ಶಿವಮೊಗ್ಗದಲ್ಲಿ ನಾಳೆಯಿಂದ ರಣಜಿ ಕ್ರಿಕೆಟ್‌, ಕರ್ನಾಟಕ vs ಗೋವಾ ಹಣಾಹಣಿಗೆ ನವುಲೆ ಅಖಾಡ ರೆಡಿ

241025-Karnataka-Vs-Goa-Ranaji-Cricket-in-Shimoga-KSCA-Stadium.webp

ಶಿವಮೊಗ್ಗ: ನಾಳೆಯಿಂದ ನವುಲೆಯ ಕೆಎಸ್‌ಸಿಎ ಕ್ರಿಕೆಟ್‌ (Cricket) ಸ್ಟೇಡಿಯಂನಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳ ಮಧ್ಯೆ ರಣಜಿ ಪಂದ್ಯಾವಳಿ ನಡೆಯಲಿದೆ. ಅ.28ರವರೆಗೆ ಪಂದ್ಯಾವಳಿ ನಡೆಯಲಿದ್ದು, ಉಭಯ ತಂಡಗಳು ಅಂತಿಮ ಹಂತದ ಸಿದ್ಧತೆ ನಡೆಸಿವೆ. ರಣಜಿ ಟ್ರೋಫಿ ಎಲೈಟ್ ವಿಭಾಗದ ‘ಬಿ’ ಗುಂಪಿನಲ್ಲಿ ಮಯಂಕ್ ಅಗರ್‌ವಾಲ್ ನಾಯಕತ್ವದ ಕರ್ನಾಟಕ ತಂಡ ಹಾಗೂ ದೀಪರಾಜ್ ಗಾಂವ್ಕರ್ ನೇತೃತ್ವದ ಗೋವಾ ತಂಡಗಳು ಮುಖಾಮುಖಿಯಾಗಲಿವೆ. ಐದು ವರ್ಷದ ಬಳಿಕ ಶಿವಮೊಗ್ಗದಲ್ಲಿ ಮತ್ತೆ ರಣಜಿ ಪಂದ್ಯಾವಳಿ ನಡೆಯುತ್ತಿದೆ. ಅ.25ರಂದು ಬೆಳಿಗ್ಗೆ 8.45ಕ್ಕೆ ಪಂದ್ಯದ ಉದ್ಘಾಟನೆ … Read more

ಶಿವಮೊಗ್ಗದ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ನೀಡಿದ ಡಾ. ಧನಂಜಯ ಸರ್ಜಿ, ಏನದು?

MLC-Dr-Dhananjaya-Sarji-Kayaka-setu-website

ಶಿವಮೊಗ್ಗ: ಜಿಲ್ಲೆಯ ಉದ್ಯೋಗಕಾಂಕ್ಷಿಗಳಿಗೆ ನೆರವಾಗಲು ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ‘ಕಾಯಕ ಸೇತು’ ವೆಬ್‌ಸೈಟ್‌ (Jobs Website) ಆರಂಭಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ಬಗೆಯ ಉದ್ಯೋಗದ ಮಾಹಿತಿ ಒಂದೇ ವೇದಿಕೆಯಲ್ಲಿ ದೊರೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ ಕಾಯಕ ಸೇತು ವೆಬ್‌ಸೈಟ್‌ ಅನಾವರಣ ಮಾಡಿದರು. ಈ ವೆಬ್‌ಸೈಟ್‌ನಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಉದ್ಯೋಗಾಕಾಂಕ್ಷಿಗಳಿಗೆ ನೆರವು ನೀಡಲಾಗುತ್ತಿದೆ. ಇದು ಉದ್ಯೋಗ ಮತ್ತು ಉದ್ಯೋಗಿಗಳನ್ನು ಅರಸುವವರಿಗೆ ಅನುಕೂಲವಾಗಿದೆ. ಕಾಯಕ ಸೇತು ಹೇಗೆ ಕೆಲಸ ಮಾಡಲಿದೆ? … Read more

‘ನಿಮ್ಮನ್ನು ಅರೆಸ್ಟ್‌ ಮಾಡ್ತೀವಿ’, ನಿಮಗು ಬರಬಹುದು ಇಂತಹ ಫೋನ್‌ ಕರೆ, ಶಿವಮೊಗ್ಗದ ಶಿಕ್ಷಕಿ ಮಾಡಿದ್ದೇನು?

