ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಲೋಗೋ ರಿಲೀಸ್‌, ಕಡಿಮೆ ವೆಚ್ಚದಲ್ಲಿ ಹೈಟೆಕ್‌ ಟ್ರೀಟ್‌ಮೆಂಟ್‌, ವೈದ್ಯರು ಹೇಳಿದ್ದೇನು?

Dr-Pradeep-and-Dr-Praveen-NU-Shimoga-kidney-hospital.

ಶಿವಮೊಗ್ಗ : ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರುವ ಎನ್‌.ಯು ಆಸ್ಪತ್ರೆ ಈಗ ಶಿವಮೊಗ್ಗ ಕಿಡ್ನಿ (Kidney) ಆಸ್ಪತ್ರೆಯಾಗಿ ಮರುನಾಮಕರಣಗೊಂಡಿದೆ. ಕಿಡ್ನಿ ದಿನದ ಅಂಗವಾಗಿ ಇವತ್ತು ನೂತನ ಹೆಸರು ಅನಾವರಣ ಮಾಡಲಾಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯರು, ಮರುನಾಮಕರಣಕ್ಕೆ ಕಾರಣ ನೀಡಿದರು. ಯಾರೆಲ್ಲ ಏನೆಲ್ಲ ಹೇಳಿದರು? ನವಜಾತ ಶಿಶುಗಳಿಂದ ಎಲ್ಲ ವಯೋಮಾನದವರಿಗೆ ಕಿಡ್ನಿ ಸಮಸ್ಯೆ ಆಗುತ್ತಿದೆ. ಡಯಾಬೆಟಿಕ್ ಕಿಡ್ನಿ ಸಮಸ್ಯೆ ಈಗ ಉಲ್ಬಣಗೊಂಡಿದೆ. ಜೀವನಶೈಲಿಯೆ ಇದಕ್ಕೆ ಮೂಲ ಕಾರಣ. ಉತ್ತಮ ಜೀವನ ಶೈಲಿ ರೂಢಿಸಿಕೊಂಡರೆ ಕಿಡ್ನಿ ಸಮಸ್ಯೆಯಿಂದ … Read more

ಅಡಿಕೆ ಧಾರಣೆ | 10 ಮಾರ್ಚ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ : ಶಿವಮೊಗ್ಗ, ಸಾಗರದಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 16168 28009 ಬೆಟ್ಟೆ 43299 56529 ರಾಶಿ 33699 51899 ಸರಕು 55199 89999 ಸಾಗರ ಮಾರುಕಟ್ಟೆ ಕೆಂಪುಗೋಟು 10569 24499 ಕೋಕ 7699 20199 ಚಾಲಿ 21699 33619 ಬಿಳೆ ಗೋಟು 8000 19300 ರಾಶಿ 21999 51889 ಸಿಪ್ಪೆಗೋಟು 6010 16700 ಇದನ್ನೂ ಓದಿ » ಚಂದ್ರಗುತ್ತಿಯಲ್ಲಿ ವೈಭವದ ಬ್ರಹ್ಮರಥೋತ್ಸವ, ಲಕ್ಷ ಲಕ್ಷ ಭಕ್ತರು ಭಾಗಿ, ಏನೆಲ್ಲ … Read more

ಮುಸ್ಲಿಮ್‌ ಬಜೆಟ್‌ ಆರೋಪಕ್ಕೆ ಮಧು ಬಂಗಾರಪ್ಪ ತಿರುಗೇಟು, ಏನಂದ್ರು? ಇಲ್ಲಿದೆ ನಾಲ್ಕು ಪಾಯಿಂಟ್‌

Minister-Madhu-Bangarappa-Press-meet.

