ಧರ್ಮಸ್ಥಳದಲ್ಲಿ ಆಣೆ ಮಾಡಲು ದಿನಾಂಕ ನಿಗದಿಪಡಿಸಿದ ಶಾಸಕ ಹಾಲಪ್ಪ

MLA-Haratalu-Halappa

ಶಿವಮೊಗ್ಗದ ಲೈವ್.ಕಾಂ | SAGARA NEWS | 3 ಫೆಬ್ರವರಿ 2022 ಸಾಗರ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ರಾಜಕೀಯ ಜಿದ್ದಾಜಿದ್ದಿ ಈಗ ಆಣೆ ಪ್ರಮಾಣ ಹಂತಕ್ಕೆ ತಲುಪಿದೆ. ಇದಕ್ಕೆ ದಿನಾಂಕವೂ ನಿಗದಿಯಾಗಿದೆ. ಏನಿದು ಆಣೆ ಪ್ರಮಾಣ? ಮರಳು ಸಾಗಣೆ ವಿಚಾರವಾಗಿ ಮುಂಚಿನಿಂದಲೂ ಹಾಲಿ ಮತ್ತು ಮಾಜಿ ಶಾಸಕರು, ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯುತ್ತಿದೆ. ಈಗ ಇದು ಆಣೆ ಪ್ರಮಾಣದವರೆಗೆ ಬಂದು ನಿಂತಿದೆ. ಮರಳು ಸಾಗಣೆದಾರರಿಂದ ಶಾಸಕ ಹರತಾಳು ಹಾಲಪ್ಪ … Read more

ಪ್ರಕಾಶ್ ಟ್ರಾವೆಲ್ಸ್ ಮಾಲೀಕ ನಾಪತ್ತೆ ಕೇಸ್, ಎರಡು ದಿನ ಏನೆಲ್ಲ ಬೆಳೆವಣಿಗೆಯಾಯ್ತು? ಇಲ್ಲಿದೆ ಸಂಪೂರ್ಣ ಅಪ್ ಡೇಟ್

230122 Search Operation at Pataguppa Bridge New

ಶಿವಮೊಗ್ಗದ ಲೈವ್.ಕಾಂ | SAGARA / HOSANAGARA NEWS | 24 ಜನವರಿ 2022 ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರು ಮೃತಪಟ್ಟಿದ್ದಾರೆ. ಪಟಗುಪ್ಪ ಸೇತುವೆ ಸಮೀಪ ಹೊಳೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಮಧ್ಯೆ ಅವರ ಸಾವಿನ ಕುರಿತು ಕುಟುಂಬದವರು, ಆಪ್ತರು, ಸಂಸ್ಥೆಯ ಕಾರ್ಮಿಕರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕಾಶ್ ಅವರು ನಾಪತ್ತೆಯಾದ ಬಳಿಕ ಪ್ರಮುಖ ವಿದ್ಯಮಾನ ನಡೆದವು. ಅವುಗಳ ಸಂಕ್ಷಿಪ್ತ ವಿವರ ಇಲ್ಲಿದೆ. ♦ ರಾತ್ರಿ ಇಡೀ … Read more

ಆನಂದಪುರ ಸಮೀಪ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ, ಮುಂದೇನಾಯ್ತು? ಇಲ್ಲಿದೆ ಪ್ರಮುಖ 10 ಬೆಳವಣಿಗೆಯ ಮಾಹಿತಿ

