ಶಿವಮೊಗ್ಗ ಲೈವ್.ಕಾಂ | SHIMOGA | 27 ಏಪ್ರಿಲ್ 2020
ಒಂದು ತಿಂಗಳ ಬಳಿಕ ಗಾಂಧಿ ಬಜಾರ್‌ನಲ್ಲಿ ಮತ್ತೊಮ್ಮೆ ವಹಿವಾಟು ಆರಂಭವಾಗಿದೆ. ದಿನಸಿ ಮತ್ತು ಅಗತ್ಯ ವಸ್ತುಗಳ ಖರೀದಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಾಕ್‍ಡೌನ್ ಆರಂಭವಾದಾಗ ಗಾಂಧಿ ಬಜಾರ್‌ನಲ್ಲಿ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆ ಗಾಂಧಿ ಬಜಾರ್‌ನಲ್ಲೂ ಕೆಲವು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಸಾಮಾಜಿಕ ಅಂತರದಲ್ಲಿ ವ್ಯಾಪಾರ
ಗಾಂಧಿ ಬಜಾರ್‌ನಲ್ಲಿ ದಿನಸಿ ಅಂಗಡಿಗಳನ್ನು ತೆರೆಯಲಾಗಿದೆ. ಸಾಮಾಜಿಕ ಅಂತರದ ಬಾಕ್ಸ್ ಹಾಕಲಾಗಿದೆ. ಆ ಬಾಕ್ಸ್‌ಗಳಲ್ಲಿಯೇ ನಿಂತು ಜನರು ಅಗತ್ಯ ವಸ್ತುಗಳ ಖರೀದಿ ಮಾಡುತ್ತಿದ್ದಾರೆ.
ತರಕಾರಿ, ಹೂವು, ಹಣ್ಣು ವ್ಯಾಪಾರ ಜೋರು
ಇನ್ನು, ನಗರದ ವಿವಿಧೆಡೆ ತರಕಾರಿ, ಹೂವು, ಹಣ್ಣು ವ್ಯಾಪಾರ ನಡೆಯುತ್ತಿದೆ. ಎಂಕೆಕೆ ರೆಸ್ತೆಯ ಸಿದ್ದಯ್ಯ ಸರ್ಕಲ್‍ನಲ್ಲಿ ತರಕಾರಿ, ಹೂವು, ಹಣ್ಣು ವ್ಯಾಪಾರ ನಡೆಯುತ್ತಿದೆ. ಆದರೆ ಜಿಲ್ಲಾಡಳಿತ ಸೂಚಿಸಿದಂತೆ ಸಾಮಾಜಿಕ ಅಂತರವಿಲ್ಲ, ಮಾಸ್ಕ್‍ಗಳು ಕೂಡ ಕಾಣಿಸುವುದಿಲ್ಲ.
ನೆಹರೂ ರೋಡ್, ದುರ್ಗಿಗುಡಿ ಕ್ಲೋಸ್
ಶಿವಮೊಗ್ಗ ನಗರದ ವಿವಿಧೆಡೆ ನಿರ್ಬಂಧ ಮುಂದುವರೆದಿದೆ. ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳು ಬಂದ್ ಆಗಿವೆ. ಅಗತ್ಯ ವಸ್ತುಗಳ ವ್ಯಾಪಾರ ಮಾಡುವ ಅಂಗಡಿ ಬಾಗಿಲುಗಳು ಮಾತ್ರ ತೆಗೆಯಲಾಗಿದೆ. ತಳ್ಳುಗಾಡಿಯಲ್ಲಿ ಹೂವು, ಹಣ್ಣು, ತರಕಾರಿ ವ್ಯಾಪಾರ ಮುಂದುವರೆದಿದೆ.
ಮುಂದುವರೆದ ಸೆಕ್ಟರ್ ಲಾಕ್‍ಡೌನ್
ಅನಗತ್ಯವಾಗಿ ಸುತ್ತಾಡುವವರನ್ನು ನಿರ್ಬಂಧಿಸುವ ಸಲುವಾಗಿ ಶಿವಮೊಗ್ಗ ನಗರದಲ್ಲಿ ಸೆಕ್ಟರ್ ವೈಸ್ ಲಾಕ್‍ಡೌನ್ ಮುಂದುವರೆದಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಆದರೂ ಬೈಕು, ಕಾರಿನಲ್ಲಿ ಸುತ್ತಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]