ಗುರುಪುರದ ಟೀ ಸ್ಟಾಲ್ ಮುಂದೆ ಡಿವೈಎಸ್’ಪಿ ನೇತೃತ್ವದಲ್ಲಿ ದಾಳಿ, ಮೂವರು ಯುವಕರು ಅರೆಸ್ಟ್

DYSP-police-Car-in-Shimoga

SHIVAMOGGA LIVE NEWS | 30 ಮಾರ್ಚ್ 2022 ಶಿವಮೊಗ್ಗದ ಗುರುಪುರದಲ್ಲಿ ಡಿವೈಎಸ್’ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ. ಗುರುಪುರದ ಟೀ ಸ್ಟಾಲ್ ಒಂದರ ಮುಂದೆ ದಾಳಿ ನಡೆಸಲಾಗಿದೆ. ಗುರುಪುರದ ಕುಮಾರ್, ಪವನ್, ಪುರಲೆಯ ರಾಕೇಶ್ ಎಂಬುವವರನ್ನು ಬಂಧಿಸಲಾಗಿದೆ. ಹೊಸಮನೆ ಬಡಾವಣೆಯ ಸಂದೀಪ್ ಎಂಬಾತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ದಾಳಿಗೆ ಕಾರಣವೇನು? ಗುರುಪುರದಲ್ಲಿ ಕೆಲವರು ಓ.ಸಿ. ಜೂಜಾಟ ಆಡಿಸುತ್ತಿರುವ ಕುರಿತು ಡಿವೈಎಸ್’ಪಿ ಪ್ರಶಾಂತ್ ಮುನ್ನೋಳಿ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಈ … Read more

ಶಿವಮೊಗ್ಗದಲ್ಲಿ ಬೀದಿಗಿಳಿದ ಕಾರ್ಮಿಕ ಸಂಘಟನೆಗಳು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

AITUC-ASHA-workers-Protest-in-shimoga

SHIVAMOGGA LIVE NEWS | 30 ಮಾರ್ಚ್ 2022 ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ “ಜನರನ್ನು ಉಳಿಸಿ ದೇಶವನ್ನು ಉಳಿಸಿ” ಎಂಬ ಘೋಷವಾಕ್ಯದೊಂದಿಗೆ  ಶಿವಮೊಗ್ಗದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಖಾಸಗೀಕರಣ ಬೇಡ. ಎಲ್ಲಾ ಶ್ರಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಹಳೆ ಪಿಂಚಣಿ ಯೋಜನೆ ಜಾರಿಯಾಗಬೇಕು ಸೇರಿದಂತೆ ಸುಮಾರು 12 ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಜನರ … Read more

ಕೊಮ್ಮನಾಳು ಗ್ರಾಮದಲ್ಲಿ ಮನೆ ಗೇಟಿನೊಳಗೆ ನಿಲ್ಲಿಸಿದ್ದ ಪಲ್ಸರ್ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | 30 ಮಾರ್ಚ್ 2022 ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಶಿವಮೊಗ್ಗದಲ್ಲಿ ಮನೆ ಗೇಟಿನೊಳಗೆ ನಿಲ್ಲಿಸಿದ್ದ ಪಲ್ಸರ್ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ. ಕೊಮ್ಮನಾಳು ಗ್ರಾಮದ ಪುನೀತ್ ಕುಮಾರ್ ಎಂಬುವವರಿಗೆ ಸೇರಿದ ಪಲ್ಸರ್ 125 ಬೈಕ್ ಕಳ್ಳತನವಾಗಿದೆ. ಹೇಗಾಯ್ತು ಕಳ್ಳತನ? ಪುನೀತ್ ಅವರು 2020ರಲ್ಲಿ ಪಲ್ಸರ್ ಬೈಕ್ ಖರೀದಿಸಿದ್ದರು. ಕೊಮ್ಮನಾಳು ಗ್ರಾಮದ ತಮ್ಮ ಮನೆಯ ಗೇಟಿನೊಳಗೆ ನಿತ್ಯ ಬೈಕ್ ನಿಲ್ಲಿಸುತ್ತಿದ್ದರು. ಮಾರ್ಚ್ 12ರಂದು ರಾತ್ರಿ ಬೈಕನ್ನು ಮನೆ ಗೇಟಿನೊಳಗೆ ನಿಲ್ಲಿಸಿದ್ದರು. 12 ಗಂಟೆಗೆ ನೋಡಿದಾಗ … Read more

ಎಂಟನೆ ದಿನ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೆಷ್ಟಾಗಿದೆ ರೇಟ್?

