ಮಲವಗೊಪ್ಪ ಸಮೀಪ ಜಮೀನಿನಲ್ಲಿ ನಿತ್ರಾಣಗೊಂಡಿದ್ದ ನವಿಲು ರಕ್ಷಣೆ

Pecock-rescued-in-Malavagoppa-Shimoga.

SHIVAMOGGA LIVE NEWS | 13 ಮಾರ್ಚ್ 2022 ಕಾಲಿಗೆ ಗಾಯವಾಗಿ, ನಿತ್ರಾಣಗೊಂಡಿದ್ದ ನವಿಲೊಂದನ್ನು ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ಕೊಟ್ಟು, ರಕ್ಷಣೆ ಮಾಡಿದ್ದಾರೆ. ಮಲವಗೊಪ್ಪದ ಕಾಂತರಾಜು ಎಂಬುವವರ ತೋಟದ ಬಳಿ ನಿತ್ರಾಣ ಸ್ಥಿತಿಯಲ್ಲಿದ್ದ ನವಿಲು ಸಿಕ್ಕಿದೆ. ಸ್ಥಳೀಯರು ನೀಡಿದ ಮಾಹಿತಿ ಅಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ನವಿಲಿಗೆ ಚಿಕಿತ್ಸೆ ನೀಡಿದ್ದಾರೆ. ಕಾಲಿಗೆ ಗಾಯವಾಗಿದ್ದರಿಂದ ನಿತ್ರಾಣಗೊಂಡಿತ್ತು ಎಂದು ತಿಳಿದು ಬಂದಿದೆ. ಮಲವಗೊಪ್ಪ ಸಮೀಪ ಮೇಯಲು ಬಂದಾಗ ಕಾಲಿಗೆ ಗಾಯವಾಗಿರುವ ಸಾದ್ಯತೆ … Read more

ಮುಕ್ತ ವಿವಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಅರ್ಜಿ ಆಹ್ವಾನ

shivamogga graphics map

SHIVAMOGGA LIVE NEWS | 13 ಮಾರ್ಚ್ 2022 ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿ.ಜಿ.ಡಿಪ್ಲೋಮಾ ಕೋರ್ಸ್’ಗಳ ಪ್ರವೇಶಾತಿ ಪ್ರಾರಂಭವಾಗಿದೆ. ಬಿಎ, ಬಿ.ಕಾಂ, ಬಿ.ಎಸ್ಸಿ, ಬಿ.ಎಲ್, ಐಎಸ್ಸಿ ಪದವಿ ಹಾಗೂ ಎಂ.ಎ, ಎಂ.ಕಾಂ, ಎಂ.ಎಲ್, ಐಎಸ್ಸಿ ಮತ್ತು ಎಂ.ಎಸ್ಸಿ ಸ್ನಾತಕೋತ್ತರ ಪದವಿ ಹಾಗೂ ಪಿ.ಜಿ.ಡಿಪ್ಲೊಮಾ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶಾತಿ ಪಡೆಯಲು ಮಾ.31 ಕೆಡೆಯ ದಿನವಾಗಿದೆ. ವಿದ್ಯಾರ್ಥಿಗಳು ಪ್ರವೇಶಾತಿ ಅರ್ಜಿಗಳನ್ನು ನೇರವಾಗಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಭರ್ತಿ … Read more

ಭದ್ರಾವತಿಯಲ್ಲಿ ಟೈರ್ ಸ್ಪೋಟಗೊಂಡು ಬೈಕುಗಳಿಗೆ ಡಿಕ್ಕಿ ಹೊಡೆದ ಕಾರು

Car-Accident-at-Bhadravathi.

SHIVAMOGGA LIVE NEWS | 13 ಮಾರ್ಚ್ 2022 ಕಾರಿನ ಟೈರ್ ಸ್ಪೋಟಗೊಂಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಭದ್ರಾವತಿಯಲ್ಲಿ ಸಂಭವಿಸಿದೆ. ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಇಲ್ಲಿ ಭವಾನಿ ಹೊಟೇಲ್ ಸಮೀಪ ಘಟನೆ ನಡೆದಿದೆ. ಕಾರಿನ ಟೈರ್ ಸ್ಪೋಟಗೊಂಡಿದ್ದರಿಂದ ಚಾಲಕಿಯ ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿಯಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕುಗಳಿಗೆ ಹಾನಿಯಾಗಿದೆ. ಭದ್ರಾವತಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ ಈ ಮೇಲ್ – … Read more

ಶಿವಮೊಗ್ಗದ ಮೊದಲ ಎಫ್.ಎಂ ರೇಡಿಯೋ ಆರಂಭ, ಹೇಗಿದೆ ಸ್ಟೂಡಿಯೋ? ಏನೆಲ್ಲ ಕಾರ್ಯಕ್ರಮ ಪ್ರಸಾರವಾಗುತ್ತೆ?

