ಸಾಗರ ಪಟ್ಟಣದಲ್ಲಿ ಅಬಕಾರಿ ಅಧಿಕಾರಿಗಳ ದಿಢೀರ್ ದಾಳಿ

160721 Ganja Raid at Sagara City 1

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021 ಸಾಗರ ಪಟ್ಟಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾರಾಟಕ್ಕೆ ಇರಿಸಿದ್ದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಲ್ಲಿನ ಅರಮನೆ ಕೆರೆ ಸುಭಾಷ್ ನಗರದ ಕಟ್ಟಡವೊಂದರ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೊಹಮ್ಮದ್ ಫಾರೂಕ್ ಎಂಬಾತ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಇಟ್ಟುಕೊಂಡಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಶೋಧ ಕಾರ್ಯ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ 1.230 ಕೆ.ಜಿ ಒಣ … Read more

ಭಾರಿ ಮಳೆಗೆ ಸಾಗರದಲ್ಲಿ ಧರೆ ಕುಸಿತ, ಎರಡು ಕಡೆ ಮನೆಗಳಿಗೆ ಹಾನಿ

160721 Sagara Arehada Rain Effect 1

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021 ಭಾರಿ ಮಳೆಗೆ ಸಾಗರ ತಾಲೂಕಿನಲ್ಲಿ ಮನೆಯ ಗೋಡೆ ಮತ್ತು ಧರೆ ಕುಸಿದ ವರದಿಯಾಗಿದೆ. ತಾಲೂಕಿನ ಖಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹದ ಗ್ರಾಮದಪ್ಪಿ ಭಾರಿ ಮಳೆಗೆ ತೋಟದ ಮೇಲಿನ ಧರೆ ಕುಸಿದಿದೆ. ಅರೆಹದ ಗ್ರಾಮದ ಸರ್ವೇ ನಂ. 72ರಲ್ಲಿ ಎಂ.ಆರ್.ಸುಬ್ಬರಾವ್ ಎಂಬುವವರಿಗೆ ಸೇರಿದ ಅಡಕೆ ತೋಟದ ಮೇಲ್ಬಾಗದ ಸುಮಾರು 30 ಅಡಿ ಎತ್ತರದ ಧರೆ ಕುಸಿದಿದ್ದು. ಅಡಕೆ ಮರಗಳು ಹಾನಿಯಾಗಿವೆ. ಸುಮಾರು 35 ಅಡಿಯಷ್ಟು … Read more

ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆ

Train engine and boggies

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021 ಸಾಗರ ತಾಲೂಕು ಗುಡ್ಡೆಕೌತಿ ಬಳಿ ಮೈಸೂರು – ತಾಳಗುಪ್ಪ ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿದೆ. ರೈಲ್ವೆ ಪೊಲೀಸರು ವ್ಯಕ್ತಿಯ ಮಾಹಿತಿ ಕಲೆ ಹಾಕಿ, ಆತನ ಸಂಬಂಧಿಕರಿಗೆ ವಿಚಾರ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ನಾಗನೂರು ಬಸವರಾಜ್ (36) ಎಂದು ಗುರುತಿಸಲಾಗಿದೆ. ಸಾಗರದಲ್ಲಿ ಬಿ.ಹೆಚ್.ರಸ್ತೆಯಲ್ಲಿ ಬಸವರಾಜ್‍ ಅವರು ನಂದಿನಿ ಹಾಲಿನ ಬೂತ್ ನಡೆಸುತ್ತಿದ್ದರು. ರೈಲಿಗೆ ಸಿಲುಕಿ ಸಾವನ್ನಪ್ಪಲು ಕಾರಣವೇನು ಎಂಬುದರ ಕುರಿತು … Read more

ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ವ್ಯಕ್ತಿ ಸಾವು, ರುಂಡ, ಮುಂಡ ಬೇರೆಯಾಗಿ ಹಳಿ ಮೇಲೆ ಬಿದ್ದಿತ್ತು ಮೃತದೇಹ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 15 ಜುಲೈ 2021 ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆಯೋ ಕೊಲೆಯೊ ಅನ್ನವ ಕುರಿತು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಗರ ತಾಲೂಕಿನ ಗುಡ್ಡೆಕೌತಿ ಬಳಿಕ ರೈಲ್ವೆ ಹಳಿ ಮೇಲೆ ಘಟನೆ ಸಂಭವಿಸಿದೆ. ಸುಮಾರು 35 ವರ್ಷದ ವ್ಯಕ್ತಿಯೊಬ್ಬ ರೈಲ್ವೆ ಹಳಿ ಮೇಲೆ ಮೃತಪಟ್ಟಿದ್ದಾನೆ. ಆತನ ರುಂಡ, ಮುಂಡ ಬೇರೆಯಾಗಿದೆ. ಹಳಿ ಮೇಲೆ ಮೃತದೇಹ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. … Read more

‘ಕಾಗೋಡು ತಿಮ್ಮಪ್ಪ ಮನೆಯಲ್ಲಿ ಏಳು ವೈದ್ಯರಿದಾರೆ, ಆದರೂ ಲಸಿಕೆಗೆ ತಡವಾಗಿ ಬಂದಿದ್ದೇಕೆ?’

