ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿಗೆ ಕೊಲೆ ಬೆದರಿಕೆ, ಏನಿದು ಪ್ರಕರಣ?

Dr-Rajanandini-Kagodu-Sagara.

SHIVAMOGGA LIVE NEWS | THREAT | 04 ಮೇ 2022 ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ತ್ಯಾಗರ್ತಿ ಗ್ರಾಮದ ಮಾರಿಗುಡಿ ಸಮೀಪ ಡಾ.ರಾಜನಂದಿನಿ ಅವರ ಕಾರು ಅಡ್ಡಗಟ್ಟಿ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಅವರ ಕಾರು ಚಾಲಕ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆದರಿಕೆ ಒಡ್ಡಿದ್ದು ಯಾರು? ಕಾಗೋಡು ತಿಮ್ಮಪ್ಪ ಫೌಂಡೇಶನ್ … Read more

ಮಂಗನ ಕಾಯಿಲೆಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಾವು, ಏನಿದು ಮಂಗನ ಕಾಯಿಲೆ? ಲಕ್ಷಣವೇನು?

Grama-Panchayat-Member-Dies-of-KFD-in-Aralagodu-Village

SHIVAMOGGA LIVE NEWS | MONKEY FEVER | 03 ಮೇ 2022 ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ ಶುರುವಾಗಿದೆ. KFD ಸೋಂಕಿಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬಲಿಯಾಗಿದ್ದಾರೆ. ಅರಳಗೋಡು ಗ್ರಾಮ ಪಂಚಾಯಿತಿ ಸದಸ್ಯ ರಾಮಸ್ವಾಮಿ (55) ಮೃತರು. ಏಪ್ರಿಲ್ 24ರಂದು ರಾಮಸ್ವಾಮಿ ಅವರಿಗೆ ಜ್ವರ ಬಂದಿತ್ತು. ಈ ಹಿನ್ನೆಲೆ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾಮಸ್ವಾಮಿ ಅವರಿಗೆ ಕೆಎಫ್’ಡಿ (ಮಂಗನ ಕಾಯಿಲೆ) ಸೋಂಕು ತಗುಲಿರುವುದು ದೃಢವಾಗಿತ್ತು. ಜ್ವರ … Read more

ಹುಡುಗಿಯ ಫೋಟೊ ತೋರಿಸುವುದಾಗಿ ನಂಬಿಸಿ ಮನೆಗೆ ಕರೆಯಿಸಿಕೊಂಡು ಕೊಲೆ

Lakeappa-murdered-at-Soraba-Manmane-Village

SHIVAMOGGA LIVE NEWS | MURDER | 03 ಮೇ 2022 ಮದುವೆಗೆ ಹುಡುಗಿಯ ಫೋಟೊ ತೋರಿಸುವುದಾಗಿ ನಂಬಿಸಿ ಮನೆಗೆ ಕರೆಯಿಸಿಕೊಂಡು ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ರಾಜಕೀಯ ದ್ವೇಷ ಮತ್ತು ಮಹಿಳೆಯೊಬ್ಬಳ ಜೊತೆಗಿನ ಸಲುಗೆಯೆ ಹತ್ಯೆಗೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಸೊರಬ ತಾಲೂಕು ಮನ್ಮನೆ ಗ್ರಾಮದ ಲೇಖಪ್ಪ (36) ಕೊಲೆಯಾದ ವ್ಯಕ್ತಿ. ಆರೋಪಿ ಕೃಷ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ನಿಗೂಢವಾಗಿತ್ತು ನಾಪತ್ತೆ ಪ್ರಕರಣ ಏಪ್ರಿಲ್ 11ರಂದು ಜಮೀನಿನಲ್ಲಿ ಕೆಲಸ ಮಾಡಲು ಲೇಖಪ್ಪ ಮನೆಗೆ ತೆರಳಿದ್ದ. ಎರಡು … Read more

ಶಿವಮೊಗ್ಗ ಜಿಲ್ಲೆಯ ಹಲವು ಇನ್ಸ್ ಪೆಕ್ಟರ್’ಗಳ ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?

police cap

SHIVAMOGGA LIVE NEWS | POLICE | 02 ಮೇ 2022 ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಬಿ.ಸಿ.ಗಿರೀಶ್ ಹೊಸನಗರ ವೃತ್ತಕ್ಕೆ, ಎಸಿಬಿಯ ವಿ.ಪ್ರವೀಣ್‌ಕುಮಾರ್‌ ಅವರನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸಿಐಡಿಗೆ ವರ್ಗಾವಣೆ ಆದೇಶದಲ್ಲಿರುವ ಕೆ.ಅಂಜನ್‌ಕುಮಾರ್‌ ಅವರನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ, ಸಿಐಡಿಯಲ್ಲಿರುವ ಬಿ.ಮಂಜುನಾಥ್ ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿರುವ … Read more

ಪಿಎಸ್ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಅಕ್ರಮ, ತನಿಖೆಗೆ ಒತ್ತಾಯ

ABVP-Protest-against-PSI-recruitment-scam

SHIVAMOGGA LIVE NEWS | JOB SCAM | 30 ಏಪ್ರಿಲ್ 2022 ಪಿಎಸ್‌ಐ ಹಾಗೂ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಾಗಿರುವ ಅಕ್ರಮದ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ಡಿಸಿ ಕಚೇರಿ ಸಹಾಯಕ ಅಧಿಕಾರಿ ಬಿ.ಎಸ್. ಕಡಬಾವಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪೊಲೀಸ್ ನೇಮಕಾತಿ ಪರೀಕ್ಷೆ ಹಾಗೂ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬಹಳಷ್ಟು ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಿಂದ ಬಡ … Read more

