ಸ್ನೇಹಿತನ ಭೇಟಿಗೆ ರಾತ್ರಿ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ ವ್ಯಕ್ತಿಗೆ ಕಾದಿತ್ತು ಆಘಾತ, ನಾಲ್ವರು ಅರೆಸ್ಟ್‌

shimoga railway station

ಶಿವಮೊಗ್ಗ : ರೈಲ್ವೆ ನಿಲ್ದಾಣದ ಮುಂಭಾಗ ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಬ್ರೇಸ್‌ಲೆಟ್‌ (Bracelet) ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ನಾಲ್ವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನದ ಬ್ರೇಸ್‌ಲೆಟ್‌ ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋ ವಶಕ್ಕೆ ಪಡೆದಿದ್ದಾರೆ. ಕೃಷಿ ನಗರದ ಜಯದೇವಪ್ಪ ಎಂಬುವವರ ಕೈಯಲ್ಲಿದ್ದ ಬ್ರೇಸ್‌ಲೆಟ್‌ ದರೋಡೆಯಾಗಿತ್ತು. ಈ ಸಂಬಂಧ ಜಬೀರ್‌.ಜೆ, ಮೊಹಮ್ಮದ್‌ ಸಮೀವುಲ್ಲಾ, ಆಂಜನೇಯ ಮತ್ತು ಸೈಯದ್‌ ನೇಮನ್‌ ಬಂಧಿಸಲಾಗಿದೆ. ರೈಲ್ವೆ ನಿಲ್ದಾಣದ ಮುಂದೆ ಆಗಿದ್ದೇನು? ಜಯದೇವಪ್ಪ ತಮ್ಮ ಸ್ನೇಹಿತರೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ … Read more

ಸಕ್ರೆಬೈಲು ಸಮೀಪ ಓರ್ವ ಮಹಿಳೆ, ಇಬ್ಬರು ಪುರುಷರ ಮೃತದೇಹ ಪತ್ತೆ, ಸ್ಥಳಕ್ಕೆ ಪೊಲೀಸ್‌ ದೌಡು

Unknown-bodies-found-at-tunga-backwater-near-sakrebyle

ಶಿವಮೊಗ್ಗ : ತುಂಗಾ ನದಿ ಹಿನ್ನೀರಿನಲ್ಲಿ ಓರ್ವ ಮಹಿಳೆ ಸೇರಿ ಮೂವರ ಮೃತದೇಹ (Bodies) ಪತ್ತೆಯಾಗಿವೆ. ವಿಷಯ ತಿಳಿದು ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಕ್ರೆಬೈಲು ಸಮೀಪದ 10ನೇ ಮೈಲಿಕಲ್ಲು ಬಳಿ ತುಂಗಾ ನದಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿವೆ. ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಇನ್ನೂ ಮೃತರ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ » ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ … Read more

ಹೊಸನಗರದಲ್ಲಿ ನೀರವ ಮೌನ, ಊರ ಮಗನನ್ನು ಕಳೆದುಕೊಂಡು ದುಃಖ, ಪ್ರಕರಣದ ತನಿಖೆಗೆ ಒತ್ತಾಯ

Airforce-officer-Manjunath-no-more

SHIVAMOGGA LIVE NEWS, 9 FEBRUARY 2025 ಹೊಸನಗರ : ಊರ ಮಗನನ್ನು ಕಳೆದುಕೊಂಡು ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ವಾಯುಸೇನೆ ಅಧಿಕಾರಿ (Officer) ಜಿ.ಎಸ್‌.ಮಂಜುನಾಥ್‌ ಅಕಾಲಿಕ ಸಾವು, ಇಡೀ ಹೊಸನಗರವನ್ನು ಮೌನಕ್ಕೆ ದೂಡಿದೆ. ಮಾರಿಹಬ್ಬದ ಸಂಭ್ರಮದಲ್ಲಿದ್ದ ಊರು ಈಗ ಸೂತಕ ಹೊದ್ದು ಕೂತಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ತರಬೇತಿ ವೇಳೆ ಪ್ಯಾರಚೂಟ್‌ ತೆರೆಯದೆ ಆಗಸದಿಂದ ಬಿದ್ದು ವಾಯುಸೇನೆ ವಾರಂಟ್‌ ಆಫೀಸರ್‌ ಜಿ.ಎಸ್.ಮಂಜುನಾಥ್‌ ಶುಕ್ರವಾರ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರ ಈಗ ಹುಟ್ಟೂರು ಹೊಸನಗರದ ಸಂಕೂರು ಗ್ರಾಮಕ್ಕೆ ತರಲಾಗುತ್ತಿದೆ. ಈ … Read more

