ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 3 MAY 2024
SHIMOGA : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಬರಣ ಕಳ್ಳತನ ಪ್ರಕರಣ ಮತ್ತೆ ಶುರುವಾಗಿದೆ. ಶಿವಮೊಗ್ಗ ನಿಲ್ದಾಣದ ದಾವಣಗೆರೆ ಪ್ಲಾಟ್‌ಫಾರಂನಲ್ಲಿ ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್ ಜಿಪ್ ತೆಗೆದು ಒಳಗೆ ಚಿನ್ನಾಭರಣ ಇದ್ದ ಬ್ಯಾಗ್ ಕಳವು ಮಾಡಲಾಗಿದೆ.
ಕಳ್ಳತನ ಆಗಿದ್ದು ಹೇಗೆ?
ಶಿವಮೊಗ್ಗದ ಜೆಸಿ ನಗರದ ಶಿಲ್ಪಾ ಎಂಬುವವರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ದಾವಣಗೆರೆ ಪ್ಲಾಟ್‌ಫಾರಂನಿಂದ ಬಸ್ ಹತ್ತುವಾಗ ಘಟನೆ ಸಂಭವಿಸಿದೆ. ರಶ್ ಇದ್ದಿದ್ದರಿಂದ ಶಿಲ್ಪಾ ಅವರ ಪತಿ ಬಸ್ ಹತ್ತಿ ಸೀಟ್ ಹಿಡಿದಿದ್ದರು. ಮಕ್ಕಳೊಂದಿಗೆ ಬಸ್ ಹತ್ತಿದ ಶಿಲ್ಪಾ, ತಮ್ಮ ಸಹೋದರನಿಗೆ ಕರೆ ಮಾಡಲು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೊಬೈಲ್ ತೆಗೆಯಲು ಮುಂದಾದರು. ಆಗ ವ್ಯಾನಿಟಿ ಬ್ಯಾಗ್ ಜಿಪ್ ತೆರೆದಿತ್ತು.
ಬ್ಯಾಗಿನೊಳಗಿದ್ದ ಬ್ಯಾಗ್ ನಾಪತ್ತೆ
ವ್ಯಾನಿಟಿ ಬ್ಯಾಗಿನೊಳಗೆ ಇದ್ದ ಮತ್ತೊಂದು ಬ್ಯಾಗ್ ನಾಪತೆಯಾಗಿತ್ತು. ಅದರಲ್ಲಿ 1.18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇತ್ತು. ರಶ್ ಇದ್ದಾಗ ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್ ಜಿಪ್ ತೆಗೆದು ಚಿನ್ನಾಭರಣವಿದ್ದ ಬ್ಯಾಗ್ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಸಾಂಪ್ರದಾಯಿಕ ಉಡುಪು ತೊಟ್ಟು ಶಿವಮೊಗ್ಗ ಸಿಟಿಯಲ್ಲಿ ಅಧಿಕಾರಿಗಳ ಮೆರವಣಿಗೆ, ಹೇಗಿತ್ತು? ಕಾರಣವೇನು?
LATEST NEWS
- ಮಾರ್ಚ್ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

- ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

- ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

- ಮಾಜಿ ಮಿನಿಸ್ಟರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

About The Editor
ನಿತಿನ್ ಆರ್.ಕೈದೊಟ್ಲು
