Radio-Shivamogga-FM-Report-exclusive

SHIVAMOGGA LIVE NEWS | 13 ಮಾರ್ಚ್ 2022 ದಶಕದಿಂದ ಮಲೆನಾಡಿಗೊಂದು ಎಫ್.ಎಂ. ರೇಡಿಯೋ ಬೇಕು ಎಂಬ ಬೇಡಿಕೆ ಇತ್ತು. ಜನರ ಬೇಡಿಕೆ ತಣಿಸುವ ಸಲುವಾಗಿ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಕೊಡುಗೆಯಾಗಿ ಸಿಕ್ಕಿದೆ. ಸದ್ಯ ಎಫ್.ಎಂ.ರೇಡಿಯೋ ಟೆಸ್ಟಿಂಗ್ ಹಂತದಲ್ಲಿದೆ. ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡುವ ಸಾದ್ಯತೆ ಇದೆ. ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಆರಂಭಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಈ ರೇಡಿಯೋಗೆ ಕೇಂದ್ರ … Read more

ಸಾಗರದಲ್ಲಿ ಇವತ್ತು ಕೆರೆ ಹಬ್ಬ, ಶಾಸಕರ ನೇತೃತ್ವದಲ್ಲಿ ಗಣಪತಿ ಕೆರೆ ಸ್ವಚ್ಛತೆ

Kere-Habba-Ganapathi-Lake-Cleaning

SHIVAMOGGA LIVE NEWS | 12 ಮಾರ್ಚ್ 2022 ಕೆರೆ ಹಬ್ಬದ ಅಂಗವಾಗಿ ಇವತ್ತು ಸಾಗರದ ಗಣಪತಿ ಕೆರೆಯ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯ ಸ್ವಯಂ ಸೇವಕರು ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು. ಗಣಪತಿ ಕೆರೆಯ ದಂಡೆಯನ್ನು ಜನರು ಸ್ವಚ್ಛಗೊಳಿಸಿದರು. ವಿವಿಧ ಸಂಘಟನೆಗಳು, ನಗರ ಸಭೆಯ ಪೌರ ಕಾರ್ಮಿಕರು, ಜನರು ಸ್ವಯಂ ಪ್ರೇರಿತವಾಗಿ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದರು. ಕಸ ತೆಗೆದು ಮಾದರಿಯಾದ ಶಾಸಕ ಸ್ವಯಂ ಸೇವಕರೊಂದಿಗೆ ಕೈ ಜೋಡಿಸಿದ ಶಾಸಕ ಹರತಾಳು … Read more

ಕೋಟೆ ಮಾರಿಕಾಂಬಾ ದೇವಿ ಜಾತ್ರೆ, ಯಾವೆಲ್ಲ ದಿನ ಏನೇನು ನಡೆಯುತ್ತೆ?

Marikamaba-Jathre-Chappara-Pooje-in-Shimoga

SHIVAMOGGA LIVE NEWS | 12 ಮಾರ್ಚ್ 2022 ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಗಾಂಧಿ ಬಜಾರ್’ನಲ್ಲಿ ಚಪ್ಪರ ಪೂಜೆ ನೆರವೇರಿದೆ. ಮಾರ್ಚ್ 22 ರಿಂದ 26ರವರೆಗೆ ಜಾತ್ರೆ ನಿಗದಿಯಾಗಿದ್ದು ಸಿದ್ಧತೆ ಕೂಡಲ ಭರದಿಂದ ಸಾಗಿದೆ. ಈ ಭಾರಿ ಅತ್ಯಂತ ಸರಳವಾಗಿ ಜಾತ್ರೆ ನಡೆಸಲು ಕೋಟೆ ಮಾರಿಕಾಂಬ ದೇಗುಲ ಸಮಿತಿ ನಿರ್ಧಾರ ಮಾಡಿದೆ. ಆದರೆ ಸಂಪ್ರದಾಯ, ಪೂಜೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಜಾತ್ರೆಯ ಯಾವೆಲ್ಲ ದಿನ ಏನು ನಡೆಯಲಿದೆ ಎಂಬುದರ ವಿವರ … Read more

ಮಂಡಗದ್ದೆ ಸಮೀಪ ಎಲಿಫೆಂಟ್ ಡ್ರೈವ್, ಸಕ್ರೆಬೈಲು ಬಿಡಾರದ ಮೂರು ಆನೆಗಳು ಭಾಗಿ, ಏನಿದು ಡ್ರೈವ್? ಕಾರಣವೇನು?