ರಾತ್ರೋರಾತ್ರಿ ಹಾಡೋನಹಳ್ಳಿಯಲ್ಲಿ ಅಧಿಕಾರಿಗಳ ದಾಳಿ, ಅಬ್ಬಲಗೆರೆ ಬಳಿ ಟಿಪ್ಪರ್‌ ಸೀಜ್‌, ಕಾರಣವೇನು?

mines-and-geology-department-officers-raid-at-hadonahalli

SHIVAMOGGA LIVE NEWS, 5 FEBRUARY 2025 ಶಿವಮೊಗ್ಗ : ಅಕ್ರಮವಾಗಿ ಮರಳು (Sand) ಸಾಗಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಳೆದ ರಾತ್ರಿ ದಿಢೀರ್‌ ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಧಿಕಾರಿಗಳನ್ನು ಕಂಡು ಮರಳು ಸಾಗಿಸುತ್ತಿದ್ದ ಟ್ರಾಕ್ಟರ್‌ ನಿಲ್ಲಿಸದೆ ಪರಾರಿಯಾಗಿದ್ದಾನೆ. ಆದರೆ ಜೆಸಿಬಿಯೊಂದು ಸಿಕ್ಕಿಬಿದ್ದಿದೆ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ ಗಣಿ … Read more

ದಿನ ಪಂಚಾಂಗ | ಇವತ್ತು ಯಾವ ಸಮಯ ಶುಭ? ಯಾವುದು ಅಶುಭ?

Indina-Panchanga-today Panchanga

SHIVAMOGGA LIVE NEWS, Today Panchanga ಈ ದಿನದ ಪಂಚಾಂಗ ವಾರ : ಗುರುವಾರ, 30 ಜನವರಿ 2025 ಸೂರ್ಯೋದಯ : 6.55 am ಸೂರ್ಯಾಸ್ತ : 6.27 pm ಸಂವತ್ಸರ : ಶ್ರೀ ಕ್ರೋಧಿ ನಾಮ ನಕ್ಷತ್ರ : ಶ್ರವಣ ದಿನ ವಿಶೇಷ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನ. ಸರ್ವೋದಯ ದಿನ ಎಂದು ಆಚರಿಸಲಾಗುತ್ತದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಮತ್ತೆ ಎರಡು ಇಂದಿರಾ ಕ್ಯಾಂಟೀನ್‌, ಎಲ್ಲೆಲ್ಲಿ? ಯಾವಾಗ ಶುರುವಾಗುತ್ತೆ?

ಕಾರು ಪ್ರಿಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ಬೃಹತ್‌ ಕಾರು ಎಕ್ಸ್‌ಚೇಂಜ್‌ ಮೇಳ, ಎಲ್ಲಿ? ಏನೆಲ್ಲ ಆಫರ್‌ಗಳಿವೆ?

160125 Car Exchange Mela at gopala

SHIVAMOGGA LIVE NEWS, 19 DECEMBER 2024 ಶಿವಮೊಗ್ಗ : ಶಕ್ತಿ ಟೊಯೋಟ ವತಿಯಿಂದ ಜನವರಿ 17 ಮತ್ತು 18ರಂದು ಗೋಪಾಳದ ಮೋರ್‌ ಸೂಪರ್‌ ಮಾರ್ಕೆಟ್‌ ಸಮೀಪದ ಬಂಟರ ಭವನ ಹಾಲ್‌ ಪಕ್ಕದದಲ್ಲಿ ಎಕ್ಸ್‌ಚೇಂಜ್‌ (car exchange) ಮೇಳ ಮತ್ತು ಪೂರ್ವ ಮಾಲಿಕಿತ್ವದ ಕಾರು (Car) ಮೇಳ ಆಯೋಜಿಸಲಾಗಿದೆ. ಎರಡು ದಿನವು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮೇಳ ನಡೆಯಲಿದೆ. ಎಕ್ಸ್‌ಚೇಂಜ್‌ ಮೇಳ ಹೇಗಿರುತ್ತೆ? ಹಳೆಯ ಕಾರುಗಳನ್ನು ಹೊಚ್ಚ ಹೊಸ ಟೊಯೋಟ ಕಾರಿಗೆ ಎಕ್ಸ್‌ಚೇಂಜ್‌ … Read more

ಶಿವಮೊಗ್ಗದಲ್ಲಿ ಐದು ತಿಂಗಳ ಹಿಂದೆಯೇ ಪತ್ತೆಯಾಗಿತ್ತು HMP ಸೋಂಕು, ಡಾ.ಸರ್ಜಿ ಹೇಳಿದ್ದೇನು?

Dr-Dhananjaya-Sarji-Speaks-about-HMP-Virus.