MLA-Haratalu-Halappa

ಶಿವಮೊಗ್ಗ ಲೈವ್.ಕಾಂ | SAGARA NEWS | 14 ಜುಲೈ 2021 ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಎರಡನೆ ಡೋಸ್ ಲಸಿಕೆ ಸಿಗದಿರುವ ಕುರಿತು ಸಾಗರ ಶಾಸಕ ಹರತಾಳು ಹಾಲಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಕಾಗೋಡು ತಿಮ್ಮಪ್ಪ ಅವರಿಗೆ ಲಸಿಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಶಾಸಕ ಹಾಲಪ್ಪ ಹೇಳಿದ್ದೇನು? ನಿನ್ನೆ ನೂರು ಡೋಸ್ ಲಸಿಕೆ ಇತ್ತು. ಆದರೆ ಕಾಗೋಡು ತಿಮ್ಮಪ್ಪ ಅವರು ಕೇಂದ್ರಕ್ಕೆ ಹೋದಾಗ ಲಸಿಕೆ ಖಾಲಿಯಾಗಿದೆ. ಸಾಮಾನ್ಯವಾಗಿ ಅವರು ಫೋನ್ ಮಾಡಿ ಹೋಗುತ್ತಿದ್ದರು. … Read more

ಮಾಜಿ ಸಚಿವರಿಗೂ ತಟ್ಟಿತು ಕರೋನ ವ್ಯಾಕ್ಸಿನ್ ಅಭಾವದ ಬಿಸಿ

111020 Kagodu Thimmappa General Image 1

ಶಿವಮೊಗ್ಗ ಲೈವ್.ಕಾಂ | SAGARA NEWS | 14 ಜುಲೈ 2021 ಕರೊನಾ ಲಸಿಕೆ ಇಲ್ಲ ಎಂಬ ಬೋರ್ಡ್ ಸಾರ್ವಜನಿಕರಿಗೆ ದರ್ಶನವಾಗುವುದು ಸಾಮಾನ್ಯ. ಆದರೆ ಮಾಜಿ ಸಚಿವರು ಕೂಡ ವ್ಯಾಕ್ಸಿನ್ ಸಿಗದೆ ಮನೆಗೆ ವಾಪಸಾಗಿದ್ದಾರೆ. ಹೌದು, ಇಂತಹ ಸನ್ನಿವೇಶ ಎದುರಾಗಿದ್ದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ. ಕರೊನಾ ಎರಡನೇ ಡೋಸ್ ಲಸಿಕೆ ತೆಗೆದು ಕೊಳ್ಳಿ ಎಂಬ ಮೊಬೈಲ್ ಸಂದೇಶ ಬಂದಿದ್ದರಿಂದ ಕೋವಿಶೀಲ್ಡ್‍ ಲಸಿಕೆ ಪಡೆಯಲು ಸಾಗರದ ದೇವರಾಜ ಅರಸು ಸಭಾಭವನಕ್ಕೆ ಕಾಗೋಡು ತಿಮ್ಮಪ್ಪ ಆಗಮಿಸಿದ್ದರು. ಆದರೆ … Read more

ನೋ ನೆಟ್​​ವರ್ಕ್​, ನೋ ವೋಟಿಂಗ್, ಗ್ರಾಮಸ್ಥರಿಂದ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರದ ವಾರ್ನಿಂಗ್

130721 Kudaruru Village No Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 13 ಜುಲೈ 2021 ಶರಾವತಿ ಹಿನ್ನೀರು ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಉಲ್ಬಣಗೊಂಡಿದೆ. ಆಕ್ರೋಶಗೊಂಡಿರುವ ಸ್ಥಳೀಯರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೆ ‘ನೋ ನೆಟ್‍ವರ್ಕ್, ನೋ ವೋಟಿಂಗ್’ ಅಭಿಯಾನ ಶುರುವಾಗಿದೆ. ಭಾರಿ ಬೆಂಬಲವು ವ್ಯಕ್ತವಾಗುತ್ತಿದೆ. ಇದು ಚುನಾವಣೆ ಸಿದ್ಧತೆ, ಟಿಕೆಟ್‍ ಪೈಪೋಟಿಗೆ ಬಿದ್ದಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ. ಹೊಸ ಕ್ಷೇತ್ರಕ್ಕೆ ತಟ್ಟಿದ ಬಿಸಿ ಸಾಗರ ತಾಲೂಕಿನಲ್ಲಿ ಕುದರೂರು ಜಿಲ್ಲಾ ಪಂಚಾಯಿತಿ … Read more

