ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 31 MAY 2023
SHIMOGA : ಮನೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ, ನಗದು ಕಳ್ಳತನ ಪ್ರಕರಣನ್ನು ಭೇದಿಸಿರುವ ಪೊಲೀಸರು, ದೂರು ಕೊಟಿದ್ದ ಮಹಿಳೆಯ ಸೊಸೆ (Daughter In Law) ಮತ್ತು ಆಕೆಯ ಪರಿಚಯಸ್ಥನನ್ನು ಬಂಧಿಸಿದ್ದಾರೆ. ಅವರಿಂದ ಚಿನ್ನಾಭರಣ, ನಗದು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ತಾಲೂಕು ಮಳಲಕೊಪ್ಪದ ಹೇಮಾವತಿ (23) ಮತ್ತು ಆಕೆಯ ಪರಿಚಯಸ್ಥ ಸತೀಶ್ (22) ಎಂಬುವವರನ್ನು ಬಂಧಿಸಲಾಗಿದೆ. ಮಳಲಕೊಪ್ಪದ ರೇಣುಕಮ್ಮ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು ಎಂದು ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಪ್ರಕರಣ?
ರೇಣುಕಮ್ಮ ಅವರ ಮನೆಯ ಬೀರುವಿನಲ್ಲಿಟ್ಟಿದ್ದ ಬಂಗಾರದ ಆಭರಣ, ನಗದು ಕಳ್ಳತನವಾಗಿತ್ತು. ಮೇ 13ರಂದು ಈ ಸಂಬಂಧ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಇದು ವೃತ್ತಿಪರ ಕಳ್ಳರ ಕೃತ್ಯವಲ್ಲ ಎಂಬುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆ ಮನೆಯವರನ್ನು ತನಿಖೆ ನಡೆಸಿದಾಗ ದೂರು ನೀಡಿದ್ದ ರೇಣುಕಮ್ಮಳ ಸೊಸೆ (Daughter In Law) ಹೇಮಾವತಿ ಸಿಕ್ಕಿಬದ್ದಿದ್ದಾಳೆ. ಆಕೆಯ ಪರಿಚಯಸ್ಥ ಸತೀಶ್ ಕೂಡ ಬಂಧನಕ್ಕೊಳಗಾಗಿದ್ದಾನೆ.
ಇದನ್ನೂ ಓದಿ – ಗಂಡ, ಹೆಂಡತಿ ಜಗಳ, ಸಮಾಧಾನ ಮಾಡಲು ಬಂದಿದ್ದ ಸ್ನೇಹಿತೆಯರಿಗೆ ಚಾಕುವಿನಿಂದ ಹಲ್ಲೆ
ಬಂಧಿತರಿಂದ 4.30 ಲಕ್ಷ ರೂ. ಮೌಲ್ಯದ 90 ಗ್ರಾಂ ಆಭರಣ, 2050 ರೂ. ನಗದು ವಶಕ್ಕೆ ಪಡೆಯಲಾಗಿದೆ. ತುಂಗಾ ನಗರ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್, ಸಬ್ ಇನ್ಸ್ಪೆಕ್ಟರ್ ರಾಜುರೆಡ್ಡಿ ಬೆನ್ನೂರು, ಕುಮಾರ್ ಕುರಗುಂದ, ಎಎಸ್ಐ ಮನೋಹರ್, ಸಿಬ್ಬಂದಿ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಪಿಸಿ ನಾಗಪ್ಪ, ಹರೀಶ್ ನಾಯ್ಕ, ಲಂಕೇಶ್, ಕಾಂತರಾಜ್, ಅರಿಹಂತ, ಹರೀಶ್, ಸಂತೋಷ್, ರಮೇಶ್, ಶಿವಕುಮಾರ್, ರಾಘವೇಂಧ್ರ, ಜಯಪ್ಪ ತನಿಖಾ ತಂಡದಲ್ಲಿದ್ದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