Online-Fraud-In-Shimoga

ಶಿವಮೊಗ್ಗ: ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದು ಈ ಕುರಿತು ತನಿಖೆ ನಡೆಸಬೇಕು, 45 ದಿನ ನಿಮ್ಮನ್ನು ಅರೆಸ್ಟ್‌ (Digital Arrest) ಮಾಡಬೇಕು ಎಂದು ಬೆದರಿಸಿ ಶಿವಮೊಗ್ಗದ ಶಿಕ್ಷಕಿಯೊಬ್ಬರಿಗೆ ₹22.20 ಲಕ್ಷ ವಂಚಿಸಲಾಗಿದೆ. ಶಿವಮೊಗ್ಗದ ಶಿಕ್ಷಕಿಗೆ ಕರೆ ಮಾಡಿದ ಅಪರಿಚಿತನೊಬ್ಬ ನಿಮ್ಮ ಸಿಮ್‌ ಬ್ಲಾಕ್‌ ಮಾಡಲಾಗುತ್ತಿದೆ. ಕೂಡಲೆ ಮುಂಬೈ ಪೊಲೀಸರಿಗೆ ವಾಟ್ಸಪ್‌ ಕರೆ ಮಾಡಿ ಎಂದು ನಂಬರ್‌ ನೀಡಿದ್ದ. ಆತಂಕಗೊಂಡ ಶಿಕ್ಷಕಿ ವಾಟ್ಸಪ್‌ ಕರೆ ಮಾಡಿದಾಗ ಮುಂಬೈನ ಕೊಲಾಬಾದ ಸಬ್‌ ಇನ್ಸ್‌ಪೆಕ್ಟರ್‌ ವಿಜಯ್‌ ಖನ್ನಾ ಎಂದು ವ್ಯಕ್ತಿಯೊಬ್ಬ … Read more

ಕರ್ನಾಟಕದಲ್ಲಿ ಮುಂದುವರೆದ ಮಳೆ, ಶಿವಮೊಗ್ಗ ಜಿಲ್ಲೆಗೆ ಇವತ್ತೂ ಅಲರ್ಟ್‌ – ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಹವಾಮಾನ ಇಲಾಖೆ ಇವತ್ತೂ ಅಲರ್ಟ್‌ ಘೋಷಿಸಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿಯು ಜೋರು ಮಳೆಯಾಗುವ ಸಾಧ್ಯತೆ ಇದೆ. (weather) ಕರಾವಳಿಯ ಮೂರು ಜಿಲ್ಲೆಗಳಿಗು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗು ಯಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗುರುವಾರ ಜೋರು ಮಳೆಯಾಗಿತ್ತು. ಇತ್ತ ಇವತ್ತು ಯಲ್ಲೋ ಅಲರ್ಟ್‌ ಇರುವುದರಿಂದ ಮಳೆ ಮುಂದುವರೆಯುವ ನಿರೀಕ್ಷೆ ಇದೆ. ಶಿವಮೊಗ್ಗದಲ್ಲಿ ಹೇಗಿದೆ ವಾತಾವರಣ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 29 ಡಿಗ್ರಿ … Read more

ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ನೀಲಿ ಬಣ್ಣದ ಕಾರು

ACCIDENT-NEWS-GENERAL-IMAGE.

ಶಿವಮೊಗ್ಗ: ನೀಲಿ ಬಣ್ಣದ ಕಾರು ಡಿಕ್ಕಿಯಾಗಿ ಬೈಕಿನಲ್ಲಿದ್ದ (Bike) ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಘಟನೆ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ತಾಲೂಕು ಹಸೂಡಿ ಗ್ರಾಮದ ಸರ್ಕಾರಿ ಶಾಲೆ ಬಳಿ ಘಟನೆ ಸಂಭವಿಸಿದೆ. ಬಿದರೆಯ ಆದರ್ಶ ಮತ್ತು ಗಿರೀಶ್‌ ಗಾಯಗೊಂಡಿದ್ದಾರೆ. ಇಬ್ಬರು ಅಡಿಕೆ ಕೂಲಿ ಕೆಲಸಕ್ಕೆ ಹೋಗಿದ್ದು, ಅಲ್ಲಿಂದ ಹಸೂಡಿಗೆ ತೆರಳಿದ್ದರು. ಮಧ್ಯಾಹ್ನ ಬಿದರೆಗೆ ಮರಳುವಾಗ ವೇಗವಾಗಿ ಬಂದ ನೀಲಿ ಬಣ್ಣದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ … Read more