ಶಿವಮೊಗ್ಗ : ರಾಜ್ಯ ಸರ್ಕಾರದ್ದು ಮುಸ್ಲಿಂ (Muslim) ಸಮುದಾಯದ ತುಷ್ಠೀಕರಣದ ಬಜೆಟ್‌ ಎಂದು ಬಿಜೆಪಿ ಆರೋಪಿಸಿದೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಮಿನಿಸ್ಟರ್‌ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌ ಗ್ಯಾರಂಟಿ ಯೋಜನೆಗಾಗಿ ಪ್ರತಿ ಶಾಸಕರ ಕ್ಷೇತ್ರಕ್ಕೆ ತಲಾ 230 ಕೋಟಿ ರೂ. ಹಣ ಸಂದಾಯವಾಗುತ್ತದೆ. ಯಾವುದೇ ಕಮಿಷನ್‌ ಇಲ್ಲೆ ಹಣ ಫಲಾನುಭವಿಗಳಿಗೆ ತಲುಪಿಸಿ, ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಬಡವರ ಕೈಗೆ ಹಣ ಕೊಟ್ಟರೆ ಮಾರುಕಟ್ಟೆಯಲ್ಲಿ ಹಣದ ಚಲನೆ ಇರುತ್ತದೆ. … Read more

ಶಿವಮೊಗ್ಗದಲ್ಲಿ ಮರಕ್ಕೆ ಡಿಕ್ಕಿಯಾಗಿ ಚರಂಡಿಗೆ ಬಿದ್ದ ಬೈಕ್‌, ಸವಾರ ಸಾವು

Bike-mishap-near-vajapayee-layout-in-Shimoga-city

ಶಿವಮೊಗ್ಗ : ಮರಕ್ಕೆ ಬೈಕ್‌ (Bike) ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತನನ್ನು ರಾಜು (27) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಸಾಗರ ರಸ್ತೆಯ ವಾಜಪೇಯಿ ಬಡಾವಣೆ ಬಳಿ ಬೈಕ್‌ (Bike) ಮರಕ್ಕೆ ಡಿಕ್ಕಿಯಾಗಿದೆ. ನಂತರ ಬೈಕ್‌ ಸಹಿತ ಸವಾರ ರಾಜು ಚರಂಡಿಗೆ ಬಿದಿದ್ದಾನೆ. ಗಂಭೀರ ಗಾಯಗೊಂಡು ಅಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಚಂದ್ರಗುತ್ತಿಯಲ್ಲಿ ವೈಭವದ ಬ್ರಹ್ಮರಥೋತ್ಸವ, ಲಕ್ಷ ಲಕ್ಷ ಭಕ್ತರು ಭಾಗಿ, … Read more

ಚಂದ್ರಗುತ್ತಿಯಲ್ಲಿ ವೈಭವದ ಬ್ರಹ್ಮರಥೋತ್ಸವ, ಲಕ್ಷ ಲಕ್ಷ ಭಕ್ತರು ಭಾಗಿ, ಏನೆಲ್ಲ ಧಾರ್ಮಿಕ ಕಾರ್ಯಕ್ರಮ ನಡೆಯಿತು?

chandragutti-temple-bhramaratotsava

ಸೊರಬ : ಇತಿಹಾಸ ಪ್ರಸಿದ್ಧ ಚಂದ್ರಗುತ್ತಿಯ ರೇಣುಕಾಂಬಾ ದೇವಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ (Ratotsava) ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಲಕ್ಷಾಂತರ ಭಕ್ತರು ಪಾಲ್ಗೊಂಡು ದೇವಿಯ ಕೃಪೆ ಬೇಡಿದರು. ಉಪವಿಭಾಗಾಧಿಕಾರಿ ಆರ್.ಯತೀಶ್, ವಿವಿಧ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಶ್ರೀದೇವಿಯ ನಾಮ ಸ್ಮರಣೆಯೊಂದಿಗೆ ರಥ ಎಳೆದರು. ರಥಕ್ಕೆ ಕಾಳುಮೆಣಸು, ಉತ್ತುತ್ತಿ, ಬಾಳೆ ಹಣ್ಣು ತೂರುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬೆಳಗ್ಗೆಯಿಂದಲೆ ಧಾರ್ಮಿಕ ಕಾರ್ಯಕ್ರಮ ರಥೋತ್ಸವದ (Ratotsava) ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರೇಣುಕಾಂಬೆಗೆ ಭಕ್ತರು ವಿಶೇಷ … Read more

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ, ಸಮರ್ಪಕ ವಿದ್ಯುತ್‌ಗೆ ಎಂಎಲ್‌ಎ ಪತ್ರ

Ashok-Beluru-submits-memorandum-to-Hescom-md.