ಚಾಲಕನ ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಉರುಳಿದ ಕಾರು

130721 Car Accident At Channakoppa near anandapura 1

ಶಿವಮೊಗ್ಗ ಲೈವ್.ಕಾಂ | ANANDAPURA NEWS | 13 ಜುಲೈ 2021 ಚಾಲಕನ ನಿಯಂತ್ರಣ ತಪ್ಪಿದ ಕಾರು ಗದ್ದೆಗೆ ಉರುಳಿದೆ. ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸಾಗರದ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಕೊಪ್ಪದಲ್ಲಿ ಘಟನೆ ಸಂಭವಿಸಿದೆ. ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಚಾಲಕ ರಾಘು ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೀಡಾದ ಕಾರನ್ನು ಜೆಸಿಬಿ ಮೂಲಕ ಗದ್ದೆಯಿಂದ ಹೊರತೆಗೆಯಲಾಯಿತು. (ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ … Read more

ನಾಯಿಗಳ ದಾಳಿಯಿಂದ ಜಿಂಕೆಗೆ ಗಂಭೀರ ಗಾಯ, ಸಾವು

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 13 ಜುಲೈ 2021 ಆಹಾರ ಅರಸಿ ಬಂದಿದ್ದ ಜಿಂಕೆಯೊಂದರ ಮೇಲೆ ನಾಯಿಗಳು ದಾಳಿ ಮಾಡಿದ್ದರಿಂದ  ಗಂಭೀರ ಗಾಯಗೊಂಡಿದ್ದ ಜಿಂಕೆ ಸಾವನ್ನಪ್ಪಿದೆ. ಬ್ಯಾಕೋಡು ಸಮೀಪ ಕೋಡೂರಿನಲ್ಲಿ ಘಟನೆ ಸಂಭವಿಸಿದೆ. ಶಾಂತರಾಜು ಮತ್ತು ರಾಜು ಎಂಬುವವರ ಜಮೀನಿನ ಬಳಿಗೆ ಜಿಂಕೆ ಬಂದಿತ್ತು. ಅದನ್ನು ಗಮನಿಸಿದ ನಾಯಿಗಳು ದಾಳಿ ಮಾಡಿವೆ. ತಕ್ಷಣ ಜಮೀನು ಮಾಲೀಕರು ಜಿಂಕೆಯನ್ನು ರಕ್ಷಿಸಿ ಅರಣ್ಯಾಧಿಕಾರಿಳಿಗೆ ಮಾಹಿತಿ ನೀಡಿದ್ದರು. ಆರ್‍ಎಫ್‍ಒ ಛಾಯಾ, ಫಾರೆಸ್ಟರ್ ಪ್ರಮೋದ್‍ ಮತ್ತು ನಾಗರಾಜ್ ಅವರ ತಂಡ … Read more

ಲಾಡ್ಜ್ ಕೊಠಡಿಯಲ್ಲಿ ದಿಢೀರ್ ಬೆಂಕಿ, ಧಗಧಗ ಉರಿದ ಪೀಠೋಪಕರಣ, ಸ್ಥಳೀಯರಲ್ಲಿ ಕೆಲಕಾಲ ಆತಂಕ

120721 Fire at Kargal Hotel Sagara 1

ಶಿವಮೊಗ್ಗ ಲೈವ್.ಕಾಂ | KARGAL NEWS | 12 ಜುಲೈ 2021 ಲಾಡ್ಜ್‍ನಲ್ಲಿ ರಾತ್ರಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಕೆಲಕಾಲ ಆತಂಕಕ್ಕೀಡಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಸಾಗರ ತಾಲೂಕು ಕಾರ್ಗಲ್ ಪಟ್ಟಣದ ಲಾಡ್ಜ್ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಮೂರನೆ ಮಹಡಿಯ ಕೊಠಡಿಯೊಂದರಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಹಾಸಿಗೆ, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಇರಿಸಿದ್ದರಿಂದ ಬೆಂಕಿ ಜೋರಾಗಿ ಉರಿದಿದೆ. ಕಿಟಕಿಯಿಂದ ಬೆಂಕಿಯ ರಭಸ ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರ ನೆರವಿನಿಂದ ಪೊಲೀಸರು … Read more