ರೆಡಿಯಾಗ್ತಿದೆ 2041ರ ಶಿವಮೊಗ್ಗಕ್ಕೆ ಮಹಾಯೋಜನೆ, ಏನೆಲ್ಲ ಪ್ಲಾನ್‌ ಇದೆ? ಇಲ್ಲಿದೆ ಡಿಟೇಲ್ಸ್‌

HS-Sundaresh-SUDA-President-Shimoga-Bhadravathi

ಶಿವಮೊಗ್ಗ: 2041ರ ವೇಳೆಗೆ ಶಿವಮೊಗ್ಗ – ಭದ್ರಾವತಿ ನಗರಗಳ ಜನಸಂಖ್ಯೆ ಗಮನದಲ್ಲಿ ಇಟ್ಟುಕೊಂಡು ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಮಹಾಯೋಜನೆ (Plan) ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸುಡಾ) ಅಧ್ಯಕ್ಷ ಹೆಚ್.ಎಸ್.ಸುಂದರೇಶ್‌ ಹೇಳಿದರು. ಸೂಡಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್‌, ಶಿವಮೊಗ್ಗ ಜಿಲ್ಲೆ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿದೆ. ಇಂತಹ ಸಂದರ್ಭ ಜಿಲ್ಲಾ ಕೇಂದ್ರವನ್ನು ಜನಸಂಖ್ಯೆ, ವಾಹನ ದಟ್ಟಣೆ ಆಧರಿಸಿ, ಆಸ್ಪತ್ರೆ, ಶಾಲಾ-ಕಾಲೇಜು, ಕೆರೆ-ಕಾಲುವೆ, ಸಂಪರ್ಕ ರಸ್ತೆ, ಉದ್ಯಾನ ಸೇರಿದಂತೆ ಒಟ್ಟಾರೆ ನಗರದ ಸೌಂದರ್ಯ … Read more

ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ನಿದ್ರೆ ಮಾಡ್ತಿದ್ದ ಮಹಿಳೆಗೆ ದೊಣ್ಣೆ ಏಟು, ಕಣ್ಣು ಬಿಟ್ಟ ಮೇಲೆ ಮತ್ತೊಂದು ಆಘಾತ

161025-shimoga-ksrtc-bus-stand-general-image.webp

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮಹಿಳೆಯರ (Woman) ವಿಶ್ರಾಂತಿ ಕೊಠಡಿಯಲ್ಲಿ ಕುಳಿತಿದ್ದ ರಾಣೇಬೆನ್ನೂರಿನ ರೇಣುಕಮ್ಮ ಎಂಬುವವರ ಮೇಲೆ ಮಹಿಳೆಯೊಬ್ಬಳು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ರೇಣುಕಮ್ಮ ಅವರ ವ್ಯಾನಿಟಿ ಬ್ಯಾಗಿನಲ್ಲಿದ್ದ ₹1000 ನಗದು ಕಸಿದುಕೊಂಡಿದ್ದಾರೆ. ರೇಣುಕಮ್ಮ ತಮ್ಮ ಪತಿಯೊಂದಿಗೆ ಹಣಗೆರೆ ಕಟ್ಟೆಗೆ ತೆರಳಬೇಕಿತ್ತು. ರಾತ್ರಿ ರೇಣುಕಮ್ಮ ಮತ್ತು ಪತಿ ಬಸ್‌ ನಿಲ್ದಾಣದಕ್ಕೆ ಬರುವಷ್ಟರಲ್ಲಿ ಖಾಸಗಿ ಬಸ್ಸು ಹೋಗಿತ್ತು. ಹಾಗಾಗಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಮಹಿಳೆಯರ ವಿಶ್ರಾಂತಿ ಜಾಗದಲ್ಲಿ ಕುಳಿತಿದ್ದರು. ಅಲ್ಲಿಯೆ ನಿದ್ರೆ ಮಾಡಿದ್ದ ರೇಣುಕಮ್ಮ ಅವರ ಮೇಲೆ ರಾತ್ರಿ … Read more

ಹೆದ್ದಾರಿ ಮಧ್ಯೆ ಅಡಿಕೆ ಸಸಿ ನೆಟ್ಟ ರೈತ, ಕಾರಣವೇನು?

