ಬ್ರೇಕ್‌ ಫೇಲ್‌ ಆಗಿ ಖಾಸಗಿ ಬಸ್‌ ಪಲ್ಟಿ, ಹಲವು ಪ್ರವಾಸಿಗರಿಗೆ ಗಾಯ, ಎಲ್ಲಿ? ಹೇಗಾಯ್ತು ಘಟನೆ?

191025-Bus-incident-on-the-way-to-vadnbailu-from-siganduru.webp

ಸಾಗರ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ ಮುಗಿಸಿ ವಡನಬೈಲು ಬಳೆ ಪದ್ಮಾವತಿ ದೇವಸ್ಥಾನಕ್ಕೆ ತೆರಳುವಾಗ ಬಸ್‌ ಬ್ರೇಕ್‌ ಫೇಲ್‌ (Break Fail) ಆಗಿ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಾಗರ ತಾಲೂಕು ಆಡುಕಟ್ಟೆ ಸಮೀಪದ ಜೋಗಿನ ಮಠ ಬಳಿ ಬಸ್‌ ಬ್ರೇಕ್‌ ಫೇಲ್‌ ಆಗಿ ತಿರುವಿನಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ 18 ಪ್ರವಾಸಿಗರು ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಪ್ರವಾಸಿಗರು ಚಿಕ್ಕಬಳ್ಳಾಪುರ ಸುಮಾರು 50 ಪ್ರವಾಸಿಗರು ಖಾಸಗಿ ಬಸ್ಸಿನಲ್ಲಿ ಸಿಗಂದೂರು, ವಡನಬೈಲು ದೇವಸ್ಥಾನಗಳಿಗೆ ಪ್ರವಾಸಕ್ಕೆ ಆಗಮಿಸಿದ್ದರು. ಇವತ್ತು ಸಿಗಂದೂರು … Read more

ಶಿವಮೊಗ್ಗದಲ್ಲಿ ಪಟಾಕಿ ಮಾರಾಟ ಶುರು, ಹೇಗಿದೆ ಡಿಮಾಂಡ್‌?

Deepavali-Crackers-sale-in-Shimoga-Freedom-park

ಶಿವಮೊಗ್ಗ: ದೀಪಾವಳಿ ಹಿನ್ನೆಲೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪಟಾಕಿ (Crackers) ವ್ಯಾಪಾರ ಆರಂಭವಾಗಿದೆ. ಇಂದು ಬೆಳಗ್ಗೆಯಿಂದಲೆ ಗ್ರಾಹಕರು ಪಟಾಕಿ ಖರೀದಿ ಮಾಡುತ್ತಿದ್ದು, ವ್ಯಾಪಾರ ಬಿರುಸಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಮೂರು ಪ್ರತ್ಯೇಕ ಲೇನ್‌ಗಳಲ್ಲಿ 90 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಭಾನುವಾರ ಬೆಳಗ್ಗೆಯಿಂದಲೆ ಇಲ್ಲಿ ಪಟಾಕಿ ವಹಿವಾಟು ಆರಂಭವಾಗಿದೆ. ಮಕ್ಕಳು ಪಟಾಕಿ ಬಾಕ್ಸ್‌ಗಳ್ನು ಹಿಡಿದು ಪೋಷಕರ ಜೊತೆಗೆ ಖುಷಿಯಿಂದ ಓಡಾಡುವ ದೃಶ್ಯ ಸಾಮಾನ್ಯವಾಗಿದೆ. ಹೇಗಿದೆ ರೇಟ್‌? ಯಾವುದಕ್ಕೆ ಹೆಚ್ಚು ಡಿಮಾಂಡ್‌? ಹಸಿರು ಪಟಾಕಿ ಮಾರಾಟ ಕಡ್ಡಾಯಗೊಳಿಸಿರುವ ಹಿನ್ನೆಲೆ ಎಲ್ಲ ಅಂಗಡಿಗಳಲ್ಲು ಅವುಗಳನ್ನೆ … Read more

ಶಿವಮೊಗ್ಗದಲ್ಲಿ ರಾಜ ಕಾಲುವೆ ಅವೈಜ್ಞಾನಿಕ ಕಾಮಗಾರಿ, ಸ್ಥಳಕ್ಕೆ ತೆರಳಿ ಸಂಸದ ರಾಘವೇಂದ್ರ ಪರಿಶೀಲನೆ

BY-Raghavendra-visits-raja-kaluve-near-dwaraka-convention-hall-in-Shimoga.

