ಇವತ್ತಿನ ಅಡಕೆ ಧಾರಣೆ | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಧಾರಣೆ? | 01 ಫೆಬ್ರವರಿ 2022

Areca Price in Shimoga APMC

ಶಿವಮೊಗ್ಗ ಲೈವ್.ಕಾಂ | APMC NEWS | 1 ಫೆಬ್ರವರಿ 2022 ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ಧಾರಣೆ ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 34969 ಬೆಟ್ಟೆ 47130 52569 ರಾಶಿ 41109 45989 ಸರಕು 51000 75219 ಸಾಗರ ಮಾರುಕಟ್ಟೆ ಕೆಂಪುಗೋಟು 26969 37619 ಕೋಕ 28899 28899 ಚಾಲಿ 35809 35809 ಬಿಳೆ ಗೋಟು 17869 17869 ರಾಶಿ 42299 46099 ಸಿಪ್ಪೆಗೋಟು 15369 20832 ಶಿರಸಿ ಮಾರುಕಟ್ಟೆ ಅರೆಕಾನಟ್ ಹಸ್ಕ್ 5911 … Read more

ಹಿಡಿಶಾಪದ ಬಳಿಕ ಬಂತು ಬ್ಯಾರಿಕೇಡ್, ಕಾಲು ಮುರಿದುಕೊಂಡ ಯುವಕನನ್ನು ಕಾಡುತ್ತಿದೆ ಮತ್ತೊಂದು ಚಿಂತೆ

smart city pot hole near dc office

ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022 ಕಣ್ಣು ಕಾಣದ ಯುವಕನೊಬ್ಬ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಬಳಿಕ ಸ್ಮಾರ್ಟ್ ಸಿಟಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಾಲರಾಜ ಅರಸ್ ರಸ್ತೆಯಲ್ಲಿ ತೋಡಿದ್ದ ಗುಂಡಿಯ ಸುತ್ತಲು ಬ್ಯಾರಿಕೇಡ್ ಅಳವಡಿಸಿದ್ದಾರೆ. ಇಮಾಮ್ ಸಾಬ್ ಇನಾಂದಾರ್ (38) ಎಂಬುವವರು ಹುಟ್ಟಿನಿಂದ ಅಂಧರು. ಶಿವಮೊಗ್ಗ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಇವರು, ಅಲ್ಲಿಂದ ತಮ್ಮ ಹಾಸ್ಟೆಲ್’ಗೆ ತೆರಳುತ್ತಿದ್ದಾಗ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ದಿಢೀರ್ ಗುಂಡಿ ತೋಡಿದ್ದು, … Read more

ಭದ್ರಾವತಿಯಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

Hijab-Controversy-in-Bhadravati-Sir-MV-College

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 1 ಫೆಬ್ರವರಿ 2022 ಉಡುಪಿ ಕಾಲೇಜಿನ ಹಿಜಾಬ್ ವಿವಾದ ಜೀವಂತವಾಗಿದೆ. ಈ ಮಧ್ಯೆ ಭದ್ರಾವತಿಯ ಪ್ರತಿಷ್ಠಿತ ಕಾಲೇಜಿನಲ್ಲೂ ಇದೇ ರೀತಿಯ ವಿವಾದ ಭುಗಿಲೆದ್ದಿದೆ. ಸಮವಸ್ತ್ರವಿದ್ದರೂ ಕೆಲವರಿಗೊಂದು, ಉಳಿದವರಿಗೊಂದು ನೀತಿ ಅನುಸರಿಸದಂತೆ ಆಗ್ರಹಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು. ಭದ್ರಾವತಿ ನ್ಯೂಸ್ ಟೌನ್’ನ ಸರ್.ಎಂ.ವಿ.ಕಾಲೇಜಿನಲ್ಲಿ ಇವತ್ತು ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದು ವಿದ್ಯಾರ್ಥಿಗಳು, ಹಿಂದೂ ಸಂಘಟನೆಗಳ ಕಾರ್ಯಕರ್ತರು … Read more