ಸಾಗರ : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಗರ ತಾಲೂಕು ಭಾರಂಗಿ ಹೋಬಳಿಯಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಿರಂತರ ಸಿಂಗಲ್‌ ಫೇಸ್‌ ವಿದ್ಯುತ್‌ (Power) ಪೂರೈಕೆ ಮಾಡಬೇಕು ಎಂದು ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದ್ದಾರೆ. ಭಾರಂಗಿ ಹೋಬಳಿಯ ನಾಗವಳ್ಳಿ ಭಾಗಕ್ಕೆ ಭಟ್ಕಳದಿಂದ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಹಿನ್ನೆಲೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಆಗದಂತೆ ಮಾರ್ಚ್‌ ತಿಂಗಳು ಪೂರ್ತಿ ಸಂಜೆ 6 ರಿಂದ ರಾತ್ರಿ … Read more

ಗೋಧಿಗಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡ ಶಿವಮೊಗ್ಗದ ಉದ್ಯಮಿ, ಆಗಿದ್ದೇನು?

Crime-News-General-Image

ಶಿವಮೊಗ್ಗ : ಒಂದು ಲೋಡ್‌ ಗೋಧಿ (Wheat) ಕಳುಹಿಸುವುದಾಗಿ ನಂಬಿಸಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಗುಜರಾತ್‌ ಮೂಲದ ವ್ಯಕ್ತಿಯೊಬ್ಬ 7 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಮನ್ಸೂರ್‌ ಎಂಬುವವರು ಭತ್ತ, ಜೋಳ, ಗೋಧಿ (Wheat) ವ್ಯಾಪಾರ ಮಾಡುತ್ತಿದ್ದಾರೆ. ಗುಜರಾತ್‌ ಮೂಲದ ಶೇಖ್‌ ಮೊಹಮ್ಮದ್‌ ಫರೀದ್‌ ಎಂಬಾತ ಮನ್ಸೂರ್‌ ಅವರಿಗೆ ಪರಿಚಯವಾಗಿದ್ದು, ಗೋಧಿ ಕೊಡಿಸುವುದಾಗಿ ನಂಬಿಸಿದ್ದ. ಒಮ್ಮೆ ಆತ ಕರೆ ಮಾಡಿ ಒಂದು ಲೋಡ್‌ ಗೋಧಿ ಕಳುಹಿಸುವುದಾಗಿ ತಿಳಿಸಿ ಮೊದಲಿಗೆ … Read more

ಹಲಾಲ್‌ ಬಜೆಟ್‌ ಆರೋಪ, ಶಿವಮೊಗ್ಗದಲ್ಲಿ ಟ್ರ್ಯಾಕ್ಟರ್‌ ಏರಿ ಬಿಜೆಪಿ ಮುಖಂಡರ ಆಕ್ರೋಶ, ಯಾರೆಲ್ಲ ಏನೆಲ್ಲ ಹೇಳಿದರು?

BJP-protest-in-Shimoga-agains-budget.

ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬಜೆಟ್‌ (Budget) ಅನ್ನು ಇಸ್ಲಾಮಿಕರಣಗೊಳಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶಿವಮೊಗ್ಗದಲ್ಲಿ ಟ್ರಾಕ್ಟರ್‌ ಜಾಥಾ ನಡೆಸಲಾಯಿತು. ಗೋಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಿತು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್‌ ಸೇರಿದಂತೆ ಹಲವರು ಟ್ರಾಕ್ಟರ್‌ ಏರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಾರಿ ಉದ್ದಕ್ಕೂ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಯಾರೆಲ್ಲ ಏನೆಲ್ಲ ಹೇಳಿದರು? ರಾಜ್ಯ ಬಜೆಟ್ (Budget) ಭ್ರಮನಿರಸನ ಉಂಟು ಮಾಡಿದೆ. … Read more

ಪ್ರತಿದಿನ 7 ರಿಂದ 8 ಸಾವಿರ ರೂ. ಲಾಭ, ಮನೆಯಲ್ಲೆ ಕುಳಿತು ಗಳಿಸಬಹುದು ಹಣ, ಮುಂದೇನಾಯ್ತು?

