SHIVAMOGGA LIVE NEWS | 16 MAY 2023
SHIMOGA : ದೇವಸ್ಥಾನದ ಹುಂಡಿ ಒಡೆದು (Hundi Theft) ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ಜಾತ್ರೆ ಮುಗಿದ ರಾತ್ರಿಯೇ ಹುಂಡಿ ಒಡೆಯಲಾಗಿದೆ. ಪಿಳ್ಳಂಗೆರೆಯ ಪುರಾಣ ಪ್ರಸಿದ್ಧ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವರ ದೇವಸ್ಥಾನದಲ್ಲಿ ಘಟನೆ ನಡೆದಿದೆ.
ಸೋಮವಾರ ರಾತ್ರಿ ಶ್ರೀ ವೆಂಕಟರಮಣ ಮತ್ತು ಹನುಮಂತ ದೇಸ್ಥಾನದೊಳಗೆ ನುಗ್ಗಿರುವ ಕಳ್ಳರು, ಹುಂಡಿ (Hundi Theft) ಒಡೆದಿದ್ದಾರೆ. ದೇಗುಲದ ಆವರಣದ ಹೊರಾಂಗಣದಲ್ಲಿರುವ ಹುಂಡಿ ಕಳ್ಳತನ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಾತ್ರೆ ಮರುದಿನವೇ ಕಳ್ಳತನ
ಪಿಳ್ಳಂಗೆರೆ ದೇವಸ್ಥಾನದಲ್ಲಿ ಸೋಮವಾರ ರಥೋತ್ಸವ ನಡೆಯಿತು. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಜಾತ್ರೆಯಲ್ಲಿ ಪಾಲ್ಗೊಂಡ ರಥೋತ್ಸವ ಕಣ್ತುಂಬಿಕೊಂಡಿದ್ದರು. ರಥೋತ್ಸವ ಮುಗಿದ ರಾತ್ರಿಯೇ ಕಳ್ಳರು ದೇಗುಲದೊಳಗೆ ನುಗ್ಗಿ ಹುಂಡಿ ಕಳ್ಳತನ ಮಾಡಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಹಿಂದೆಯೂ ಕಳ್ಳತನವಾಗಿತ್ತು
ಪಿಳ್ಳಂಗೆರೆ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವರ ದೇವಸ್ಥಾನದಲ್ಲಿ ಹುಂಡಿ ಒಡೆದು ಕಳ್ಳತನ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಇಂತಹ ಕೃತ್ಯ ನಡೆದಿದೆ. ಒಮ್ಮೆ ದೇವರ ಮೂರ್ತಿ ಮೇಲಿದ್ದ ಬಟ್ಟೆಗೆ ಬೆಂಕಿ ಹಾಕಿ, ಅದೇ ಬೆಳಕಿನಲ್ಲಿ ಹುಂಡಿ ಕಳವು ಮಾಡಿದ್ದರು. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಇಲ್ಲ, ಸಿಸಿಟಿವಿ ಕಣ್ಗಾವಲು ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ – ಮಧ್ಯರಾತ್ರಿ 12.30ಕ್ಕೆ ಮಾಜಿ ಸಚಿವ ಈಶ್ವರಪ್ಪಗೆ ಮಿಸ್ಡ್ ಕಾಲ್, ಎಸ್ಪಿಗೆ ದೂರು, ಎಲ್ಲಿಂದ ಬಂದಿತ್ತು ಫೋನ್?
ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.