ಉಪನ್ಯಾಸಕಿಯ ವಾಟ್ಸಪ್‌ಗೆ ಅಪರಿಚಿತ ನಂಬರ್‌ನಿಂದ ಮೆಸೇಜ್‌, ಒಂದು ವಾರದ ಬಳಿಕ ಕಾದಿತ್ತು ಬಿಗ್‌ ಶಾಕ್‌

Whatsapp-General-Image

SHIVAMOGGA LIVE NEWS | 5 FEBRUARY 2024 SHIMOGA : ಯುಟ್ಯೂಬ್‌, ಗೂಗಲ್‌ ಮ್ಯಾಪ್‌ನಲ್ಲಿ ರೆಸ್ಟೋರೆಂಟ್‌ಗಳಿಗೆ ರಿವ್ಯೂ ಬರೆದು ಹಣ ಸಂಪಾದಿಸಬಹುದು. ಪ್ರತಿ ರಿವ್ಯೂಗೆ 50 ರೂ.ನಂತೆ ನಿತ್ಯ 2 ಸಾವಿರದಿಂದ 2700 ರೂ.ವರೆಗು ಪಡೆಯಬಹುದು ಎಂದು ವಾಟ್ಸಪ್‌ನಲ್ಲಿ ಬಂದ ಮೆಸೇಜ್‌ ನಂಬಿ ಉಪ್ಯಾಸಕಿಯೊಬ್ಬರು (ಹೆಸರು ಗೌಪ್ಯ) 12.69 ಲಕ್ಷ ರೂ. ಕಳೆದುಕೊಂಡಿದ್ದಾರೆ. ರಿಸೆಪ್ಷನಿಸ್ಟ್‌ ಪ್ರಿಯಾ ತಂದ ಸಂಕಷ್ಟ ಜ.22ರಂದು ವಾಟ್ಸಪ್‌ನಲ್ಲಿ ಬಂದ ಮೆಸೇಜ್‌ನಲ್ಲಿದ್ದ ಲಿಂಕ್‌ ಕ್ಲಿಕ್‌ ಮಾಡಿದ್ದ ಉಪನ್ಯಾಸಕಿ ಟೆಲಿಗ್ರಾಂನಲ್ಲಿ ಡೈಲಿ ಟಾಸ್ಕ್‌ ಮತ್ತು … Read more

ಶಿವಮೊಗ್ಗದಿಂದ KSRTC ಬಸ್‌ ಹತ್ತಿದ ಮಹಿಳೆ, ನಡು ದಾರಿಯಲ್ಲಿ ಕಾದಿತ್ತು ಶಾಕ್‌

KSRTC-Bus-General-Image-Shimoga-Bangalore

SHIVAMOGGA LIVE NEWS | 5 FEBRUARY 2024 SHIMOGA : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತರೀಕೆರೆಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ನಾಪತ್ತೆಯಾಗಿದೆ. ತರೀಕೆರೆ ತಾಲೂಕಿನ ಜಯಮ್ಮ ಅವರ ಚಿನ್ನದ ಸರ ಕಳ್ಳತನವಾಗಿದೆ.  ಸಂಬಂಧಿಯೊಬ್ಬರು ಅಪಘಾತಕ್ಕೀಡಾಗಿ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ವಿಚಾರಿಸಿ ಜಯಮ್ಮ, ಶಿವಮೊಗ್ಗದಿಂದ ತರೀಕೆರೆಗೆ ಮರಳುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತೆರಳುವಾಗ ಶಿವಮೊಗ್ಗ – ಭದ್ರಾವತಿ ಮಾರ್ಗ ಮಧ್ಯೆ ಕೊರಳಲ್ಲಿದ್ದ 2 ಲಕ್ಷ ರೂ. ಮೌಲ್ಯದ ಬಂಗಾರದ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. ಸೀಟಿನ … Read more

ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್‌ ಓಡಿಸಿದ ಚಾಲಕ, ವಿಡಿಯೋ ತೆಗೆದು ಪೊಲೀಸರಿಗೆ ಕಳುಹಿಸಿದ ಪ್ರಯಾಣಿಕ, ಮುಂದೇನಾಯ್ತು?

