ಯಾರೂ ಇಲ್ಲದಿದ್ದಾಗ ಸಿಮೆಂಟ್ ಶೀಟ್ ಒಡೆದು ಮನೆ ಒಳಗೆ ನುಗ್ಗಿದ ಕಳ್ಳರು, ಏನೇನೆಲ್ಲ ಕಳವಾಗಿದೆ?

theft case general image

SHIVAMOGGA LIVE NEWS | 24 ಮಾರ್ಚ್ 2022 ಯಾರೂ ಇಲ್ಲದ ವೇಳೆ ಸಿಮೆಂಟ್ ಶೀಟ್ ತೆಗೆದು ಮನೆಯೊಳಗೆ ಚಿನ್ನ, ಬೆಳ್ಳಿ ಆಭರಣ, ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಅಣ್ಣಾನಗರದ ದಾದಾಪೀರ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ದಾದಾಪೀರ್ ಅವರ ಕುಟುಂಬದವರು ಸಂಬಂಧಿಯ ಮನೆಗೆ ತೆರಳಿದ್ದಾಗ ಕಳ್ಳತನವಾಗಿದೆ. ವಿಚಾರ ಗೊತ್ತಾಗಿದ್ದು ಹೇಗೆ? ದಾದಾಪೀರ್ ಅವರ ಕುಟುಂಬದವರು ಸಂಬಂಧಿಯೊಬ್ಬರ ಮನೆಗೆ ತೆರಳಿದ್ದರು. ಪರೀಕ್ಷೆ ಇದ್ದ ಕಾರಣ ಮರುದಿನವೇ ದಾದಾಪೀರ್ ಅವರ ಮಗ ಮನೆಗೆ ಹಿಂತಿರುಗಿದ್ದಾನೆ. ಆಗ ಕಳ್ಳತನದ ವಿಚಾರ ಗೊತ್ತಾಗಿದೆ. … Read more

ಬೇವಿನ ಉಡುಗೆ ಹರಕೆ, ದೇವಿಗೆ ತಂಬಿಟ್ಟಿನ ದೀಪದ ಆರತಿ, ಮಾರಿಕಾಂಬೆ ಮುಂದೆ ಶಿರಭಾಗಿಸಿದ ಭಕ್ತ ಸಮೂಹ

Harake-For-marikamba-Jathre-in-Shimoga.

SHIVAMOGGA LIVE NEWS | 23 ಮಾರ್ಚ್ 2022 ಇವತ್ತು ಕೋಟೆ ಮಾರಿಕಾಂಬ ದೇವಿ ಜಾತ್ರೆಯ ಎರಡನೆ ದಿನ. ದೇವಿಯನ್ನು ಮಾರಿ ಗದ್ದುಗೆ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದೆ. ದೊಡ್ಡ ಸಂಖ್ಯೆಯ ಭಕ್ತರು ದೇಗುಲಕ್ಕೆ ಆಗಮಿಸುತ್ತಿದ್ದು, ಹರಕೆ ತೀರಿಸಿ, ಪೂಜೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ. ಕೋಟೆ ಮಾರಿಕಾಂಬ ದೇವಿ ದೇವಸ್ಥಾನದ ಮಾರಿ ಗದ್ದುಗೆ ಮೇಲೆ ಮಾರಿಕಾಂಬ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಬೆಳಗ್ಗೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಬೇವಿನ ಹರಕೆ ತೀರಿಸುತ್ತಿದ್ದಾರೆ ಶಿವಮೊಗ್ಗ ನಗರದ ವಿವಿಧೆಡೆಯಿಂದ ಜನರು ಕಾಲ್ನಡಿಗೆಯಲ್ಲಿ … Read more

