ರಾಜಕಾರಣಿಗಳ ಜೊತೆ ಫೋಟೊ ತೆಗೆಸಿಕೊಳ್ಳುವುದು ನಿಲ್ಲಬೇಕು, ಶಿವಮೊಗ್ಗದಲ್ಲಿ ಕಾರಣ ಬಿಚ್ಚಿಟ್ಟ ಮಾಜಿ ಐಪಿಎಸ್ ಅಧಿಕಾರಿ

Published On : ಜನವರಿ 10, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS |10 JANUARY 2023

ಶಿವಮೊಗ್ಗ : ದರ್ಬಲ ಸರ್ಕಾರಗಳಷ್ಟೆ ಹುಳ, ಹುಪ್ಪಟೆಗಳ ಸಹಕಾರ ಪಡೆಯುತ್ತವೆ. ಜನರಿಗೆ ಉತ್ತರ ಕೊಡಬೇಕಾದ ಸರ್ಕಾರಗಳು ಎಂದಿಗು ರೌಡಿಗಳ ಸಹಾಯ ಪಡೆಯುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. (Photo)

Former-IPS-Officer-AAP-Leader-Bhaskar-Rao-visit-Shimoga

ಸುದ್ದಿಗೋಷ್ಠಿಯಲ್ಲಿ ಸ್ಯಾಂಟ್ರೋ ರವಿ ಪ್ರಕರಣ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಭಾಸ್ಕರ್ ರಾವ್ ಉತ್ತರಿಸಿದರು. ಜನರಿಗಷ್ಟೆ ಉತ್ತರ ನೀಡಬೇಕಾದ ಸರ್ಕಾರ ಇಂತಹವರ ಸಹಕಾರ ಪಡೆಯುವುದಿಲ್ಲ ಎಂದರು.

Shimoga Live News Update 3 Million Views

ಸ್ಯಾಂಟ್ರೋ ರವಿ ಒಬ್ಬ ಕಾಮುಕ ವ್ಯಾಪಾರಿ. ಪ್ರವೀಣ್ ಸೂದ್ ಅವರು ಆತನ ವಿರುದ್ಧ ಮೈಸೂರಿನಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ನಾವು ಆತನ ವಿರುದ್ಧ ಕೇಸ್ ಹಾಕಿದ್ದೆವು ಎಂದು ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗಕ್ಕೆ ಬರಲಿದ್ದಾರೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ಫೋಟೊಗಳಿಗೆ ನಿರ್ಬಂಧ ಹೇರಬೇಕಿದೆ

ರಾಜಕಾರಣಿಗಳ ಜೊತೆಗೆ ಫೋಟೊ (Photo)ತೆಗೆಸಿಕೊಳ್ಳುವುದಕ್ಕೆ ನಿಯಂತ್ರಣ ಹೇರಬೇಕಿದೆ. ಕೆಲವರು ರಾಜಕಾರಣಿಗಳ ಜೊತೆಗೆ ಫೋಟೊ ತೆಗಿಸಿಕೊಂಡು, ತಾವು ಅವರೊಂದಿಗೆ ಆಪ್ತರು ಎಂದು ಬಿಂಬಿಸಿಕೊಳ್ಳುತ್ತಾರೆ. ಬಳಿಕ ಜನರಿಗೆ ವಂಚಿಸುತ್ತಾರೆ. ಬೆಂಗಳೂರಿನಲ್ಲಿ ಇಂತಹ ಹಲವು ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 10, 2023

Leave a Comment