ಸರ್ಕಾರಿ ವಾಹನದಲ್ಲಿ ನಕಲಿ ಅಧಿಕಾರಿ, ಕಂಡ ಕಂಡ ಅಂಗಡಿ ಮೇಲೆ ನಡೆಸಿದನಾ ದಾಳಿ?

Vinobanagara-Police-Station.

SHIVAMOGGA LIVE NEWS | 1 NOVEMBER 2022 SHIMOGA |ಸರ್ಕಾರಿ ವಾಹನದಲ್ಲಿ ಬಂದ ನಕಲಿ ಅಧಿಕಾರಿ (FAKE OFFICER), ಅಂಗಡಿ ಮಾಲೀಕರೊಬ್ಬರಿಗೆ ದಂಡ ಹಾಕುವ ಬೆದರಿಕೆ ಒಡ್ಡಿದ್ದಾನೆ. ಇದರಿಂದ ವಿನಾಯಿತಿ ಬೇಕಿದ್ದರೆ ತನಗೆ ಹಣ ನೀಡಬೇಕು ಎಂದು ಸೂಚನೆ ಕೊಟ್ಟಿದ್ದಾನೆ. ಈತನ ಅಸಲಿ ಬಣ್ಣ ಬಯಲಾಗುತ್ತಿದ್ದಂತೆ ಅಂಗಡಿ ಮಾಲೀಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿನೋಬನಗರದ ಎಪಿಎಂಸಿ ಬಳಿ 100 ಅಡಿ ರಸ್ತೆಯಲ್ಲಿರುವ ಗೊರೂರು ಮಾರ್ಟ್ ನಲ್ಲಿ ಘಟನೆ ಸಂಭವಿಸಿದೆ. ಮಾಲೀಕ ಕುಮಾರ್ ಅವರಿಂದ ಹಣ … Read more

‘ಇಲ್ಲಿ 33 ರೂ. ಊಟಕ್ಕೆ 190 ರೂ. ಬಿಲ್, ಸರ್ಕಾರಕ್ಕೆ ದೊಡ್ಡ ಲಾಸ್’

Sagara Government Hospital

SHIVAMOGGA LIVE NEWS | SAGARA| 15 ಜೂನ್ 2022 ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆಯುತ್ತಿದೆ. ಇದರ ವಿರುದ್ಧ ಕೂಡಲೆ ತನಿಖೆ ನಡೆಸಬೇಕು ಎಂದು ಸಾಗರ ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು ಒತ್ತಾಯಿಸಿದ್ದಾರೆ. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಬಾಬು ಅವರು, ಆಸ್ಪತ್ರೆಯಲ್ಲಿ 33 ರೂ.ಗೆ ಒದಗಿಸುತ್ತಿದ್ದ ಆಹಾರವನ್ನು ಈಗ 190 ರೂ.ಗೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ದೊಡ್ಡಮಟ್ಟದ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದರು. FOOD ಅಡುಗೆ ಕೋಣೆ ಇದ್ದರೂ … Read more

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರಿಂದ ದಿಢೀರ್ ಪ್ರತಿಭಟನೆ, ಆಡಳಿತ ಮಂಡಳಿ ವಿರುದ್ಧ ಘೋಷಣೆ

Sahyadri-College-Girl-Students-Protest-in-college

SHIVAMOGGA LIVE NEWS | 14 ಮಾರ್ಚ್ 2022 ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್’ನಲ್ಲಿನ ಸಮಸ್ಯೆ ಖಂಡಿಸಿ ಇವತ್ತು ವಿದ್ಯಾರ್ಥಿನಿಯರು ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜು ಮುಂಭಾಗ ಧರಣಿ ಕುಳಿತ ವಿದ್ಯಾರ್ಥಿನಿಯರು, ತಕ್ಷಣಕ್ಕೆ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದರು. ಕಳೆದ ವಾರ ಸಹ್ಯಾದ್ರಿ ಕಾಲೇಜಿನ 12 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಹೊಟ್ಟನೋವು, ವಾಂತಿಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾಲೇಜು ವತಿಯಿಂದ ಆಸ್ಪತ್ರೆಯ ಖರ್ಚು ಭರಿಸಲಾಗಿತ್ತು. ಈಗ ಹಣ ಹಿಂತಿರುಗಿಸುವಂತೆ ತಿಳಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು. … Read more