231121 Protest at Yedehalli Morarji School near Anandapuram

ಶಿವಮೊಗ್ಗ ಲೈವ್.ಕಾಂ | ANANDAPURA NEWS | 24 ನವೆಂಬರ್ 2021 ಶಾಲೆ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ತನೆ ವಿರುದ್ಧ ಸಿಡಿದೆದ್ದು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದು ಸಾಗರ ತಾಲೂಕಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಬಳಿಕ ಹಲವು ರಾಜಕೀಯ ತಿರುವುಗಳನ್ನು ಪಡೆದು, ಆರೋಪ, ಪ್ರತ್ಯಾರೋಪಗಳು ಕೇಳಿ ಬಂದವು. ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ನಂತರ ನಡೆದ ಹತ್ತು ಬೆಳವಣಿಗೆಯ ವಿವರ ಇಲ್ಲಿದೆ. ಬೆಳವಣಿಗೆ 1 ಸಾಗರ ತಾಲೂಕು ಇರುವಕ್ಕಿಯ ಇಂದಿರಾ ಗಾಂಧಿ ವಸತಿ ನಿಲಯದ ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ … Read more

ನಮ್ಮೂರ ಹೆಣ್ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಅಂತಾ ಊರ ಮುಂದೆ ಬ್ಯಾನರ್ ಕಟ್ಟಿದ ಗ್ರಾಮಸ್ಥರು, ಕಾರಣವೇನು?

140921 Sagara Villagers Protest Agianst Wine Shop

ಶಿವಮೊಗ್ಗ ಲೈವ್.ಕಾಂ | SAGARA NEWS | 14 ಸೆಪ್ಟೆಂಬರ್ 2021 ತಮ್ಮ ಬೇಡಿಕೆ ಈಡೇರುವವರೆಗೂ ನಮ್ಮೂರ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಂತ ಗ್ರಾಮಸ್ಥರು ಪಟ್ಟು ಹಿಡಿದು, ಪ್ರತಿಭಟನೆ ಆರಂಭಿಸಿದ್ದಾರೆ. ಇದು ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಾಗರ ತಾಲೂಕು ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಕೊಪ್ಪದ ಗ್ರಾಮಸ್ಥರು ವಿಭಿನ್ನ ಹೋರಾಟ ಆರಂಭಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಹೆಣ್ಣು ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಊರಿನ ಮುಂದೆ … Read more

ಸಿಗಂದೂರು ಸೇತುವೆ ಕಾಮಗಾರಿ ಸ್ಥಳಕ್ಕೆ ಸಚಿವರ ಭೇಟಿ, ಯಾವಾಗ ರೆಡಿಯಾಗುತ್ತೆ? ಈಗೆಷ್ಟಾಗಿದೆ ಕೆಲಸ?

Siganduru Bridge Plan 1

ಶಿವಮೊಗ್ಗ ಲೈವ್.ಕಾಂ | SAGARA NEWS | 26 ಆಗಸ್ಟ್ 2021 ಶರಾವತಿ ಹಿನ್ನೀರಿನಲ್ಲಿ ನಿರ್ಮಿಸುತ್ತಿರುವ ಸಿಗಂದೂರು ಸೇತುವೆ 2023ಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಕಳಸವಳ್ಳಿ- ಅಂಬಾರಗೊಡ್ಲುಗೆ ಭೇಟಿ ನೀಡಿದ ಸಚಿವ ಈಶ್ವರಪ್ಪ ಲಾಂಚ್‌ನಲ್ಲಿ ಸಂಚರಿಸಿ ಸೇತುವೆ ಕಾಮಗಾರಿ ಪರಿಶೀಲಿಸಿದರು. ಈಗಾಗಲೇ ಶೇ.30ರಷ್ಟು ಕಾಮಗಾರಿ ಪೂರ್ಣವಾಗಿದ್ದು ಈ ಸೇತುವೆ ಮೂಲಕ ಶರಾವತಿ ಕಣಿವೆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ತ್ವರಿತವಾಗಿ ಸೇತುವೆ ಕಾಮಗಾರಿ ಪೂರ್ಣ ಗೊಳಿಸುವಂತೆ ಇಂಜಿನಿಯರ್‌ಗಳಿಗೆ … Read more

