚ್‌ಗಳ ಸೇವೆ ಯಥಾಸ್ಥಿತಿಗೆ, ಸ್ಥಳೀಯರಲ್ಲಿ ನಿಟ್ಟುಸಿರು, ಪ್ರವಾಸಿಗರು ಫುಲ್‌ ಖುಷ್‌ ಆಗಸ್ಟ್ 25ರಂದು ಮುಪ್ಪಾನೆ ಲಾಂಚ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ಸೇವೆ ಸ್ಥಗಿತಗೊಂಡಿತ್ತು. … Read more

ರಾಖಿ ಕಟ್ಟಿಕೊಂಡು ಬಂದ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿದ್ದ ಖಾಸಗಿ ಶಾಲೆ, ಪೋಷಕರ ಆಕ್ರೋಶ

sagara graphics

SHIVAMOGGA LIVE NEWS | 1 SEPTEMBER 2023 SAGARA : ರಕ್ಷಾ ಬಂಧನ (raksha bandhan) ಆಚರಣೆ ಮಾಡಿದ್ದ ಮಕ್ಕಳ ಕೈಯಿಂದ ರಾಖಿ ಬಿಚ್ಚಿಸಿ, ಮರುದಿನ ಮಕ್ಕಳನ್ನು ತರಗತಿಯಿಂದ ಹೊರಗೆ ನಿಲ್ಲಿಸಿದ್ದ ಆರೋಪದ ಹಿನ್ನೆಲೆ ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಪೋಷಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೋಷಕರಿಗೆ ಬೆಂಬಲ ಸೂಚಿಸಿ ಮುಖ್ಯ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ರಾಖಿ ಬಿಚ್ಚಿಸಿದ್ದರು ಸಾಗರದ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳು ರಾಖಿ … Read more

ಮುಪ್ಪಾನೆ ಲಾಂಚ್‌ ಸೇವೆ ಸ್ಥಗಿತ, ಮತ್ತೆ ತೊಂದರೆಗೆ ಸಿಲುಕಿದ ಹಿನ್ನೀರಿನ ಜನ, ಲಾಂಚ್‌ ನಿಲ್ಲಲು ಕಾರಣವೇನು?

Muppane-Launch-in-Sagara-Sharavathi-River.

SHIVAMOGGA LIVE NEWS | 27 AUGUST 2023 SAGARA : ಕರೂರು ಹೋಬಳಿಯಿಂದ ಜೋಗ, ಕಾರ್ಗಲ್‌ಗೆ ಸಂಪರ್ಕ ಕಲ್ಪಿಸುವ ಹಲ್ಕೆ – ಮುಪ್ಪಾನೆ ಲಾಂಚ್‌ (Muppane Launch) ಸೇವೆ ಸ್ಥಗಿತಗೊಂಡಿದೆ. ತಾಂತ್ರಿಕ ದೋಷದಿಂದಾಗಿ ಆ.25ರಿಂದ ಕಾರ್ಯಾಚರಣೆ ನಿಲ್ಲಿಸಿದೆ. ಇದರಿಂದ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಸಮಸ್ಯೆಯಾಗಿದೆ. ಲಾಂಚ್‌ನ ಗೇರ್‌ ಬಾಕ್ಸ್‌ ಸೇರಿದಂತೆ ವಿವಿಧ ತಾಂತ್ರಿಕ ಸಮಸ್ಯೆಯಾಗಿದೆ. ಕೆಲವು ಬಿಡಿ ಭಾಗಗಳನ್ನು ರಿಪೇರಿಗೆ ಕಳುಹಿಸಲಾಗಿದೆ. ಇನ್ನು ನಾಲ್ಕೈದು ದಿನದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಕಡವು ನಿರೀಕ್ಷಕ ಧನೇಂದ್ರ ಕುಮಾರ್‌ … Read more

ಚಿಕಿತ್ಸೆ ವೇಳೆ ಹೃದಯಾಘಾತದಿಂದ ಎರಡು ವರ್ಷದ ಜಿಂಕೆ ಸಾವು

DEER-at-Sagara-taluk

SHIVAMOGGA LIVE NEWS | 24 AUGUST 2023 SAGARA : ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಜಿಂಕೆ (DEER) ಚಿಕಿತ್ಸೆ ವೇಳೆ ಮೃತಪಟ್ಟಿದೆ. ಸಾಗರ ತಾಲೂಕು ಮಾನ್ವೆ ಕಾನುಗೋಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಆಹಾರ ಅರಸಿಕೊಂಡು ಎರಡು ವರ್ಷದ ಜಿಂಕೆಯೊಂದು (DEER) ಊರಿಗೆ ಬಂದಾಗ ನಾಯಿಗಳು ದಾಳಿ ಮಾಡಿದ್ದವು. ಗ್ರಾಮಸ್ಥರನ್ನು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿದ್ದರು. ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಜಿಂಕೆಯನ್ನು ಸಾಗರದ ಪಶು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದು … Read more