ಟಿಕಾಯತ್ ಮೇಲಿನ ದಾಳಿಗೆ ಶಿವಮೊಗ್ಗದಲ್ಲಿ ಆಕ್ರೋಶ, ಸಾಲು ಸಾಲು ಪ್ರತಿಭಟನೆ

Protest-against-Assault-against-Rakesh-Tikait-in-Shimoga

SHIVAMOGGA LIVE NEWS | PROTEST | 31 ಮೇ 2022 ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಮತ್ತು ಯುದ್ಧವೀರ ಸಿಂಗ್ ಅವರಿಗೆ ಕಪ್ಪು ಮಸಿ ಬಳಿದು, ಹಲ್ಲೆ ನಡೆಸಿದ್ದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗದಲ್ಲಿ ವಿವಿಧ ಸಂಘಟನೆಗಳು ಇವತ್ತು ಬೀದಿಗಿಳಿದು ಹೋರಾಟ ನಡೆಸಿದವು. ರೈತ ಸಂಘದ ಆಕ್ರೋಶ ಹಲ್ಲೆ ಮಾಡಿದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರೈತ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿ … Read more

ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ, ಎಂಟು ತಿಂಗಳ ಗರ್ಭಿಣಿ ಹೊಟ್ಟೆಗೆ ಪೆಟ್ಟು

crime name image

SHIVAMOGGA LIVE NEWS | ACCIDENT | 31 ಮೇ 2022 ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಗರ್ಭಿಣಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ಕೂಡಲೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿವಮೊಗ್ಗದ ವೆಂಕಟೇಶ ನಗರದ ಅನ್ವರ್ ಖಾನ್ ಮತ್ತು ಅವರ ಪತ್ನಿ ಎಂಟು ತಿಂಗಳ ಗರ್ಭಿಣಿ ರೇಷ್ಮಾ ಗಾಯಾಳುಗಳು. ಅನ್ವರ್ ಖಾನ್, ಪತ್ನಿ ರೇಷ್ಮಾ ಅವರು ತಮ್ಮ ಐದು ವರ್ಷದ ಮಗನೊಂದಿಗೆ ಹರಿಹರದಿಂದ ಶಿವಮೊಗಕ್ಕೆ ಬರುತ್ತಿದ್ದರು. ಮಡಿಕೆ ಚೀಲೂರು ಗ್ರಾಮದಿಂದ ಸ್ವಲ್ಪ ದೂರದಲ್ಲಿ … Read more

‘ಪ್ರತಿ ಲೀಟರ್ ಪೆಟ್ರೋಲ್ 36 ರೂ.ಗೆ ಇಳಿಯಬೇಕಿತ್ತು’, ಕೇಂದ್ರದ ವಿರುದ್ಧ ಶಿವಮೊಗ್ಗದಲ್ಲಿ ಆಕ್ರೋಶ

CPI-M-protest-against-Petrol-Price-hike.

SHIVAMOGGA LIVE NEWS | PRICE RAISE | 31 ಮೇ 2022 ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ (ಎಂ) ಜಿಲ್ಲಾ ಸಮಿತಿ ಸೇರಿದಂತೆ ವಿವಿಧ ಎಡಪಕ್ಷಗಳ ವತಿಯಿಂದ  ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್, ಹಣ್ಣು, ತರಕಾರಿ, ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳ ಬೆಲೆ ಏರಿಕೆಯಾಗಿದೆ. ಜನಸಾಮಾನ್ಯರ, ಮಧ್ಯಮ ವರ್ಗದವರ … Read more

ಅಡಕೆ ಧಾರಣೆ | 31 ಮೇ 2022 | ಇವತ್ತು ಎಷ್ಟಿದೆ ದರ?

Areca Price in Shimoga APMC

SHIVAMOGGA LIVE NEWS | ARECA | 31 ಮೇ 2022 ಶಿವಮೊಗ್ಗ ಸೇರಿದಂತೆ ರಾಜ್ಯ ಪ್ರಮುಖ ಮಾರುಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 37786 ಬೆಟ್ಟೆ 49009 53369 ರಾಶಿ 43869 50500 ಸರಕು 58199 80196 ಸಾಗರ ಮಾರುಕಟ್ಟೆ ಕೆಂಪುಗೋಟು 32699 34899 ಕೋಕ 31299 34569 ಚಾಲಿ 36399 38403 ಬಿಳೆ ಗೋಟು 27370 28899 ರಾಶಿ 44009 49609 ಸಿಪ್ಪೆಗೋಟು 20560 21133 … Read more

