ವರ್ಷ ಕಳೆದರೂ ಬದಲಾಗದ ನಾಮಫಲಕ, ಇರುವಕ್ಕಿಯಲ್ಲಿ ಸ್ಥಳೀಯರಿಂದ ರಸ್ತೆ ತಡೆ
SHIVAMOGGA LIVE NEWS | 9 ಮಾರ್ಚ್ 2022 ಸಾಗರದ ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನಾಮಫಲಕ ಬದಲಾವಣೆಗೆ ಆಗ್ರಹಿಸಿ, ಸ್ಥಳೀಯರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಕೆಳದಿ ಅರಸ ಶಿವಪ್ಪನಾಯಕ ಅವರ ಹೆಸರು ಇಡಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಈ ಹೆಸರು ಘೋಷಣೆಯಾಗಿತ್ತು. ಒಂದು ವರ್ಷ ಕಳೆದರೂ ನಾಮಫಲಕ ಅಳವಡಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇನ್ನು, ಸ್ಥಳೀಯರಿಗೆ ಉದ್ಯೋಗ ಕೊಡುವುದಾಗಿ ಯಡಿಯೂರಪ್ಪ ಅವರು ಹೇಳಿದ್ದರು. ಆದರೆ … Read more