ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಜನವರಿ 2022
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಜಿಲ್ಲೆಯಲ್ಲಿ ಕೊರೋನ ನಿಯಂತ್ರಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಯಿತು.
ಈ ವೇಳೆ ಶಾಲೆಗಳಿಗೆ ರಜೆ ನೀಡುವ ಸಂಬಂಧ ಮಹತ್ವದ ಚರ್ಚೆ ನಡೆಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ನಿರ್ಣಯಗಳನ್ನು ತಿಳಿಸಿದರು.
ಏನೆಲ್ಲ ನಿರ್ಣಯ ಕೈಗೊಳ್ಳಲಾಯಿತು?
♦ ‘ಕೋವಿಡ್ ರೂಪಾಂತರಿ ವೈರಸ್ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ ಎಂಬ ಅಭಿಪ್ರಾಯವಿಲ್ಲ. ಶಾಲೆಗಳಿಗೆ ಮೂರು ದಿನ ರಜೆ ಘೋಷಣೆ ಮಾಡಿದ್ದರಿಂದ ಸೋಂಕು ಹರಡುವುದು ನಿಯಂತ್ರಣದಲ್ಲಿದೆ.’
♦ ‘ಮಕ್ಕಳಿಗೆ ಸೋಂಕು ಹರಡುವುದನ್ನು ತಡೆಯಲು ಶಿವಮೊಗ್ಗ ನಗರದ ಶಾಲೆಗಳಿಗೆ ಮೂರು ದಿನ ರಜೆ ಘೋಷಿಸಲಾಗಿತ್ತು. ಸೋಮವಾರದಿಂದ ಶಾಲೆಗಳು ಪುನಾರಂಭವಾಗಲಿವೆ. ಆದರೆ ಕೆಲವು ಶಾಲೆಗಳಿಗೆ ರಜೆ ಅಗತ್ಯವಿದೆ ಎಂದು ತಿಲಿಸಿದ್ದಾರೆ. ಅಂತಹ ಶಾಲೆಗಳಿಗೆ ರಜೆ ಘೋಷಿಸಲಾಗುತ್ತದೆ.’
♦ ‘ಯಾವೆಲ್ಲ ಶಾಲೆಗಳಿಗೆ ರಜೆ ಅಗತ್ಯವಿದೆ ಅನ್ನುವ ಕುರಿತು ಸಂಜೆ ವೇಳೆಗೆ ನಿರ್ಧಾರವಾಗಲಿದೆ. ಸಂಜೆ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಆ ಶಾಲೆಗಳು ಮೂರು ದಿನ ಮಾತ್ರ ರಜೆ ಮಾಡಬೇಕು.’
♦ ‘ಕೆಲವು ಶಾಲೆಗಳ ಆಡಳಿತ ಮಂಡಳಿಯವರು ಸ್ವಯಂ ಪ್ರೇರಿತವಾಗಿ ರಜೆ ಘೋಷಣೆ ಮಾಡುತ್ತಿದ್ದಾರೆ. ಅದು ಕಾನೂನು ಬಾಹಿರ. ರಜೆ ಅಗತ್ಯವಿರುವ ಶಾಲೆಗಳು ಜಿಲ್ಲಾಧಿಕಾರಿ ಅವರ ಅನುಮತಿ ಪಡೆಯುವುದು ಕಡ್ಡಾಯ.’
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

LATEST NEWS
- ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್, 19 ಅಕೌಂಟ್, 25 ATM ಕಾರ್ಡ್, ₹55 ಕೋಟಿ ನಷ್ಟ, ಏನಿದು ಕೇಸ್?

- ಭದ್ರಾವತಿಯಲ್ಲಿ ಸಬ್ ಇನ್ಸ್ಪೆಕ್ಟರ್ಗಳ ಕಾಲಿನ ಮೂಳೆ, ಕೈ ಬೆರಳು ಕಟ್, ಆರೋಪಿ ಕಾಲಿಗೆ ಗುಂಡೇಟು

- ಶಿವಮೊಗ್ಗ ಜಿಲ್ಲೆಯಲ್ಲಿ ಮೈ ಸುಡುವ ಬಿಸಿಲಿನ ಜೊತೆಗೆ ಮೈ ನಡುಗಿಸುವ ಚಳಿ, ಇವತ್ತಿನ ಹವಾಮಾನ ವರದಿ

- ಶಿವಮೊಗ್ಗ ತಾಲೂಕಿನ ಹಲವೆಡೆ ಫೆಬ್ರವರಿ 8, 9 ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ನಂಜಪ್ಪ ಆಸ್ಪತ್ರೆಯಲ್ಲಿ ನಡುರಾತ್ರಿ ಚಿರತೆಗೆ ಸ್ಕ್ಯಾನಿಂಗ್, ಏನಿದು? ಹೇಗೆ ನಡೆಯಿತು ಪ್ರಕ್ರಿಯೆ?

About The Editor
ನಿತಿನ್ ಆರ್.ಕೈದೊಟ್ಲು