ಶಿವಮೊಗ್ಗದಲ್ಲಿ ರೈತ ಸಂಘದ ತುರ್ತು ಸಭೆ, ರಾಜ್ಯಾಧ್ಯಕ್ಷರ ವಜಾ, ಹೊಸ ಅಧ್ಯಕ್ಷರ ನೇಮಕ

Raitha-Sanga-HR-Basavarajappa-new-president

SHIVAMOGGA LIVE NEWS | FARMER | 31 ಮೇ 2022 ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಉಚ್ಚಾಟಿಸಲಾಗಿದೆ. ಶಿವಮೊಗ್ಗದ ರೈತ ಸಂಘ ಕಾರ್ಯಾಲಯದಲ್ಲಿ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈವರೆಗೂ ಸಂಘದ ಗೌರವಾಧ್ಯಕ್ಷರಾಗಿದ್ದ ಹೆಚ್.ಆರ್.ಬಸವರಾಜಪ್ಪ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಭೆ … Read more

ಮೆಗ್ಗಾನ್ ಆಸ್ಪತ್ರೆಯಲ್ಲಿ ಮುಂದುವರೆದ ಬೈಕ್ ಕಳ್ಳರ ಹಾವಳಿ

Mc-Gann-Hospital

SHIVAMOGGA LIVE NEWS | BIKE | 31 ಮೇ 2022 ಮೆಗ್ಗಾನ್ ಆಸ್ಪತ್ರೆಯ ಬೈಕ್ ಸ್ಟಾಂಡ್’ನಲ್ಲಿ ನಿಲ್ಲಿಸಿದ್ದ ಮತ್ತೊಂದು ಬೈಕ್ ಕಳ್ಳತನವಾಗಿದೆ. ಇದರಿಂದ ಮೆಗ್ಗಾನ್ ಆಸ್ಪತ್ರೆಗೆ ವಾಹನದಲ್ಲಿ ಚಿಕಿತ್ಸೆಗೆ ಬರುವವರು ಮತ್ತು ಅವರ ಸಂಬಂಧಿಗಳಿಗೆ ಆತಂಕ ಶುರುವಾಗಿದೆ. ಗೆಜ್ಜೇನಹಳ್ಳಿಯ ಫಿರೋಜ್ ಎಂಬುವವರಿಗೆ ಸೇರಿದ ಹೊಚ್ಚ ಹೊಸ ಸ್ಪ್ಲೆಂಡರ್ ಬೈಕ್ ಕಳ್ಳನತವಾಗಿದೆ. ತಮ್ಮ ಸಂಬಂಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ವಿಚಾರಿಸಲು ಮೆಗ್ಗಾನ್ ಆಸ್ಪತ್ರೆಗೆ ಆಗಮಿಸಿದ್ದರು. ಬೈಕ್ ಸ್ಟ್ಯಾಂಡ್’ನಲ್ಲಿ ತಮ್ಮ ಬೈಕ್ ನಿಲ್ಲಿಸಿ ಆಸ್ಪತ್ರೆ ಒಳಗೆ ಹೋಗಿದ್ದರು. … Read more

ಶರಾವತಿ ನಗರ ಸ್ಮಶಾನದ ಬಳಿ ಬೈಕ್ ಅಡ್ಡಗಟ್ಟಿ ಮಚ್ಚಿನಿಂದ ಹಲ್ಲೆ, ನಾಲ್ವರ ವಿರುದ್ಧ ಕೇಸ್

crime name image

SHIVAMOGGA LIVE NEWS | ATTACK | 31 ಮೇ 2022 ಬೈಕ್’ನಲ್ಲಿ ತೆರಳುತ್ತಿದ್ದ ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಘಟನೆ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಚರಣ್ ಶೆಟ್ಟಿ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು. ಬೈಕ್ ತಡೆದ ನಾಲ್ವರು ಚರಣ್ ಶೆಟ್ಟಿ ಮತ್ತು ಅವರ ಸ್ನೇಹಿತ ಅಶೋಕ್ ಎಂಬುವವರು ಮೇ 28ರ ರಾತ್ರಿ ಮೆಗ್ಗಾನ್ ಆಸ್ಪತ್ರೆಯಿಂದ ಬೊಮ್ಮನಕಟ್ಟೆಗೆ ಬೈಕಿನಲ್ಲಿ ತೆರಳುತ್ತಿದ್ದರು. … Read more

ಯುಪಿಎಸ್​ಸಿ ಪರೀಕ್ಷೆಯಲ್ಲಿ ರಾಂಕ್ ಪಡೆದ ಶಿವಮೊಗ್ಗದ ವೈದ್ಯ, ಸಿದ್ಧತೆ ಹೇಗಿತ್ತು?