ಶಿವಮೊಗ್ಗ: ರಾಜ ಕಾಲುವೆಯ (Raja Kaluve) ಅವೈಜ್ಞಾನಿಕ ನಿರ್ಮಾಣದಿಂದಾಗಿ ಮಳೆ ಹೆಚ್ಚಾದ ಸಂದರ್ಭ ವಿವಿಧೆಡೆ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಸ್ಥಳೀಯರ ದೂರಿನ ಹಿನ್ನೆಲೆ ಸಂಸದ ಬಿ.ವೈ.ರಾಘವೇಂದ್ರ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಶಿವಮೊಗ್ಗದ ಸಾಗರ ರಸ್ತೆಯ ದ್ವಾರಕ ಕನ್ವೆನ್ಷನ್‌ ಹಾಲ್‌ ಸಮೀಪ ರಾಜ ಕಾಲುವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಮಳೆ ಹೆಚ್ಚಾದರೆ ಕೊಳಚೆ ನೀರು ಗೋಪಾಲಗೌಡ ಬಡಾವಣೆಯ ಮನೆಗಳಿಗೆ ನುಗ್ಗಿ ಹಾನಿ ಉಂಟಾಗುತ್ತಿದೆ. ಈ ಕುರಿತು ಸ್ಥಳೀಯರು ತಿಳಿಸಿದ್ದರಿಂದ ಸಂಸದ ಬಿ.ವೈ.ರಾಘವೇಂದ್ರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. … Read more

ಕ್ಯಾನ್ಸರ್‌ ಗೆಲ್ಲಲು ಇದೊಂದು ಯೋಚನೆ ಸಾಕು, ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಡಾಕ್ಟರ್‌ ಸಲಹೆ

Breast-Cancer-programme-at-Sahyadri-Narayana-Hospital-Shimoga.

ಶಿವಮೊಗ್ಗ: ನಮ್ಮ ಸುತ್ತಲೂ ಸ್ಫೂರ್ತಿ ನೀಡುವಂತಹ ಜನ ಇರುತ್ತಾರೆ. ಅವರನ್ನು ನೋಡಿ ಸ್ಪೂರ್ತಿ ಪಡೆಯಬೇಕು. ಆಗ ಮಾತ್ರ ತುಂಬಾ ಕಠಿಣ ಪರಿಸ್ಥಿತಿಗಳಿಂದ ಹೊರ ಬರಬಹುದು ಎಂದು ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನ್ಸಲ್ಟಂಟ್ ಮೆಡಿಕಲ್ ಅಂಕಾಲಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಹೇಳಿದರು. (Cancer) ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ‘ಬ್ರೆಸ್ಟ್ ಕ್ಯಾನ್ಸರ್ ಸರ್ವೈವರ್ಸ್ ಮೀಟ್’ನಲ್ಲಿ ಮಾತನಾಡಿದದರು. ಮನುಷ್ಯ ಸಕಾರಾತ್ಮಕವಾಗಿ ಆಲೋಚಿಸಬೇಕು. ಇಲ್ಲಿ ಕ್ಯಾನ್ಸರ್ ಗೆದ್ದವರು ಸೇರಿದ್ದಾರೆ. ಅವರೆಲ್ಲಾ ನಮಗೆ ಸ್ಫೂರ್ತಿ ಎಂದರು. ಜೀವನದಲ್ಲಿ ನಗು … Read more

ದೀಪಾವಳಿ, ಪ್ರವಾಸಿಗರ ಸಂಖ್ಯೆ ಹೆಚ್ಚಳ, ಅ.21ರಂದೂ ಶಿವಮೊಗ್ಗ ಮೃಗಾಲಯ ಓಪನ್‌

Lion-Tiger-Safari-Tyavrekoppa-in-Shimoga.

ಶಿವಮೊಗ್ಗ: ದೀಪಾವಳಿ ಹಿನ್ನೆಲೆ ಸಾರ್ವಜನಿಕರು ಮೃಗಾಲಯ (Zoo) ವೀಕ್ಷಣೆಗೆ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾಲೇಜು ಪ್ರವಾಸಕ್ಕೆಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ತ್ಯಾವರೆಕೊಪ್ಪದ ಹುಲಿ ಸಿಂಹಧಾಮದಲ್ಲಿ ಮೃಗಾಲಯ ಹಾಗೂ ಸಫಾರಿ ವೀಕ್ಷಣೆಯನ್ನು ಅ.21 ಸಹ ತೆರೆದಿರುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರೀಶೀಲನೆ, ವಾಹನಗಳ ಒಡಾಟಕ್ಕೆ ಬದಲಿ ಮಾರ್ಗ

