ಅ.9ರ ಶಿಕಾರಿಪುರ ಬಂದ್‌ಗೆ ಶಿರಾಳಕೊಪ್ಪದಲ್ಲು ಬೆಂಬಲ

SHIRALAKOPPA-SHIKARIPURA-NEWS

ಶಿರಾಳಕೊಪ್ಪ: ಟೋಲ್ ವಿರುದ್ಧ ಕಳೆದ ವರ್ಷದಿಂದ ಸತತ ಹೋರಾಟ ಮುಂದುವರಿಸಿದ್ದರೂ ಸಮಸ್ಯೆಗೆ ಪರಿಹಾರ ದೊರಕದ ಹಿನ್ನೆಲೆ ಅ.9ರಂದು ಕರೆ ನೀಡಿರುವ ಶಿಕಾರಿಪುರ ಬಂದ್‌ಗೆ (Bandh) ಶಿರಾಳಕೊಪ್ಪದಲ್ಲೂ ಬೆಂಬಲ ವ್ಯಕ್ತವಾಗಿದೆ ಎಂದು ಸಮಿತಿ ಅಧ್ಯಕ್ಷ ಶಿವರಾಜ್‌ ಪಾಟೀಲ್‌ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂದ್ ಸಂಪೂರ್ಣ ಸ್ವಯಂ ಪ್ರೇರಿತವಾಗಿದ್ದು, ಯಾವುದೇ ರಾಜಕೀಯ ಪ್ರೇರಣೆ ಇಲ್ಲ. ಶಿರಾಳಕೊಪ್ಪ ಪಟ್ಟಣದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಈ ಹೋರಾಟಕ್ಕೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಲು ನಿರ್ಧಾರ ಮಾಡಿದಾರೆ ಎಂದರು. ಈ ಹೋರಾಟವು ಸಂಪೂರ್ಣ ಪಕ್ಷಾತೀತ. … Read more

ಮೂರು ಲಾರಿಗಳಲ್ಲಿ ಡಿಸೇಲ್‌ ಕದ್ದ ಶಿವಮೊಗ್ಗದ ಇಬ್ಬರು ಶಿರಾಳಕೊಪ್ಪದಲ್ಲಿ ಅರೆಸ್ಟ್‌

Shiralakoppa police nab diesel theives

ಶಿಕಾರಿಪುರ: ಇಲ್ಲಿನ ವಿಜಯಲಕ್ಷ್ಮಿ ರೈಸ್ ಮಿಲ್‌ ಆವರಣದಲ್ಲಿ ನಿಲ್ಲಿಸಿದ್ದ 3 ಲಾರಿಗಳ ಡೀಸೆಲ್ (Diesel) ಟ್ಯಾಂಕ್‌ನಲ್ಲಿದ್ದ ಅಂದಾಜು 45,000 ರೂ. ಮೌಲ್ಯದ 450 ಲೀಟರ್ ಡೀಸೆಲ್ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ನಗರದ ಟಿಪ್ಪುನಗರದ ಸೋನು (26), ಬರ್ಮಪ್ಪ ನಗರದ ಸೈಯದ್ ಹುಸೇನ್ (25) ಬಂಧಿತರು. ಈ ಬಗ್ಗೆ ಮಾಲೀಕ ಸೊರಬ ತಾಲ್ಲೂಕು ಕೋಲಗುಣಸಿ ನಿವಾಸಿ ವಿಕ್ರಂ ಭಟ್ ಅವರು ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿತರಿಂದ ಅಂದಾಜು 9 ಲಕ್ಷ ರೂ. ಮೌಲ್ಯದ … Read more

ಕಾರುಗಳು ಮುಖಾಮುಖಿ ಡಿಕ್ಕಿ, ಮಹಿಳೆ ಸ್ಥಳದಲ್ಲೆ ಸಾವು, ಎಲ್ಲಿ? ಹೇಗಾಯ್ತು?

Car-Mishap-in-shikaripura-shiralakoppa-road.

ಶಿಕಾರಿಪುರ : ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ (Mishap) ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ – ಶಿರಾಳಕೊಪ್ಪ ರಸ್ತೆಯ ಕುಮದ್ವತಿ ನದಿ ಸೇತುವೆ ಮೇಲೆ ಇಂದು ಅಪಘಾತ ಸಂಭವಿಸಿದೆ. ಚನ್ನಗಿರಿ ತಾಲೂಕು ಕಾಕನೂರು ಗ್ರಾಮದ ರೂಪ (40) ಮೃತರು. ಕಾರಿನಲ್ಲಿದ್ದ ರೂಪ ಅವರ ಪತಿ ಕಾಂತರಾಜ್‌, ಸಹೋದರಿ ರೇಖಾ ಗಂಭೀರ ಗಾಯಗೊಂಡಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಕಾಳಿಯಪ್ಪನ್, ಸೋಮಶೇಖರ್, ಸುರೇಶ್ ಕುಮಾರ್ ಹಾಗೂ ಯಮುನಪ್ಪ ಎಂಬುವವರಿಗು ಗಾಯವಾಗಿದೆ. ಎಲ್ಲರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.   ಘಟನೆಯಲ್ಲಿ (Mishap) … Read more

