ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಜನವರಿ 2022
ಡಿವೈಡರ್’ಗೆ ಬೈಕ್ ಡಿಕ್ಕಿಯಾಗಿ ಸವಾರನೊಬ್ಬನಿಗೆ ಗಾಯವಾಗಿದೆ. ಇವತ್ತು ಸಂಜೆ ಶಿವಮೊಗ್ಗದಲ್ಲಿ ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾಧಿಕಾರಿ ಕಚೇರಿ ಮುಂದಿರುವ ಡಿವೈಡರ್’ಗೆ ಬೈಕ್ ಡಿಕ್ಕಿಯಾಗಿದೆ. ಬೈಕ್’ನಲ್ಲಿ ಇಬ್ಬರು ಸವಾರರಿದ್ದರು. ನಾಗರಾಜ್ ಎಂಬ ಯುವಕನ ಕಾಲಿಗೆ ಗಂಭೀರ ಗಾಯವಾಗಿದೆ. ಮತ್ತೊಬ್ಬ ಸವಾರರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಡೇಂಜರಸ್ ಡಿವೈಡರ್
ಸವಳಂಗ ರಸ್ತೆಯಲ್ಲಿರುವ ಡಿವೈಡರ್ ಅತ್ಯಂತ ಡೇಂಜರಸ್ ಆಗಿದೆ. ಸಿಮೆಂಟ್ ಬ್ಲಾಕ್ ಮೇಲೆ ಕಬ್ಬಿಣದ ಡಿವೈಡರ್ ಅಳವಡಿಸಲಾಗಿದೆ. ನಿರ್ವಹಣೆ ಕೊರತೆಯಿಂದ ಈ ಕಬ್ಬಿಣಡ ಡಿವೈಡರ್’ಗಳು ಕುಸಿದು ರಸ್ತೆಗೆ ಬೀಳುತ್ತಿವೆ. ರಾತ್ರಿ ವೇಳೆ ವಾಹನ ಚಾಲಕರಿಗೆ ಈ ಡಿವೈಡರ್ ಕಾಣದೆ ಅಪಘಾತ ಸಂಭವಿಸುತ್ತಿವೆ.
ಬೈಕ್ ಸವಾರ ನಾಗರಾಜ್ ತೊಡೆ ಭಾಗಕ್ಕೆ ಗಂಭೀರ ಗಾಯವಾಗಲು ಈ ಕಬ್ಬಿಣದ ಡಿವೈಡರ್ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.