ಆಯನೂರು ಸಮೀಪ ಅಪಘಾತ, ಬೈಕ್ ಸವಾರ ಸಾವು

Ayanur Graphics

SHIVAMOGGA LIVE NEWS | ACCIDENT| 29 ಏಪ್ರಿಲ್ 2022 ಆಯನೂರು ಸಮೀಪ ಪಿಕಪ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ವಿಠಗೊಂಡನಕೊಪ್ಪ ಗ್ರಾಮದ ಆಕಾಶ್ (20) ಮೃತ ದುರ್ದೈವಿ. ಆಯನೂರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಆಕಾಶ್ ಬೈಕಿನಲ್ಲಿ ಶಿವಮೊಗ್ಗದಿಂದ ಆಯನೂರು ಕಡೆಗೆ ತೆರಳುತ್ತಿದ್ದ. ಕೋಳಿ ಸಾಗಣೆಯ ಪಿಕಪ್ ವಾಹನವು ಆಯನೂರು ಕಡೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿತ್ತು. ವೀರಗಾರನ ಬೈರನಕೊಪ್ಪದ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಕಾಶ್ … Read more

ಮೂರು ದಿನ ಶಿವಮೊಗ್ಗ, ಶಿಕಾರಿಪುರ ಪ್ರವಾಸ ಕೈಗೊಂಡ ಮಾಜಿ ಸಿಎಂ

-Yedyurappa-Visit-Shimoga-Helipad

SHIVAMOGGA LIVE NEWS | SHIMOGA TOUR | 29 ಏಪ್ರಿಲ್ 2022 ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂರು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇವತ್ತು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಿರುವ ಯಡಿಯೂರಪ್ಪ ಅವರು ಶಿವಮೊಗ್ಗ ಮತ್ತು ಶಿಕಾರಿಪುರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾವೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ? ಏಪ್ರಿಲ್ 30ರಂದು ಬೆಳಗ್ಗೆ 10.30ಕ್ಕೆ ಶಿವಮೊಗ್ಗ ನಗರದಲ್ಲಿ ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನೆ ಮಾಡಲಿದ್ದಾರೆ. ಸಂಜೆ ಶಿಕಾರಿಪುರಕ್ಕೆ ತೆರಳಲಿದ್ದಾರೆ. ಮೇ 1ರಂದು ಬೆಳಗ್ಗೆ 10.30ಕ್ಕೆ ಶಿಕಾರಿಪುರದ ಉಡುಗಣಿಗೆ … Read more

ಭದ್ರಾ ನಾಲೆಯಲ್ಲಿ ನೀರು ನಿಲ್ಲಿಸುವ ಕುರಿತು ಕಾಡಾ ಸಭೆಯಲ್ಲಿ ಮಹತ್ವದ ನಿರ್ಧಾರ

Bhadra-Kada-Meeting-in-Shimoga-Machenahalli.

SHIVAMOGGA LIVE NEWS | WATER | 28 ಏಪ್ರಿಲ್ 2022 ಬೇಸಿಗೆ ಬೆಳೆಗಳಿಗಾಗಿ ಭದ್ರಾ ಅಚ್ಚುಕಟ್ಟು ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರನ್ನು ಮೇ 15 ಕ್ಕೆ ನಿಲ್ಲಿಸಲಾಗುವುದು. ನೀರಿನ ಅವಶ್ಯಕತೆ ಇದ್ದರೆ ಮೇ 20ರವರೆಗೆ ಹೆಚ್ಚುವರಿಯಾಗಿ ನೀರು ಹರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿತು. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರಾ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇವತ್ತು ಮಲವಗೊಪ್ಪದ ಕಚೇರಿಯಲ್ಲಿ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ … Read more

ಶಿವಮೊಗ್ಗ ಫ್ರೀಡಂ ಪಾರ್ಕ್’ನಲ್ಲಿ ರಾತ್ರಿ ಪಾರ್ಟಿ, ವಾಕಿಂಗ್ ಪಾತ್ ಮೇಲೆ ಬೈಕ್ ರೈಡ್, ಆಕ್ರೋಶ

Dattatri-submit-memorandum-about-freedom-park

SHIVAMOGGA LIVE NEWS | PARK| 28 ಏಪ್ರಿಲ್ 2022 ಶಿವಮೊಗ್ಗದ ಹಳೆ ಜೈಲು ಆವರಣದ ಫ್ರೀಡಂ ಪಾರ್ಕ್’ಗೆ ಚಂದ್ರಶೇಖರ್ ಆಜಾದ್ ಪಾರ್ಕ್ ಎಂದು ನಾಮಕರಣ ಮಾಡಬೇಕು. ಈ ಪಾರ್ಕ್ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ ಆಗ್ರಹಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಎಸ್.ದತ್ತಾತ್ರಿ ಅವರು ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ಏನಿದೆ? ಫ್ರೀಡಂ ಪಾರ್ಕ್’ಗೆ ಚಂದ್ರಶೇಖರ್ ಆಜಾದ್ ಅವರ ಹೆಸರು ಇಡಬೇಕು. ಆದರೆ ಅದರ … Read more