ಶಿವಮೊಗ್ಗದ ಓ.ಟಿ.ರಸ್ತೆಯಲ್ಲಿ ಬೊಲೆರೋ ಪಿಕಪ್ ವಾಹನದ ಮೇಲೆ ಪೊಲೀಸರ ದಾಳಿ

Doddapete police station in shimoga

SHIVAMOGGA LIVE NEWS | 2 ಮಾರ್ಚ್ 2022 ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಬೊಲೇರೋ ಪಿಕಪ್ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಓ.ಟಿ.ರಸ್ತೆಯ ಆಜಾದ್ ನಗರದ 3ನೇ ತಿರುವಿನಲ್ಲಿ ದಾಳಿ ನಡೆಸಲಾಯಿತು. ಹೇಗಾಯ್ತು ದಾಳಿ? ಎಷ್ಟು ಅಕ್ಕಿ ಸಿಕ್ತು? ಬೊಲೆರೋ ಪಿಕಪ್ ವಾಹನದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೊಂಡೊಯ್ಯಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಫುಡ್ … Read more

ಶಿವಮೊಗ್ಗ ಫುಡ್ ಕೋರ್ಟ್’ನಲ್ಲಿ ನೈಟ್ ಕರ್ಫ್ಯೂ ಉಲ್ಲಂಘನೆ, ಒಬ್ಬನ ವಿರುದ್ಧ ಕೇಸ್

031220 Night Curfew in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜನವರಿ 2022 ನೈಟ್ ಕರ್ಫ್ಯೂ ಅದೇಶ ಉಲ್ಲಂಘಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಶಶಿಕುಮಾರ್ (26) ಎಂಬಾತನ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ಕಾಯಿಲೆ ಕಾಯ್ದೆ ಅಡಿ ಕೇಸ್ ದಾಖಲು ಮಾಡಲಾಗಿದೆ. ಏನಿದು ಪ್ರಕರಣ? ನೈಟ್ ಕರ್ಫ್ಯೂ ಹಿನ್ನೆಲೆ, ಪೊಲೀಸರು, ರಾತ್ರಿ 10 ಗಂಟೆ ಬಳಿಕ ಶಿವಮೊಗ್ಗದ ಸವಳಂಗ ರಸ್ತೆಯ ಫುಡ್ ಕೋರ್ಟ್ ಬಂದ್ ಮಾಡಿಸುತ್ತಿದ್ದರು. ಈ … Read more

ಪಾನಿಪೂರಿ ತಿಂದ ಹಲವರು ಅಸ್ವಸ್ಥ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ, ದೂರು ನೀಡಲು ಹಿಂದೇಟು

Bhadravathi News Graphics

ಶಿವಮೊಗ್ಗ ಲೈವ್.ಕಾಂ | BHADRAVATHI / SHIMOGA NEWS | 27 ನವೆಂಬರ್ 2021 ಪಾನಿಪೂರಿ ಸೇವಿಸಿ ಮಕ್ಕಳು ಸೇರಿ ಹಲವರು ಅಸ್ವಸ್ಥರಾಗಿದ್ದಾರೆ. ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ. ಭದ್ರಾವತಿಯ ಅಪ್ಪರ್ ಹುತ್ತಾದಲ್ಲಿ ಘಟನೆ ಸಂಭವಿಸಿದೆ. ನಿತ್ಯ ಗಾಡಿಯಲ್ಲಿ ವ್ಯಕ್ತಿಯೊಬ್ಬ ಮನೆ ಬಳಿಗೆ ಪಾನಿಪೂರಿ ಮಾರಾಟ ಮಾಡಿಕೊಂಡು ಬರುತ್ತದ್ದ. ಆತನ ಬಳಿ ಮಕ್ಕಳು, ಮಹಿಳೆಯರು ಸೇರಿ ಹಲವರು ಆತನಿಂದ ಪಾನಿಪೂರಿ ಖರೀದಿಸಿ ಸೇವಿಸಿದ್ದಾರೆ. ಶುಕ್ರವಾರ ಘಟನೆ ಸಂಭವಿಸಿದೆ. ದೂರು ನೀಡಲು … Read more

ಶಿವಮೊಗ್ಗದಲ್ಲಿ ಆಹಾರ ದಸರಾ, ಒಂದು ನಿಮಿಷದಲ್ಲಿ ಏಳು ಇಡ್ಲಿ ತಿಂದ ದೀಪಿಕಾ, 5 ಬಾಳೆಹಣ್ಣು ಸ್ವಾಹ ಮಾಡಿದ ಧನಲಕ್ಷ್ಮಿ