city-bus-fined-by-traffic-police-for-speaking-to-phone-while-driving

SHIVAMOGGA LIVE NEWS | 5 FEBRUARY 2024 SHIMOGA : ಮೊಬೈಲ್‌ನಲ್ಲಿ ಮಾತನಾಡುತ್ತ ಸಿಟಿ ಬಸ್‌ ಚಲಾಯಿಸುತ್ತಿದ್ದ ಚಾಲಕನ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸಂಚಾರ ಠಾಣೆ ಪೊಲೀಸರಿಗೆ ಕಳುಹಿಸಿದ್ದಾರೆ. ಪರಿಶೀಲನೆ ನಡೆಸಿದ ಪೊಲೀಸರು ಚಾಲಕನಿಗೆ ದಂಡ ವಿಧಿಸಿದ್ದಾರೆ. ಗೋಪಾಳ – ರಾಗಿಗುಡ್ಡ ಮಾರ್ಗದ ಸಿಟಿ ಬಸ್ಸಿನ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಗೋಪಾಳದಿಂದ ಅಣ್ಣಾನಗರ ಚಾನಲ್‌ವರೆಗೂ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್‌ ಚಲಾಯಿಸಿದ್ದ. ಹಿಂಬದಿ ಸೀಟಿಯಲ್ಲಿ ಕುಳಿತ ಪ್ರಯಾಣಿಕರೊಬ್ಬರು ಇದರ ವಿಡಿಯೋ ಚಿತ್ರೀಕರಣ ಮಾಡಿ ಪಶ್ಚಿಮ ಸಂಚಾರ ಠಾಣೆ … Read more

ಶಿವಮೊಗ್ಗದಲ್ಲಿ ಆಟೋ ರಿಕ್ಷಾ ಪ್ರೀ ಪೇಯ್ಡ್ ಕೌಂಟರ್ ತೆರೆಯಲು ಅರ್ಜಿ ಆಹ್ವಾನ, ಯಾರು ಅರ್ಜಿ ಸಲ್ಲಿಸಬಹುದು?

Auto-in-Shimoga-Nehru-road

SHIVAMOGGA LIVE NEWS | 5 FEBRUARY 2024 SHIMOGA : ನಗರದಲ್ಲಿ ಪ್ರೀ ಪೇಯ್ಡ್ ಆಟೋ ರಿಕ್ಷ ಕೌಂಟರ್ ತೆರೆಯಲು ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, KSRTC ಬಸ್ ನಿಲ್ದಾಣದ ಆವರಣದಲ್ಲಿ ಪ್ರೀ ಪೇಯ್ಡ್ ಆಟೋ ಕೌಂಟರ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಕೌಂಟರ್ ಸ್ಥಾಪಿಸಲು ಜಿಎಸ್‍ಟಿ ಅಥವಾ ಐಟಿ ನಂಬರ್ ಹೊಂದಿರುವ ನೊಂದಾಯಿತ ಸಂಸ್ಥೆಯವರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ … Read more

ಕುರಿ ಗೂಟ ತಂದಿಟ್ಟ ಜಗಳ, ಪೊಲೀಸ್ ಠಾಣೆ ಎದುರು ಜಮಾಯಿಸಿದ ಜನ, ಏನಿದು ಪ್ರಕರಣ?

Hosa-Jambaraghatta-villagers-protest-in-front-of-Holehonnuru-station

SHIVAMOGGA LIVE NEWS | 5 FEBRUARY 2024 HOLEHONNURU : ಮುಸ್ಲಿಂ ಖಬರಸ್ಥಾನ್‌ ಜಾಗದಲ್ಲಿದ್ದ ಅಕೇಶಿಯ ಮರ ಕಡಿದ ವಿಚಾರವಾಗಿ ಎರಡು ಕೋಮಿನ ಯುವಕರ ಮಧ್ಯೆ ಗಲಾಟೆಯಾಗಿದೆ. ಘಟನೆ ವೇಳೆ ಮಹಿಳೆ ಮೇಲೆ ಹಲ್ಲೆಯಾಗಿದೆ ಎಂದು ಮಹಿಳೆಯರು ಠಾಣೆ ಎದುರು ಧರಣಿ ನಡೆಸಿದರು. ಕುರಿ ಗೂಟದಿಂದ ಜಗಳ ಭದ್ರಾವತಿ ತಾಲೂಕು ಹೊಸ ಜಂಬರಘಟ್ಟೆಯ ಖಬರಸ್ಥಾನ್‌ (ಸ್ಮಶಾನ) ಜಾಗದಲ್ಲಿದ್ದ ಅಕೇಶಿಯ ಮರವನ್ನು ಕಡಿದು ರವಿ ಎಂಬಾತ ಕುರಿ ಗೂಟ ಸಿದ್ಧಪಡಿಸಿದ್ದ. ಇದನ್ನು ಗಮನಿಸಿದ ಅನ್ಯ ಕೋಮಿನ ಕೆಲವರು … Read more

ಮ್ಯಾಟ್ರಿಮೋನಿ ಆ್ಯಪ್‌ ಬಳಸುತ್ತಿದ್ದ ಉಪನ್ಯಾಸಕಿಗೆ ಇಂಗ್ಲೆಂಡ್‌ನಿಂದ ಗಿಫ್ಟ್‌, ಕಾದಿತ್ತು ಶಾಕ್‌, ಶಿವಮೊಗ್ಗದಲ್ಲಿ ಕೇಸ್‌

SMS-Fraud-Shimoga-CEN-Police-Station.