Elephant-Drive-In-Kigadi-Forest-Range

SHIVAMOGGA LIVE NEWS | 12 ಮಾರ್ಚ್ 2022 ಮಂಡಗದ್ದೆ ಸಮೀಪದ ಕೀಗಡಿ ಅರಣ್ಯ ಪ್ರದೇಶದಲ್ಲಿ ಕೆಲವು ದಿನದಿಂದ ಪುಂಡಾಟ ಮೆರೆಯುತ್ತಿದ್ದ ಕಾಡಾನೆಯನ್ನು ಹಿಮ್ಮೆಟ್ಟಿಸಲು ಸಕ್ರೆಬೈಲು ಬಿಡಾರದ ಸಾಕಾನೆಗಳು ಎಲಿಫೆಂಟ್ ಡ್ರೈವ್ ಆರಂಭಿಸಿವೆ. ಮೂರು ಆನೆಗಳನ್ನು ಈ ಅರಣ್ಯ ಪ್ರದೇಶಕ್ಕೆ ಕರೆತರಲಾಗಿದೆ. ಕೀಗಡಿ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಂಡು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಯ ಹುಟ್ಟಿಸಿರುವ ಕಾಡಾನೆ ಕೀಗಡಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಪುಂಡಾಟ ಮೆರೆಯುತ್ತಿದೆ. ತೋಟ, ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಉಂಟು … Read more

ಅರಹತೊಳಲು, ಯಡೇಹಳ್ಳಿ ಸುತ್ತಮುತ್ತ ಮಾರ್ಚ್ 13ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ ವ್ಯತ್ಯಯವಾಗಲಿದೆ?

POWER-CUT-UPDATE-NEWs ELECTRICITY

SHIVAMOGGA LIVE NEWS | 11 ಮಾರ್ಚ್ 2022 ರಸ್ತೆ ಅಗಲೀಕರಣದ ಹಿನ್ನೆಲೆ ಮರಗಳ ಕಡಿತಲೆ ಮಾಡಲಾಗುತ್ತಿದೆ. ಆದ್ದರಿಂದ ಹೊಳೆಹೊನ್ನೂರು, ಯಡೇಹಳ್ಳಿ, ಕೈಮರ ಫೀಡರ್’ಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಆದ್ದರಿಂದ ವಿವಿಧೆಡೆ ಮಾರ್ಚ್ 13ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರೆಂಟ್ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಹೆಂಚಿನಸಿದ್ದಾಪುರ, ಕೊಪ್ಪ, ಮೂಡಲ ವಿಠಲಾಪುರ, ಜಂಬರಘಟ್ಟಿ, ಕರೆಬೀರನಹಳ್ಳಿ, ಶ್ರೀನಿವಾಸಪುರ, ಸಿದ್ಧರ ಕಾಲೋನಿ, ಚಂದನಕರ, ಆರಹತೊಳಲು, ಹನುಮಂತಾಪುರ, ಯಡೇಹಳ್ಳಿ, ಆಗರದಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. … Read more

ಚಂದ್ರಗುತ್ತಿಯಲ್ಲಿ ಅದ್ಧೂರಿ ರಥೋತ್ಸವ, ಸಾವಿರ ಸಾವಿರ ಭಕ್ತರು ಭಾಗಿ, ಹೇಗಿತ್ತು ವೈಭವ?

Chandragutti-renukamba-jathre-soraba-shimoga

SHIVAMOGGA LIVE NEWS | 11 ಮಾರ್ಚ್ 2022 ಚಂದ್ರಗುತ್ತಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಿ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಇವತ್ತು ಬ್ರಹ್ಮ ರಥೋತ್ಸವ ಇತ್ತು. ದೊಡ್ಡ ಸಂಖ್ಯೆಯ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು. ಸಾಗರ ಉಪ ವಿಭಾಗಾಧಿಕಾರಿ ಡಾ. ಎಲ್.ನಾಗರಾಜ್ ಅವರು ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಘೋಷಣೆಗಳನ್ನು ಕೂಗುತ್ತ ಭಕ್ತರು ಶ್ರೀ ರೇಣುಕಾಂಬ ದೇವಿಯ ರಥೋತ್ಸವ ನೆರವೇರಿಸಿದರು. ಸಾವಿರ ಸಾವಿರ ಸಂಖ್ಯೆಯ ಭಕ್ತರು ಬ್ರಹ್ಮ ರಥೋತ್ಸವ ಕಣ್ತುಂಬಿಕೊಳ್ಳಲು ಸಾವಿರ ಸಾವಿರ ಸಂಖ್ಯೆಯ … Read more

ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರು ಕುರಿತು ಜಿಲ್ಲೆಯ ಜನ ಪ್ರತಿನಿಧಿಗಳಿಂದ ಸಿಎಂಗೆ ಮನವಿ

MLA-MP-Memorandum-to-CM

SHIVAMOGGA LIVE NEWS | 11 ಮಾರ್ಚ್ 2022 ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಇಡಬೇಕು ಎಂದು ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ನಿಯೋಗ, ಮನವಿ ಪತ್ರ ಸಲ್ಲಿಸಿತು. ಗ್ರಾಮೀಣಾಭಿವೃದ್ಧಿ ಸಚಿವ  ಕೆ.ಎಸ್.ಈಶ್ವರಪ್ಪ ನೇತೃತ್ವದ ನಿಯೋಗ ಸಿಎಂ ಭೇಟಿ ಮಾಡಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಕೆ.ಬಿ.ಅಶೋಕ್ ನಾಯ್ಕ್, … Read more