petrol pump

SHIVAMOGGA LIVE NEWS | 30 ಮಾರ್ಚ್ 2022 ಮಾರ್ಚ್ ತಿಂಗಳಲ್ಲಿ ಎಂಟನೇ ಭಾರಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗಿದೆ. ತೈಲೋತ್ಪನ್ನಗಳ ಬೆಲೆ ಏರಿಕೆ ವಾಹನ ಸವಾರರು, ಸಾರ್ವಜನಿಕರಲ್ಲಿ ಕಳವಳ ಸೃಷ್ಟಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಇವತ್ತು 84 ಪೈಸೆ ಏರಿಕೆ ಆಗಿದೆ. ಹಾಗಾಗಿ ಇವತ್ತು ಪೆಟ್ರೋಲ್ ದರ ಪ್ರತಿ ಲೀಟರ್’ಗೆ 107.91 ರೂ.ಗೆ ತಲುಪಿದೆ. PETROL : ಈವರೆಗು ಎಷ್ಟು ಏರಿಕೆಯಾಗಿದೆ? ದಿನಾಂಕ ಹೆಚ್ಚಾಗಿದ್ದೆಷ್ಟು? ಮಾರ್ಚ್ 22 84 ಪೈಸೆ ಮಾರ್ಚ್ … Read more

ಶಿವಮೊಗ್ಗದಲ್ಲಿ ಬೈಕ್ ಪಕ್ಕ ಬೈಕ್ ನಿಲ್ಲಿಸಿದ್ದಕ್ಕೆ ಜಗಳ, ವೃದ್ಧನ ಮೇಲೆ ಹಲ್ಲೆ, ತಲೆಗೆ ಗಾಯ

crime name image

SHIVAMOGGA LIVE NEWS | 30 ಮಾರ್ಚ್ 2022 ಕ್ಷುಲಕ ವಿಚಾರಕ್ಕೆ ವೃದ್ಧರೊಬ್ಬರ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿದ್ದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಟ್ಯಾಂಕ್ ಮೊಹಲ್ಲಾದ ಸಯ್ಯದ್ ಬಷೀರ್ (65) ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ತಲೆ, ಮೊಣಕೈಗೆ ಗಾಯವಾಗಿದೆ. ಘಟನೆ ಸಂಬಂಧ ಪ್ರಶಾಂತ್ (22) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆಗೆ ಕಾರಣವೇನು? ಟ್ಯಾಂಕ್ ಮೊಹಲ್ಲಾದ 6ನೇ ಕ್ರಾಸ್’ನಲ್ಲಿ ಸಯ್ಯದ್ ಬಷೀರ್ ಅವರು ಪ್ರಶಾಂತನಿಗೆ ಸೇರಿದ ಬೈಕ್ ಪಕ್ಕದಲ್ಲಿ … Read more

ಶಿವಮೊಗ್ಗ ಜೆಡಿಎಸ್ ಕಚೇರಿಯಲ್ಲಿ ಶ್ರೀಕಾಂತ್ ಜನ್ಮದಿನ

M-Srikanth-Birthday-in-Shimoga-JDS-office

SHIVAMOGGA LIVE NEWS | 29 ಮಾರ್ಚ್ 2022 ಕಾರ್ಯಕರ್ತರು ಪಕ್ಷದ ಆಸ್ತಿ ಎಂದು ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್ ಹೇಳಿದರು. ಜೆಡಿಎಸ್ ಕಾರ್ಯಾಲಯದಲ್ಲಿ ಶ್ರೀಕಾಂತ್ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚಿರಋಣಿ ಎಂದರು. ಮುಂದಿನ ದಿನಗಳಲ್ಲಿಯೂ ಪಕ್ಷ  ಹಾಗೂ ತಮ್ಮ ಮೇಲೆ ಇದೇ ರೀತಿ ಪ್ರೀತಿ, ವಿಶ್ವಾಸ ಹೊಂದಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಾರದಾ ಪೂರ್ಯ ನಾಯ್ಕ್ … Read more

ಕ್ರಿಕೆಟ್ ವಿಚಾರವಾಗಿ ಕಿರಿಕ್, ಬಡಿಗೆಯಿಂದ ಯುವಕನ ಮೇಲೆ ದಾಳಿ

crime name image

SHIVAMOGGA LIVE NEWS | 29 ಮಾರ್ಚ್ 2022 ಕ್ರಿಕೆಟ್ ವಿಚಾರವಾಗಿ ಯುವಕರ ಮಧ್ಯೆ ಗಲಾಟೆಯಾಗಿದ್ದು, ಒಬ್ಬನ ಮೇಲೆ ದಾಳಿ ನಡೆಸಲಾಗಿದೆ. ಗಾಯಗೊಂಡಿದ್ದ ಯುವಕ ಚೇತರಿಸಿಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಶಿಕಾರಿಪುರದ ಕೋಡಿಹಳ್ಳಿಯ ಹೆಚ್.ಬಿ.ರಜನಿಕಾಂತ (34) ಗಾಯಗೊಂಡಿರುವ ಯುವಕ. ಅರುಣ್ ಕುಮಾರ್ ಮತ್ತು ರಾಕೇಶ ಹಲ್ಲೆ ನಡೆಸಿದವರು. ಕೋಡಿಹಳ್ಳಿಯ ರವಿ ಎಂಬುವವರನ್ನು ಬೆಂಗಳೂರಿನ ಬಸ್ಸು ಹತ್ತಿಸಲು ಶಿರಾಳಕೊಪ್ಪಕ್ಕೆ ಬಂದಿದ್ದರು. ರಾತ್ರಿ ಬಸ್ಸು ಹತ್ತಿಸಿ ಹಿಂತಿರುಗುವಾಗ ರಜನಿಕಾಂತನನ್ನು ಅರುಣ್ ಮತ್ತು ರಾಕೇಶ್ ಸಮೀಪದ ಡಾಬಾಗೆ ಊಟಕ್ಕೆ … Read more

ಸಾಗರದ ಗಣಪತಿ ಕೆರೆಗೆ ಹಾರಿ ವೈದ್ಯೆ ಆತ್ಮಹತ್ಯೆ

Dr-Sharmada-commits-suicide-in-Sagara.