ತರಗತಿಯಲ್ಲೇ ವಿದ್ಯಾರ್ಥಿಗಳಿಂದ ಪ್ರತಿದಿನ ನಮಾಜ್, ವಿಡಿಯೋ ವೈರಲ್ ಬೆನ್ನಿಗೆ ಶಿಕ್ಷಕಿ ಅಮಾನತು

Shimoga Map Graphics

SHIVAMOGGA LIVE NEWS | 22 ಮಾರ್ಚ್ 2022 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ಕಲ್ಪಿಸಿದ ಮುಖ್ಯ ಶಿಕ್ಷಕಿಯನ್ನು ಶಾಲೆ ಆಡಳಿತ ಮಂಡಳಿ ಅಮಾನತು ಮಾಡಿದೆ. ಮುಖ್ಯ ಶಿಕ್ಷಕಿ ಜಬೀನಾ ಪರ್ವಿನ್ ಅಮಾನತಾದವರು. ಪ್ರತಿದಿನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಮುಖ್ಯ  ಶಿಕ್ಷಕಿ ಅವಕಾಶ ಕಲ್ಪಿಸಿದ್ದರು ಎಂಬ ಆರೋಪವಿದೆ. ವೈರಲ್ ಆಗಿತ್ತು ವಿಡಿಯೋ ತರಗತಿಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರು ಹೈಕೊರ್ಟ್ ಆದೇಶದ ಕುರಿತು … Read more

ಕೋಟೆ ಮಾರಿಕಾಂಬ, ವಿದ್ಯಾನಗರದ ಜಾತ್ರೆ, ಶಿವಮೊಗ್ಗ ಸಿಟಿ ಜಗಮಗ

Shimoga-City-Serial-Sets-for-Marikamba-Jathre

SHIVAMOGGA LIVE NEWS | 22 ಮಾರ್ಚ್ 2022 ಕೋಟೆ ಮಾರಿಕಾಂಬ ದೇವಿ ಜಾತ್ರೆ ಹಿನ್ನೆಲೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬಿ.ಹೆಚ್.ರಸ್ತೆ, ಗಾಂಧಿ ಬಜಾರ್, ಕೋಟೆ ಮಾರಿಕಾಂಬ ದೇವಿ ದೇವಸ್ಥಾನ ಸಂಪರ್ಕಿಸುವ ರಸ್ತೆಗಳು, ಹಳೆ ಶಿವಮೊಗ್ಗ ಭಾಗದ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇನ್ನು, ವಿದ್ಯಾನಗರದಲ್ಲಿಯು ಜಾತ್ರೆ ಇದೆ. ಹಾಗಾಗಿ ವಿದ್ಯುತ್ ಸಂಪರ್ಕಿಸುವ ಬಿ.ಹೆಚ್.ರಸ್ತೆಯಲ್ಲಿಯೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದನ್ನೂ ಓದಿ | ಸರಿದ ಪರದೆ, ಮೊಳಗಿದ ಘೋಷಣೆ, ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ … Read more

ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 15 ಪ್ರಮುಖ ವಿಚಾರ

Kote Marikamba Jathre Shimoga

SHIVAMOGGA LIVE NEWS | 21 ಮಾರ್ಚ್ 2022

ಶಿವಮೊಗ್ಗ ನಗರ ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಅತ್ಯಂತ ಪ್ರಸಿದ್ಧಿ ಪಡೆದ ಸ್ಥಳವಾಗಿದೆ. ಇಲ್ಲಿನ ಪುರಾತನ ದೇವಾಲಯಗಳಲ್ಲಿ ಕೋಟೆ ಶ್ರೀ ಆಂಜನೇಯ ದೇವಾಲಯ, ಕೋಟೆ ಶ್ರೀ ಭೀಮೇಶ್ವರ ದೇವಾಲಯ ಮತ್ತು ಶಕ್ತಿದೇವತೆ ಶ್ರೀ ಕೋಟೆ ಮಾರಿಕಾಂಬೆ ದೇವಾಲಯ ಪ್ರಮುಖವಾದುದು. ಅದರಲ್ಲಿಯೂ ನಗರದ ಆದಿದೇವತೆ ಶ್ರೀ ಮಾರಿಕಾಂಬೆ ಶಿವಮೊಗ್ಗದ ಸರ್ವ ಧರ್ಮಿಯರ ಆರಾಧನೆಗೆ ಪಾತ್ರಳಾಗಿರುವುದು ವಿಶೇಷ.

ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನ ಮತ್ತು ಜಾತ್ರೆ ಕುರಿತು ಪ್ರಮುಖ 15 ವಿಚಾರಗಳು ಇಲ್ಲಿವೆ

POINT%201ಜಾತ್ರೆ ನಡೆಸುವ ರೀತಿ ರಿವಾಜುಗಳು ಇಡೀ ನಾಡಿಗೆ ಮಾರ್ಗದರ್ಶಿಯಾಗಿದೆ. ಈ ಜಾತ್ರೆಗೆ ಸುಮಾರು 600 ವರ್ಷಗಳ ಇತಿಹಾಸವಿದೆ. ಅಲ್ಲದೆ, ಅಂದಿನಿಂದಲೂ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈಗಿನ ಗಾಂಧಿಬಜಾರ್ ಹಿಂದೆ ದೊಡ್ಡಪೇಟೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅದು ಮಾರಿಕಾಂಬೆಯ ತವರುಮನೆಯೆಂದೇ ಖ್ಯಾತಿ ಪಡೆದಿದೆ.

Read more

ಶಿವಮೊಗ್ಗದ ಬಾರ್’ನಲ್ಲಿ ಬಿಯರ್ ಬಾಟಲಿಯಿಂದ ವ್ಯಕ್ತಿಯ ತಲೆಗೆ ಹೊಡೆದ ಅಪರಿಚಿತ

Doddapete-Police-Station-General-Image.

SHIVAMOGGA LIVE NEWS | 20 ಮಾರ್ಚ್ 2022 ಕ್ಷುಲಕ ವಿಚಾರಕ್ಕೆ ಬಿಯರ್ ಬಾಟಲಿಯಿಂದ ವ್ಯಕ್ತಿಯೊಬ್ಬರ ತಲೆಗೆ ಹೊಡೆಯಲಾಗಿದೆ. ಶಿವಮೊಗ್ಗ ನಗರದ ಸವರ್ ಲೈನ್ ರಸ್ತೆಯ ಬಾರ್ ಒಂದರದಲ್ಲಿ ಘಟನೆ ಸಂಭವಿಸಿದೆ. ವೇಣುಗೋಪಾಲ (57) ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಸ್ನೇಹಿತರೊಬ್ಬರ ಜೊತೆಗೆ ವೇಣುಗೋಪಾಲ ಅವರು ಸವರ್ ಲೈನ್ ರಸ್ತೆಯಲ್ಲಿರುವ ಬಾರ್ ಒಂದಕ್ಕೆ ತೆರಳಿದ್ದರು. ಬಾರ್’ನಲ್ಲಿ ವೇಣುಗೋಪಾಲ ಅವರು ಕುಳಿತಿದ್ದ ಟೇಬಲ್ ಬಳಿ ಬಂದ ಅಪರಿಚಿತನೊಬ್ಬ ಹೊರಗೆ ಹೋಗು ಎಂದು ತಿಳಿಸಿದ್ದಾನೆ. ಯಾಕೆ … Read more

BREAKING | ಶಿವಮೊಗ್ಗದಲ್ಲಿ ವ್ಯಕ್ತಿಗೆ ಚಾಕು ಇರಿತ, ಪರಿಚಿತನಿಂದ ಕೃತ್ಯ

breaking news graphics

SHIVAMOGGA LIVE | 8 ಮಾರ್ಚ್ 2022 ಕ್ಷುಲಕ ವಿಚಾರಕ್ಕೆ ಜಗಳವಾಗಿ ವ್ಯಕ್ತಿಯಿಬ್ಬರಿಗೆ ಚಾಕು ಇರಿಯಲಾಗಿದೆ. ಗಂಭೀರ ಗಾಯಗೊಂಡಿರುವ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಬಾಪೂಜಿನಗರದ ಪಾಚಾ ಖಾನ್ (40) ಚಾಕು ಇರಿತಕ್ಕೆ ಒಳಗಾದವರು. ದೇಹದ ವಿವಿಧೆಡೆ ಚಾಕು ಇರಿತದಿಂದ ಗಾಯವಾಗಿದೆ. ಶಂಕರಮಠ ರಸ್ತೆಯ ಟಾಟಾ ಶೋ ರೂಂ ಬಳಿ ಘಟನೆ ಸಂಭವಿಸಿದೆ. ಚಾಕು ಇರಿತಕ್ಕೆ ಕಾರಣವೇನು? ಪಾಚಾ ಸಾಬ್ ಮತ್ತು ಆರ್‌ಎಂಎಲ್ ನಗರದ ದಸ್ತಗೀರ್ ಮಧ್ಯೆ ಒಂದು ಲಕ್ಷ ರೂ. ಹಣಕಾಸು ವಿಚಾರವಾಗಿ ಜಗಳ … Read more