ಸಾಗರ ಪಟ್ಟಣದ ವಿವಿಧೆಡೆ ಜಲಾವೃತ, ರಸ್ತೆ ಮೇಲೆ ಹರಿಯುತ್ತಿದೆ ನೀರು, ಶಾಸಕರಿಂದ ಸಿಟಿ ರೌಂಡ್ಸ್

230721 Keladi road in heavy rain 1

ಶಿವಮೊಗ್ಗ ಲೈವ್.ಕಾಂ | SAGARA NEWS | 23 ಜುಲೈ 2021 ಕೆಳೆದ ಎರಡು ದಿನದಿಂದ ಸಾಗರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಪಟ್ಟಣದ ವಿವಿಧ ಬಡಾವಣೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳ ಮೇಲೂ ಮಳೆ ನೀರು ಹರಿಯುತ್ತಿದೆ. ಕೆಳದಿ ರಸ್ತೆಯ ಮೇಲೆ ನೀರು ಚರಂಡಿಗಳು ಭರ್ತಿಯಾಗಿ ಕೆಳದಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಅಕ್ಕಪಕ್ಕದ ಬಡಾವಣೆಗಳಿಗೆ  ನೀರು ನುಗ್ಗಿದ್ದು, ಮನೆಗಳು ಜಲಾವೃತವಾಗಿವೆ. ವಿಚಾರ ತಿಳಿಯುತ್ತಿದ್ದಂತೆ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸ್ಥಳಕ್ಕೆ ಭೇಟಿ … Read more

‘ಕಾಗೋಡು ತಿಮ್ಮಪ್ಪ ಮನೆಯಲ್ಲಿ ಏಳು ವೈದ್ಯರಿದಾರೆ, ಆದರೂ ಲಸಿಕೆಗೆ ತಡವಾಗಿ ಬಂದಿದ್ದೇಕೆ?’

MLA-Haratalu-Halappa

ಶಿವಮೊಗ್ಗ ಲೈವ್.ಕಾಂ | SAGARA NEWS | 14 ಜುಲೈ 2021 ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಎರಡನೆ ಡೋಸ್ ಲಸಿಕೆ ಸಿಗದಿರುವ ಕುರಿತು ಸಾಗರ ಶಾಸಕ ಹರತಾಳು ಹಾಲಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಕಾಗೋಡು ತಿಮ್ಮಪ್ಪ ಅವರಿಗೆ ಲಸಿಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಶಾಸಕ ಹಾಲಪ್ಪ ಹೇಳಿದ್ದೇನು? ನಿನ್ನೆ ನೂರು ಡೋಸ್ ಲಸಿಕೆ ಇತ್ತು. ಆದರೆ ಕಾಗೋಡು ತಿಮ್ಮಪ್ಪ ಅವರು ಕೇಂದ್ರಕ್ಕೆ ಹೋದಾಗ ಲಸಿಕೆ ಖಾಲಿಯಾಗಿದೆ. ಸಾಮಾನ್ಯವಾಗಿ ಅವರು ಫೋನ್ ಮಾಡಿ ಹೋಗುತ್ತಿದ್ದರು. … Read more

ಸಾಗರದಲ್ಲಿ ಕರೋನಾದ ನಡುವೆ ಮತ್ತೊಂದು ಕಾಯಿಲೆಯ ಸಂಕಷ್ಟ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 10 JUNE 2021 ಕರೋನ ಆತಂಕದ ನಡುವೆ ಸಾಗರದಲ್ಲಿ ಡೆಂಗ್ಯೂ ಭೀತಿ ಎದುರಾಗಿದೆ. ದಿನೆ ದಿನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕ ಹಾಲಪ್ಪ ಸೂಚಿಸಿದ್ದಾರೆ. ಡೆಂಡ್ಯೂ ನಿಯಂತ್ರಣ ಸಂಬಂಧ ಸಾಗರ ನಗರಸಭೆ ರಂಗಮಂದಿರ ಆವರಣದಲ್ಲಿ ಶಾಸಕ ಹರತಾಳು ಹಾಲಪ್ಪ ಅವರು ಅಧಿಕಾರಿಗಳ ಸಭೆ ನಡೆಸಿದರು. ತಕ್ಷಣದಿಂದ ಡೆಂಗ್ಯೂ ನಿಯಂತ್ರಣ ಮತ್ತು ಜಾಗೃತಿ ಕಾರ್ಯ ನಡೆಸುವಂತೆ ಸೂಚಿಸಿದರು. ಶಾಸಕರ ಸೂಚನೆಗಳೇನು? ತಾಲೂಕಿನಲ್ಲಿ ಕಳೆದ ತಿಂಗಳು 10 … Read more