ಶಿರಾಳಕೊಪ್ಪದಲ್ಲಿ ಬೀದಿಗಿಳಿದ ಮುಸ್ಲಿಮ್‌ ಸಮುದಾಯ, ಕೇಂದ್ರದ ವಿರುದ್ಧ ಆಕ್ರೋಶ

Waqf-bill-protest-at-Shiralakoppa-in-Shikaripura

ಶಿಕಾರಿಪುರ : ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಅಂಜುಮನ್‌ ಎ ಇಸ್ಲಾಂ ಸಂಘಟನೆ ನೇತೃತ್ವದಲ್ಲಿ ಮುಸ್ಲಿಂ ಸಮುದಾಯ ಪ್ರತಿಭಟನೆ (Protest) ನಡೆಸಿತು. ಶಿರಾಳಕೊಪ್ಪದ ಪ್ರಮುಖ ರಸ್ತೆಯಲ್ಲಿ ಮುಸ್ಲಿಮರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಿರಾಳಕೊಪ್ಪದ ಹಿರೇಕೆರೂರು ರಸ್ತೆಯಿಂದ ಪಟ್ಟಣ ಪಂಚಾಯಿತಿವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಕ್ಫ್‌ ಕಾಯ್ದೆ ತಿದ್ದುಪಡಿ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ನಲ್ಲಿ ಹುಬ್ಬಳ್ಳಿ … Read more

ಮಾಜಿ ಸಿಎಂ ಬಂಗಾರಪ್ಪ ಓದಿದ ಶಾಲೆಗೆ ಮಧು ಬಂಗಾರಪ್ಪ ಭೇಟಿ

Madhu-Bangarappa-visit-to-Shiralakoppa-school.

SHIVAMOGGA LIVE NEWS | 30 NOVEMBER 2024 ಶಿಕಾರಿಪುರ : ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಓದಿದ ಶಾಲೆಗೆ ಇವತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ (Visit) ನೀಡಿದ್ದರು. ಶಾಲೆ ಆವರಣದಲ್ಲಿ ಓಡಾಡಿ, ತಮ್ಮ ತಂದೆಯ ನೆನಪು ಮಾಡಿಕೊಂಡರು. ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದ್ದರು. ಈ ಸಂದರ್ಭ ಮಕ್ಕಳು ಹೂವು ನೀಡಿ ಸಚಿವರನ್ನು ಸ್ವಾಗತಿಸಿದರು. ಸರ್ಕಾರಿ ಶಾಲೆಗಳಲ್ಲಿ ಓದಿದ ಹಲವರು ದೊಡ್ಡ … Read more

ವಿದ್ಯುತ್‌ ಶಾಕ್‌, ಅಂಗಡಿ ಮಾಲೀಕ ಸಾವು

Shikaripura-News-Update

SHIKARIPURA REPORT, 30 OCTOBER 2024 : ಅಂಗಡಿಯಲ್ಲಿ (Shop) ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಮಾಲೀಕ ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ತಡಗಣಿ ಗೇಟ್‌ ಸಮೀಪದ ನಿವಾಸಿ ಕರಿಬಸಪ್ಪ (57) ಮೃತರು. ಮಂಗಳವಾರ ಅಂಗಡಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾರೆ. ತಡಗಣಿಯಲ್ಲಿ ಕಳೆದ 15 ವರ್ಷದಿಂದ ಸ್ಟೀಲ್‌ ಫರ್ನಿಚರ್‌ ಉದ್ಯಮ ನಡೆಸುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆ ನಡಸುತ್ತಿದ್ದಾರೆ. ಇದನ್ನೂ ಓದಿ » ವೈರಲ್‌ ಆದ ದೆವ್ವ, ವಾರ್ನಿಂಗ್‌ ನೀಡಿದ ಶಿವಮೊಗ್ಗ … Read more

