ಶಿವಮೊಗ್ಗ ಪಾಲಿಕೆ ನೂತನ ಕಮಿಷನರ್‌ ಅಧಿಕಾರ ಸ್ವೀಕಾರ

Palike-Commissioner-Mayanna-Gowda-takes-charge

ಶಿವಮೊಗ್ಗ: ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ (Commissioner) ಕೆ.ಮಾಯಣ್ಣಗೌಡ ಇವತ್ತು ಅಧಿಕಾರ ಸ್ವೀಕರಿಸಿದರು. ಇಂದು ಬೆಳಗ್ಗೆ ಪಾಲಿಕೆ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ನೂತನ ಆಯುಕ್ತ ಮಾಯಣ್ಣಗೌಡ ಅವರನ್ನು ವಿವಿಧ ಪಕ್ಷಗಳ ಮುಖಂಡರು, ಸಂಘಟನೆಗಳ ಪ್ರಮುಖರು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಶುಭಾಶಯ ತಿಳಿಸಿದರು. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದ ಕೆ.ಮಾಯಣ್ಣಗೌಡ ಕಳೆದ ವರ್ಷ ವರ್ಗಾವಣೆಯಾಗಿದ್ದರು. ಈಗ ಪುನಃ ಅವರನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿಜಯೇಂದ್ರ, ‘ಕಾಲ್ತುಳಿತವಾಗಿದ್ರು CM ದೋಸೆ ತಿನ್ನುತ್ತಿದ್ದರು, DCM … Read more

ಕುಂಸಿ ಮೆಸ್ಕಾಂ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ, ಯಾವಾಗ?

KUMSI-NEWS

ಶಿವಮೊಗ್ಗ: ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜೂ. 12 ರಂದು ಬೆಳಿಗ್ಗೆ 10.30 ರಿಂದ 12ರವರೆಗೆ ಜನ ಸಂಪರ್ಕ ಸಭೆ (Meeting) ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9480841340. ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿಜಯೇಂದ್ರ, ‘ಕಾಲ್ತುಳಿತವಾಗಿದ್ರು CM ದೋಸೆ ತಿನ್ನುತ್ತಿದ್ದರು, DCM ಕಪ್‌ ಹಿಡಿದು ಓಡಲು ರೆಡಿಯಾಗಿದ್ದರುʼ

ಶಿವಮೊಗ್ಗದಲ್ಲಿ 39 ದ್ವಿಚಕ್ರ ವಾಹನಗಳು ಬಹಿರಂಗ ಹರಾಜು

Doddapete-Police-Station-General-Image.

ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ವಾರಸುದಾರರು ಪತ್ತೆಯಾಗದ 39 ದ್ವಿಚಕ್ರ ವಾಹನಗಳನ್ನು ಹರಾಜು (Auction) ಮಾಡಲಾಗುತ್ತಿದೆ. ಜೂನ್ 16 ರಂದು ಬೆಳಗ್ಗೆ 9ಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆಯ ಆವರಣದಲ್ಲಿ ಯಾಥಾಸ್ಥಿತಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ನಿಗದಿತ ಅವಧಿಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ದೊಡ್ಡಪೇಟೆ ಪೊಲೀಸ್ ಇನ್ಸ್‌ಪೆಕ್ಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿಜಯೇಂದ್ರ, ‘ಕಾಲ್ತುಳಿತವಾಗಿದ್ರು CM ದೋಸೆ ತಿನ್ನುತ್ತಿದ್ದರು, DCM ಕಪ್‌ ಹಿಡಿದು ಓಡಲು ರೆಡಿಯಾಗಿದ್ದರುʼ

ಶಿವಮೊಗ್ಗದಲ್ಲಿ ಮೀನುಗಾರಿಕೆ ನಿಷೇಧ, ಕಾರಣವೇನು?