ಕಾರು ಅಪಘಾತ, ಗಾಯಾಳುಗಳಿಗೆ ನೆರವಾದ ಸಾಗರ ಶಾಸಕ

070621 Haratalu Halappa Helps Accident Injured 1

ಶಿವಮೊಗ್ಗ ಲೈವ್.ಕಾಂ | SAGARA NEWS | 7 JUNE 2021 ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ ಶಾಸಕ ಹರತಾಳು ಹಾಲಪ್ಪ, ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಲಿಂಗದಹಳ್ಳಿ (ಕೆರೋಡಿ ಕ್ರಾಸ್) ಬಳಿ ಕಾರು ಅಪಘಾತಕ್ಕೀಡಾಗಿತ್ತು. ಅದೆ ಮಾರ್ಗವಾಗಿ ಬರುತ್ತಿದ್ದ ಶಾಸಕ ಹರತಾಳು ಹಾಲಪ್ಪ ಕೂಡಲೆ ಕಾರು ನಿಲ್ಲಿಸಿ ಗಾಯಾಳುಗಳ ರಕ್ಷಣೆಗೆ ಧಾವಿಸಿದ್ದಾರೆ. ಅಪಘಾತಕ್ಕೀಡಾದ ಕಾರನ್ನು ಸ್ಥಳೀಯರ ನೆರವಿನಿಂದ ಹಿಂದಕ್ಕೆ ತಳ್ಳಿದ್ದಾರೆ. ಕಾರಿನಲ್ಲಿದ್ದ ಪಲ್ಲವಿ ಜೈನ್ ಎಂಬುವವರಿಗೆ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ … Read more

ಸಾಗರ ಬಸ್ ನಿಲ್ದಾಣಕ್ಕೆ ಶಾಸಕ ಹಾಲಪ್ಪ ದಿಢೀರ್ ಭೇಟಿ, ಮಾತು ಮರೆತ ಅಧಿಕಾರಿಗಳಿಗೆ ಕ್ಲಾಸ್, ಮಿನಿಸ್ಟರ್‌ಗೆ ಫೋನ್

010321 Sagara MLA Halappa Visit KSRTC Bus Stand 1

ಶಿವಮೊಗ್ಗ ಲೈವ್.ಕಾಂ | SAGARA NEWS | 1 MARCH 2021 ಬಸ್ ಸಂಚಾರ ಆರಂಭಿಸಲು ಇನ್ನೂ ಹತ್ತು ದಿನ ಬೇಕು ಎಂದು ತಿಳಿಸಿದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ, ಸಾಗರ ಶಾಸಕ ಹರತಾಳು ಹಾಲಪ್ಪ  ಇವತ್ತು ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾರಿಗೆ ಸಚಿವರಿಗೆ ಕರೆ ಮಾಡಿ, ತಕ್ಷಣ ಬಸ್ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದರು. ಏನಿದು ಕೇಸ್? ಅಧಿಕಾರಿಗಳಿಗೆ ಕ್ಲಾಸ್ ಏಕೆ? ಸಾಗರ ತಾಲೂಕು ಕಟ್ಟಿನಕಾರು ಭಾಗಕ್ಕೆ ಬಸ್ ಸಂಚಾರ ಆರಂಭಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆಗೆ ಶಾಸಕ … Read more