ಶಿವಮೊಗ್ಗ, ಶಿಕಾರಿಪುರ ಟೋಲ್‌, ಸಚಿವರನ್ನು ಭೇಟಿಯಾದ ನಿಯೋಗ

081024-BY-Vijayendra-meets-satish-jarakiholi-in-bangalore.webp

BANGALORE NEWS, 8 OCTOBER 2024 : ಶಿಕಾರಿಪುರ, ಶಿರಾಳಕೊಪ್ಪ ನಡುವೆ ನಿರ್ಮಿಸಿರುವ ಟೋಲ್ ಗೇಟ್ (Toll Gate) ಅನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿತು. ಮನವಿಯಲ್ಲಿ ಏನಿದೆ? ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ನಿಂಬೆಗೊಂದಿ, ಮಂಡಲ ಅಧ್ಯಕ್ಷ ಹನುಮಂತಪ್ಪ, ಮಂಡಲ ರೈತ ಮೋರ್ಚಾ ಅಧ್ಯಕ್ಷ ಯೋಗೇಶ್‌, ಕಾರ್ಯದರ್ಶಿ ಅಶೋಕ್, ಜಗದೀಶ್, ಗಿರೀಶ್ ಧಾರವಾಡ, ಟೋಲ್ ವಿರೋಧಿ ಸಮಿತಿ ಅಧ್ಯಕ್ಷ ಶಿವರಾಜ್ … Read more

ಶಿವಮೊಗ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಆಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲು ಪ್ರಕಟ

VIDHANA-SOUDHA-GENERAL-IMAGE.jpg

SHIMOGA, 5 AUGUST 2024 : ವಿವಿಧ ಜಿಲ್ಲೆಗಳ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲು (Reservation) ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ವಿವಿಧ ನಗರಸಭೆಗಳು, ಪುರಸಭೆ, ಪಟ್ಟಣ ಪಂಚಾಯಿತಿಗಳಿಗು ಮೀಸಲು ಪ್ರಕಟಿಸಲಾಗಿದೆ. ಎಲ್ಲೆಲ್ಲಿಗೆ ಮೀಸಲಾತಿ ಪ್ರಕಟವಾಗಿದೆ? » ಭದ್ರಾವತಿ ನಗರಸಭೆ – ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲು. » ಸಾಗರ ನಗರಸಭೆ – ಅಧ್ಯಕ್ಷ ಸ್ಥಾನವನ್ನು ಜನರಲ್ ಮಹಿಳೆ, … Read more

ಸರ್ಕಾರಿ ಆಸ್ಪತ್ರೆಗೆ ವಿಜಯೇಂದ್ರ ದಿಢೀರ್‌ ಭೇಟಿ, ವ್ಯವಸ್ಥೆ ಕುರಿತು ಮಾಹಿತಿ, ನೂತನ ಆಸ್ಪತ್ರೆ ಕಾಮಗಾರಿ ಪರಿಶೀಲನೆ

BY-Vijayendra-visits-Shiralakoppa-hospital

SHIVAMOGGA LIVE NEWS | 10 JULY 2024 SHIKARIPURA : ಡೆಂಗ್ಯು ಉಲ್ಬಣವಾಗಿರುವ ಹಿನ್ನೆಲೆ ಶಾಸಕ ಬಿ.ವೈ. ವಿಜಯೇಂದ್ರ ಅವರು ಶಿರಾಳಕೊಪ್ಪದ ಪಟ್ಟಣ ಸಮುದಾಯ ಆರೊಗ್ಯ ಕೇಂದ್ರಕ್ಕೆ ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ವಿವಿಧ ವಿಭಾಗಗಳಿಗೆ ತೆರಳಿ ವೀಕ್ಷಿಸಿದರು. ರೋಗಿಗಳು, ಸಂಬಂಧಿಕರ ಜೊತೆಗೆ ಮಾತನಡಿ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಉತ್ತಮ ಸೇವೆ ನೀಡಬೇಕು ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹಲವು ಯೋಜನೆ ನೀಡುತ್ತಿದೆ. ವೈದ್ಯರು ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು. ಆರೋಗ್ಯ ಸಿಬ್ಬಂದಿ … Read more

ಡೆಂಗ್ಯು ಶಂಕೆ, ಜ್ವರದಿಂದ ಬಳಲುತ್ತಿದ್ದ ರಿಪ್ಪನ್‌ಪೇಟೆಯ ಮಹಿಳೆ, ಶಿರಾಳಕೊಪ್ಪದ 9 ತಿಂಗಳ ಮಗು ಸಾವು

engue-suspect-ripponpete-woman-succumbe-by-vijayendra-visit-house.

SHIVAMOGGA LIVE NEWS | 10 JULY 2024 SHIMOGA : ಶಂಕಿತ ಡೆಂಗ್ಯುಗೆ (Dengue Suspect) ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಡೆಂಗ್ಯುಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಿಪ್ಪನ್‌ಪೇಟೆಯ ಮಹಿಳೆ ಸಾವು ಶಂಕಿತ ಡೆಂಗೆಗೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ನಿವಾಸಿ ರಶ್ಮಿ ಆರ್. ನಾಯಕ್ (42) . ಮಂಗಳವಾರ ಮೃತಪಟ್ಟಿದ್ದಾರೆ. ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಶ್ಮಿ ಆರ್‌.ನಾಯಕ್‌ ಅವರು … Read more