BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್‌ ಆದೇಶ, ಯಾಕೆ?

Shimoga-DC-Car.

ಶಿವಮೊಗ್ಗ: ರೈತರೊಬ್ಬರಿಗೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕಾಗಿ ಶಿವಮೊಗ್ಗ ಜಿಲ್ಲಾಧಿಕಾರಿಯ ಕಾರು (Innova Car) ಜಪ್ತಿ (seizure) ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ವಸತಿ ಯೋಜನೆಗಾಗಿ ಹರಮಘಟ್ಟದ ಕೃಷಿಕ ನಂದಾಯಪ್ಪ ಅವರ ಒಂದು ಎಕರೆ ಜಮೀನನ್ನು 1992ರಲ್ಲಿ ಸರ್ಕಾರ ವಶಕ್ಕೆ ಪಡೆದಿತ್ತು. ಇದಕ್ಕೆ ₹22 ಲಕ್ಷ ಪರಿಹಾರ ನೀಡವುದಾಗಿ ತಿಳಿಸಿದ್ದ ಸರ್ಕಾರ ಕೇವಲ ₹9 ಲಕ್ಷ ನೀಡಿತ್ತು. ಬಾಕಿ ಹಣಕ್ಕಾಗಿ ರೈತ ನಂದಾಯಪ್ಪ ಕಚೇರಿಗೆ ಅಲೆದಾಡಿದರು ಫಲ ಸಿಕ್ಕಿರಲಿಲ್ಲ. ಕೊನೆಗೆ ನಂದಾಯಪ್ಪ ಕೋರ್ಟ್‌ (Shiomga Court) ಮೊರೆ ಹೋಗಿದ್ದರು. … Read more

ಶಿವಮೊಗ್ಗದಲ್ಲಿ ಶೋ ರೂಂ ಮುಂಭಾಗ ನಿಲ್ಲಿಸಿದ್ದ ಕಾರು ರಾತ್ರೋರಾತ್ರಿ ಮಾಯ

crime name image

ಶಿವಮೊಗ್ಗ: ಶೋ ರೂಂ ಮುಂಭಾಗ ನಿಲ್ಲಸಿದ್ದ ಕಾರು (Car) ಕಳ್ಳತನವಾಗಿದೆ ಎಂದು ಆರೋಪಿಸಿ ಮ್ಯಾನೇಜರ್‌ ದೂರು ನೀಡಿದ್ದಾರೆ. ಶಿವಮೊಗ್ಗದ ಬೈಪಾಸ್‌ ರಸ್ತೆಯ ವಾದಿ-ಎ-ಹುದಾ ಸಮೀಪದ ಶ್ರೀ ಲಕ್ಷ್ಮಿ ಕಾರ್‌ ಶೋ ರೂಂ ಎದುರು ಘಟನೆ ಸಂಭವಿಸಿದೆ. ಅಂಜನ್‌ ದಾಸ್‌ ಎಂಬುವವರು ತಮ್ಮ ಹಳೆಯ ಮಾರುತಿ 800 ಕಾರನ್ನು ಶ್ರೀ ಲಕ್ಷ್ಮಿ ಕಾರ್‌ ಶೂ ರೂಂನಲ್ಲಿ ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಮಾರಾಟಕ್ಕೆ ಕೊಟಿದ್ದರು. ಆದರೆ ಪ್ರಧಾನ ಕಚೇರಿಯಿಂದ ಇನ್ನು ಅನುಮತಿ ಸಿಗದ ಹಿನ್ನೆಲೆ ಶೋ ರೂಂನವರು ಮಾರುತಿ 800 ಕಾರನ್ನು … Read more

ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ನೀಲಿ ಬಣ್ಣದ ಕಾರು

ACCIDENT-NEWS-GENERAL-IMAGE.

ಶಿವಮೊಗ್ಗ: ನೀಲಿ ಬಣ್ಣದ ಕಾರು ಡಿಕ್ಕಿಯಾಗಿ ಬೈಕಿನಲ್ಲಿದ್ದ (Bike) ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಘಟನೆ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ತಾಲೂಕು ಹಸೂಡಿ ಗ್ರಾಮದ ಸರ್ಕಾರಿ ಶಾಲೆ ಬಳಿ ಘಟನೆ ಸಂಭವಿಸಿದೆ. ಬಿದರೆಯ ಆದರ್ಶ ಮತ್ತು ಗಿರೀಶ್‌ ಗಾಯಗೊಂಡಿದ್ದಾರೆ. ಇಬ್ಬರು ಅಡಿಕೆ ಕೂಲಿ ಕೆಲಸಕ್ಕೆ ಹೋಗಿದ್ದು, ಅಲ್ಲಿಂದ ಹಸೂಡಿಗೆ ತೆರಳಿದ್ದರು. ಮಧ್ಯಾಹ್ನ ಬಿದರೆಗೆ ಮರಳುವಾಗ ವೇಗವಾಗಿ ಬಂದ ನೀಲಿ ಬಣ್ಣದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ … Read more

ಖಾಸಗಿ ಬಸ್ಸಿಗೆ ಡಿಕ್ಕಿಯಾಗಿ ಶರಾವತಿ ಹಿನ್ನೀರಿನತ್ತ ಪಲ್ಟಿಯಾದ ಕಾರು, ವ್ಯಕ್ತಿ ಸಾವು, ಹೇಗಾಯ್ತು ಘಟನೆ?