SHIVAMOGGA LIVE NEWS, 7 JANUARY 2025 ಶಿವಮೊಗ್ಗ : ಕಳೆದ ಸೆಪ್ಟೆಂಬರ್‌ನಿಂದ ನವೆಂಬರ್‌ ತಿಂಗಳವರೆಗೆ ಶಿವಮೊಗ್ಗದ ಐವರು ಮಕ್ಕಳಲ್ಲಿ HMP ಸೋಂಕು ತಗುಲಿರುವುದು ದೃಢವಾಗಿತ್ತು. ಈ ಮಕ್ಕಳು ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಸೋಂಕಿನ ಕುರಿತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ. ಟಿವಿ ಮಾಧ್ಯಮದಲ್ಲಿ ವರದಿ ಪ್ರಕಟವಾದ ಬೆನ್ನಿಗೆ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಪ್ಟೆಂಬರ್‌ನಿಂದ ನವೆಂಬರ್‌ ತಿಂಗಳ ಒಳಗೆ ಐವರು ಮಕ್ಕಳಲ್ಲಿ ಹೆಚ್‌ಎಂಪಿವಿ ಪಾಸಿಟಿವ್‌ ಬಂದಿತ್ತು. ಎಲ್ಲ ಮಕ್ಕಳು … Read more

ಶಿವಮೊಗ್ಗ ಜಿಲ್ಲೆಯ ಟಾಪ್‌ 5 ಸುದ್ದಿಗಳು, ಫಟಾಫಟ್‌ ನ್ಯೂಸ್‌

FATAFAT-NAMMURA-NEWS.webp

SHIVAMOGGA LIVE NEWS, 2 JANUARY 2025 ಫಟಾಫಟ್‌ ಸುದ್ದಿ : ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಫಟಾಪಟ್‌ (Fatafat) ಸುದ್ದಿಗಳು.

ಸಿಗಂದೂರು ಸೇತುವೆ, ಡ್ರೋಣ್‌ ವಿಡಿಯೋ ರಿಲೀಸ್‌, ನೋಡಲು ಇಲ್ಲಿ ಕ್ಲಿಕ್‌ ಮಾಡಿ

Sigandur-Bridge-work-photo

SHIVAMOGGA LIVE NEWS, 24 DECEMBER 2024 ಶಿವಮೊಗ್ಗ : ಸಿಗಂದೂರು ಸೇತುವೆ (Bridge) ನಿರ್ಮಾಣ ಕಾರ್ಯ ಬಿರುಸಾಗಿದೆ. ಕಳೆದ ವಾರ ಸಂಸದ ಬಿ.ವೈ.ರಾಘವೇಂದ್ರ, ಸೇತುವೆ ಕಾಮಗಾರಿಯ ಡ್ರೋಣ್‌ ಫೋಟೊ ಹಂಚಿಕೊಂಡಿದ್ದರು. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಸಂಸದ ರಾಘವೇಂದ್ರ ಸೇತುವೆ ಕಾಮಗಾರಿಯ ಡ್ರೋಣ್‌ ವಿಡಿಯೋ ಷೇರ್‌ ಮಾಡಿದ್ದಾರೆ. ಮುಕ್ತಾಯ ಹಂತಕ್ಕೆ ತಲುಪಿದ ಐತಿಹಾಸಿಕ ಸಿಗಂದೂರು ಸೇತುವೆಯ ಮನಮೋಹಕ ದೃಶ್ಯ ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಇಲ್ಲಿದೆ ವಿಡಿಯೋ. ಇದನ್ನೂ ಓದಿ » ನಟ ಶಿವರಾಜ್‌ ಕುಮಾರ್‌ಗಾಗಿ ವಿಶೇಷ … Read more

ಶಿವಮೊಗ್ಗ ಜಿಲ್ಲೆಯ ರೈತರಿಗೆ ಆತಂಕ ಮೂಡಿಸಿದ ಚಂಡಮಾರುತ, ಆಗಿದ್ದೇನು?

cyclone-effect-on-agriculture-sector-in-shimoga

SHIVAMOGGA LIVE NEWS, 3 DECEMBER 2024 ಶಿವಮೊಗ್ಗ : ಫೆಂಗಲ್‌ ಚಂಡಮಾರುತದ (Cyclone) ಪರಿಣಾಮ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತೂ ಮಳೆಯಾಗಿದೆ. ಚಂಡಮಾರುತ ದುರ್ಬಲವಾಗುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ಮಳೆ, ರಾತ್ರಿಯು ಅಬ್ಬರ ಫೆಂಗಲ್‌ ಚಂಡಮಾರುತದ ಪರಿಣಾಮ ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆಗೆ ಶಿವಮೊಗ್ಗ ಮತ್ತು ಭದ್ರಾವತಿಯ ವಿವಿಧೆಡೆ ಮಳೆಯಾಗಿತ್ತು. ಜಿಲ್ಲೆಯಲ್ಲಿ ವಿವಿಧೆಡೆ ಕಳೆದ ರಾತ್ರಿ ಮಳೆಯಾಗಿದೆ. ಇವತ್ತೂ ಮೋಡ … Read more