ಸಾಗರ ತಾಲೂಕಿಗೆ ಮತ್ತೆರಡು ಪೊಲೀಸ್‌ ಠಾಣೆ ಬೇಕು, ಗೃಹ ಸಚಿವರಿಗೆ ಎಂಎಲ್‌ಎ ಮನವಿ

MLA-Beluru-Gopalakrishna-Meets-Home-Minister-G-Parameshwara - Requests for police station

ಸಾಗರ: ಪಟ್ಟಣಕ್ಕೆ ನೂತನ ಟ್ರಾಫಿಕ್‌ ಪೊಲೀಸ್‌ ಠಾಣೆ (Police Station) ಮತ್ತು ತುಮರಿ – ಬ್ಯಾಕೋಡು ಭಾಗಕ್ಕೆ ನೂತನ ಪೊಲೀಸ್‌ ಠಾಣೆ ಮಂಜೂರು ಮಾಡುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಾಗರ ಪಟ್ಟಣ ಬೆಳೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನು, ಅನೇಕ ಪ್ರವಾಸಿ ತಾಣಗಳಿದ್ದು ಪ್ರವಾಸಿ ವಾಹನಗಳ ದಟ್ಟಣೆಯು ಹೆಚ್ಚಿರುತ್ತದೆ. ಸಿಗಂದೂರಿಗೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣ ಮತ್ತು … Read more

ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರೀಶೀಲನೆ, ವಾಹನಗಳ ಒಡಾಟಕ್ಕೆ ಬದಲಿ ಮಾರ್ಗ

railway-track-general-image.webp

ಶಿವಮೊಗ್ಗ: ಶಿವಮೊಗ್ಗ – ಭದ್ರಾವತಿ ಮಧ್ಯೆ ರೈಲ್ವೆ ಮಾರ್ಗದಲ್ಲಿ (Railway Route) ಪರೀಕ್ಷೆ ಹಿನ್ನೆಲೆ ಅ.19 ರಿಂದ 25ರವರೆಗೆ ವಿವಿಧ ದಿನಗಳಂದು ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಯಾವಾಗ ಯಾವ ಗೇಟ್‌ಗಳು ಬಂದ್? ಎಲ್‌ಸಿ 35- ಲಕ್ಷ್ಮೀಪುರ ರಸ್ತೆ: ಅ. 19ರ ಬೆಳಗ್ಗೆ 8 ರಿಂದ ಅ.20 ರ ಸಂಜೆ 6ರವರೆಗೆ ಬಿ.ಹೆಚ್.ರಸ್ತೆ ಮುಖಾಂತರ ಕಡದಕಟ್ಟೆ – ಹೆಬ್ಬಂಡಿ ರಸ್ತೆ ಸಂಪರ್ಕ – ಲಕ್ಷ್ಮೀಪುರ ರಸ್ತೆ ಮಾರ್ಗ. ಎಲ್‌ಸಿ … Read more

ಶಿವಮೊಗ್ಗ ಲೈವ್.ಕಾಂ ವರದಿ ಪರಿಣಾಮ, ಕೋಟಿ ವೆಚ್ಚದಲ್ಲಿ ರಿಪೇರಿಯಾಗ್ತಿದೆ ರೋಡ್‌, ಸ್ಥಳಕ್ಕೆ ಎಂಎಲ್‌ಎ ಭೇಟಿ

181025-MLA-SN-Channabasappa-visit-honnali-road-in-shimoga-city.webp

ಶಿವಮೊಗ್ಗ: ನಗರದ ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆ ರಿಪೇರಿ ಕಾರ್ಯ ಆರಂಭವಾಗಿದೆ. ಶಾಸಕ ಎಸ್‌.ಎನ್.ಚನ್ನಬಸಪ್ಪ ಕಾಮಗಾರಿ ಸ್ಥಳಕ್ಕೆ ಭೇಟಿ (Visit) ನೀಡಿ ಪರಿಶೀಲಿಸಿದರು. ರಸ್ತೆ ಹಾಳಾಗಿ ವಾಹನ ಸವಾರರು ಮತ್ತು ಸ್ಥಳೀಯರು ಅನುಭವಿಸುತ್ತಿರುವ ಯಾತನೆ ಕುರಿತು ಈ ಹಿಂದೆ ಶಿವಮೊಗ್ಗ ಲೈವ್‌.ಕಾಂ ವರದಿ ಮಾಡಿತ್ತು. ಎಂಎಲ್‌ಎ ಭೇಟಿ, ಪರಿಶೀಲನೆ ಕಾಮಗಾರಿ ಸ್ಥಳಕ್ಕೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಭೇಟಿ ನೀಡಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಂಚಾರ ಠಾಣೆ ಪೊಲೀಸರು, ಸ್ಥಳೀಯ ಮುಖಂಡರ ಜೊತೆಗೆ ಕಾಮಗಾರಿ ಗುಣಮಟ್ಟ ಮತ್ತು … Read more