Car-and-Bus-mishap-near-madodi-in-hosanagara-taluk

ಹೊಸನಗರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು ಕಾರು (Car) ಹಲವು ಬಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದು ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಹೊಸನಗರ ತಾಲೂಕು ಮಡೋಡಿ ಎಂಬಲ್ಲಿ ಘಟನೆ ಸಂಭವಿಸಿದೆ. ಬಿ.ಕೆ.ಹರಿಭಟ್‌ (76) ಮೃತರು. ಇವರು ಪತ್ನಿ ಕಮಲಾಕ್ಷಿ, ಸುಜಾತಾ ಮತ್ತು ಲೀಲಾವತಿ ಎಂಬುವವರ ಜೊತೆಗೆ ಆಲ್ಟೋ ಕಾರಿನಲ್ಲಿ ಹೊಸನಗರದ ನಿಟ್ಟೂರಿನಿಂದ ಮತ್ತಿಕೈ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದೆ. ನಿಟ್ಟೂರು – ನಾಗೋಡಿ ಸಮೀಪದ ಮಡೋಡಿ ಗ್ರಾಮದ ಬಳಿ ಹರಿಭಟ್‌ ಅವರು … Read more

ಶಿವಮೊಗ್ಗ – ಭದ್ರಾವತಿ ರಸ್ತೆ, ಟೀ ಕುಡಿಯಲು ತೆರಳಿದ್ದ ಸೆಕ್ಯೂರಿಟಿಯ ಜೀವ ಕಸಿದ ಕಾರು, ಆಗಿದ್ದೇನು?

Car-Incident-at-nidige-near-jain-public-school

ಶಿವಮೊಗ್ಗ: ರಸ್ತೆ ದಾಟುವಾಗ ಕಾರು (Car) ಡಿಕ್ಕಿ ಹೊಡೆದು ಸೆಕ್ಯೂರಿಟಿ ಗಾರ್ಡ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ – ಭದ್ರಾವತಿ ರಸ್ತೆಯ ನಿದಿಗೆ ಬಸ್‌ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಭದ್ರಾವತಿಯ ಜಿಂಕ್‌ಲೈನ್‌ ರಸ್ತೆ ನಿವಾಸಿ ನಂಜುಂಡ.ಬಿ (57) ಮೃತರು. ಇಲ್ಲಿನ ಜೈನ್‌ ಪಬ್ಲಿಕ್‌ ಶಾಲೆಯಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿ ಸ್ವಲ್ಪ ಸಮಯದ ಬಳಿಕ ಟೀ ಕುಡಿಯಲು ನಂಜುಂಡ ತೆರಳಿದ್ದರು. ನಿದಿಗೆ ಬಸ್‌ ನಿಲ್ದಾಣದ ಕಡೆಗೆ ತೆರಳಲು ರಸ್ತೆ ದಾಟುವಾಗ ಮಲವಗೊಪ್ಪ ಕಡೆಯಿಂದ ಬಂದು … Read more

ಸೋಗಾನೆ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಟೀ ಕ್ಯಾಂಟೀನ್‌ಗೆ ನುಗ್ಗಿದ ಕಾರು

Songane-Cross-car-incident

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರು (car) ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ಟೀ ಕ್ಯಾಂಟೀನ್‌ಗೆ ನುಗ್ಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ. ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೋಗಾನೆ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಕಾರು ಡಿಕ್ಕಿಯಾಗಿ ಭಂಡಾರಿ ಕ್ಯಾಂಪ್‌ನ ಚಲುವ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಬ್ಬು, ವಿಜಯಲಕ್ಷ್ಮಿ ಎಂಬುವವರು ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆಯ ಎಡಬದಿಯ ಕ್ಯಾಂಟೀನ್‌ಗೆ ನುಗ್ಗಿದೆ. ಘಟನೆಯಲ್ಲಿ … Read more

ಕಾರಿನ ಮೇಲೆ ಜಿಗಿದ ಕಾಡುಕೋಣ

061025-Bison-jumps-on-a-car-in-Thirthahalli.webp

ತೀರ್ಥಹಳ್ಳಿ: ಕಾಡು ಕೋಣವೊಂದು (Bison) ದಿಢೀರ್‌ ರಸ್ತೆಗೆ ಬಂದು ಕಾರಿನ ಮೇಲೆ ಜಿಗಿದಿದೆ. ಕಾರಿನ ಮುಂಭಾಗ ಜಖಂ ಆಗಿದ್ದು ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ನಾಲೂರು ಸಮೀಪ ಘಟನೆ ಸಂಭವಿಸಿದೆ. ಕಾರಿನ ಗಾಜು ಒಡೆದಿದ್ದು, ಬಾನೆಟ್‌ ಸೇರಿದಂತೆ ಕಾರಿನ ಮುಂಭಾಗ ಜಖಂ ಆಗಿದೆ. ಕಾರು ಹಾನಿಗೀಡಾಗಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಹಲವು ಸಬ್‌ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, ಯಾರೆಲ್ಲ ಟ್ರಾನ್ಸ್‌ಫರ್‌ ಆಗಿದ್ದಾರೆ? Bison