SHIVAMOGGA LIVE NEWS | 5 FEBRUARY 2024 SHIMOGA : ಡಿವೋರ್ಸ್‌ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಇಂಗ್ಲೆಂಡ್‌ನಿಂದ ಉಪನ್ಯಾಸಕಿಗೆ (ಹೆಸರು, ಊರು ಗೌಪ್ಯ) ಗಿಫ್ಟ್‌ ಕಳುಹಿಸಿರುವುದಾಗಿ ನಂಬಿಸಿ 4.05 ಲಕ್ಷ ರೂ. ವಂಚಿಸಿದ್ದಾನೆ. ಹೆಚ್ಚುವರಿ ಹಣಕ್ಕೆ ಬೇಡಿಕೆ ಬಂದಾಗ ಉಪನ್ಯಾಸಕಿಗೆ‌ ಅನುಮಾನ ಮೂಡಿದೆ. ವಂಚನೆ ಆಗಿದ್ದು ಹೇಗೆ? ಡಿವೋರ್ಸ್‌ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಇಂಗ್ಲೆಂಡ್‌ನಲ್ಲಿ ವೈದ್ಯ ಎಂದು ಹೇಳಿಕೊಂಡು ಡಾ.ಶಿವ ಎಂಬಾತ ಉಪನ್ಯಾಸಕಿಗೆ ಪರಿಚಯವಾಗಿದ್ದ. ಜ.27ರಂದು ವಾಟ್ಸಪ್‌ನಲ್ಲಿ ಮೆಸೇಜ್‌, ಕಾಲ್‌ ಮಾಡಿ ಪರಸ್ಪರ ಮಾತನಾಡಿದ್ದರು. ಜ.30ರಂದು … Read more

ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ 11 ಮಂದಿಗೆ ಕೆಎಫ್‌ಡಿ ಸೋಂಕು ಪಾಸಿಟಿವ್‌

MONKEY-FEVER-KFD-IN-SHIMOGA

SHIVAMOGGA LIVE NEWS | 5 FEBRUARY 2024 SHIMOGA : ಜಿಲ್ಲೆಯಲ್ಲಿ ಒಂದೇ ದಿನ 11 ಮಂದಿಗೆ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಪಾಸಿಟಿವ್‌ ಬಂದಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕೆಎಫ್‌ಡಿ ಸಕ್ರಿಯ ಪ್ರಕರಣಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 11 ಸೋಂಕಿತರ ಪೈಕಿ 3 ಮಂದಿ ತೀರ್ಥಹಳ್ಳಿ, 8 ಮಂದಿ ಹೊಸನಗರ ತಾಲೂಕಿನವರು ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಸದ್ಯ 13 ಸಕ್ರಿಯ ಪ್ರಕರಣಗಳಿವೆ. ಈವರೆಗೂ … Read more

ಸೇತುವೆ ಮೇಲಿಂದ ಹಳ್ಳಕ್ಕೆ ಉರುಳಿದ ಟಿಪ್ಪರ್‌, ಸಂಪೂರ್ಣ ಜಖಂ, ಸ್ವಲ್ಪದರಲ್ಲಿ ತಪ್ಪಿತು ಪ್ರಾಣಹಾನಿ

Tipper-Lorry-mattihalla-near-anaveri.

SHIVAMOGGA LIVE NEWS | 5 FEBRUARY 2024 HOLEHONNURU : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಶಾತ್‌ ಲಾರಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆನವೇರಿ ಸಮೀಪದ ಮತ್ತಿಹಳ್ಳ ಸೇತುವೆ ಮೇಲಿಂದ ಲಾರಿ ಕೆಳಗೆ ಬಿದ್ದಿದೆ. ಎದುರಿನಿಂದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಲಾರಿ ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಚಕ್ರಗಳು ಕಳಚಿಕೊಂಡು, ಲಾರಿ ಜಖಂ ಆಗಿದೆ. ಎರಡು ಕ್ರೇನ್‌ಗಳನ್ನು ಬಳಸಿ ಭಾನುವಾರ … Read more