ಗಲಾಟೆ ತಡೆಗೆ ಹೋದ ಪೊಲೀಸರನ್ನೇ ಎಳೆದಾಡಿ, ERSS ಕಾರಿನ ಗಾಜಿಗೆ ಕಲ್ಲು ತೂರಾಟ

010222 Stone Pelting on ERRS Police Jeep

ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022 ಗಲಾಟೆ ತಡೆಯಲು ಹೋದ ಪೊಲೀಸರನ್ನೇ ಎಳೆದಾಡಿ, ಪೊಲೀಸ್ ವಾಹನದ ಮೇಲೆ ಕಲ್ಲು ತೂರಲಾಗಿದೆ. ಘಟನೆಯಲ್ಲಿ ಪೊಲೀಸ್ ವಾಹನದ ಹಿಂಬದಿ ಗಾಜು ಪುಡಿಯಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆಯ ಎ ಬ್ಲಾಕ್’ನ ಮರಿಯಮ್ಮ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ. ರಾತ್ರಿ ಗಲಾಟೆಯಾಗುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ, ಪೊಲೀಸರು ಸ್ಥಳಕ್ಕೆ ತೆರಳಿದ್ದರು. ವಾಹನದ ಮೇಲೆ ಕಲ್ಲು ತೂರಿದ್ದೇಕೆ? ಬೊಮ್ಮನಕಟ್ಟೆ ಬಳಿ ಯುವಕರ ಗುಂಪುಗಳ ಮಧ್ಯೆ ಗಲಾಟೆಯಾಗುತ್ತಿದೆ ಎಂದು ಮಾಹಿತಿ … Read more

ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಸಿಂಹಗಳ ನಡುವೆ ಕಾದಾಟ, ಸಿಂಹಿಣಿ ಸಾವು

010222 lion manya dies in tyavarekoppa

ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022 ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಎರಡು ಸಿಂಹಗಳ ನಡುವೆ ಕಾದಾಟವಾಗಿದೆ. ಘಟನೆಯಲ್ಲಿ ಸಿಂಹಿಣಿಯೊಂದು ಸಾವನ್ನಪ್ಪಿದೆ. ಇದರಿಂದ ಸಿಂಹಧಾಮದಲ್ಲಿ ಸಿಂಹಗಳ ಸಂಖ್ಯೆ 5ಕ್ಕೆ ಕುಸಿದಿದೆ. ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಮಾನ್ಯಾ (11) ಎಂಬ ಸಿಂಹಿಣಿ ಸಾವನ್ನಪ್ಪಿದೆ. ಸೋಮವಾರ ಮಾನ್ಯಾಳ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ವಾರದ ಹಿಂದೆ ಕಾದಾಟ ಸಿಂಹಧಾಮದ ಯಶವಂತ ಎಂಬ ಸಿಂಹದ ಜೊತೆಗೆ ಮಾನ್ಯಾ ಕಾದಾಟ ನಡೆಸಿತ್ತು. ಒಂದು ವಾರದ ಹಿಂದೆ ಇವೆರಡು ಸಿಂಹಗಳ … Read more