SMS-Fraud-Shimoga-CEN-Police-Station.

ಶಿವಮೊಗ್ಗ : ಮನೆಯಿಂದಲೆ ಕೆಲಸ (Work) ಮಾಡಿ ಪ್ರತಿದಿನ ಎಳೆಂಟು ಸಾವಿರ ರೂ. ಸಂಪಾದಿಸಬಹುದು ಎಂದು ನಂಬಿಸಿ ಮಹಿಳೆಯೊಬ್ಬರಿಗೆ (ಹೆಸರು ಗೌಪ್ಯ) 53 ಲಕ್ಷ ರೂ. ವಂಚಿಸಲಾಗಿದೆ. ಮಹಿಳೆಯೊಬ್ಬರ ಟೆಲಿಗ್ರಾಂ ಖಾತೆಗೆ ವರ್ಕ್‌ ಫ್ರಮ್‌ ಹೋಮ್‌ ಎಂದು ಮೆಸೇಜ್‌ ಬಂದಿತ್ತು. ಟಾಸ್ಕ್‌ ಪೂರೈಸಿದರೆ ನಿತ್ಯ 7 ರಿಂದ 8 ಸಾವಿರ ರೂ. ಗಳಿಸಬಹುದು ಎಂದು ತಿಳಿಸಲಾಗಿತ್ತು. ಮೆಸೇಜ್‌ನಲ್ಲಿದ್ದ ಲಿಂಕ್‌ ಕ್ಲಿಕ್‌ ಮಾಡಿದ ಮಹಿಳೆಗೆ ಮೊದಲು 10 ಸಾವಿರ ರೂ. ಹೂಡಿಕೆ ಮಾಡುವಂತೆ ತಿಳಿಸಲಾಗಿತ್ತು. ಅಂತೆಯೇ ಮಹಿಳೆ ಹಣ … Read more

ರಾಜ್ಯ ಬಜೆಟ್‌, ಶಿವಮೊಗ್ಗಕ್ಕೆ ಸಿಕ್ಕಿದ್ದೇನು? ಪಟ್ಟಿ ಪ್ರಕಟಿಸಿದ ಮಿನಿಸ್ಟರ್‌ ಮಧು ಬಂಗಾರಪ್ಪ

Minister-Madhu-Bangarappa-Press-meet-about-budget

ಶಿವಮೊಗ್ಗ : ರಾಜ್ಯ ಸರ್ಕಾರದ ಬಜೆಟ್‌ನಲ್ಲಿ (Budget) ಶಿವಮೊಗ್ಗ ಜಿಲ್ಲೆಗೆ ಯಾವುದೇ ಯೋಜನೆ ಘೋಷಣೆಯಾಗಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಆದರೆ ಬಜೆಟ್‌ ಹೊರತಾಗಿಯು ಜಿಲ್ಲೆಯಲ್ಲಿ ಹಲವು ಯೋಜನೆಗಳು ಜಾರಿಗೆ ಬರಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಚಂದ್ರಗುತ್ತಿ‌ ಅಭಿವೃದ್ಧಿ ಪ್ರಾಧಿಕಾರದ ಹೊರತಾಗಿಯು ಬಜೆಟ್‌ನಲ್ಲಿ (Budget) ಜಿಲ್ಲೆಗೆ ಹಲವು ಯೋಜನೆಗಳ ಲಾಭ ದೊರೆಯಲಿದೆ. ಇನ್ನೊಂದೆಡೆ ಬಜೆಟ್‌ನಲ್ಲಿ ಘೋಷಣೆ ಆಗದಿದ್ದರು ಹಲವು ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸುವ … Read more