ಪ್ರಯಾಣಿಕರಿಂದ ಬಸ್‌ ಕಂಡಕ್ಟರ್‌ಗೆ 15 ಲಕ್ಷ ವಂಚನೆ, ಏನಿದು ಪ್ರಕರಣ?

Crime-News-General-Image

ಶಿವಮೊಗ್ಗ: ಸರ್ಕಾರಿ ನೌಕರಿ (Government Job) ಕೊಡಿಸುವುದಾಗಿ ನಂಬಿಸಿ ಕೆಎಸ್‌ಆರ್‌ಟಿಸಿ ನಿವೃತ್ತ ಕಂಡಕ್ಟರ್‌ ಒಬ್ಬರಿಗೆ ₹15 ಲಕ್ಷ ವಂಚಿಸಲಾಗಿದೆ. ಕೊನೆಗೆ ಕೆಲಸವನ್ನೂ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೆನ್ನೂ ಓದಿ » ಗಂಟಲಲ್ಲಿ ಸಿಲುಕಿದ ಚಿಕನ್‌ ಮೂಳೆ, ಆಪರೇಷನ್‌ ಮಾಡದೆ ಪಾರು ಮಾಡಿದ ಶಿವಮೊಗ್ಗದ ಡಾಕ್ಟರ್‌ಗಳು, ಹೇಗದು? ಕೆಂಚಪ್ಪ ಕಂಡಕ್ಟರ್‌ ಆಗಿದ್ದಾಗ ಬಸ್ಸಿನಲ್ಲಿ ಇಬ್ಬರು ಪ್ರಯಾಣಿಕರ ಪರಿಚಯವಾಗಿತ್ತು. ತಮಗೆ ಹಲವು ರಾಜಕಾರಣಿಗಳ ಪರಿಚಯವಿದ್ದು ಸರ್ಕಾರಿ ಕೆಲಸ ಕೊಡಿಸುವುದಾಗಿ … Read more

ಶಾಲಾ ಬಸ್‌ ಅಪಘಾತ, ಮೂವರು ವಿದ್ಯಾರ್ಥಿಗಳಿಗೆ ಗಾಯ, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಹೊಳೆಹೊನ್ನೂರು: ಶಾಲಾ ಬಸ್ಸಿಗೆ (Bus) ಗೂಡ್ಸ್‌ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಭದ್ರಾವತಿ ತಾಲೂಕು ಹಂಚಿನ ಸಿದ್ದಾಪುರದ ಬಳಿ ಘಟನೆ ಸಂಭವಿಸಿದೆ. ಚನ್ನಗಿರಿ ತಾಲೂಕು ಹಿರೇಮಳಲಿಯ ಗುರುಕುಲ ವಿದ್ಯಾಸಂಸ್ಥೆಯ ಬಸ್ಸಿಗೆ ಹಂಚಿನ ಸಿದ್ದಾಪುರದ ಚಾನಲ್‌ ಮೇಲೆ ಗೂಡ್ಸ್‌ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿಗಳಾದ ನಿತ್ಯಾ, ಶಮಿತಾ, ಮತ್ತು ಹರ್ಷ ಎಂಬುವವರಿಗೆ ಗಾಯವಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೆ ಗಾಯಾಳುಗಳನ್ನು ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಘಟನೆ ಸಂಬಂಧ ಗೂಡ್ಸ್‌ ವಾಹನದ … Read more

ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಸ್‌ ಡಿಕ್ಕಿ, ಸಾವು, ಹೇಗಾಯ್ತು ಘಟನೆ?

SHIKARIPURA-NEWS-UPDATE.

ಶಿಕಾರಿಪುರ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿ (Bus) ಹೊಡೆದು ಮೃತಪಟ್ಟಿದ್ದಾರೆ. ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯ ಚಾನಲ್ ಸಮೀಪ ಘಟನೆ ಸಂಭವಿಸಿದೆ. ವಿನಾಯಕ ನಗರದ ಕಟ್ಟಡ ಕಾರ್ಮಿಕ ಶಿವಾಜಿರಾವ್ (49) ಮೃತರು. ಕೆಲಸ ಮುಗಿಸಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಾಜಿರಾವ್‌ ಅವರನ್ನು ವಿದ್ಯಾರ್ಥಿಗಳಾದ ನವೀನ್‌ ಮತು ಕೌಶಿಕ್‌ ತಮ್ಮ ಬೈಕಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟೊತ್ತಿಗಾಗಲೇ ಶಿವಾಜಿರಾವ್‌ ಕೊನೆಯುಸಿರೆಳೆದಿದ್ದರು. ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು, ಅಪಘಾತ ಸಂಬಂಧ … Read more