ಕಾರು ಚಲಾಯಿಸುವಾಗಲೇ ಹೃದಯಾಘಾತ, ಚಾಲಕ ಸಾವು

Vinobanagara-Police-Station.

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲೇ ಹೃದಯಾಘಾತವಾಗಿ (Heart Attack) ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗದ ವಿನೋಬನಗರ ಪೊಲೀಸ್‌ ಚೌಕಿಯಲ್ಲಿ ಘಟನೆ ಸಂಭವಿಸಿದೆ. ಹುಡ್ಕೊ ಕಾಲೋನಿ ನಿವಾಸಿ ಮಲ್ಲಿಕಾರ್ಜುನ (45) ಮೃತರು. ಕಾರು ಚಲಾಯಿಸುವಾಗ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೆ ಅವರು ಆಸ್ಪತ್ರೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ಇವತ್ತು ಏನೇನೆಲ್ಲ ಕಾರ್ಯಕ್ರಮ ಇದೆ? ಇಲ್ಲಿದೆ ಕಂಪ್ಲೀಟ್‌ … Read more

ಸಾಗರದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪಿಕಪ್‌ ವಾಹನ, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಸಾಗರ: ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಬೊಲೇರೋ ಪಿಕಪ್‌ ವಾಹನ ಡಿಕ್ಕಿ (Collision) ಹೊಡೆದು ಪಲ್ಟಿಯಾಗಿದೆ. ಸಾಗರ ತಾಲೂಕು ಯಳವರಸೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಪಾಯವಾಗಿಲ್ಲ. ಬರೂರಿನ ವೀರಭದ್ರಪ್ಪ ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಕಾರಿನಲ್ಲಿ ಕುಗ್ವೆ ಗ್ರಾಮಕ್ಕೆ ತೆರಳುತ್ತಿದ್ದರು. ಯಳವರಸೆ ಬಳಿ ಎದುರಿನಿಂದ ಬಂದ ಬೊಲೇರೋ ಪಿಕಪ್‌ ವಾಹನ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಹಿಂದೆ ಬರುತ್ತಿದ್ದ … Read more

ಶಿವಮೊಗ್ಗದಲ್ಲಿ ಇವತ್ತು ಕಾರು, ಬೈಕ್‌ ಖರೀದಿ ಜೋರು, ಕಾರಿನ ದರ ಎಷ್ಟು ಕಡಿಮೆಯಾಗಿದೆ? ಬೈಕ್‌ ರೆಟ್‌ ಎಷ್ಟು ಇಳಿದಿದೆ?

220925 Automobile sale boom in shimoga after gst 2.0

ಶಿವಮೊಗ್ಗ: ಜಿಎಸ್‌ಟಿ 2.0 ಇಂದಿನಿಂದ ಜಾರಿಗೆ ಬಂದಿದ್ದು, ಆಟೋಮೊಬೈಲ್‌ (Automobile) ಕ್ಷೇತ್ರದಲ್ಲಿ ಚೈತನ್ಯ ಮೂಡಿದೆ. ಶಿವಮೊಗ್ಗದಲ್ಲಿಯು ಬೈಕು, ಕಾರುಗಳ ಶೋ ರೂಂಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ವಾಹನಗಳ ಕುರಿತು ವಿಚಾರಣೆ, ಬುಕಿಂಗ್‌ ಮತ್ತು ಖರೀದಿ ಪ್ರಕ್ರಿಯೆ ಬಿರುಸು ಪಡೆದಿದೆ. ಎಲ್ಲೆಲ್ಲಿ ಹೇಗಿದೆ ಟ್ರೆಂಡ್‌? ಬೈಕ್‌ ಶೋ ರೂಂಗಳಲ್ಲಿ ಚೈತನ್ಯ ಜಿಎಸ್‌ಟಿ ಪ್ರಮಾಣ ಇಳಿಕೆ ವಿಚಾರ ಸುದ್ದಿಯಾಗುತ್ತಿದ್ದಂತೆ ಶೋ ರೂಂಗಳಿಗೆ ಜನ ಕಡಿಮೆಯಾಗಿದ್ದರು. ಆದರೆ ಇವತ್ತು ಜಿಎಸ್‌ಟಿ 2.0 ಜಾರಿಗೆ ಬಂದಿದ್ದು, ಬೈಕುಗಳ ದರ ₹9,000 ದಿಂದ ₹20,000ದವರೆಗೆ … Read more