DS-Arun-Visit-UPSC-Rank-holder-Dr-Prashanth-house

SHIVAMOGGA LIVE NEWS | EXAM | 31 ಮೇ 2022 ಯುಪಿಎಸ್​ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ವೈದ್ಯ ಡಾ. ಪ್ರಶಾಂತ್ ಕುಮಾರ್ 641ನೇ RANK ಪಡೆದು ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ನಾಗರಿಕ ಸೇವೆಯ ಕನಸು ಕಟ್ಟಿಕೊಂಡಿರುವವರಿಗೆ ಡಾ. ಪ್ರಶಾಂತ್ ಕುಮಾರ್ ಅವರ ಸಾಧನೆ ಮಾದರಿ ಅನಿಸಿದೆ. ಈ ನಡುವೆ ಅವರು ಅಧ್ಯಯನ ಕ್ರಮ ಹೇಗಿತ್ತು, ಯಾವೆಲ್ಲ ವಿಷಯಗಳನ್ನು ಹೇಗೆ ಓದಿಕೊಂಡರು ಅನ್ನುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪರೀಕ್ಷೆ ಸಿದ್ಧತೆ ಹೇಗಿತ್ತು? ಡಾ.ಪ್ರಶಾಂತ್ … Read more

ಇನ್ಸ್ ಪೆಕ್ಟರ್, ಪಿಎಸ್ಐ, ಪಿಡಿಒ, ವೈದ್ಯರು ಸೇರಿ ಹತ್ತು ಮಂದಿ ವಿರುದ್ಧ ಎಫ್ಐಆರ್, ಕಾರಣವೇನು?

crime name image

SHIVAMOGGA LIVE NEWS | CRIME | 31 ಮೇ 2022 ನ್ಯಾಯಾಲಯದ ಆದೇಶದ ಮೇರೆಗೆ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್, ಠಾಣೆ ಸಿಬ್ಬಂದಿ, ಪಿಡಿಒ, ವೈದ್ಯರು ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸೊರಬ ತಾಲೂಕು ದೇವತಿಕೊಪ್ಪದ ವಕೀಲ ಪ್ರಕಾಶ್ ನಾಯ್ಕ್ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 10 ಮಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಶಿಕಾರಿಪುರ ಉಪ ಅಧೀಕ್ಷಕರಿಗೆ ಸೂಚನೆ ನೀಡಿತ್ತು. ಏನಿದು ಪ್ರಕರಣ? 2020ರ ಮಾರ್ಚ್ … Read more

ಶಿವಮೊಗ್ಗದಲ್ಲಿ ನಡುರಾತ್ರಿಯು ಪೆಟ್ರೋಲ್ ಬಂಕ್’ಗಳ ಮುಂದೆ ಜನವೋ ಜನ

Heavy-Crowd-at-Bhargavi-Petrol-Bunk-in-Shimoga

SHIVAMOGGA LIVE NEWS | PETROL | 30 ಮೇ 2022 ಪೆಟ್ರೋಲ್ ಬಂಕ್ ಮಾಲೀಕರು ತೈಲ ಕಂಪನಿಗಳಿಂದ ಒಂದು ದಿನ ಇಂಧನ ಖರೀದಿ ಮಾಡದೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಆದರೆ ಪೆಟ್ರೋಲ್ ಬಂಕ್’ಗಳು ಬಂದ್ ಆಗಲಿವೆ ಎಂದು ಭಾವಿಸಿ ಪೆಟ್ರೋಲ್, ಡಿಸೇಲ್ ಭರ್ತಿ ಮಾಡಿಸಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಶಿವಮೊಗ್ಗ ನಗರದಲ್ಲಿ ತಡರಾತ್ರಿವರೆಗೂ ಪೆಟ್ರೋಲ್, ಡಿಸೇಲ್ ಖರೀದಿ ಮುಂದುವರೆದಿದೆ. ಕೆಲವು ಪೆಟ್ರೋಲ್ ಬಂಕ್’ಗಳ ಮುಂದೆ ಜನ ಸಾಗರ ಸೇರಿದೆ. ಗ್ರಾಹಕರನ್ನು ನಿಯಂತ್ರಿಸುವುದು ಬಂಕ್ ಸಿಬ್ಬಂದಿಗೆ ಕಷ್ಟದ ಕೆಲಸವಾಗಿದೆ. … Read more