BREAKING NEWS | ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ

Bus-Truck-Mishap-near-Gajanuru-in-Shimoga

ಶಿವಮೊಗ್ಗ: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್‌ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಗಾಜನೂರು ಅಗ್ರಹಾರದ ಬಳಿ ಇಂದು ಬೆಳಗಿನ ಜಾವ ಅಪಘಾತ (Mishap) ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಉಚಿತವಾಗಿ ಹೆಪಟೈಟಿಸ್‌ ಬಿ ತಪಾಸಣೆ ಶಿಬಿರ, ಲಸಿಕೆ ವಿತರಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ ಖಾಸಗಿ ಬಸ್ಸಿನ ನಿರ್ವಾಹಕ ಅಣ್ಣಪ್ಪ ಮೃತರಾಗಿದ್ದಾರೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ 13 ಜನ ಗಾಯಗೊಂಡಿದ್ದು … Read more

ಮೇಗರವಳ್ಳಿಯಲ್ಲಿ ಮಂಗಳೂರು ಎಕ್ಸ್‌ಪ್ರೆಸ್‌ ಬಸ್ಸು, ಗೂಡ್ಸ್‌ ವಾಹನ ಮುಖಾಮುಖಿ ಡಿಕ್ಕಿ

Mangalore-Bus-and-goods-vehicle-mishap-at-megaravalli

ತೀರ್ಥಹಳ್ಳಿ: ಗೂಡ್ಸ್‌ ವಾಹನ ಮತ್ತು ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿಯಾಗಿದೆ. ಗೂಡ್ಸ್‌ ವಾಹನದ ಚಾಲಕ ಗಾಯಗೊಂಡಿದ್ದಾನೆ. (Mishap) ಇದನ್ನೂ ಓದಿ » ಶಿವಮೊಗ್ಗದಲ್ಲಿ ‘ಭುಗಿಲುʼ ಬಿಡುಗಡೆ, ಬಿ.ಎಲ್.ಸಂತೋಷ್‌ ಭಾಗಿ, ಏನೆಲ್ಲ ಮಾತನಾಡಿದರು? ಇಲ್ಲಿದೆ ಪ್ರಮುಖಾಂಶ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಸಮೀಪ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಖಾಸಗಿ ಬಸ್ಸು ತೀರ್ಥಹಳ್ಳಿಯಿಂದ ಮಂಗಳೂರಿಗೆ ತೆರಳುತಿತ್ತು. ಘಟನೆಯಲ್ಲಿ ಬಸ್ಸು ಮತ್ತು ಗೂಡ್ಸ್‌ ವಾಹನದ ಮುಂಭಾಗ ಜಖಂಗೊಂಡಿವೆ. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇನ್ಮುಂದೆ KSRTC ಬಸ್ಸುಗಳಲ್ಲಿ ಯದ್ವತದ್ವ ಲಗೇಜ್‌ ಕೊಂಡೊಯ್ಯುವಂತಿಲ್ಲ, ಜಾರಿಗೆ ಬಂದಿದೆ ಲಗೇಜ್‌ ನೀತಿ

ksrtc-news-update-thumbnail.webp

KSRTC ಸುದ್ದಿ: ಇನ್ಮುಂದೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಯದ್ವತದ್ವ ಲಗೇಜ್‌ ಕೊಂಡೊಯ್ಯಲು ಅವಕಾಶವಿಲ್ಲ. KSRTCಯು ಲಗೇಜ್‌ ನೀತಿ ಜಾರಿಗೊಳಿಸಿದೆ. ನಿಗದಿತ ತೂಕಕ್ಕಿಂತಲು ಹೆಚ್ಚಿನ ಭಾರದ ಲಗೇಜ್‌ ಕೊಂಡೊಯ್ದರೆ ಶುಲ್ಕ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ » ಫೋನ್‌ ಪೇಯಲ್ಲಿ ಕರೆಂಟ್‌ ಬಿಲ್‌ ಕಟ್ಟಿದ ಶಿವಮೊಗ್ಗದ ವಕ್ತಿಗೆ ಸ್ವಲ್ಪ ಹೊತ್ತಿಗೆ ಕಾದಿತ್ತು ಶಾಕ್ ವಿಮಾನ ಮತ್ತು ರೈಲುಗಳಲ್ಲಿ ಲಗೇಜ್‌ ನೀತಿ ಇದೆ. ನಿಗದಿಗಿಂತಲು ಹೆಚ್ಚಿನ ತೂಕದ ಲಗೇಜ್‌ ಕೊಂಡೊಯ್ದರೆ ಶುಲ್ಕ ಪಾವತಿಸಬೇಕಾಗುತ್ತದೆ. ಇದೇ ಮಾದರಿಯಲ್ಲಿ ಇನ್ಮುಂದೆ KSRTC ಬಸ್ಸುಗಳಲ್ಲಿಯು … Read more

