ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 DECEMBER 2022
ನಕಲಿ ದಾಖಲೆ ನೀಡಿ ಬ್ಯಾಂಕಿನಿಂದ ಲಕ್ಷ ಲಕ್ಷ ಸಾಲ
ಶಿವಮೊಗ್ಗ : ನಕಲಿ ದಾಖಲೆಗಳನ್ನು (fake documents) ಒದಗಿಸಿ ಕೆನರಾ ಬ್ಯಾಂಕಿನಿಂದ ಲಕ್ಷ ಲಕ್ಷ ರೂ. ಸಾಲ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಬ್ಯಾಂಕಿನ ಶೇಷಾದ್ರಿಪುರಂ ಬ್ರಾಂಚ್ ಮ್ಯಾನೇಜರ್ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗೋಪಾಳದಲ್ಲಿ ನಿವೇಶನ ಖರೀದಿಸಿ, ಮನೆ ಕಟ್ಟುವ ಸಲುವಾಗಿ 16 ಲಕ್ಷ ರು. ಸಾಲ ಪಡೆಯಲಾಗಿದೆ. ಇದಕ್ಕಾಗಿ ಆರೋಪಿಗಳು ನಕಲಿ ದಾಖಲೆಗಳನ್ನು ಒದಗಿಸಿದ್ದಾರೆ. ಈಗ ಸಾಲದ ಹಣವನ್ನು ಬ್ಯಾಂಕಿಗೆ ಕಟ್ಟಿಲ್ಲ ಎಂದು ಬ್ಯಾಂಕ್ ವ್ಯವಸ್ಥಾಪಕರು ಆರೋಪಿಸಿ ದೂರು ನೀಡಿದ್ದಾರೆ. ಶಿವಕುಮಾರ್ ಮತ್ತು ಪುಷ್ಪಾ ಎಂಬುವವರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
(fake documents)
ಮದ್ಯಪಾನಕ್ಕೆ ಅವಕಾಶ, ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಕೇಸ್
ಭದ್ರಾವತಿ : ರಸ್ತೆಯಲ್ಲಿ ಮದ್ಯಪಾನಕ್ಕೆ ಅವಕಾಶ ಕಲ್ಪಿಸಿದ ಕಿರಾಣಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಭದ್ರಾವತಿ ತಾಲೂಕು ಕಲ್ಲಹಳ್ಳಿಯ ಹಳ್ಳೀಕೆಟ್ಟೆ ಬಳಿ ರಸ್ತೆಯಲ್ಲಿ ಮದ್ಯಪಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದು ಆರೋಪಿಸಲಾಗಿದೆ. ವರದರಾಜ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
(fake documents)
ಟ್ರಾಕ್ಟರ್ ಡಿಕ್ಕಿ, ನಡೆದು ಹೋಗುತ್ತಿದ್ದ ವ್ಯಕ್ತಿ ಸಾವು
ಭದ್ರಾವತಿ : ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಟ್ರಾಕ್ಟರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಸಯ್ಯದ್ ದಸ್ತಗೀರ್ (45) ಮೃತ ದುರ್ದೈವಿ. ಕೂಲಿ ಕೆಲಸಕ್ಕೆ ತೆರಳಲು ಸಯ್ಯದ್ ದಸ್ತಗೀರ್ ಅವರು ಜಟ್ ಪಟ್ ನಗರದ ಕೆರೆ ಏರಿ ಮೇಲೆ ನಡೆದು ಹೋಗುತ್ತಿದ್ದರು. ಆಗ ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಟ್ರಾಕ್ಟರ್ ಚಾಲಕ ಟ್ರಾಕ್ಟರ್ ನಿಲ್ಲಿಸದೆ ಪರಾರಿಯಾಗಿದ್ದಾನೆ. ಸಯ್ಯದ್ ದಸ್ತಗೀರ್ ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೆ ಅವರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ಹೊತ್ತಿಗಾಗಲೆ ಸಯ್ಯದ್ ದಸ್ತಗೀರ್ ಕೊನೆಯುಸಿರೆಳೆದಿದ್ದರು. ಭದ್ರಾವತಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ALSO READ – ಆಸ್ಪತ್ರೆ ಟಾಯ್ಲೆಟ್ನಿಂದ ಹೊರಬಂದು ಕೈದಿಯ ರಂಪಾಟ, ಚೆಕ್ ಮಾಡುವಾಗ ಕೆಳಗೆ ಬಿತ್ತು ಪೊಟ್ಟಣ, FIR ದಾಖಲು