ಭದ್ರಾವತಿ ಕೂಡ್ಲಿಗೆರೆ ಬಳಿ ಬೈಕುಗಳು ಡಿಕ್ಕಿ, ಸವಾರನಿಗೆ ಗಾಯ

Bhadravathi-Rural-Police-Station

ಭದ್ರಾವತಿ: ತರಕಾರಿ ಖರೀದಿಸಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಮತ್ತೊಂದು ಬೈಕ್‌ ಡಿಕ್ಕಿ (Mishap) ಹೊಡೆದಿದೆ. ಭದ್ರಾವತಿ ತಾಲೂಕು ಕೂಡ್ಲಿಗೆರೆಯ ಬಸ್‌ ನಿಲ್ದಾಣದ ಬಳಿ ಅಪಘಾತವಾಗಿದೆ. ಕೂಡ್ಲಿಗೆರೆಯ ಮುರುಳಿ ಎಂಬುವವರಿಗೆ ಗಾಯವಾಗಿದೆ. ಅಂಗಡಿಯಲ್ಲಿ ತರಕಾರಿ ಖರೀದಿಸಿ ಬೈಕಿನಲ್ಲಿ ತೆರಳುತ್ತಿದ್ದರು. ತಮ್ಮ ಮನೆಗೆ ಹೋಗುವ ರಸ್ತೆಗೆ ಬೈಕ್‌ ತಿರುಗಿಸುತ್ತಿರುವಾಗ ವೇಗವಾಗಿ ಬಂದ ಸ್ಪ್ಲೆಂಡರ್‌ ಬೈಕ್‌ ಡಿಕ್ಕಿ ಹೊಡೆದಿದೆ. ಮುರುಳಿ ಅವರ ಕಾಲು, ಕಣ್ಣಿನ ಭಾಗ ಸೇರಿ ವಿವಿಧೆಡೆ ಗಾಯವಾಗಿದೆ. ಬೈಕಿಗು ಹಾನಿಯಾಗಿ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ … Read more

ಬಸ್ಸಿನ ಸೀಟಿನಲ್ಲಿ ಕುಳಿತು ವ್ಯಾನಿಟಿ ಬ್ಯಾಗ್‌ ಕಡೆ ಗಮನ ಹರಿಸಿದ ಮಹಿಳೆಗೆ ಕಾದಿತ್ತು ಆಘಾತ

KSRTC-Bus-Stand-In-Shimoga

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಖದೀಮರ ಹಾವಳಿ ಮುಂದುವರೆದಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ (Jewels), ನಗದು ಕಳ್ಳತನವಾಗಿದೆ ಎಂದು ಮಲ್ಲಿಗೇನಹಳ್ಳಿಯ ಬಂಗಾರಮ್ಮ ಎಂಬುವವರು ದೂರು ನೀಡಿದ್ದಾರೆ. ಬಂಗಾರಮ್ಮ ಸೊರಬದ ತಮ್ಮೂರಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಆಗಮಿಸಿದ್ದರು. ಆನವಟ್ಟಿಗೆ ತೆರಳುವ ಬಸ್‌ ಬಂದಿದ್ದು, ಸೀಟು ಹಿಡಿದು ಕುಳಿತಿದ್ದರು. ಟಿಕೆಟ್‌ ಮಾಡಿಸಲು ವ್ಯಾನಿಟಿ ಬ್ಯಾಗ್‌ ತೆಗೆಯಲು ಮುಂದಾದಾಗ ಬ್ಯಾಗಿನ ಜಿಪ್‌ ತೆರೆದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಅದರೊಳಗೆ ಇದ್ದ 25 ಗ್ರಾಂ ತೂಕದ ಒಂದು ಲಕ್ಷ ಮೌಲ್ಯದ ಕಾಸಿನ ಸರ, ₹2.29 … Read more