Villager-plant-areca-Sappling-at-a-pot-hole-in-highway-at-hosanagara

ಹೊಸನಗರ: ರಾಷ್ಟ್ರೀಯ ಹೆದ್ದಾರಿಯ ಬೃಹತ್‌ ಗುಂಡಿಗಳನ್ನು (Pot Holes) ಮುಚ್ಚದ ಸರ್ಕಾರದ ನಡೆ ಖಂಡಿಸಿ ನಗರದಲ್ಲಿ ಮತ್ತಿಮನೆ ಶ್ರೀಕಾಂತ್‌ ಎಂಬುವವರು ವಿಭಿನ್ನ ಪ್ರತಿಭಟಿನೆ ಆರಂಭಿಸಿದ್ದಾರೆ. ಪ್ರತಿ ಗುಂಡಿಯಲ್ಲಿ ಅಡಿಕೆ ಸಸಿಗಳನ್ನು ನೆಟ್ಟು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಹೊಸನಗರ – ನಗರ ಮಾರ್ಗದಲ್ಲಿ ಭಾರಿ ಗಾತ್ರದ ಗುಂಡಿಗಳಾಗಿವೆ. ಇವುಗಳಿಂದ ನಿತ್ಯ ಒಂದಿಲ್ಲೊಂದು ಅಪಘಾತವಾಗುತ್ತಿವೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಹಾಗಾಗಿ ಸರ್ಕಾರದ ಗಮನ ಸೆಳೆಯಲು ಮತ್ತಿಮನೆ ಶ್ರೀಕಾಂತ್‌ ಗುಂಡಿ ಮುಚ್ಚಿ, ಅಡಿಕೆ ಸಸಿ … Read more

ಶಿವಮೊಗ್ಗದಲ್ಲಿ 3 ಕೆ.ಜಿ ಬೆಳ್ಳಿ ವಸ್ತು, ₹17 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

Police-Jeep-in-Shimoga-city

ಶಿವಮೊಗ್ಗ: ಮನೆಯೊಂದರ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ನಗರದ ದೂರವಾಣಿ ಬಡಾವಣೆಯ ಅಶ್ವಿನಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (Theft). ಅಶ್ವಿನಿ ಕುಟುಂಬದೊಂದಿಗೆ ತಮ್ಮ ತಾಯಿ ಮನೆಗೆ ತೆರಳಿದ್ದರು. ದೀಪಾವಳಿ ಹಬ್ಬದ ಬೆಳಗ್ಗೆ ಪಕ್ಕದ ಮನೆಯವರು ಅಶ್ವಿನಿ ಅವರಿಗೆ ಕರೆ ಮಾಡಿ ‘ಮನೆ ಬಾಗಿಲು ತೆಗೆದಿದ್ದು, ಮನೆಯಲ್ಲೇ ಇದ್ದೀರʼ ಎಂದು ವಿಚಾರಿಸಿದ್ದರು. ಕೂಡಲೆ ಊರಿನಿಂದ ಮರಳಿದ್ದು, ಪರಿಶೀಲಿಸಿದಾಗ ಚಿನ್ನಾಭರಣ, ಬೆಳ್ಳಿ ವಸ್ತುಗಳು ಕಳುವಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮನೆಯ … Read more

ಶಿವಮೊಗ್ಗದ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆ, ಏನೆಲ್ಲ ಸ್ಪರ್ಧೆಗಳಿವೆ?

PACE-PU-COLLEGE-SHIMOGA.

ಶಿವಮೊಗ್ಗ: ತ್ಯಾವರೆಕೊಪ್ಪದ ಪ್ರಾಣಿ ಸಂಗ್ರಹಾಲಯ ಹಾಗೂ ಹುಲಿ ಮತ್ತು ಸಿಂಹಧಾಮ, ಶಿವಮೊಗ್ಗದ ಪೇಸ್ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ 8, 9 ಮತ್ತು 10ನೇ ತರಗತಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅ.25ರಂದು ಬೆಳಗ್ಗೆ 9 ಗಂಟೆಗೆ ತೇವರಚಟ್ನಹಳ್ಳಿಯ ಪೇಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಸ್ಪರ್ಧೆಗಳು (Competition) ನಡೆಯಲಿವೆ. ಯಾವೆಲ್ಲ ಸ್ಪರ್ಧಗಳು ನಡೆಯಲಿವೆ? ರಸಪ್ರಶ್ನೆ: ವನ್ಯಜೀವಿಗಳು ಮತ್ತು ಸಾಮಾನ್ಯ ಜ್ಞಾನ ಕುರಿತು ಕೃತಕ ಬುದ್ಧಿಮತ್ತೆ (AI) ಪೇಂಟಿಂಗ್‌: ಶಿವಮೊಗ್ಗ ಜಿಲ್ಲಾ ವನ್ಯಜೀವಿಗಳನ್ನು ಕುರಿತ ಚಿತ್ರಕಲೆ ಪವರ್ … Read more