SHIVAMOGGA LIVE NEWS | 29 ಮಾರ್ಚ್ 2022 ವೈದ್ಯೆಯೊಬ್ಬರು ಸಾಗರದ ಗಣಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿದೆ. ಡಾ.ಶರ್ಮದಾ (36) ಅವರು ಕೆರೆಗೆ ಹಾರಿದವರು. ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಗಣಪತಿ ಕೆರೆ ಬಳಿ ಬಂದ ಡಾ.ಶರ್ಮದಾ, ಸ್ಕೂಟಿ ನಿಲ್ಲಿಸಿ, ಚಪ್ಪಲಿಯನ್ನು ಕೆರೆ ದಂಡೆ ಬಿಟ್ಟು ಹಾರಿದ್ದಾರೆ ಎಂದು ತಿಳಿದು ಬಂದಿದೆ. ಡಾ.ಶರ್ಮದಾ ಅವರು ಕೆರೆಗೆ ಹಾರಿದ್ದನ್ನು ಗಮನಿಸಿದ ಸ್ಥಳೀಯರು ಅವರ ರಕ್ಷಣೆ ಮಾಡಿದ್ದಾರೆ. ಈ ಸಂದರ್ಭ ಅವರು … Read more

BREAKING NEWS | ಆಯನೂರು ಸುತ್ತಮುತ್ತ ಆಲಿಕಲ್ಲು ಸಹಿತ ಜೋರು ಮಳೆ, ಆಸ್ತಿಪಾಸ್ತಿ ಹಾನಿ

Rain-At-ayanur

SHIVAMOGGA LIVE NEWS | 29 ಮಾರ್ಚ್ 2022 ಶಿವಮೊಗ್ಗ ತಾಲೂಕಿನ ವಿವಿಧೆಡೆ ಇವತ್ತು ಸಂಜೆ ಆಲಿಕಲ್ಲು ಮಳೆಯಾಗಿದೆ. ಇದರಿಂದ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ರೈತರಿಗು ಆತಂಕ ಉಂಟಾಗಿದೆ. ಆಯನೂರು ಸುತ್ತಮುತ್ತ ಸಂಜೆ ವೇಳೆಗೆ ಜೋರ ಮಳೆ ಜೊತೆಗೆ ಆಲಿಕಲ್ಲು ಬಿದ್ದಿವೆ. ಆಲಿಕಲ್ಲು ಬಿದ್ದ ರಭಸಕ್ಕೆ ಚನ್ನಹಳ್ಳಿ ಗ್ರಾಮದ ಮನೆಗಳ ಮೇಲಿನ ಹೆಂಚುಗಳು, ಸೋಲರ್ ಪ್ಯಾನಲ್’ಗಳು ಒಡೆದು ಹೋಗಿವೆ. ಇನ್ನು, ಬಾಳೆ, ಅಡಕೆ ತೋಟಗಳಿಗೆ ಅಲ್ಲಿಕಲ್ಲಿನಿಂದ ಹಾನಿ ಉಂಟಾಗಿದೆ. ಇದು ರೈತರಿಗೆ ಚಿಂತೆ ಉಂಟು ಮಾಡಿದೆ. ಆಯನೂರು ಸುತ್ತಮುತ್ತ … Read more

ಶರಾವತಿ ಸಂತ್ರಸ್ತರ ಆಕ್ರೋಶ, ಸರ್ಕಾರಕ್ಕೆ 15 ದಿನದ ಗಡುವು ನಿಗದಿ, ಹೇಗಿರುತ್ತೆ ಮುಂದಿನ ಹೋರಾಟ?

Sharavathi-Mulugade-Santrastara-Horata-Shimoga

SHIVAMOGGA LIVE NEWS | 29 ಮಾರ್ಚ್ 2022 ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಜಾಗವನ್ನು ಅರಣ್ಯ ಇಲಾಖೆಯಿಂದ ಕೈ ಬಿಡಬೇಕು. ಅಲ್ಲದೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಶರಾವತಿ ಹಿನ್ನೀರಿನ ಮುಳುಗಡೆ ರೈತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಆಲ್ಕೊಳದಿಂದ ಪಾದಯಾತ್ರೆ ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗದ ಆಲ್ಕೊಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆಲ್ಕೊಳದಿಂದ ಸಾಗರ ರಸ್ತೆ ಮೂಲಕ ಬಸ್ ನಿಲ್ದಾಣ. ಬಿ.ಹೆಚ್.ರಸ್ತೆ ಮೂಲಕ ಅಮೀರ್ ಅಹಮದ್ ಸರ್ಕಲ್, … Read more