Shimoga-News-update

ಶಿವಮೊಗ್ಗ: ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳು (Fishing) ವಂಶಾಭಿವೃದ್ದಿ ಚಟುವಟಿಕೆಗಳು ನಡೆಸಲಿವೆ. ಆದ್ದರಿಂದ ಪ್ರತಿ ವರ್ಷದ ಜೂನ್ 1 ರಿಂದ ಜುಲೈ 30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು, ತೊರೆಗಳು, ಅಳಿವೆಗಳು ಮತ್ತು ನದಿಗಳಲ್ಲಿ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮೀನುಗಾರಿಕೆ ಉಪ ನಿರ್ದೇಶಕರಾದ ಶಿವಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿಜಯೇಂದ್ರ, ‘ಕಾಲ್ತುಳಿತವಾಗಿದ್ರು CM ದೋಸೆ ತಿನ್ನುತ್ತಿದ್ದರು, DCM ಕಪ್‌ ಹಿಡಿದು ಓಡಲು ರೆಡಿಯಾಗಿದ್ದರುʼ

ಅಡಿಕೆ ಧಾರಣೆ | 10 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ ಮಾರುಕಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಸರಕು 51,500 89,510 ಬೆಟ್ಟೆ 49,000 59,308 ಗೋರಬಲು 18,209 31,509 ರಾಶಿ 46,009 58,799 ಸಾಗರ ಮಾರುಕಟ್ಟೆ ಬಿಳಿಗೋಟು 14,780 23,500 ಚಾಲಿ 31,731 36,029 ಕೋಕ 14,899 19,899 ಕೆಂಪುಗೋಟು 25,899 26,699 ರಾಶಿ 32,989 55,899 ಸಿಪ್ಪೆಗೋಟು 10,505 16,855 ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿಜಯೇಂದ್ರ, ‘ಕಾಲ್ತುಳಿತವಾಗಿದ್ರು CM ದೋಸೆ ತಿನ್ನುತ್ತಿದ್ದರು, DCM ಕಪ್‌ ಹಿಡಿದು … Read more

ಶಿವಮೊಗ್ಗದಲ್ಲಿ ವಿಜಯೇಂದ್ರ, ‘ಕಾಲ್ತುಳಿತವಾಗಿದ್ರು CM ದೋಸೆ ತಿನ್ನುತ್ತಿದ್ದರು, DCM ಕಪ್‌ ಹಿಡಿದು ಓಡಲು ರೆಡಿಯಾಗಿದ್ದರುʼ

-BY-Vijayendra-Press-meet.

ಶಿವಮೊಗ್ಗ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿಜಯೋತ್ಸವದ ವೇಳೆ ಕಾಲ್ತಿಳಿತ (Stampede) ಪ್ರಕರಣ ಸಂಬಂಧ ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗಿದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಜಯೇಂದ್ರ ಹೇಳಿದ್ದೇನು? ಇಲ್ಲಿದೆ ಪ್ರಮುಖಾಂಶ » ಹಠ ಮತ್ತು ಚಟ: ‘ಐಪಿಎಲ್‌ ಪಂದ್ಯಾವಳಿಯಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಪಾಲು ಪಡೆಯಲು … Read more

ಶಿವಮೊಗ್ಗ ಸಿಟಿಯ ಬಹುಭಾಗದಲ್ಲಿ ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್‌

power cut mescom ELECTRICITY

ಶಿವಮೊಗ್ಗ: ಮೆಗ್ಗಾನ್ 110/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಜೂನ್‌ 11 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (POWER CUT) ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಹೊಸಮನೆ, ಹೊಸಮನೆ ಛಾನಲ್ ಏರಿಯಾ, ಶರಾವತಿನಗರ ಎ ಮತ್ತು ಬಿ ಬ್ಲಾಕ್ ಆಯುರ್ವೇದ ಕಾಲೇಜು, ಕುವೆಂಪು ರಸ್ತೆ, ಸಾಗರ ರಸ್ತೆ, ಆಯನೂರು ಗೇಟ್, ಆದಿಚುಂಚನಗಿರಿ ಸಮುದಾಯ ಭವನ. ಯೂನಿಟಿ ಆಸ್ಪತ್ರೆ, … Read more

