ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 27 ನವೆಂಬರ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
NEWS 1 | ಪ್ರಿ ಮಿಲಿಟರಿ ತರಬೇತಿಗೆ ಅರ್ಜಿ ಆಹ್ವಾನ
ಸಮಾಜ ಕಲ್ಯಾಣ ಇಲಾಖೆಯು ಬೆಂಗಳೂರಿನ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಸಹಯೋಗದೊಂದಿಗೆ 2019-20ನೇ ಸಾಲಿಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿಯುತ ಪ್ರಿ-ಮಿಲಿಟರಿ ತರಬೇತಿಯನ್ನು ನೀಡಲು ಉದ್ದೇಶಿಸಿದ್ದು, ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ನಮೂನೆಯ ಅರ್ಜಿಯನ್ನು www.sw.kar.nic.inನಲ್ಲಿ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ನಿಗದಿಪಡಿಸಿದ ಅವಧಿಯೊಳಗಾಗಿ ಇ-ಮೇಲ್ ಐಡಿ [email protected], ಸಲ್ಲಿಸಲು ಸೂಚಿಸಿದೆ. ಮಾಹಿತಿಗಾಗಿ ಶಿವಮೊಗ್ಗದ ಉಪನಿರ್ದೇಶಕರ ಕಚೇರಿ ಅಥವಾ ಆಯಾ ತಾಲೂಕಿನ ಸಹಾಯಕ ನಿರ್ದೆಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆಗಳಲ್ಲಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-249241ನ್ನು ಸಂಪರ್ಕಿಸಬಹುದು.
NEWS 2 | ಆಯುಧ ಪರವಾನಿಗೆ ನವೀಕರಿಸಿಕೊಳ್ಳಲು ಸೂಚನೆ
ಆಯುಧ ಪರವಾನಿಗೆಗಳ ಅವಧಿ ಪೂರ್ಣಗೊಳ್ಳುವ ಪ್ರತಿಯೊಂದು ಪರವಾನಿಗೆಗಳನ್ನು ಪರವಾನಿಗೆ ಪ್ರಾಧಿಕಾರವು ನವೀಕರಣ ಮಾಡಬೇಕಾಗಿದೆ. ನಿಯಮಗಳನ್ವಯ ಪರವಾನಿಗೆದಾರರು ನಿಗದಿತ ನಮೂನೆಯಲ್ಲಿ ಅರ್ಜಿ ನವೀಕರಣಕ್ಕಾಗಿ ಎರಡು ತಿಂಗಳ ಮುಂಚಿತವಾಗಿ ಸಲ್ಲಿಸಬೇಕು. ಪರವಾನಿಗೆಗೆ ಒಳಪಟ್ಟ ಆಯುಧವು ಪರವಾನಿಗೆದಾರರ ಬಳಿಯಲ್ಲಿಯೇ ಇರುತ್ತದೆಂದು ಖಚಿತಪಡಿಸಿಕೊಳ್ಳಲು ಹಾಗೂ ಸಮಾಜಘಾತುಕ ವ್ಯಕ್ತಿಗಳ ವಶವಾಗಬಾರದೆಂಬ ಉದ್ದೇಶದಿಂದ ಆಯುಧ ಪರವಾನಿಗೆದಾರರು ಹೊಂದಿರುವ ಆಯುಧಗಳನ್ನು ಪರಿಶೀಲನೆ ಮಾಡಿ, ವಾಸಸ್ಥಳದಲ್ಲಿ ನೆಲೆಸಿರುವ ವಿವರಗಳೊಂದಿಗೆ ಪೊಲೀಸ್ ಅಧೀಕ್ಷಕರಿಂದ ವರದಿ ಪಡೆಯಬೇಕಾಗಿರುತ್ತದೆ.
ಆದ್ದರಿಂದ ಡಿಸೆಂಬರ್ 31ರಂದು ಆಯುಧ ಪರವಾನಿಗೆಗಳ ಅವಧಿ ಪೂರ್ಣಗೊಳ್ಳುವ ಜಿಲ್ಲೆಯ ಪರವಾನಿಗೆದಾರರು ಎರಡು ತಿಂಗಳ ಮುಂಚಿತವಾಗಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ ಹಾಗೂ ಸಂಬಂಧಿಸಿದ ದಾಖಲೆಗಳೊಂದಿಗೆ ಪರವಾನಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ತಪ್ಪಿದಲ್ಲಿ ಅಂತಹ ಪರವಾನಿಗೆಯನ್ನು ಅಮಾನತ್ತುಪಡಿಸುವ ಬಗ್ಗೆ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Application has been called for pre military training in Shimoga. Deputy Commissioner of Shimoga Shivakumar has advised to get license renewal for guns.