ಶಿವಮೊಗ್ಗದಲ್ಲಿ ಬೆಳಗಿನ ಜಾವ ಹೆದ್ದಾರಿಗೆ ಅಡ್ಡಲಾಗಿ KSRTC ಬಸ್‌ ಪಲ್ಟಿ

100625 Bus mishap at bedarahosahalli in Shimoga taluk

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ KSRTC ಬಸ್‌ ಪಲ್ಟಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಶಿವಮೊಗ್ಗ ತಾಲೂಕು ಬೇಡರಹೊಸಹಳ್ಳಿ ಸಮೀಪ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ರಾಯಚೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಬಸ್‌ ಪಲ್ಟಿಯಾಗಿದೆ. ಬಸ್ಸಿನಲ್ಲಿ 29 ಪ್ರಯಾಣಿಕರು ಇದ್ದರು. ಈ ಪೈಕಿ ಮೂವರಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದಾಗಿ ಈ ರಸ್ತೆಯಲ್ಲಿ ಕೆಲವು ಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. … Read more

ಶಿವಮೊಗ್ಗ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಒಬ್ಬ ಸಾವು, ಹೇಗಾಯ್ತು ಘಟನೆ?

Bus-Mishap-at-LLR-Road-in-Shimoga-Vivek-Travels.

ಶಿವಮೊಗ್ಗ: ಖಾಸಗಿ ಬಸ್‌ (Bus) ಮತ್ತು ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ನಗರದ ಎಲ್‌ಎಲ್‌ಆರ್‌ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಪ್ರದೀಪ್‌ ಎಂಬುವವರು ಸಾವನ್ನಪ್ಪಿದ್ದಾರೆ. ಹೇಗಾಯ್ತು ಘಟನೆ? ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಖಾಸಗಿ ಬಸ್‌ ರಾಯಲ್‌ ಆರ್ಕಿಡ್‌ ಹೊಟೇಲ್‌ ಎದುರು ಬಿ.ಹೆಚ್‌.ರಸ್ತೆಯಿಂದ ಎಲ್‌ಎಲ್‌ಆರ್‌ ರಸ್ತೆಯಲ್ಲಿ ತೆರಳುತ್ತಿತ್ತು. ಈ ಸಂದರ್ಭ ಗೋಪಿ ಸರ್ಕಲ್‌ ಕಡೆಯಿಂದ ಸವರ್‌ಲೈನ್‌ ರಸ್ತೆಯಲ್ಲಿ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಬಸ್ಸು ಪಕ್ಕದ ಕಟ್ಟಡಕ್ಕೆ … Read more

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌, ಅರ್ಜಿ ಸಲ್ಲಿಸುವುದು ಹೇಗೆ? ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?

ksrtc-news-update-thumbnail.webp

ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಜೂ.2ರಿಂದ ಉಚಿತ ಅಥವಾ ರಿಯಾಯಿತಿ ಬಸ್‌ ಪಾಸ್ ವಿತರಣಾ ಕಾರ್ಯ ಆರಂಭಿಸಿದೆ. ಬಸ್‌ ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ಆದೇಶದಂತೆ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲಾಗುವುದು. ಪಾಸು ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು URL-https://sevasindhu.karnataka.gov.in ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಒನ್‌ ಕೇಂದ್ರಗಳಲ್ಲಿ … Read more

ಶಿವಮೊಗ್ಗದಿಂದ ನಾನ್‌ ಸ್ಟಾಪ್‌ ಬಸ್‌ ಹತ್ತಿದ್ದ ಮಹಿಳೆಗೆ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ನಾನ್‌ ಸ್ಟಾಪ್‌ (Non Stop) ಬಸ್ಸಿನಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಮಾಂಗಲ್ಯ ಸರ ಕಳ್ಳತನವಾಗಿದೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳಿದ್ದ ಬಸ್ಸಿನಲ್ಲಿ ಘಟನೆ ಸಂಭವಿಸಿದೆ. ರೇಣುಕಮ್ಮ ಎಂಬುವವರು ಶಿವಮೊಗ್ಗ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದರು. ಶಿಕಾರಿಪುರ ಕೋರ್ಟ್‌ ಸಮೀಪ ಬಸ್‌ ತೆರಳುವಾಗ ಕೊರಳಲ್ಲಿದ್ದ ಎರಡು ಎಳೆಯ ಬಂಗಾರದ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. 35 ಗ್ರಾಂ ಮಾಂಗಲ್ಯ ಸರಕ್ಕೆ ಅಂದಾಜು 85 ಸಾವಿರ ರೂ. ಇದೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ … Read more