111021 Idli competation in Shimoga Dasara

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಅಕ್ಟೋಬರ್ 2021 ಶಿವಮೊಗ್ಗ ದಸರಾದಲ್ಲಿ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಶುಶ್ರೊಷಕಿ ದೀಪಿಕಾ ಮತ್ತು ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಧನಲಕ್ಷ್ಮಿ ಪ್ರಥಮ ಬಹುಮಾನ ಪಡೆದಿದ್ದಾರೆ. ವಿನೋಬನಗರದ ಫ್ರೀ ಡ೦ಪಾರ್ಕ್’ನಲ್ಲಿ ದಸರಾ ಆಹಾರ ಸಮಿತಿ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವೈದರು, ನರ್ಸ್’ಗಳಿಗೆ ಮತ್ತು ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಹಿಳೆಯರಿಗೆ ಬಾಳೆ ಹಣ್ಣು ತಿನ್ನುವ ಸ್ಪರ್ಧೆ ರೋಚಕವಾಗಿತ್ತು. ಮೂರು ಸುತ್ತಿನ ಸ್ಪರ್ಧೆಯಲ್ಲಿ ಶುಶ್ರೊಷಕರಾದ ದೀಪಿಕಾ ಮತ್ತು … Read more

40 ಕೆಜಿ ಅಕ್ಕಿ ಪ್ಯಾಕೆಟ್​​​ನಲ್ಲಿ ಮೂರು ಕೆಜಿ ನಾಪತ್ತೆ, ನ್ಯಾಯಬೆಲೆ ಅಂಗಡಿಗೆ ಬಿತ್ತು ಬೀಗ

Bhadravathi News Graphics

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 16 ಜುಲೈ 2021 ತೂಕದಲ್ಲಿ ವಂಚನೆ ಮಾಡಿದ ಆರೋಪದ ಮೇಲೆ ನ್ಯಾಯಬೆಲೆ ಅಂಗಡಿಯೊಂದರ ಪರವಾನಗಿಯನ್ನೆ ರದ್ದುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ಪಡಿತರ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರು ಈ ಕ್ರಮ ಕೈಗೊಂಡಿದ್ದಾರೆ. ಭದ್ರಾವತಿಯ ಜಿಂಕ್‍ಲೈನ್‍ನಲ್ಲಿರುವ ಕಾಮಧೇನು ನ್ಯಾಯಬೆಲೆ ಅಂಗಡಿಯನ ಪರವಾನಗಿ ಅಮಾನತು ಮಾಡಲಾಗಿದೆ. ನಗರಸಭೆ ವ್ಯಾಪ್ತಿಯ 31ನೇ ವಾರ್ಡಿಗೆ ಸೇರಿದ ನ್ಯಾಯ ಬೆಲೆ ಅಂಗಡಿ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಮಾಪನ ಶಾಸ್ತ್ರ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ … Read more

ಸಾಗರ ನಗರಸಭೆಯಿಂದ ದಿನಸಿ ಕಿಟ್, ಫೋಟೊಗಳು ಮಿಸ್ಸಿಂಗ್, ತೀವ್ರ ವಿರೋಧ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 19 JUNE 2021 ಸಾಗರ ನಗರಸಭೆ ವಿತರಣೆ ಮಾಡಿರುವ ದಿನಸಿ ಕಿಟ್ ಮೇಲೆ ವಿಧಾನ ಪರಿಷತ್‍ ಸದಸ್ಯರು ಮತ್ತು ಅಧ್ಯಕ್ಷೆಯ ಫೋಟೊ ಕೈಬಿಟ್ಟಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ನಗರಸಭೆ ವತಿಯಿಂದ ದಿನಸಿ ಕಿಟ್‍ಗಳ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಾಗರ ಶಾಸಕ ಹರತಾಳು ಹಾಲಪ್ಪ ಅವರ ಫೋಟೊಗಳನ್ನು ಪ್ರಕಟಿಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಐ.ಎನ್‍.ಸುರೇಶ್‍ ಬಾಬು, ವಿಧಾನ … Read more

ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿಯಿಂದ ಫುಡ್ ಕಿಟ್ ವಿತರಣೆಗೆ ಪ್ಲಾನ್

KARGAL-SAGARA-NEWS-1.jpg

ಶಿವಮೊಗ್ಗ ಲೈವ್.ಕಾಂ | JOG KARGAL NEWS | 16 JUNE 2021 ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 600 ಕುಟುಂಬಗಳಿಗೆ ಕಿಟ್ ಹಂಚಲು ನಿರ್ಧರಿಸಲಾಗಿದೆ.ಪಟ್ಟಣ ಪಂಚಾಯಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಕಿಟ್ ಹಂಚಲು ತೀರ್ಮಾನಿಸಲಾಗಿದೆ. ಈ ಸಂಬಂಧ 4.69 ಲಕ್ಷ ರೂ. ಅನುದಾನ ಬಳಕೆಗೆ ಅನುಮೋದನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಪಟ್ಟಣ ಪಂಚಾಯಿತಿ … Read more