ಧ್ವಜಾರೋಹಣ ಮಾಡಿದ ಇನ್ನೂ 12 ಮಂದಿ ವಿರುದ್ಧ ಶಿವಮೊಗ್ಗದಲ್ಲಿ ಕೇಸ್

Tunga Nagara Police station building

ಶಿವಮೊಗ್ಗದ ಲೈವ್.ಕಾಂ | SHIMOGA NEWS | 20 ಫೆಬ್ರವರಿ 2022 ಪಿಎಫ್ಐ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಟಿಪ್ಪುನಗರ ಚಾನಲ್ ಬಳಿ ಧ್ವಜಾರೋಹಣ ನೆರವೇರಿಸಲಾಗಿತ್ತು. ಫೆ.17ರಂದು ಪಿಎಫ್ಐ ಸಂಘಟನೆ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಲಾಗಿತ್ತು. ನಿಷೇಧಾಜ್ಞೆ ಅವಧಿಯಲ್ಲಿ ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದೆ ಅಕ್ರಮವಾಗಿ ಗುಂಪುಗೂಡಿದ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ. 12 ಮಂದಿ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ … Read more

ಇವತ್ತಿನ ಅಡಕೆ ಧಾರಣೆ | 17 ಫೆಬ್ರವರಿ 2022

Areca Price in Shimoga APMC

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022 ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ವಿವಿಧೆಡೆಯ ಮಾರುಕಟ್ಟೆಯಲ್ಲಿನ ಇವತ್ತಿನ ಅಡಕೆ ಧಾರಣೆ ಹೀಗಿದೆ.   ಶಿವಮೊಗ್ಗ ಮಾರುಕಟ್ಟೆ ಗೊರಬಲು 17120 34810 ಬೆಟ್ಟೆ 47589 50699 ರಾಶಿ 43069 46036 ಸರಕು 51069 75099 ಸಾಗರ ಮಾರುಕಟ್ಟೆ ಕೆಂಪುಗೋಟು 16510 39819 ಕೋಕ 14510 32809 ಚಾಲಿ 31510 37100 ಬಿಳೆ ಗೋಟು 14310 27499 ರಾಶಿ 33300 46267 ಸಿಪ್ಪೆಗೋಟು 7869 18999 ಶಿರಸಿ … Read more

ಕುಡಿಯುವ ನೀರಿನ ಪೈಪ್ ವಿಚಾರವಾಗಿ ಕಿರಿಕ್, ಎರಡು ಕುಟುಂಬದಿಂದ ದೂರು, ಪ್ರತಿದೂರು

Doddapete police station in shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022 ನಲ್ಲಿ ನೀರಿನ ಪೈಪ್ ವಿಚಾರವಾಗಿ ಎರಡು ಕುಟುಂಬದ ನಡುವೆ ಜಗಳವಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಎರಡು ಕುಟುಂಬದವರು ದೂರು, ಪ್ರತಿದೂರು ದಾಖಲಿಸಿದ್ದಾರೆ. ಹೊಸಮನೆ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಓಡಾಡುವ ದಾರಿಯಲ್ಲಿ ನೀರಿನ ಪೈಪ್ ಹಾಕಿದ್ದ ವಿಚಾರವಾಗಿ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಎರಡು ಕುಟುಂಬದವರ ಮಧ್ಯೆ ನೂಕಾಟ, ತಳ್ಳಾಟವಾಗಿದೆ. ಸುನಿಲ್ ರಾವ್ ಎಂಬುವವರು ದರ್ಶನ್, ಚೇತನ್, ಚಂದ್ರಮತಿ ಅವರ ವಿರುದ್ಧ ದೂರು … Read more