ಶಿವಮೊಗ್ಗದ ಅಂಗನವಾಡಿಗಳಿಗೆ ಲೋಕಾಯುಕ್ತರು ದಿಢೀರ್ ಭೇಟಿ, ಪರಿಶೀಲನೆ ವೇಳೆ ಕಾದಿತ್ತು ಆಘಾತ

Lokayukta-sudden-visit-to-anganavadis

ಶಿವಮೊಗ್ಗ: ಲೋಕಾಯುಕ್ತ ಅಧಿಕಾರಿಗಳ ಎರಡು ತಂಡ ಶಿವಮೊಗ್ಗ ತಾಲೂಕಿನ ವಿವಿಧ ಅಂಗನವಾಡಿಗಳಿಗೆ ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ಈ ವೇಳೆ ಹಲವು ನ್ಯೂನತೆ ಕಂಡು ಬಂದಿದೆ. ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ವರದಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್‌ ಮತ್ತು ಇನ್ಸ್‌ಪೆಕ್ಟರ್‌ ವೀರಬಸಪ್ಪ ಎಲ್‌.ಕುಸಲಾಪುರ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿತ್ತು. ಆಯನೂರು ವ್ಯಾಪ್ತಿಯ 4 ಅಂಗನವಾಡಿಗಳು, ಕುಂಸಿ ವ್ಯಾಪ್ತಿಯ 4 ಅಂಗನವಾಡಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಪ್ರತ್ಯೇಕ ತಂಡ ದಿಢೀರ್‌ ಭೇಟಿ … Read more

ಶಿವಮೊಗ್ಗದಲ್ಲಿ ಬೆಳಗಿನ ಜಾವ ಹೆದ್ದಾರಿಗೆ ಅಡ್ಡಲಾಗಿ KSRTC ಬಸ್‌ ಪಲ್ಟಿ

100625 Bus mishap at bedarahosahalli in Shimoga taluk

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ KSRTC ಬಸ್‌ ಪಲ್ಟಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಶಿವಮೊಗ್ಗ ತಾಲೂಕು ಬೇಡರಹೊಸಹಳ್ಳಿ ಸಮೀಪ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ರಾಯಚೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಬಸ್‌ ಪಲ್ಟಿಯಾಗಿದೆ. ಬಸ್ಸಿನಲ್ಲಿ 29 ಪ್ರಯಾಣಿಕರು ಇದ್ದರು. ಈ ಪೈಕಿ ಮೂವರಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದಾಗಿ ಈ ರಸ್ತೆಯಲ್ಲಿ ಕೆಲವು ಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. … Read more

ಸೋಮಿನಕೊಪ್ಪ ಫ್ಲೈ ಓವರ್‌ ಕೆಳಗೆ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಮೇಲೆ ಅಟ್ಯಾಕ್‌, ಆಗಿದ್ದೇನು?

crime name image

ಶಿವಮೊಗ್ಗ: ಸಾಫ್ಟ್‌ವೇರ್‌ ಇಂಜಿನಿಯರ್‌ (Engineer) ಮೇಲೆ ಸೋಮಿನಕೊಪ್ಪ ಫ್ಲೈಓವರ್‌ ಅಡಿ ಹಲ್ಲೆ ನಡೆಸಲಾಗಿದೆ. ಅವರ ಕಾರಿನ ಗಾಜನ್ನು ಒಡೆಯಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯ ಇಂಜಿನಿಯರ್‌ ಲೋಕೇಶ್‌ ಎಂಬುವವರ ಮೇಲೆ ಹಲ್ಲೆಯಾಗಿದೆ. ‌ ಹಿಂಬಾಲಿಸಿ ಬಂದು ಅಟ್ಯಾಕ್‌ ನಗರದ ಕ್ಲಬ್‌ ಒಂದರಲ್ಲಿ ಐಪಿಎಲ್‌ ಫೈನಲ್‌ ಪಂದ್ಯ ವೀಕ್ಷಿಸಿ ಲೋಕೇಶ್‌ ಮತ್ತು ಅವರ ಸ್ನೇಹಿತ ಕಾರಿನಲ್ಲಿ ವಿನೋಬನಗರದ ಮನೆಗೆ ತೆರಳುತ್ತಿದ್ದರು. ಗೋಪಿ ಸರ್ಕಲ್‌ನಲ್ಲಿ ವಿಜಯೋತ್ಸವ ನಡೆಯುತ್ತಿತ್ತು. ರಸ್ತೆಯಲ್ಲಿ ಯುವಕರ ಇದ್ದಿದ್ದರಿಂದ … Read more