ಬಾತ್ ರೂಮ್ ಪೈಪ್ ಒಳಗಿಂದ ಹೆಡೆ ಎತ್ತಿದ ನಾಗರ ಹಾವು

snake kiran rescues cobra

ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022 ಮನೆಯೊಂದರ ಬಾತ್ ರೂಮ್ ಪೈಪ್ ಒಳಗೆ ಸೇರಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಅವರು ಸೆರೆ ಹಿಡಿದಿದ್ದಾರೆ. ಶಿವಮೊಗ್ಗದ ಊರುಗಡೂರು ಸಮೀಪದ ಮದಾರಿಪಾಳ್ಯದ ಮೊಹಮದ್ ಜಬೀವುಲ್ಲಾ ಎಂಬುವವರ ಮನೆಯ ಬಾತ್ ರೂಮ್ ಪೈಪ್ ಒಳಗೆ ನಾಗರ ಹಾವು ಸೇರಿತ್ತು. ಇಡೀ ದಿನ ಕಾದು ರಾತ್ರಿ ಹೊತ್ತಿಗೆ ರಕ್ಷಣೆ ಮಾಡಿ, ಕಾಡಿಗೆ ಬಿಡಲಾಯಿತು. ಜಬೀವುಲ್ಲಾ ಅವರ ಮನೆಯ ಬಾತ್ ರೂಮ್ ಪೈಪ್ ಒಳಗೆ … Read more

ಹೊಳೆಬೆನವಳ್ಳಿ ಬಳಿ ದಿಢೀರ್ ರಸ್ತೆಗೆ ಬಂದ ಟ್ರಾಕ್ಟರ್, ಬೈಕ್ ಸವಾರ ಸಾವು

crime name image

ಶಿವಮೊಗ್ಗದ ಲೈವ್.ಕಾಂ | SHIMOGA CRIME NEWS | 1 ಫೆಬ್ರವರಿ 2022 ಟ್ರಾಕ್ಟರ್ ಟ್ರೈಲರ್’ಗೆ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿಯ ಪೆಟ್ರೋಲ್ ಬಂಕ್ ಮುಂಭಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ರೇಣು (42) ಎಂಬುವವರು ಮೃತಪಟ್ಟಿದ್ದಾರೆ. ಹೇಗಾಯ್ತು ಅಪಘಾತ? ಶಿವಮೊಗ್ಗದ ಚಿಕ್ಕಲ್’ನ ರೇಣು ಅವರು ಗುರುಪುರದ ಶಿವಕುಮಾರ್ ಅವರೊಂದಿಗೆ ಜನವರಿ 28ರಂದು … Read more

ಶಿವಮೊಗ್ಗದಲ್ಲಿ FZ Bike ದಿಢೀರ್ ನಾಪತ್ತೆ, ಕೇರಳದಿಂದ ಬಂದು ದೂರು

bike theft reference image

ಶಿವಮೊಗ್ಗದ ಲೈವ್.ಕಾಂ | SHIMOGA CRIME NEWS | 1 ಫೆಬ್ರವರಿ 2022 ಬಾಯ್ಸ್ ಹಾಸ್ಟೆಲ್ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಹೊಸ FZ Bike ನಾಪತ್ತೆಯಾಗಿದೆ. ವಿಚಾರ ತಿಳಿದು ಅದರ ಮಾಲೀಕ ಕೇರಳದಿಂದ ಶಿವಮೊಗ್ಗಕ್ಕೆ ಆಗಮಿಸಿ ದೂರ ನೀಡಿದ್ದಾರೆ. ಮೊಹಮದ್ ಆದಿಲ್ ಎಂಬುವವರಿಗೆ ಸೇರಿದ ಹೊಸ ಬೈಕ್ ಕಳ್ಳತನವಾಗಿದೆ. ಶಿವಮೊಗ್ಗ ಮೆಡಿಕಲ್ ಕಾಲೇಜು (SIMS) ಭದ್ರಾ ಬಾಯ್ಸ್ ಹಾಸ್ಟೆಲ್ ಕಟ್ಟಡದಲ್ಲಿ ಬೈಕ್ ನಿಲ್ಲಿಸಿ, ಕೇರಳಕ್ಕೆ ತೆರಳಿದ್ದರು. ಆಗ ಕಳ್ಳತನವಾಗಿದೆ. FZ Bike ಕಳ್ಳತನವಾಗಿದ್ದು ಹೇಗೆ? ಕೇರಳ ರಾಜ್ಯದ ತಿರುವನಂತಪುರಂನ ಮೊಹಮದ್ ಆದಿಲ್ … Read more